logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Govt Business Loan: ಸರಕಾರದಿಂದ ದೊರಕುವ ಬಿಸಿನೆಸ್‌ ಸಾಲಗಳ ಬಗ್ಗೆ ಗೊತ್ತೆ? ಮುದ್ರಾ, ಎಂಎಸ್‌ಎಂಐ, ಎಸ್‌ಐಡಿಬಿಐ ಸಾಲಗಳ ಬಗ್ಗೆ ತಿಳಿಯಿರಿ

Govt Business Loan: ಸರಕಾರದಿಂದ ದೊರಕುವ ಬಿಸಿನೆಸ್‌ ಸಾಲಗಳ ಬಗ್ಗೆ ಗೊತ್ತೆ? ಮುದ್ರಾ, ಎಂಎಸ್‌ಎಂಐ, ಎಸ್‌ಐಡಿಬಿಐ ಸಾಲಗಳ ಬಗ್ಗೆ ತಿಳಿಯಿರಿ

Praveen Chandra B HT Kannada

Jun 25, 2023 12:00 PM IST

google News

Govt Business Loan: ಸರಕಾರದಿಂದ ದೊರಕುವ ಬಿಸಿನೆಸ್‌ ಸಾಲಗಳ ಬಗ್ಗೆ ಗೊತ್ತೆ? ಮುದ್ರಾ, ಎಂಎಸ್‌ಎಂಐ, ಎಸ್‌ಐಡಿಬಿಐ ಸಾಲಗಳ ಬಗ್ಗೆ ತಿಳಿಯಿರಿ

    • ಕೇಂದ್ರ ಸರಕಾರದ ಎಂಎಸ್‌ಎಂಇ ಸಾಲ (MSME Loan Scheme), ಕ್ರೆಡಿಟ್‌ ಗ್ಯಾರಂಟಿ ಫಂಡ್‌ ಸ್ಕೀಮ್‌ (Credit Guarantee Fund Scheme), ಮುದ್ರಾ ಸಾಲ (MUDRA Loan), ಕ್ರೆಡಿಟ್‌ ಲಿಂಕ್‌ ಕ್ಯಾಪಿಟಲ್‌ ಸಬ್ಸಿಡಿ ಸ್ಕೀಮ್‌, ನ್ಯಾಷನಲ್‌ ಸ್ಮಾಲ್‌ ಇಂಡಸ್ಟ್ರೀಸ್‌ ಕಾರ್ಪೊರೇಷನ್‌ ಸಬ್ಸಿಡಿ, ಎಸ್‌ಐಡಿಬಿಐ ಸಾಲ ಇತ್ಯಾದಿಗಳ ವಿವರವನ್ನು ಇಲ್ಲಿ ನೀಡಲಾಗಿದೆ. 
Govt Business Loan: ಸರಕಾರದಿಂದ ದೊರಕುವ ಬಿಸಿನೆಸ್‌ ಸಾಲಗಳ ಬಗ್ಗೆ ಗೊತ್ತೆ? ಮುದ್ರಾ, ಎಂಎಸ್‌ಎಂಐ, ಎಸ್‌ಐಡಿಬಿಐ ಸಾಲಗಳ ಬಗ್ಗೆ ತಿಳಿಯಿರಿ
Govt Business Loan: ಸರಕಾರದಿಂದ ದೊರಕುವ ಬಿಸಿನೆಸ್‌ ಸಾಲಗಳ ಬಗ್ಗೆ ಗೊತ್ತೆ? ಮುದ್ರಾ, ಎಂಎಸ್‌ಎಂಐ, ಎಸ್‌ಐಡಿಬಿಐ ಸಾಲಗಳ ಬಗ್ಗೆ ತಿಳಿಯಿರಿ

ಸ್ವಂತ ಏನಾದರೂ ಬಿಸಿನೆಸ್‌ ಮಾಡಿ ಕೈತುಂಬಾ ಸಂಪಾದನೆ ಮಾಡಬೇಕೆಂಬ ಕನಸು ಎಲ್ಲರಿಗೂ ಇರುತ್ತದೆ. ಆದರೆ, ಯಾವುದೇ ವ್ಯವಹಾರ ಮಾಡಲು ಕೈಯಲ್ಲಿ ಬಂಡವಾಳ ಇರೋದಿಲ್ಲ. ಯಾರಲ್ಲಿಯಾದರೂ ಕೈ ಸಾಲ ಕೇಳೋಣ ಎಂದರೆ ದೊಡ್ಡ ಮೊತ್ತ ಕೊಡೋದಿಲ್ಲ. ಬ್ಯಾಂಕ್‌ನಲ್ಲಿ ಸಾಲ ಕೇಳೋಣ ಎಂದರೆ ಅಡಮಾನ ಕೇಳುತ್ತಾರೆ. ಇಂತಹ ಸಮಯದಲ್ಲಿ ಒಳ್ಳೆಯ ಕನಸು, ಬಿಸ್ನೆಸ್‌ ಪ್ಲಾನ್‌ ಇದ್ದರೂ ಸಾಕಷ್ಟು ಜನರು ತಮಗೆ ತಾವೇ ಬಾಸ್‌ ಆಗೋದನ್ನು ಬಿಟ್ಟು ಅನಿವಾರ್ಯವಾಗಿ ಬೇರೆಯವರ ಕೈಕೆಳಗೆ ಕೆಲಸ ಮುಂದುವರೆಸುತ್ತಾರೆ. ನಿಮ್ಮಲ್ಲಿ ಒಳ್ಳೆಯ ಕನಸು, ವ್ಯವಹಾರ ಯೋಜನೆ ಇದ್ದರೆ ನೀವು ಕೇಂದ್ರ ಅಥವಾ ರಾಜ್ಯ ಸರಕಾರ ನೀಡುವ ವಿವಿಧ ಸಾಲ, ಸಬ್ಸಿಡಿ ಪ್ರಯೋಜನಗಳನ್ನು ಪಡೆಯಿರಿ.

ಈ ಲೇಖನದಲ್ಲಿ ಕೇಂದ್ರ ಸರಕಾರದ ಎಂಎಸ್‌ಎಂಇ ಸಾಲ (MSME Loan Scheme), ಕ್ರೆಡಿಟ್‌ ಗ್ಯಾರಂಟಿ ಫಂಡ್‌ ಸ್ಕೀಮ್‌ (Credit Guarantee Fund Scheme), ಮುದ್ರಾ ಸಾಲ (MUDRA Loan), ಕ್ರೆಡಿಟ್‌ ಲಿಂಕ್‌ ಕ್ಯಾಪಿಟಲ್‌ ಸಬ್ಸಿಡಿ ಸ್ಕೀಮ್‌ (Credit Link Capital Subsidy Scheme), ನ್ಯಾಷನಲ್‌ ಸ್ಮಾಲ್‌ ಇಂಡಸ್ಟ್ರೀಸ್‌ ಕಾರ್ಪೊರೇಷನ್‌ ಸಬ್ಸಿಡಿ, ಎಸ್‌ಐಡಿಬಿಐ ಸಾಲ ಇತ್ಯಾದಿಗಳ ವಿವರವನ್ನು ಇಲ್ಲಿ ನೀಡಲಾಗಿದ್ದು, ಸ್ವಂತ ಬಿಸಿನೆಸ್‌ ಮಾಡಿಕೊಳ್ಳಲು ಬಯಸುವವರು ಸದುಪಯೋಗ ಮಾಡಿಕೊಳ್ಳಬಹುದು.

ಎಂಎಸ್‌ಎಂಇ ಸಾಲ

ಎಂಎಸ್‌ಎಂಇ ಬಿಸಿನೆಸ್‌ ಸಾಲವನ್ನು ಭಾರತ ಸರಕಾರವು ಎಂಎಸ್‌ಎಂಇ ವಲಯದಲ್ಲಿ ಬಂಡವಾಳ ಅಗತ್ಯ ಇರುವವರಿಗೆ ನೀಡುವ ಸಲುವಾಗಿ ಆರಂಭಿಸಿತ್ತು. ಎಂಎಸ್‌ಎಂಇ ಸ್ಕೀಮ್‌ ಮೂಲಕ ಹೊಸ ಉದ್ಯಮ ಅಥವಾ ಈಗಿರುವ ಉದ್ಯಮಕ್ಕೆ ಯಾವುದೇ ಸಾಲ ಪಡೆಯಬಹುದು. ಗರಿಷ್ಠ 1 ಕೋಟಿ ರೂಪಾಯಿವರೆಗೆ ಸಾಲ ದೊರಕುತ್ತದೆ. ಸಾಲದ ಪ್ರಕ್ರಿಯೆ ಮುಗಿಯಲು ಸುಮಾರು 8-12 ದಿನ ಬೇಕಾಗುತ್ತದೆ. ಅರ್ಜಿ ಸಲ್ಲಿಸಿದ ಮೊದಲ 59 ನಿಮಿಷದಲ್ಲಿಯೇ ನಿಮ್ಮ ಅರ್ಜಿಗೆ ಅಂಗೀಕಾರ ದೊರಕಿದೆಯೇ ಇಲ್ಲವೇ ಎಂದು ತಿಳಿಯುತ್ತದೆ. ಎಂಎಸ್‌ಎಂಇ ಸಾಲವು ಶೇಕಡ 8 ಆರ್‌ಒಐ ಮೂಲಕ ದದೊರಕುತ್ತದೆ. ಮಹಿಳಾ ಉದ್ಯಮಿಗಳಿಗೆ ಶೇಕಡ 3ರಷ್ಟು ಮೀಸಲು ಇರುತ್ತದೆ.

ಕ್ರೆಡಿಟ್‌ ಗ್ಯಾರಂಟಿ ಫಂಡ್‌ ಸ್ಕೀಮ್‌

ಕ್ರೆಡಿಟ್ ಗ್ಯಾರಂಟಿ ಫಂಡ್ ಟ್ರಸ್ಟ್ ಫಾರ್ ಮೈಕ್ರೋ ಮತ್ತು ಸ್ಮಾಲ್ ಎಂಟರ್‌ಪ್ರೈಸಸ್ ಎಂಬ ಸ್ಕೀಮ್‌ ಮೇಲಾಧಾರ ಮುಕ್ತ ಸಾಲವು ಸಾಕಷ್ಟು ಪ್ರಯೋಜನಕಾರಿ. ಇದು ಮೇಲಾಧಾರವಿಲ್ಲದೆ 10 ಲಕ್ಷ ರೂಪಾಯಿಗೆ ಕಾರ್ಯನಿರತ ಬಂಡವಾಳ ಸಾಲಗಳನ್ನು ಒದಗಿಸುತ್ತದೆ. ಆದರೆ, 10 ಲಕ್ಷ ರೂ.ಗಳಿಗಿಂತ ಹೆಚ್ಚಿನ ಮೊತ್ತದ ಸಾಲಗಳಿಗೆ ಅಥವಾ ಕ್ರೆಡಿಟ್‌ ಸೌಲಭ್ಯಗಳಿಗೆ ಭೂಮಿ, ಕಟ್ಟಡ ಇತ್ಯಾದಿಗಳ ಅಡಮಾನ ಅಗತ್ಯವಿರುತ್ತದೆ.

ಮುದ್ರಾ ಸಾಲ

ಪ್ರಧಾನ ಮಂತ್ರಿ ಮುದ್ರಾ ಯೋಜನೆಯು ಕೃಷಿಯೇತರ ಮತ್ತು ಕಾರ್ಪೊರೇಟ್‌ ಅಲ್ಲದ ಸೂಕ್ಷ್ಮ ಮತ್ತು ಸಣ್ಣ ಉದ್ಯಮಗಳಿಗೆ ಸಾಲ ಒದಗಿಸುತ್ತದೆ. ಉದ್ಯಮಗಳು ಮುದ್ರಾ ಯೋಜನೆಯಡಿ ಸಾಲಗಳನ್ನು ಪಡೆಯಬಹುದು. ಮುದ್ರಾ ಸಾಲವು ಮೂರು ವಿಧ ಹೊಂದಿದೆ. ಶಿಶು ಸಾಲ: 50 ಸಾವಿರ ರೂಪಾಯಿವರೆಗೆ. ಕಿಶೋರ್‌ ಸಾಲ: 5 ಲಕ್ಷ ರೂ.ವರೆಗೆ. ತರುಣ್‌ ಲೋನ್‌: 10 ಲಕ್ಷ ರೂ.ವರೆಗೆ.

ಕ್ರೆಡಿಟ್‌ ಲಿಂಕ್ಡ್‌ ಕ್ಯಾಪಿಟಲ್‌ ಸಬ್ಸಿಡಿ ಸ್ಕೀಮ್‌

ಬಿಸ್ನೆಸ್‌ಗಳು ತಾಂತ್ರಿಕವಾಗಿ ಅಪ್‌ಗ್ರೇಡ್‌ ಮಾಡಲು ಈ ಸಾಲ ನೆರವಾಗುತ್ತದೆ. ತಯಾರಿಕೆ, ಮಾರ್ಕೆಟಿಂಗ್‌, ಸಪ್ಲೈ ಚೈನ್‌ ಇತ್ಯಾದಿಗಳಿಗೆ ಬಳಸಲಾಗುತ್ತದೆ. ಹೆಚ್ಚಿನ ಮಾಹಿತಿಯನ್ನು ಗೂಗಲ್‌ನಲ್ಲಿ CLCSS ಎಂದು ಸರ್ಚ್‌ ಮಾಡಿ ಹುಡುಕಿ.

ಎನ್‌ಎಸ್‌ಐಸಿ

ನ್ಯಾಷನಲ್‌ ಸ್ಮಾಲ್‌ ಇಂಡಸ್ಟ್ರೀಸ್‌ ಕಾರ್ಪೊರೇಷನ್‌ ಸಬ್ಸಿಡಿಗಹ ಎಂಎಸ್‌ಎಂಇಗಳಿಗೆ ರಾ ಮೆಟಿರಿಯಲ್‌ ಅಸಿಸ್ಟೆನ್ಸ್‌ ಮಾರ್ಕೆಟಿಂಗ್‌ ಅಸಿಸ್ಟೆನ್ಸ್‌ ಎಂಬ ಎರಡು ಫಂಡ್‌ ಪ್ರಯೋಜನ ನೀಡುತ್ತದೆ.

ಎಸ್‌ಐಡಿಬಿಐ ಲೋನ್‌

ಎಸ್‌ಐಡಿಬಿಐ ಅಥವಾ ಸ್ಮಾಲ್‌ ಇಂಡಸ್ಟ್ರೀಸ್‌ ಡೆವಲಪ್‌ಮೆಂಟ್‌ ಬ್ಯಾಂಕ್‌ ಆಫ್‌ ಇಂಡಿಯಾವು 10 ಲಕ್ಷ ರೂ.ನಿಂದ 25 ಕೋಟಿ ರೂ.ವರೆಗೆ ಸಾಲ ನೀಡುತ್ತದೆ. 1 ಕೋಟಿ ರೂ.ವರೆಗೆ ಯಾವುದೇ ಅಡಮಾನದ ಅಗತ್ಯ ಇರುವುದಿಲ್ಲ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ