logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಆಫ್ರಿಕಾದ ಗ್ಯುನಿಯಾದಲ್ಲೂ ಹಾಸನದ ಸಿಡಿ ಮಾದರಿ ಪ್ರಕರಣ: 400 ಮಹಿಳೆಯರೊಂದಿಗೆ ಪ್ರಭಾವಿ ವ್ಯಕ್ತಿ ಅಶ್ಲೀಲ ವಿಡಿಯೋ ಸಿಡಿ ಬಹಿರಂಗ

ಆಫ್ರಿಕಾದ ಗ್ಯುನಿಯಾದಲ್ಲೂ ಹಾಸನದ ಸಿಡಿ ಮಾದರಿ ಪ್ರಕರಣ: 400 ಮಹಿಳೆಯರೊಂದಿಗೆ ಪ್ರಭಾವಿ ವ್ಯಕ್ತಿ ಅಶ್ಲೀಲ ವಿಡಿಯೋ ಸಿಡಿ ಬಹಿರಂಗ

Umesha Bhatta P H HT Kannada

Nov 06, 2024 08:19 PM IST

google News

ಸಿಡಿ ಹಗರಣದಲ್ಲಿ ಸಿಲುಕಿದ ಆಫ್ರಿಕಾದ ಗ್ಯುನಿಯಾದ ಎಬಾಂಗ್‌ ಎಗೊಂಗಾನನ್ನು ಈಗಾಗಲೇ ಬಂಧಿಸಲಾಗಿದೆ.

    • ಮಹಿಳೆಯರ ದುರ್ಬಳಕೆ, ಸಿಡಿ ಬಿಡುಗಡೆ ಬರೀ ಹಾಸನಕ್ಕೆ ಸೀಮಿತವಾಗಿಲ್ಲ. ಇದಕ್ಕಿಂತಲೂ ಮಿಗಿಲಾದ ಇದೇ ಮಾದರಿ ಪ್ರಕರಣ ಆಫ್ರಿಕಾದಲ್ಲಿ ಬಯಲಾಗಿದೆ. ಈ ಸಿಡಿ ಹಗರಣದಲ್ಲಿ ಸಿಲುಕಿದಾಗ ಉನ್ನತ ಹುದ್ದೆಯಲ್ಲಿದ್ದ ಅಧಿಕಾರಿ. ಈಗ ಆತನೂ ಜೈಲು ಸೇರಿದ್ದಾನೆ.
ಸಿಡಿ ಹಗರಣದಲ್ಲಿ ಸಿಲುಕಿದ ಆಫ್ರಿಕಾದ ಗ್ಯುನಿಯಾದ ಎಬಾಂಗ್‌ ಎಗೊಂಗಾನನ್ನು ಈಗಾಗಲೇ ಬಂಧಿಸಲಾಗಿದೆ.
ಸಿಡಿ ಹಗರಣದಲ್ಲಿ ಸಿಲುಕಿದ ಆಫ್ರಿಕಾದ ಗ್ಯುನಿಯಾದ ಎಬಾಂಗ್‌ ಎಗೊಂಗಾನನ್ನು ಈಗಾಗಲೇ ಬಂಧಿಸಲಾಗಿದೆ.

ಇದು ‍ಐದಾರು ತಿಂಗಳ ಹಿಂದೆ ಕರ್ನಾಟಕದ ಹಾಸನದಲ್ಲಿ ಹೊರ ಬಂದ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಸಿಡಿ ಹಗರಣದ ಮಾದರಿಯ ಪ್ರಕರಣ. ಇದು ನಡೆದಿರುವುದು ದೂರದ ಆಫ್ರಿಕಾದಲ್ಲಿ. ಅದೂ ಆಫ್ರಿಕಾದ ಪ್ರಮುಖ ಹುದ್ದೆಯಲ್ಲಿರುವ ಅಧಿಕಾರಿಯೊಬ್ಬರಿಂದ. ತಮ್ಮ ಸ್ಥಾನದ ಜತೆಗೆ ಮಾತುಗಳ ಮೂಲಕವೇ ಹಲವು ಮಹಿಳೆಯರನ್ನು ಸೆಳೆದು ಅವರೊಂದಿಗೆ ಸಂಬಂಧ ಬೆಳೆಸಿದ್ದೂ ಅಲ್ಲದೇ ವಿಡಿಯೋಗಳನ್ನು ಮಾಡಿಕೊಂಡು ಸಿಕ್ಕಿಬಿದ್ದಿರುವ ಸಿಡಿ ಪ್ರಕರಣ. ಸುಮಾರು 400 ಮಹಿಳೆಯರೊಂದಿಗೆ ಈತ ಸಂಬಂಧ ಬೆಳೆಸಿರುವುದು, ವಿಡಿಯೋ ಮಾಡಿಕೊಂಡಿರುವುದು ಈಗ ಬಯಲಾಗಿದೆ. ಸ್ನೇಹಿತರೊಬ್ಬರಿಗೆ ಈತ ನೀಡಿದ್ದ ವಿಡಿಯೋ ಸಿಡಿ ಬಹಿರಂಗವಾಗಿ ಆತನ ಕೃತ್ಯಗಳೂ ಬಯಲಾಗಿವೆ. ಆತನನ್ನು ಈಗ ಬಂಧಿಸಲಾಗಿದ್ದು ಆಫ್ರಿಕಾದಲ್ಲಿ ಇದು ಭಾರೀ ಸದ್ದು ಮಾಡುತ್ತಿದೆ.

ಯಾರೀ ಪ್ರಭಾವಿ

ಆತನ ಹೆಸರು ಎಬಾಂಗ್‌ ಎಗೊಂಗಾ(Ebang Engonga). ವಯಸ್ಸು 54. ಮದುವೆಯಾಗಿ ಮಕ್ಕಳೂ ಇವೆ. ಈತನ ತಂದೆ ಕೂಡ ಉನ್ನತ ಹುದ್ದೆಯಲ್ಲಿದಾರೆ.ಈತ ಪಶ್ಚಿಮ ಆಫ್ರಿಕಾದ ಗ್ಯುನಿಯಾ(Guinea) ಎನ್ನುವ ಪ್ರದೇಶದಲ್ಲಿ ಉನ್ನತ ಹುದ್ದೆಯಲ್ಲಿದ್ದಾನೆ. ಗ್ಯುನಿಯಾ ರಾಷ್ಟ್ರೀಯ ಹಣಕಾಸು ತನಿಖಾ ಏಜೆನ್ಸಿ( ANIF) ಯ ಮಹಾ ನಿರ್ದೇಶಕ. 

ತನಿಖಾ ಸಂಸ್ಥೆಯ ಉನ್ನತ ಹುದ್ದೆಯಲ್ಲಿದ್ದ ಜತೆಗೆ ಕಟ್ಟುಮಸ್ತಾಗಿಯೂ ಇದ್ದುದರಿಂದ ಆತನ ಆಕರ್ಷಣೆಗೆ ಹೆಣ್ಣು ಮಕ್ಕಳು ಬಲೆಗೆ ಬೀಳುತ್ತಿದ್ದರು. ಇದನ್ನೇ ಬಳಸಿಕೊಂಡು ಆತ ಸಂಬಂಧವನ್ನೂ ಹಲವರೊಂದಿಗೆ ಬೆಳೆಸಿಕೊಂಡು. 

ಅದು ದೈಹಿಕ ಸಂಬಂಧಕ್ಕೂ ವಿಸ್ತರಣೆಯಾಗಿತ್ತು. ಪರಸ್ಪರ ಒಪ್ಪಿತ ಸಂಬಂಧದೊಂದಿಗೆ ಆತ ಅದನ್ನು ಮುಂದುವರೆಸಿದ್ದ. ಕೆಲವೊಂದು ಕಡೆ ಒತ್ತಡದಿಂದಲೂ ಅವರೊಂದಿಗೆ ಸಂಬಂಧ ಮುಂದುವರೆಸಿದ್ದೂ ಇದೆ. 

ಸಿಡಿ ಮಾಡಿಕೊಂಡ

ಆದರೆ ಅಷ್ಟಕ್ಕೆ ಆತ ಸೀಮಿತವಾಗಿದ್ದರೆ ಅದು ಅಷ್ಟು ತೀವ್ರತೆ ಪಡೆದು ಭಾರೀ ಸದ್ದು ಮಾಡುತ್ತಿರಲಿಲ್ಲ. ಆತ ಸಂಬಂಧ ಬೆಳೆಸಿದವರೊಂದಿಗೆ ವಿಡಿಯೋವನ್ನು ಮಾಡಿಕೊಂಡಿಟ್ಟಿದ್ದ. ಆತ ಸಂಬಂಧ ಬೆಳೆಸಿದ್ದು ಎಂಟತ್ತು ಹೆಣ್ಣುಮಕ್ಕಳೊಂದಿಗೆ ಅಲ್ಲ. ಬದಲಿಗೆ ಅದು 400 ದಾಟಿತ್ತು. ಅದರಲ್ಲಿ ಅತ್ತಿಗೆ, ಹತ್ತಿರದ ಸಂಬಂಧಿಕರು, ಪರಿಚಯಸ್ಥರು ಇದ್ದರು.

ಅದು ನಿಧಾನವಾಗಿ ಗಣ್ಯರ ಪತ್ನಿಯವರೆಗೂ ವಿಸ್ತರಣೆಗೊಂಡಿತ್ತು. ಪೊಲೀಸ್‌ ಅಧಿಕಾರಿಗಳು, ರಾಜಕಾರಣಿಗಳು, ಸಚಿವರ ಪತ್ನಿಯರೊಂದಿಗೆ ಎಗೊಂಗಾ ಸಂಬಂಧವನ್ನು ಬೆಳೆಸಿಕೊಂಡಿದ್ದ. ಅದರಲ್ಲೂ ಗ್ಯುನಿಯಾದ ಇಪ್ಪತ್ತು ಸಚಿವರ ಪತ್ನಿಯರು ಈತನೊಂದಿಗೆ ಒಡನಾಟ ಉಳಿಸಿಕೊಂಡಿದ್ದರು. ರಾಜ್ಯದ ಪೊಲೀಸ್‌ ಮಹಾನಿರ್ದೇಶಕರ ಪತ್ನಿಯನ್ನೂ ಬಲೆಗೆ ಬೀಳಿಸಿಕೊಂಡಿದ್ದ. ಅಷ್ಟೇ ಅಲ್ಲದೇ ಅವರೊಂದಿಗೆ ಸಂಬಂಧ ಬೆಳೆಸಿದ್ದ ವಿಡಿಯೋಗಳನ್ನು ಮಾಡಿಕೊಂಡಿದ್ದ. 

ಅವರು ಬೇಡ ಎಂದರೂ ಏನೂ ಆಗುವುದಿಲ್ಲ. ಇದರಿಂದ ನಿಮಗೆ ಏನೂ ತೊಂದರೆ ಆಗುವುದಿಲ್ಲ. ನಾನೂ ನಿಮ್ಮೊಂದಿಗೆ ಇರುತ್ತೇನೆ ಎಂದು ಅಭಯ ನೀಡಿದ್ದ. ಕೆಲವರೊಂದಿಗೆ ಒತ್ತಾಯಪೂರ್ವಕವಾಗಿಯೂ ವಿಡಿಯೋ ಮಾಡಿಕೊಂಡಿದ್ದೂ ಇದೆ.

ಸ್ನೇಹಿತನಿಂದ ಬಯಲು

ಇದು ಕಳೆದ ಕೆಲ ವರ್ಷಗಳಿಂದ ನಡೆದುಕೊಂಡು ಬಂದಿತ್ತು. ಕಳೆದ ತಿಂಗಳು ಆತನ ಬಳಿ ಇದ್ದ ವಿಡಿಯೋದಲ್ಲಿ ಕೆಲವು ಸ್ನೇಹಿತನಿಗೆ ನೀಡಿದ್ದ. ಅವುಗಳನ್ನು ಪಡೆದ ಆತ ಇನ್ನಷ್ಟು ವಿಡಿಯೋ ಪಡೆದುಕೊಂಡಿದ್ದ. ಅದು ಬಹಿರಂಗವಾಗಿ ಈಗ ಭಾರೀ ಸದ್ದು ಮಾಡುತ್ತಿದೆ. ಅದರಲ್ಲೂ ಗ್ಯುನಿಯಾದಲ್ಲಿ ವಿವಾದದ ಕಿಡಿಯನ್ನೂ ಹೊತ್ತಿಸಿದೆ. ಈ ವಿಡಿಯೋ ಬಹಿರಂಗಗೊಳ್ಳುತ್ತಲೇ ಆತನ ವಿರುದ್ದ ಲೈಂಗಿಕ ದುರ್ಬಳಕೆ, ದೌರ್ಜನ್ಯ, ಅತ್ಯಾಚಾರ ಸಹಿತ ಹಲವು ಪ್ರಕರಣಗಳನ್ನು ದಾಖಲಿಸಿಕೊಂಡು ಬಂಧಿಸಲಾಗಿದೆ. ಆತ ಈಗ ಜೈಲು ಸೇರಿದ್ದಾನೆ.

ಆತ ವಿಡಿಯೋಗಳನ್ನು ಹೊಟೇಲ್‌, ರೆಸಾರ್ಟ್‌ಗಳಲ್ಲಿ ತೆಗೆದುಕೊಂಡಿದ್ದರೆ, ಕೆಲವು ಗಣ್ಯರ ಮನೆಗೆ ತೆರಳಿ ಅಲ್ಲಿಯೇ ಅವರೊಂದಿಗೆ ಸಂಬಂಧ ಬೆಳೆಸಿ ವಿಡಿಯೋ ಮಾಡಿಕೊಂಡಿರುವುದು ಬಯಲಾಗಿದೆ. ಆತನ ಕಚೇರಿಯಲ್ಲಿಯೇ ಕೆಲವು ಕ್ಷಣಗಳ ವಿಡಿಯೋ ಕೂಡ ಆಗಿವೆ. ಗ್ಯುನಿಯಾದ ಬಾವುಟದ ಪಕ್ಕದಲ್ಲೇ ಚಟುವಟಿಕೆ ನಡೆಸಿ ಅಲ್ಲಿಯೇ ವಿಡಿಯೋ ಮಾಡಿರುವುದು ಕಂಡು ಬಂದಿದೆ.

ಜೈಲು ಪಾಲಾದ 

ಗ್ಯುನಿಯಾದ ವಿಶೇಷ ಪೊಲೀಸರ ತಂಡ ತನಿಖೆ ಆರಂಭಿಸಿ ವಿಡಿಯೋಗಳನ್ನು ವಶಪಡಿಸಿಕೊಂಡಿದೆ. ಕೆಲವು ಸಾಮಾಜಿಕ ಮಾಧ್ಯಮದಲ್ಲೂ ಬಯಲಾಗಿದೆ. ಈ ಎಲ್ಲಾ ವಿಡಿಯೋಗಳನ್ನು ನಿಷೇಧಿಸಲಾಗಿದೆ.

ಎಲೊಂಗೋ ನಡವಳಿಕೆ ಬಗ್ಗೆ ಸರ್ಕಾರವೂ ಆಕ್ರೋಶ ಹೊರ ಹಾಕಿ ಇಂತ ಕೃತ್ಯ ಎಸಗುವವರ ವಿರುದ್ದ ಕ್ರಮಕ್ಕೆ ಸೂಚಿಸಿದೆ. ಆತನ ಆರೋಗ್ಯ ತಪಾಸಣೆಯೂ ನಡೆದಿದ್ದು, ಕಾಯಿಲೆಗಳಿಗೂ ಈಡಾಗಿರುವ ಅನುಮಾನ ವ್ಯಕ್ತವಾಗಿದೆ. ಕೆಲವು ಮಹಿಳೆಯರಂತೂ ಈತನ ನಡವಳಿಕೆ ವಿರುದ್ದ ಆಕ್ರೋಶ ಹೊರ ಹಾಕಿದ್ದಾರೆ. ಸುರಕ್ಷಿತ ಕ್ರಮಗಳಿಲ್ಲದೇ ಸಂಬಂಧ ಬೆಳೆಸಿದ ಹೆಣ್ಣು ಮಕ್ಕಳ ಅನಾರೋಗ್ಯಕ್ಕೂ ಈತ ದಾರಿ ಮಾಡಿಕೊಟ್ಟಿರುವುದು. ಇಂತಹ ಕೃತ್ಯ ಸಹಿಸಿಕೊಳ್ಳಬಾರದು ಹೇಳಿದ್ದಾರೆ.

ಇದರೊಟ್ಟಿಗೆ ಆತ ಭ್ರಷ್ಟಾಚಾರದಲ್ಲಿ ತೊಡಗಿದ್ದು ಇದರೊಂದಿಗೆ ಬಯಲಾಗಿದ್ದು, ಭಾರೀ ಶಿಕ್ಷೆ ವಿಧಿಸುವ ಸಾಧ್ಯತೆಗಳಿವೆ.

ಹಾಸನದಲ್ಲೂ ಸಂಸದ ಪ್ರಜ್ವಲ್‌ ರೇವಣ್ಣ ಅವರ ವಿರುದ್ದ ಹಾಸನದಲ್ಲಿ ಮಹಿಳೆಯರನ್ನು ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡ ಆರೋಪ ಕೇಳಿ ಬಂದು ವಿಡಿಯೋ ಸಿಡಿಗಳು ಬಿಡುಗಡೆಯಾಗಿದ್ದವು. ವಿದೇಶಕ್ಕೆ ಪರಾರಿಯಾಗಿದ್ದ ಪ್ರಜ್ವಲ್‌ ತಿಂಗಳ ಬಳಿಕ ಬೆಂಗಳೂರಿಗೆ ವಾಪಾಸಾದ ಮೇಲೆ ಬಂಧಿಸಲಾಗಿತ್ತು. ಈಗ ಇನ್ನೂ ಪ್ರಜ್ವಲ್‌ ಬಿಡುಗಡೆಯಾಗದೇ ಜೈಲು ವಾಸದಲ್ಲಿಯೇ ಇದ್ದಾರೆ.

 

 

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ