logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಚುನಾವಣೆ ಟ್ರಸ್ಟ್‌ಗೆ ಅ‌ತಿ ಹೆಚ್ಚು ದೇಣಿಗೆ: ಹೈದ್ರಾಬಾದ್‌ನ ಎಂಇಐಎಲ್‌ ಗೆ ಮೊದಲ ಸ್ಥಾನ, ಇತರೆ ಸಂಸ್ಥೆಗಳಿಂದಲೂ ಹಣ

ಚುನಾವಣೆ ಟ್ರಸ್ಟ್‌ಗೆ ಅ‌ತಿ ಹೆಚ್ಚು ದೇಣಿಗೆ: ಹೈದ್ರಾಬಾದ್‌ನ ಎಂಇಐಎಲ್‌ ಗೆ ಮೊದಲ ಸ್ಥಾನ, ಇತರೆ ಸಂಸ್ಥೆಗಳಿಂದಲೂ ಹಣ

HT Kannada Desk HT Kannada

Jan 04, 2024 10:23 PM IST

google News

ದೇಶದಲ್ಲಿ ಚುನಾವಣೆ ಟ್ರಸ್ಟ್‌ಗಳಿಗೆ ದೇಣಿಗೆ ನೀಡಿದ ಸಂಸ್ಥೆಗಳ ಪಟ್ಟಿಯಲ್ಲಿ ಹೈದ್ರಾಬಾದ್‌ನ ಎಂಐಇಎಲ್‌ಗೆ ಮೊದಲ ಸ್ಥಾನ.

    • ಭಾರತದಲ್ಲಿ ಚುನಾವಣೆ ವೆಚ್ಚಕ್ಕೆಂದು ಟ್ರಸ್ಟ್‌ಗಳ ಮೂಲಕ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಿರುವ ಸಂಸ್ಥೆಗಳ ಹೆಸರಿನಲ್ಲಿ ಹೈದ್ರಾಬಾದ್‌ನ ಎಂಇಐಎಲ್‌ ಮುಂಚೂಣಿಲ್ಲಿದೆ.
ದೇಶದಲ್ಲಿ ಚುನಾವಣೆ ಟ್ರಸ್ಟ್‌ಗಳಿಗೆ ದೇಣಿಗೆ ನೀಡಿದ ಸಂಸ್ಥೆಗಳ ಪಟ್ಟಿಯಲ್ಲಿ ಹೈದ್ರಾಬಾದ್‌ನ ಎಂಐಇಎಲ್‌ಗೆ  ಮೊದಲ ಸ್ಥಾನ.
ದೇಶದಲ್ಲಿ ಚುನಾವಣೆ ಟ್ರಸ್ಟ್‌ಗಳಿಗೆ ದೇಣಿಗೆ ನೀಡಿದ ಸಂಸ್ಥೆಗಳ ಪಟ್ಟಿಯಲ್ಲಿ ಹೈದ್ರಾಬಾದ್‌ನ ಎಂಐಇಎಲ್‌ಗೆ ಮೊದಲ ಸ್ಥಾನ.

ಹೈದ್ರಾಬಾದ್‌: ಹೈದ್ರಾಬಾದ್‌ ಕೇಂದ್ರಿತ ಮೂಲಸೌಕರ್ಯ ಅಭಿವೃದ್ದಿಯ ಘಟಕ ಮೆಘಾ ಎಂಜಿನಿಯರಿಂಗ್‌ ಅಂಡ್‌ ಇನ್ಫ್ರಾ ಲಿಮಿಟೆಡ್‌( MEIL) 2022 -2023ನೇ ಸಾಲಿನಲ್ಲಿ ಚುನಾವಣೆ ಟ್ರಸ್ಟ್‌ಗಳಿಗೆ ದೇಶದಲ್ಲೇ ಅತಿ ಹೆಚ್ಚಿನ 87 ಕೋಟಿ ರೂ. ದೇಣಿಗೆ ನೀಡಿದೆ. ದೇಶದ ಇತರೆ ಕಾರ್ಪೋರೇಟ್‌ ಸಂಸ್ಥೆಗಳಿಗೆ ಹೋಲಿಸಿದರೆ ಎಂಇಐಎಲ್‌ ಅತಿ ಹೆಚ್ಚಿನ ದೇಣಿಗೆಯನ್ನು ಚುನಾವಣೆ ಟ್ರಸ್ಟ್‌ಗಳಿಗೆ ಒದಗಿಸಿದೆ ಎಂದು ಚುನಾವಣೆ ಸಂಬಂಧ ಬಹು ಆಯಾಮದಲ್ಲಿ ಸಂಶೋಧನೆ ಹಾಗೂ ಕ್ಷೇತ್ರ ಕಾರ್ಯ ನಡೆಸುವ ಅಸೋಸಿಯೇಷನ್‌ ಆಫ್‌ ಡೆಮಾಕ್ರಟಿಕ್‌ ರಿಫಾರ್ಮ್ಸ್‌ ( ADR) ನೀಡಿರುವ ತನ್ನ ವರದಿಯಲ್ಲಿ ತಿಳಿಸಿದೆ.

ದಶಕದ ಹಿಂದೆ ಯುಪಿಎ ಆಡಳಿತದಲ್ಲಿದ್ದ ಅವಧಿಯಲ್ಲಿ ಚುನಾವಣಾ ಟ್ರಸ್ಟ್‌ಗಳಿಗೆ ದೇಣಿಗೆಯನ್ನು ಕಾರ್ಪೋರೆಟ್‌ ನಿಧಿಯಡಿ ನೀಡುವ ಎಲೆಕ್ಟ್ರೋಲ್‌ ಟ್ರಸ್ಟ್‌ ( ET) ಯೋಜನೆಯನ್ನು ಜಾರಿಗೊಳಿಸಲಾಗಿತ್ತು. ಕಂಪೆನಿ ಕಾಯಿದೆಯ ಅಡಿ ಚುನಾವಣೆ ಟ್ರಸ್ಟ್‌ಗೆ ನೊಂದಣಿಗೆ ಮಾಡಿಸಿಕೊಳ್ಳಲು ಅವಕಾಶ ನೀಡಲಾಗಿತ್ತು.ರಾಜಕೀಯ ಪಕ್ಷಗಳಿಗೆ ಚುನಾವಣೆ ಹಾಗೂ ಇತರೆ ವೆಚ್ಚಗಳಿಗೆ ದೇಣಿಗೆಯನ್ನು ನೀಡಲು ಚುನಾವಣೆ ಟ್ರಸ್ಟ್‌ಗಳು ನೆರವಾಗಲಿವೆ ಎಂದು ತಿಳಿಸಲಾಗಿತ್ತು.

ಯಾವ್ಯಾವ ಸಂಸ್ಥೆಯಿಂದ ದೇಣಿಗೆ

ಅದರಂತೆ 2022 -2023ನೇ ಸಾಲಿನಲ್ಲಿ ಚುನಾವಣೆ ಟ್ರಸ್ಟ್‌ಗಳು ರಾಜಕೀಯ ಪಕ್ಷಗಳಿಗೆ ನೀಡಿದ ದೇಣಿಗೆ ಮಾಹಿತಿಯನ್ನು ಎಡಿಆರ್‌ ಪಡೆದು ಪ್ರಕಟಿಸಿದೆ. ಇದರಲ್ಲಿ ಅತಿ ಹೆಚ್ಚು ದೇಣಿಗೆ ನೀಡಿದ ಟ್ರಸ್ಟ್‌ಗಳ ಪಟ್ಟಿಯಲ್ಲಿ ತೆಲಂಗಾಣದ ರಾಜಧಾನಿ ಹೈದ್ರಾಬಾದ್‌ ಕೇಂದ್ರವಾಗಿಟ್ಟುಕೊಂಡು ಕಾರ್ಯನಿರ್ವಹಿಸುತ್ತಿರುವ ಎಂಇಐಎಲ್‌ ಹೆಸರು ಹೆಚ್ಚಿನ 87 ಕೋಟಿ ರೂ. ನೆರವಿನೊಂದಿಗೆ ಅಗ್ರ ಸ್ಥಾನದಲ್ಲಿದೆ.

ಇದಾದ ನಂತರದ ಸ್ಥಾನದಲ್ಲಿ ಸೆರಂ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾ ಪೈವೇಟ್‌ ಲಿಮಿಟೆಡ್‌ ಸೇರಿದೆ. ಸೆರಂ ಒಟ್ಟು 50.25 ಕೋಟಿ ರೂ. ನೆರವು ನೀಡಿದೆ. ಅರ್ಸೆಲಾರ್‌ ಮಿಟ್ಟಲ್‌ ನಿಪ್ಪಾನ್‌ ಸ್ಟೀಲ್‌ ಲಿಮಿಟೆಡ್‌ 50 ಕೋಟಿ ರೂ. ನೀಡಿದೆ. ಅಭಿನಂದ್‌ ವೆಂಚರ್ಸ್‌50 ಕೋಟಿ ರೂ, ಮೇದಾ ಸರ್ವೋ ಡ್ರೈವ್ಸ್‌, ಕೂಡ 30 ಕೋಟಿ ರೂ, ಅರ್ಸೆಲರ್‌ ಮಿತ್ತಲ್‌ ಡಿಸೈನ್‌ ಅಂಡ್‌ ಎಂಜಿನಿಯರಿಂಗ್‌ 25 ಕೋಟಿ ರೂ., ಗ್ರೀನ್ಕೋ ಎನೆರ್ಜಿ ಪ್ರಾಜೆಕ್ಟ್‌ 20 ಕೋಟಿ ರೂ., ಭಾರ್ತಿ ಏರ್ಟೆಲ್‌ 10 ಕೋಟಿ ರೂ. ಮೇಧಾ ಟ್ರಾಕ್ಟನ್‌ ಈಕ್ವುಪ್‌ಮೆಂಟ್ಸ್‌ 5.01 ಕೋಟಿ ರೂ. ಜುಪಿಟರ್‌ ವ್ಯಾಗನ್ಸ್‌ 5 ಕೋಟಿ ರೂ. ದೇಣಿಗೆ ನೀಡಿವೆ.

ಆಂಧ್ರ ಪ್ರದೇಶ, ತೆಲಂಗಾಣ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳಿಗೆ ಚುನಾವಣೆ ದೇಣಿಗೆ ದೊರೆತಿದೆ. ಇದರಲ್ಲಿ ಬಿಜೆಪಿ, ಬಿಆರ್‌ಎಸ್‌, ವೈಎಸ್‌ಆರ್‌ಸಿಪಿ ರಾಜಕೀಯ ಪಕ್ಷಗಳು ಪ್ರಮುಖವಾಗಿವೆ. ಈ ಪಕ್ಷಗಳಿಗೆ ಎಂಐಇಎಲ್‌ ದೇಣಿಗೆ ಹೋಗಿದೆ. ಇದಲ್ಲದೇ ಎಂಇಐಎಲ್‌ ಅತಿ ಹೆಚ್ಚು ನೆರವು ಪ್ರುಡೆಂಟ್‌ ಟ್ರಸ್ಟ್‌ಗೂ ಹೋಗಿದೆ.

ತಲಾ 25 ಕೋಟಿ ರೂ.ಗಳಂತೆ ಮೂರು ಬಾರಿ ಹಾಗೂ 12 ಕೋಟಿ ರೂ.ಗಳ ದೇಣಿಗೆಯನ್ನು ಎಂಇಐಎಲ್‌ ನೀಡಿದೆ. ಫ್ರುಡೆಂಟ್‌ ಟ್ರಸ್‌ ಅತಿ ಹೆಚ್ಚು 145.51 ಕೋಟಿ ರೂ.ಗಳ ಅತಿ ಹೆಚ್ಚಿನ ದಣಿಗೆ ಪಡೆದಿದ್ದು, ಇದರಲ್ಲಿ ತೆಲಂಗಾಣ ರಾಜ್ಯ ಒಂದರಿಂದಲೇ 105.25 ಕೋಟಿ ರೂ. ನೆರವು ಹರಿದು ಬಂದಿದೆ. ಆರು ನೆರವುಗಳು ಮಹಾರಾಷ್ಟ್ರದಿಂದ ಬಂದಿದೆ.

ಬಿಜೆಪಿಗೆ ಸಿಂಹಪಾಲು

ಒಟ್ಟು 18 ಟ್ರಸ್ಟ್ ಗಳು ಸೆಂಟ್ರಲ್‌ ಬೋರ್ಡ್‌ ಆಫ್‌ ಡೈರೆಕ್ಟ್‌ ಟ್ಯಾಕ್ಸ್‌ನಲ್ಲಿ ನೋಂದಣಿ ಮಾಡಿಕೊಂಡಿದ್ದು. ಇದರಲ್ಲಿ 13 ಟ್ರಸ್ಟ್‌ಗಳು ದೇಣಿಗೆ ನೀಡಿದ ಇವರ ಸಲ್ಲಿಸಿವೆ. ಐದು ಟ್ರಸ್ಟ್‌ ಗಳು ಒಟ್ಟು 366.495 ಕೋಟಿ ದೇಣಿಗೆಯನ್ನು ವಿವಿಧ ಕಾರ್ಪೋರೇಟ್‌ ಸಂಸ್ಥೆಗಳಿಂದ ಪಡೆದು 366.48 ಕೋಟಿ ರೂ.ಗಳನ್ನು ವಿವಿಧ ರಾಜಕೀಯ ಪಕ್ಷಗಳಿಗೆ ನೀಡಿರುವ ಮಾಹಿತಿಯನ್ನು ಚುನಾವಣೆ ಆಯೋಗಕ್ಕೂ ಸಲ್ಲಿಸಿವೆ.

ಚುನಾವಣೆ ಟ್ರಸ್ಟ್‌ಗಳಲ್ಲಿ ಅತಿ ಹೆಚ್ಚುದೇಣಿಗೆ ಪಡೆದ ಪ್ರುಡೆಂಟ್‌ ಟ್ರಸ್ಟ್‌ನದ್ದೇ ಸಿಂಹಪಾಲು ಒಟ್ಟು 363,13 ಕೋಟಿ ರೂ. ಸಮಾಜ ಇಟಿ ಅಸೋಸಿಯೇಷನ್‌ 2 ಕೋಟಿ ರೂ. ಪರಿವರ್ಬನ್‌ ಟ್ರಸ್ಟ್‌ 76 ಲಕ್ಷ, ಟ್ರುಂಪ್‌ ಟ್ರಸ್ಟ್‌ 50 ಲಕ್ಷ, ಐಂಜಿಗಾರ್ಟಿಗ್‌ ಟ್ರಸ್ಟ್‌ 8 ಲಕ್ಷ ದೇಣಿಗೆ ಪಡೆದು ಅತಿ ಹೆಚ್ಚು ಬಿಜೆಪಿಗೆ ನೀಡಿರುವುದನ್ನು ಅಂಕಿ ಅಂಶ ಸಹಿತ ವಿವರಿಸಲಾಗಿದೆ.

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ