Gold Silver Price today: ಚಿನ್ನದ ದರ ಸ್ಥಿರ, ಬೆಳ್ಳಿ ತುಸು ದುಬಾರಿ, ಆಭರಣದಂಗಡಿಗೆ ಹೋಗುವ ಮುನ್ನ ದರ ತಿಳಿದುಕೊಳ್ಳಿ
May 03, 2023 06:00 AM IST
Gold Silver Price today: ಚಿನ್ನದ ದರ ಸ್ಥಿರ, ಬೆಳ್ಳಿ ತುಸು ದುಬಾರಿ, ಆಭರಣದಂಗಡಿಗೆ ಹೋಗುವ ಮುನ್ನ ದರ ತಿಳಿದುಕೊಳ್ಳಿ
Gold and Silver Price in Karnataka: ಇಂದು 22 ಕ್ಯಾರೆಟ್ ಚಿನ್ನದ ದರ ಗ್ರಾಂಗೆ 5,575 ರೂ. ಇದೆ. ಇದೇ ರೀತಿ 24 ಕ್ಯಾರೆಟ್ ಅಪರಂಜಿ ಚಿನ್ನದ ದರ ಇಂದು ಗ್ರಾಂ.ಗೆ 6,081 ರೂ. ಇದೆ. ಕರ್ನಾಟಕದ ಬೆಂಗಳೂರು, ಮಂಗಳೂರು, ಮೈಸೂರು, ಬಳ್ಳಾರಿ, ದಾವಣಗೆರೆ ಸೇರಿದಂತೆ ವಿವಿಧ ನಗರಗಳಲ್ಲಿ ಇಂದು ಚಿನ್ನದ ದರ ಸ್ಥಿರವಾಗಿದೆ.
ಬೆಂಗಳೂರು: ದೇಶದಲ್ಲಿ ಚಿನ್ನದ ಮೇಲಿನ ಹೂಡಿಕೆ ಸುರಕ್ಷಿತ ಎನ್ನುವ ನಂಬಿಕೆಯಿದೆ. ಇದೇ ಕಾರಣಕ್ಕೆ ಆಭರಣ ಖರೀದಿಸುವವರು ಇದ್ದಾರೆ. ಮುಂದೆ ಕಷ್ಟ ಕಾಲದಲ್ಲಿ ನೆರವಾದೀತು ಎನ್ನುವ ಕಾರಣಕ್ಕೆ ಚಿನ್ನ ಅಥವಾ ಬೆಳ್ಳಿ ಖರೀದಿಸುತ್ತಾರೆ. ಇದೇ ಸಮಯದಲ್ಲಿ ಮದುವೆ ಇತ್ಯಾದಿ ಕಾರ್ಯಕ್ರಮಗಳಿಗಾಗಿ ಅನಿವಾರ್ಯವಾಗಿಯೂ ಚಿನ್ನ ಖರೀದಿಸಬೇಕಾದ ಒತ್ತಡ ಬಹುತೇಕರಿಗೆ ಇರುತ್ತದೆ. ಇದರೊಂದಿಗೆ ಭಾರತೀಯ ಚಿನ್ನದ ಮೋಹವು ಚಿನ್ನಾಭರಣ ಖರೀದಿಗೆ ಪ್ರೇರೇಪಿಸುತ್ತದೆ. ಕತ್ತಲ್ಲಿ ಚಿನ್ನದ ಆಭರಣ ಮಾಲೆಯಿದ್ದರೆ ಮುಖದಲ್ಲಿ ಹೊಸ ಕಲೆ ಮೂಡುತ್ತದೆ. ಈಗ ಆನ್‌ಲೈನ್ ಗೋಲ್ಡ್ ಖರೀದಿ ಮೂಲಕವೂ ಬಹುತೇಕರು ಹೂಡಿಕೆ ಮಾಡುತ್ತಾರೆ.
ಇಂತಹ ಯಾವುದೇ ಕಾರಣಕ್ಕಾಗಿ ಇಂದು ಆಭರಣದಂಗಡಿಗೆ ಅಥವಾ ಆನ್‌ಲೈನ್ ಚಿನ್ನದಂಗಡಿಗೆ ಹೋಗುವವರಿಗೆ ನಿರಾಶೆಯಾಗದು. ಏಕೆಂದರೆ, ನಿನ್ನೆಗೆ ಹೋಲಿಸಿದರೆ ಚಿನ್ನದ ದರ ಇಂದು ದುಬಾರಿಯಾಗಿಲ್ಲ. ಇಂದು ಚಿನ್ನದ ದರ ಸ್ಥಿರವಾಗಿದೆ. ಇಂದು 22 ಕ್ಯಾರೆಟ್ ಚಿನ್ನದ ದರ ಗ್ರಾಂಗೆ 5,575 ರೂ. ಇದೆ. ಇದೇ ರೀತಿ 24 ಕ್ಯಾರೆಟ್ ಅಪರಂಜಿ ಚಿನ್ನದ ದರ ಇಂದು ಗ್ರಾಂ.ಗೆ 6,081 ರೂ. ಇದೆ. ಕರ್ನಾಟಕದ ಬೆಂಗಳೂರು, ಮಂಗಳೂರು, ಮೈಸೂರು, ಬಳ್ಳಾರಿ, ದಾವಣಗೆರೆ ಸೇರಿದಂತೆ ವಿವಿಧ ನಗರಗಳಲ್ಲಿ ಇಂದು ಚಿನ್ನದ ದರ ಸ್ಥಿರವಾಗಿದೆ. ಇದೇ ರೀತಿ ಹೊರರಾಜ್ಯಗಳಲ್ಲಿಯೂ ಚಿನ್ನದ ದರದಲ್ಲಿ ಮಹತ್ತರ ಬದಲಾವಣೆಯಾಗಿಲ್ಲ.
ಇಂದು ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ ದರ 5,575 ರೂ. ಇದೆ. 8 ಗ್ರಾಂ ಚಿನ್ನ ಖರೀದಿಸುವುದಾದರೆ 44600 ರೂ. ನೀಡಬೇಕು. ಹತ್ತು ಗ್ರಾಂ ಚಿನ್ನದ ದರ ಇಂದು 55750 ರೂ. ಇದೆ. ನೂರು ಗ್ರಾಂ ಚಿನ್ನ ಖರೀದಿಸುವುದಾದರೆ ಇಂದು 557500 ರೂ. ನೀಡಬೇಕು.
24 ಕ್ಯಾರೆಟ್ ಚಿನ್ನದ ದರ (24 carat gold rate) ಈ ಮುಂದಿನಂತೆ ಇದೆ. ಇಂದು ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ದರ 6081 ರೂ. ಇದೆ. 8 ಗ್ರಾಂ ಚಿನ್ನ ಖರೀದಿಸುವುದಾದರೆ ಇಂದು 48648 ರೂ. ನೀಡಬೇಕು. ಹತ್ತು ಗ್ರಾಂ ಚಿನ್ನದ ದರ ಇಂದು 60810 ರೂ. ಇದೆ. ನೂರು ಗ್ರಾಂ ಚಿನ್ನ ಖರೀದಿಸುವುದಾದರೆ ಇಂದು 608100 ರೂ. ನೀಡಬೇಕು.
ವಿವಿಧ ನಗರಗಳಲ್ಲಿ ದರ
10 ಗ್ರಾಂ 22 ಕ್ಯಾರೆಟ್ ಚಿನ್ನದ ದರ ಇಂದು ಬೆಂಗಳೂರಿನಲ್ಲಿ 55750 ರೂ. ಇದೆ. ಮಂಗಳೂರು 55750 ರೂ., ಮೈಸೂರಿನಲ್ಲಿ 55750 ರೂ. ಇದೆ. ಮೈಸೂರು, ಬಳ್ಳಾರಿ ಸೇರಿದಂತೆ ರಾಜ್ಯದ ಬಹುತೇಕ ನಗರಗಳಲ್ಲಿ ಇಂದು ಇದೇ ದರ ಇರುತ್ತದೆ. ಮಜೂರಿ, ಇತರೆ ಶುಲ್ಕ ಇತ್ಯಾದಿಗಳಿಂದ ಚಿನ್ನದಂಗಡಿಯಿಂದ ಚಿನ್ನದಂಗಡಿಗೆ ದರ ವ್ಯತ್ಯಾಸ ಇರಬಹುದು. ಚೆನ್ನೈನಲ್ಲಿ 56300 ರೂ. , ಮುಂಬೈನಲ್ಲಿ 55700 ರೂ. , ದೆಹಲಿಯಲ್ಲಿ 55850 ರೂ. , ಕೋಲ್ಕತಾದಲ್ಲಿ 55700 ರೂ., ಹೈದರಾಬಾದ್ 55700 ರೂ., ಕೇರಳ 55700 ರೂ., ಪುಣೆ 55700 ರೂ., ಅಹಮದಾಬಾದ್ 55750 ರೂ., ಜೈಪುರ 55850 ರೂ., ಲಖನೌ 55850 ರೂ., ಕೊಯಮುತ್ತೂರು 56300 ರೂ. ಇದೆ.
10 ಗ್ರಾಂ 24 ಕ್ಯಾರೆಟ್ ಚಿನ್ನದ ದರ ಇಂದು ಬೆಂಗಳೂರಿನಲ್ಲಿ 60810 ರೂ. ಇದೆ. ಮಂಗಳೂರು, ಮೈಸೂರು, ದಾವಣಗೆರೆ, ಬಳ್ಳಾರಿ ಸೇರಿದಂತೆ ರಾಜ್ಯದ ವಿವಿಧ ನಗರಗಳಲ್ಲಿಯೂ ಇದೇ ದರ ಇದೆ. ಚೆನ್ನೈನಲ್ಲಿ 61420 ರೂ. , ಮುಂಬೈನಲ್ಲಿ 60760 ರೂ. , ದೆಹಲಿಯಲ್ಲಿ 60910 ರೂ. , ಕೋಲ್ಕತಾದಲ್ಲಿ60760 ರೂ., ಹೈದರಾಬಾದ್ 60760 ರೂ., ಕೇರಳ 60760 ರೂ., ಪುಣೆ 60760 ರೂ., ಅಹಮದಾಬಾದ್ 60810 ರೂ., ಜೈಪುರ 60910 ರೂ., ಲಖನೌ 60910 ರೂ., ಕೊಯಮುತ್ತೂರು 61420 ರೂ., ಮದುರೈ 61420 , ವಿಜಯವಾಡ 60760 ರೂ. ಇದೆ.
ಇಂದು ಬೆಳ್ಳಿ ದರ ಎಷ್ಟಿದೆ?
ರಾಜ್ಯದಲ್ಲಿ ಇಂದು ಒಂದು ಗ್ರಾಂ ಬೆಳ್ಳಿ ದರ 80.50 ರೂ., 8 ಗ್ರಾಂ ಬೆಳ್ಳಿ ದರ 644 ರೂ., 10 ಗ್ರಾಂ ದರ 805 ಮತ್ತು 1 ಕೆಜಿ ದರ 80,500 ರೂ. ಇದೆ.
ವಿಶ್ವ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಏರಿಳಿತಕ್ಕೆ ಹಲವಾರು ಅಂತಾರಾಷ್ಟ್ರೀಯ ಕಾರಣಗಳಿವೆ. ರಷ್ಯಾ ಮತ್ತು ಉಕ್ರೇನ್ ನಡುವಿನ ಇತ್ತೀಚಿನ ಯುದ್ಧವು ಪ್ರಭಾವದ ಪ್ರದೇಶಗಳ ಮೇಲೆ ಪರಿಣಾಮ ಬೀರಿದೆ. ಆ ಪರಿಣಾಮವೇ ಈ ಚಿನ್ನ ಗಣನೀಯವಾಗಿ ಏರಲು ಕಾರಣವಾಯಿತು. ಹಣದುಬ್ಬರ, ಸೆಂಟ್ರಲ್ ಬ್ಯಾಂಕ್‌ನಲ್ಲಿ ಚಿನ್ನದ ನಿಕ್ಷೇಪಗಳು, ಬಡ್ಡಿದರಗಳಲ್ಲಿ ಹೆಚ್ಚಳ ಅಥವಾ ಇಳಿಕೆಯಂತಹ ಅಂಶಗಳು ಸಹ ಚಿನ್ನ, ಬೆಳ್ಳಿ ಬೆಲೆಯಲ್ಲಿನ ಏರಿಳಿತಗಳಿಗೆ ಕಾರಣವಾಗಿದೆ.