logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Iceland Volcano: ಐಸ್‌ಲ್ಯಾಂಡ್‌ ದೇಶದಲ್ಲಿ 800 ಭಾರೀ ಭೂಕಂಪನ, ಲಾವಾರಸ ಉಕ್ಕುವ ಭೀತಿ: ತುರ್ತು ಪರಿಸ್ಥಿತಿ ಜಾರಿ

Iceland volcano: ಐಸ್‌ಲ್ಯಾಂಡ್‌ ದೇಶದಲ್ಲಿ 800 ಭಾರೀ ಭೂಕಂಪನ, ಲಾವಾರಸ ಉಕ್ಕುವ ಭೀತಿ: ತುರ್ತು ಪರಿಸ್ಥಿತಿ ಜಾರಿ

HT Kannada Desk HT Kannada

Nov 12, 2023 10:21 AM IST

google News

ಐಸ್‌ಲ್ಯಾಂಡ್‌ ದೇಶದಲ್ಲಿ ಮತ್ತೆ ಲಾವಾರಸ ಉಕ್ಕುವ ಭೀತಿ ಎದುರಾಗಿದೆ.

    • Iceland Earthquakes and volcano ಐಸ್‌ಲ್ಯಾಂಡ್‌ ದೇಶದಲ್ಲಿ ಈಗ ಭೂಕಂಪನದ ಭಯ. ಎರಡು ದಿನದಿಂದ ಭೂಕಂಪನ ಆಗುತ್ತಲೇ ಇದೆ. ಇದರ ಜತೆಗೆ ಲಾವಾರಸ ಉಕ್ಕುವ ಭೀತಿ ಬೇರೆ. ಇಡೀ ದೇಶದಲ್ಲಿ ಹೈ ಅಲರ್ಟ್‌ ಘೋಷಿಸಿ ತುರ್ತು ಪರಿಸ್ಥಿತಿಯ ಘೋಷಣೆಯೂ ಆಗಿದೆ.  
ಐಸ್‌ಲ್ಯಾಂಡ್‌  ದೇಶದಲ್ಲಿ ಮತ್ತೆ ಲಾವಾರಸ ಉಕ್ಕುವ ಭೀತಿ ಎದುರಾಗಿದೆ.
ಐಸ್‌ಲ್ಯಾಂಡ್‌ ದೇಶದಲ್ಲಿ ಮತ್ತೆ ಲಾವಾರಸ ಉಕ್ಕುವ ಭೀತಿ ಎದುರಾಗಿದೆ. (ndtv)

ರೇಖ್‌ ಝ್ಸವಿಕ್‌: ಪ್ರಮುಖ ಪ್ರವಾಸಿ ದೇಶ ಹಾಗೂ ಐರೋಪ್ಯ ರಾಷ್ಟ್ರಗಳಲ್ಲಿ ಒಂದಾದ ಐಸ್‌ಲ್ಯಾಂಡ್‌ ಈಗ ಭೂಕಂಪನದ ಸುಳಿಗೆ ಸಿಲುಕಿದೆ. 14 ಗಂಟೆಗಳ ಅಂತರದಲ್ಲೇ ಬರೋಬ್ಬರಿ 800 ಭೂಮಿ ಕಂಪಿಸಿರುವುದು ಇಡೀ ದೇಶವನ್ನು ಆತಂಕಕ್ಕೆ ದೂಡಿದೆ. ಅಲ್ಲದೇ ಜ್ವಾಲಾಮುಖಿ ಸ್ಪೋಟದ ಮುನ್ಸೂಚನೆಯೂ ದೊರೆತಿದೆ. ಇದರ ಮುನ್ನೆಚ್ಚರಿಕೆ ಕ್ರಮವಾಗಿ ಐಸ್‌ಲ್ಯಾಂಡ್‌ ಸರ್ಕಾರವು ಇಡೀ ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಜಾರಿಗೊಳಿಸಿದೆ. ಇಡೀ ದೇಶದಲ್ಲಿ ಹೈಅಲರ್ಟ್‌ ಘೋಷಿಸಲಾಗಿದೆ.

ಈಗಾಗಲೇ ಕೆಲವು ವರ್ಷಗಳಿಂದ ಐಸ್‌ಲ್ಯಾಂಡ್‌ ನ ಹಲವು ಭಾಗಗಳು ಭೂಕಂಪನದಿಂದ ನಲುಗಿವೆ. 40 ದಿನದ ಅಂತರದಲ್ಲೇ ಇಡೀ ದೇಶದ ಹಲವು ಕಡೆ

24000 ಬಾರಿ ಭೂಕಂಪನವಾದ ದಾಖಲೆಗಳಿವೆ. ಎರಡು ದಿನದಲ್ಲಿ 1,485 ಭೂಕಂಪನವಾಗಿರುವ ಮಾಹಿತಿಯಿದೆ. ಇದರಿಂದಾಗಿ ಹಲವು ಕಡೆ ರಸ್ತೆಗಳು ಹಾಳಾಗಿ ಹೋಗಿವೆ. ಭೂಮಿ ಬಿರುಕುಬಿಟ್ಟು ಜನ ಭಯಭೀತಗೊಂಡಿದ್ದಶಾರೆ. ಅಲ್ಲದೇ ಎರಡು ವರ್ಷದ ಅವಧಿಯಲ್ಲಿ ಮೂರು ಬಾರಿ ಲಾವಾರಸ ಉಕ್ಕಿ ಜ್ವಾಲಾಮುಖಿಯ ಭಯವೂ ಮೂಡಿದೆ. ಅದರಲ್ಲೂ ಐಸ್‌ಲ್ಯಾಂಡ್‌ನ ರೇಖೀನೀಸ್‌ ಪರ್ವತ ಶ್ರೇಣಿಯ್ಲಲಿ ಲಾವಾರಸ ಉಕ್ಕಿದ್ದು, ಮತ್ತೆ ಸದ್ಯದಲ್ಲಿ ಇದು ಪುನರಾವರ್ತನೆಯಾಗಬಹುದು ಎನ್ನುವ ಭಯವಿದೆ.

ಐಸ್‌ಲ್ಯಾಂಡ್‌ನ ರಾಜಧಾಮಿ ರೇಖ್‌ ಝ್ಸವಿಕ್‌ನಿಂದ ಸುಮಾರು 40 ಕಿ.ಮಿ.ದೂರದಲ್ಲಿ ಗ್ರಿಂಡ್‌ವಿಕ್‌ ಗ್ರಾಮದ ಸಮೀಪ ಭೂಕಂಪನದ ಕೇಂದ್ರಬಿಂದುವಿದ್ದು,5.2 ತೀವ್ರತೆಯಲ್ಲಿ ಭೂಕಂಪನ ಸಂಭವಿಸಿರುವುದು ರಿಕ್ಟರ್‌ ಮಾಪಕದಲ್ಲಿ ದಾಖಲಾಗಿದೆ. ಈ ಭಾಗದಲ್ಲಿ 3000 ಮಂದಿ ನೆಲೆಸಿದ್ದು ಅವರನ್ನು ಸ್ಥಳಾಂತರಿಸಲು ಐಸ್‌ಲ್ಯಾಂಡ್‌ ಆಡಳಿತ ಮುಂದಾಗಿದೆ.

ಐಸ್‌ಲ್ಯಾಂಡ್‌ ನಲ್ಲಿ ಭೂಕಂಪನ ಹಾಗೂ ಲಾವಾರಸ ಉಕ್ಕುವ ವಾತಾವರಣ ಇರುವುದರಿಂದ ಪ್ರವಾಸಿಗರು ಮುನ್ನೆಚ್ಚರಿಕೆ ವಹಿಸಬೇಕು. ಈಗಾಗಲೇ ಅಲ್ಲಿಂದ ಹಲವಾರು ಕುಟುಂಬ ಸ್ಥಳಾಂತರ ಶುರುವಾಗಿದೆ. ಈವರೆಗೂ ದೇಶದ ಯಾವುದೇ ಅಂತರಾಷ್ಟ್ರೀಯ ವಿಮಾನ ಸೇವೆ ಬಂದ್‌ ಆಗಿಲ್ಲ. ಪರಿಸ್ಥಿತಿ ನೋಡಿಕೊಂಡು ತೀರ್ಮಾನಿಸಲಾಗುತ್ತದೆ ಎಂದು ಯುಕೆ ವಿದೇಶಾಂಗ ಸಚಿವಾಲಯ ಪ್ರಕಟಣೆ ಬಿಡುಗಡೆ ಮಾಡಿದೆ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ