logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Ht Leadership Summit 2022: ಹಿಂದೂಸ್ತಾನ್‌ ಟೈಮ್ಸ್‌ ನಾಯಕತ್ವ ಶೃಂಗದಲ್ಲಿ ಉಕ್ರೇನ್‌ ಬಗ್ಗೆ ಬೋರಿಸ್‌ ಜಾನ್ಸನ್‌ ನುಡಿದ 3 ಭವಿಷ್ಯ

HT leadership summit 2022: ಹಿಂದೂಸ್ತಾನ್‌ ಟೈಮ್ಸ್‌ ನಾಯಕತ್ವ ಶೃಂಗದಲ್ಲಿ ಉಕ್ರೇನ್‌ ಬಗ್ಗೆ ಬೋರಿಸ್‌ ಜಾನ್ಸನ್‌ ನುಡಿದ 3 ಭವಿಷ್ಯ

Praveen Chandra B HT Kannada

Dec 12, 2022 01:42 PM IST

google News

ಹಿಂದೂಸ್ತಾನ್‌ ಟೈಮ್ಸ್‌ ನಾಯಕತ್ವ ಶೃಂಗದಲ್ಲಿ ಉಕ್ರೇನ್‌ ಬಗ್ಗೆ ಬೋರಿಸ್‌ ನುಡಿದ 3 ಭವಿಷ್ಯ

    • ಹಿಂದೂಸ್ತಾನ್‌ ಟೈಮ್ಸ್‌ ನಾಯಕತ್ವ ಶೃಂಗಸಭೆಯಲ್ಲಿ ಇಂಗ್ಲೆಂಡ್‌ ಮತ್ತು ಭಾರತದ ನಡುವಿನ ಬಲವಾದ ಆರ್ಥಿಕ, ರಾಜಕೀಯ ಮತ್ತು ಮಿಲಿಟರಿ ಸಂಬಂಧಗಳ ಕುರಿತು ಹೊಸ ಬೆಳಕು ಬೀರಿದೆ. ಬ್ರಿಟನ್‌ ಮಾಜಿ ಪ್ರಧಾನಿ ಬೋರಿಸ್‌ ಜಾನ್ಸನ್‌ ಅವರು ರಷ್ಯಾದ ಕುರಿತು ಟೀಕಾ ಪ್ರಹಾರ ನಡೆಸಿದ್ದು, ಉಕ್ರೇನ್‌ ಬಗ್ಗೆ ಮೂರು ಭವಿಷ್ಯ ನುಡಿದಿದ್ದಾರೆ.
ಹಿಂದೂಸ್ತಾನ್‌ ಟೈಮ್ಸ್‌ ನಾಯಕತ್ವ ಶೃಂಗದಲ್ಲಿ ಉಕ್ರೇನ್‌ ಬಗ್ಗೆ ಬೋರಿಸ್‌ ನುಡಿದ 3 ಭವಿಷ್ಯ
ಹಿಂದೂಸ್ತಾನ್‌ ಟೈಮ್ಸ್‌ ನಾಯಕತ್ವ ಶೃಂಗದಲ್ಲಿ ಉಕ್ರೇನ್‌ ಬಗ್ಗೆ ಬೋರಿಸ್‌ ನುಡಿದ 3 ಭವಿಷ್ಯ

ನವದೆಹಲಿ: ಹಿಂದೂಸ್ತಾನ್‌ ಟೈಮ್ಸ್‌ ನಾಯಕತ್ವ‌ ಶೃಂಗ 2022 (Hindustan Times Leadership Summit 2022) ದ ಅಂತಿಮ ದಿನವಾದ ಇಂದು ಬ್ರಿಟನ್‌ ಮಾಜಿ ಪ್ರಧಾನಿ ಸೇರಿದಂತೆ ಹಲವು ಪ್ರಮುಖರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. #EnvisioningANewTomorrow ಟ್ಯಾಗ್‌ಲೈನ್‌ನಡಿ ವಿಶ್ವದ ಪ್ರಮುಖ ಕ್ರೀಡಾ, ರಾಜಕೀಯ, ವ್ಯವಹಾರ, ಆರೋಗ್ಯ ಮತ್ತು ಮನೋರಂಜನಾ ಕ್ಷೇತ್ರದ ಗಣ್ಯರು ತಮ್ಮ ಅಭಿಪ್ರಾಯಗಳನ್ನು ಈ ಶೃಂಗದಲ್ಲಿ ಹಂಚಿಕೊಂಡಿದ್ದಾರೆ.

ಹಿಂದೂಸ್ತಾನ್‌ ಟೈಮ್ಸ್‌ ನಾಯಕತ್ವ ಶೃಂಗಸಭೆಯಲ್ಲಿ ಇಂಗ್ಲೆಂಡ್‌ ಮತ್ತು ಭಾರತದ ನಡುವಿನ ಬಲವಾದ ಆರ್ಥಿಕ, ರಾಜಕೀಯ ಮತ್ತು ಮಿಲಿಟರಿ ಸಂಬಂಧಗಳ ಕುರಿತು ಹೊಸ ಬೆಳಕು ಬೀರಿದೆ. ಬ್ರಿಟನ್‌ ಮಾಜಿ ಪ್ರಧಾನಿ ಬೋರಿಸ್‌ ಜಾನ್ಸನ್‌ ಅವರು ರಷ್ಯಾದ ಕುರಿತು ಟೀಕಾ ಪ್ರಹಾರ ನಡೆಸಿದ್ದು, ಉಕ್ರೇನ್‌ ಬಗ್ಗೆ ಮೂರು ಭವಿಷ್ಯ ನುಡಿದಿದ್ದಾರೆ.

"ಪುಟಿನ್‌ ಸಂಪೂರ್ಣವಾಗಿ ಕಳೆದುಕೊಳ್ಳುತ್ತಾರೆ. ರಷ್ಯಾದ ಮಿಲಿಟರಿ ಉಪಕರಣಗಳ ರಫ್ತಿನ ಮೇಲೆ ಪರಿಣಾಮ ಬೀಳುತ್ತದೆ. ಉಕ್ರೇನ್‌ ಜತೆಗಿನ ರಷ್ಯಾದ ಯುದ್ಧವು ಚೀನಾವನ್ನು ಬಲಪಡಿಸುತ್ತದೆʼʼ ಎಂದು ಬ್ರಿಟನ್‌ನ ಮಾಜಿ ಪ್ರಧಾನಿ ಬೋರಿಸ್‌ ಜಾನ್ಸನ್‌ ಅವರು ಹಿಂದೂಸ್ತಾನ್‌ ಟೈಮ್ಸ್‌ ನಾಯಕತ್ವ‌ ಶೃಂಗ 2022ರ ಐದನೇ ಮತ್ತು ಅಂತಿಮ ದಿನದಂದು ಅಭಿಪ್ರಾಯಪಟ್ಟಿದ್ದಾರೆ.

ಭಾರತ ಮತ್ತು ಬ್ರಿಟನ್‌ ನಡುವೆ ಬಾಕಿ ಉಳಿದಿರುವ ಮುಕ್ತ ವ್ಯಾಪಾರದ ಕುರಿತೂ ಜಾನ್ಸನ್‌ ಮಾತನಾಡಿದ್ದಾರೆ. "ನಾನು ಪ್ರಧಾನಿ ಆಫೀಸ್‌ನಿಂದ ಹೊರಕ್ಕೆ ನಡೆದ ಬಳಿಕ ಈ ವಿಚಾರ ಇನ್ನಷ್ಟು ನಿಗೂಢವಾಗಿದೆʼʼ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಬ್ರೆಕ್ಸಿಟ್‌, ಇಂಗ್ಲೆಂಡ್‌, ಚೀನಾದ ಕುರಿತು ಹಿಂದೂಸ್ತಾನ್‌ ಟೈಮ್ಸ್‌ನ ಮುಖ್ಯ ಸಂಪಾದಕರಾದ ಆರ್‌ ಸುಕುಮಾರ್‌ ಜತೆ ಅವರು ಚರ್ಚಿಸಿದ್ದಾರೆ.

"ನಾವು ಅಪಾಯಕಾರಿ ಕಾಲಘಟ್ಟದಲ್ಲಿದ್ದೇವೆ. ಇಂಗ್ಲೆಂಡ್‌, ಭಾರತವು ವಿಶ್ವದ ಅತ್ಯಂತ ಅಪಾಯಕಾರಿ ನಿರಂಕುಶಾಧಿಕಾರಿಗಳ ವರ್ತನೆಯಿಂದ, ಬೇಜಾವಾಬ್ದಾರಿ ವರ್ತನೆಯಿಂದ ಅಪಾಯಕ್ಕೆ ಒಳಗಾಗಿದ್ದೇವೆʼʼ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ರಷ್ಯಾವು ಉಕ್ರೇನ್‌ ಮೇಲೆ ದಾಳಿ ಮಾಡಿರುವ ಕುರಿತೂ ಅವರು ತಮ್ಮ ಅಭಿಪ್ರಾಯತಿಳಿಸಿದ್ದಾರೆ. ಈ ವಿಷಯದ ಕುರಿತು ಮೂರು ಮುನ್ನೋಟವನ್ನು ಅವರು ನೀಡಿದ್ದಾರೆ.

ಮೊದಲನೆಯಾಗಿ... ಪುಟಿನ್‌ಗೆ ಸೋಲಾಗಲಿದೆ. ಉಕ್ರೇನ್‌ ಜನರು ತಮ್ಮ ದೇಶದ ಮೇಲೆ ತೋರಿದ ಪ್ರೀತಿಯ ವೀರತ್ವದ ಮುಂದೆ ಪುಟಿನ್‌ ಸೋತಿದ್ದಾರೆ. ಅವರು ಉಕ್ರೇನ್‌ನಿಂದ ಹಿಂದಕ್ಕೆ ಹೋಗುವರೆಗೆ ಆರ್ಥಿಕವಾಗಿ, ರಾಜಕೀಯವಾಗಿ, ಮಿಲಿಟರಿಯಾಗಿ ಇಂಗ್ಲೆಂಡ್‌ ಪುಟಿನ್‌ ಅವರನ್ನು ಬೆಂಬಲಿಸದುʼʼ ಎಂದು ಅವರು ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ಪುಟಿನ್‌ ಅವರು ಪ್ರಚಾರಪ್ರಿಯ ಎಂದೂ ಜಾನ್ಸನ್‌ ಕರೆದಿದ್ದಾರೆ.

ಎರಡನೆಯದಾಗಿ ಉಕ್ರೇನ್ ಜತೆಗಿನ ಯುದ್ಧದಿಂದ ರಷ್ಯಾದ ಮಿಲಿಟರಿ ರಫ್ತು ಮೇಲೆ ಕೆಟ್ಟ ಪರಿಣಾಮ ಬೀರಲಿದೆ. ಭಾರತಕ್ಕೆ ಹಲವು ಶತಕೋಟಿ ಮೌಲ್ಯದ ಶಸ್ತ್ರಾಸ್ತ್ರಗಳನ್ನು ರಫ್ತು ಮಾಡುವ ರಷ್ಯಾಕ್ಕೆ ಉತ್ತಮ ಬಲವಿದ್ದರೂ ಉಕ್ರೇನಿಯನ್‌ ವಾಯುಪ್ರದೇಶವನ್ನು ನಿಯಂತ್ರಿಸಲು ವಿಫಲವಾಗಿದೆ ಎಂದು ಬೋರಿಸ್‌ ಜಾನ್ಸನ್‌ ಅಭಿಪ್ರಾಯಪಟ್ಟಿದ್ದಾರೆ.

"ಮೂರನೆಯದಾಗಿ ಪುಟಿನ್‌ ಅವರ ಈ ತಪ್ಪು ನಡೆಯು ರಷ್ಯಾವನ್ನು ಏಷ್ಯಾದಾದ್ಯಂತ ದುರ್ಬಲಗೊಳಿಸಲಿದೆ. ಇದರಿಂದ ಚೀನಾ ಬಲಗೊಳ್ಳಲಿದೆ. ಈಗಾಗಲೇ ಉಜ್ಬೇಕಿಸ್ತಾನ್‌ ಮತ್ತು ಹಿಂದಿನ ಸೋವಿಯತ್‌ ಒಕ್ಕೂಟಗಳು ರಷ್ಯಾದಿಂದಾಚೆಗೆ ನಡೆಯುತ್ತಿರುವುದು ನಡೆಯುತ್ತಿದೆ. ಕರಡಿ ಈಗ ಹೆಚ್ಚು ದುಃಖದಲ್ಲಿದೆʼʼ ಎಂದು ಅವರು ಮಾರ್ಮಿಕವಾಗಿ ನುಡಿದಿದ್ದಾರೆ.

Hindustan Times Leadership Summit ನೇರ ಪ್ರಸಾರ ವೀಕ್ಷಿಸಿ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ