logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಕೋವಿಡ್ ಉಪತಳಿ ಜೆಎನ್ 1 ಎಷ್ಟು ಅಪಾಯಕಾರಿ; ತಜ್ಞರು, ವೈದ್ಯರು ಏನು ಹೇಳುತ್ತಾರೆ

ಕೋವಿಡ್ ಉಪತಳಿ ಜೆಎನ್ 1 ಎಷ್ಟು ಅಪಾಯಕಾರಿ; ತಜ್ಞರು, ವೈದ್ಯರು ಏನು ಹೇಳುತ್ತಾರೆ

Raghavendra M Y HT Kannada

Dec 18, 2023 11:03 PM IST

google News

ಕೋವಿಡ್ ವೇರಿಯಂಟ್ ಜೆಎನ್‌ 1 ಎಷ್ಟು ಅಪಾಯಕಾರಿ. ಇದರ ಬಗ್ಗೆ ವೈದ್ಯರು ಏನು ಹೇಳುತ್ತಾರೆ.

  • ಕೇರಳದ 79 ವರ್ಷದ ಮಹಿಳೆಯಲ್ಲಿ ಕೋವಿಡ್ ರೂಪಾಂತರದ ಜೆಎನ್ 1 ಪ್ರಕರಣ ಪತ್ತೆಯಾಗಿದೆ. ಇದು ದೇಶದ ಮೊದಲ ಪ್ರಕರಣವಾಗಿದೆ.

ಕೋವಿಡ್ ವೇರಿಯಂಟ್ ಜೆಎನ್‌ 1 ಎಷ್ಟು ಅಪಾಯಕಾರಿ. ಇದರ ಬಗ್ಗೆ ವೈದ್ಯರು ಏನು ಹೇಳುತ್ತಾರೆ.
ಕೋವಿಡ್ ವೇರಿಯಂಟ್ ಜೆಎನ್‌ 1 ಎಷ್ಟು ಅಪಾಯಕಾರಿ. ಇದರ ಬಗ್ಗೆ ವೈದ್ಯರು ಏನು ಹೇಳುತ್ತಾರೆ.

ದೆಹಲಿ: ಭಾರತದಲ್ಲಿ ಕೋವಿಡ್ ಉಪತಳಿ ಜೆಎನ್ 1 (Covid JN.1) ಮೊದಲ ಪ್ರಕರಣ ಪತ್ತೆಯಾಗುತ್ತಿದ್ದಂತೆ ಕೇಂದ್ರ ಸರ್ಕಾರ (Union Govt) ಅಲರ್ಟ್ ಆಗಿದ್ದು, ಇಂದು (ಡಿಸೆಂಬರ್ 18, ಸೋಮವಾರ) ಮುಂಜಾಗ್ರತೆ ವಹಿಸುವಂತೆ ಎಲ್ಲಾ ರಾಜ್ಯಗಳಿಗೆ ಸೂಚಿಸಿದೆ.

ಕೇರಳದ ತಿರುವನಂತಪುರಂನಲ್ಲಿ 2023ರ ಡಿಸೆಂಬರ್ 8 ರಂದು ಮಹಿಳೆಯೊಬ್ಬರಿಗೆ ಆರ್‌ಟಿ-ಪಿಸಿಆರ್‌ ಪರೀಕ್ಷೆ ನಡೆಸಿದಾಗ ಜೆಎನ್ 1 ಪ್ರಕರಣ ಪಾಸಿಟಿವ್ ಬಂದಿತ್ತು. ಇದು ದೇಶದ ಮೊದಲ ಪ್ರಕರಣವಾಗಿದೆ. 79 ವರ್ಷದ ಮಹಿಳೆಯಲ್ಲಿ ಕೋವಿಡ್‌ನ ಈ ರೂಪಾಂತರಿ ತಳಿ ಪತ್ತೆಯಾಗಿದೆ. ಈ ವೈರಸ್ ಅಮೆರಿಕ, ಚೀನಾ, ಸಿಂಗಾಪುರ್ ಹಾಗೂ ಭಾರತದಲ್ಲಿ ಪತ್ತೆಯಾಗಿದೆ.

ದೇಶದಲ್ಲಿ ಕೋವಿಡ್ ಪ್ರಕರಣಗಳ ಹೆಚ್ಚಾಗಿರುತ್ತಿರುವ ನಡುವೆ ವೈರಸ್ ಬದಲಾಗುತ್ತಿದೆ ಮತ್ತು ವಿಕಸನಗೊಳ್ಳುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಭಾನುವಾರವಷ್ಟೇ (ಡಿಸೆಂಬರ್ 17) ಹೇಳಿದ್ದು, ಹೆಚ್ಚಿನ ಕ್ರಮವಹಿಸುವಂತೆ ಸದಸ್ಯ ರಾಷ್ಟ್ರಗಳನ್ನು ಒತ್ತಾಯಿಸಿದೆ. ಅಲ್ಲದೆ, ಕೋವಿಡ್ ಮತ್ತು ಅದರ ಉಪತಳಿ ಜೆಎನ್ 1 ಪರಿಸ್ಥಿತಿಯ ನಿರ್ವಹಣೆಯನ್ನು ಮುಂದುವರಿಸಲಾಗಿದೆ.

ರಜಾದಿನಗಳಲ್ಲಿ ನಿಮ್ಮ ಕುಟುಂಬಗಳು ಹಾಗೂ ಸ್ನೇಹಿತರನ್ನು ಸುರಕ್ಷಿತವಾಗಿರಿಸಲು ವಿಶ್ವ ಆರೋಗ್ಯ ಸಂಸ್ಥೆಯ ಆರೋಗ್ಯ ಸಲಹೆಗಳನ್ನು ಪಾಲಿಸುವಂತೆ ಒತ್ತಾಯಿಸಿದೆ. ಸೋಮವಾರಕ್ಕೆ (ಡಿಸೆಂಬರ್ 18) ಭಾರತದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 1,821ಕ್ಕೆ ತಲುಪಿದ್ದು, 5 ಮಂದಿ ಮೃತಪಟ್ಟಿರುವುದು ಆತಂಕ ಹೆಚ್ಚಿದೆ.

ಜೆಎನ್ 1 ರೂಪಾಂತರ ವೈರಸ್ ಎಷ್ಟು ಅಪಾಯಕಾರಿ?

ಕೋವಿಡ್ ವೈರಸ್‌ನ ಜೀನೋಮಿಕ್ ವೇರಿಯಂಟ್‌ಗಳನ್ನು ಪತ್ತೆಹಚ್ಚುವ ಭಾರತೀಯ SARS-COV-2 ಜೀನೋಮಿಕ್ಸ್ ಕನ್ಸೋರ್ಟಿಯಂ (INSACOG) ಪ್ರಯೋಗಾಲದ ಮುಖ್ಯಸ್ಥರಾದ ಡಾ ಎನ್‌ಕೆ ಆರೋರಾ ಈ ಬಗ್ಗೆ ಮಾತನಾಡಿದ್ದು, ಕೋವಿಡ್‌ನ ಉಪತಳಿ ಜೆಎನ್ 1 ವೈರಸ್‌ ಬಗ್ಗೆ ಯಾವುದೇ ಭಯಪಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

ದೇಶದಲ್ಲಿ ಕಡಿಮೆ ಸ್ಯಾಂಪಲ್‌ಗಳಿವೆ. ಆದರೆ ಎಲ್ಲಾ ರಾಜ್ಯಗಳಿಂದ ಸಂಗ್ರಹಿಸಲಾಗುತ್ತಿದೆ. ಈ ವೈರಸ್‌ ಅನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದ್ದು, ಸೋಂಕಿನ ಬಗ್ಗೆ ಅಧ್ಯಯನ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ. ಇದು BA.2.86. ನ ಉಪತಳಿಯಾಗಿದೆ. ನಮ್ಮಲ್ಲಿ ಜೆಎನ್1ನ ಕೆಲ ಪ್ರಕರಣಗಳಿವೆ. ಭಾರತ ಇದರ ಬಗ್ಗೆ ಎಚ್ಚರಿಕೆಯಿಂದರಬೇಕು. 2023ರ ಸೆಪ್ಟೆಂಬರ್‌ನಲ್ಲಿ ಜೆಎನ್.1 ಮೊದಲು ಅಮೆರಿಕದಲ್ಲಿ ಕಂಡುಬಂದಿದೆ ಎಂದು ವಿವರಿಸಿದ್ದಾರೆ.

ಕೋವಿಡ್-19 ರೂಪಾಂತರಿ ವೈರಸ್ ಹರಡುವಿಕೆ ಮುಂದುವರಿಯುತ್ತಿರುವುದರಿಂದ ನಾವು ನಿರಂತರವಾಗಿ ಜಾಗರೂಕತೆಯ ಸ್ಥಿತಿಯನ್ನು ಜಿಲ್ಲಾ ಮಟ್ಟದಲ್ಲಿ ಕಾಪಾಡಿಕೊಳ್ಳುವುದು ಬಹಳ ಮುಖ್ಯ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಎಲ್ಲಾ ರಾಜ್ಯಗಳಿಗೆ ತಿಳಿಸಿದೆ.

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ