logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  India Annual Gdp Growth: ಎರಡನೇ ತ್ರೈಮಾಸಿಕದಲ್ಲಿ ಭಾರತದ ವಾರ್ಷಿಕ ಜಿಡಿಪಿ ಬೆಳವಣಿಗೆ ಕುಸಿತ

India annual GDP growth: ಎರಡನೇ ತ್ರೈಮಾಸಿಕದಲ್ಲಿ ಭಾರತದ ವಾರ್ಷಿಕ ಜಿಡಿಪಿ ಬೆಳವಣಿಗೆ ಕುಸಿತ

HT Kannada Desk HT Kannada

Nov 30, 2022 06:42 PM IST

google News

ಸಾಂದರ್ಭಿಕ ಚಿತ್ರ

    • ಭಾರತೀಯ ಆರ್ಥಿಕತೆಯು ಜುಲೈನಿಂದ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ 6.3% ರಷ್ಟು ಬೆಳೆದಿದೆ. ಆದರೆ, ಹಿಂದಿನ ತ್ರೈಮಾಸಿಕದಲ್ಲಿ ಇದ್ದ 13.5 ಶೇಕಡಕ್ಕೆ ಹೋಲಿಸಿದರೆ ಇದು ಕಡಿಮೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಪ್ರಸಕ್ತ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ ಭಾರತದ ಆರ್ಥಿಕತೆಯು ಶೇಕಡಾ 6.3ರಷ್ಟು ಬೆಳವಣಿಗೆಯಾಗಿದೆ ಎಂದು ಬುಧವಾರ ಬಿಡುಗಡೆಯಾದ ಅಧಿಕೃತ ಅಂಕಿಅಂಶಗಳು ತಿಳಿಸಿವೆ.

ಭಾರತೀಯ ಆರ್ಥಿಕತೆಯು ಜುಲೈನಿಂದ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ 6.3% ರಷ್ಟು ಬೆಳೆದಿದೆ. ಆದರೆ, ಹಿಂದಿನ ತ್ರೈಮಾಸಿಕದಲ್ಲಿ ಇದ್ದ 13.5 ಶೇಕಡಕ್ಕೆ ಹೋಲಿಸಿದರೆ ಇದು ಕಡಿಮೆ. ಹಣದುಬ್ಬರವನ್ನು ಎದುರಿಸಲು ರೆಪೊ ದರಗಳನ್ನು ಹೆಚ್ಚಿಸಿದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ನಿರ್ಧಾರದಿಂದ ಈ ವ್ಯತ್ಯಾಸಗಳು ಕಂಡುಬಂದಿವೆ.

ರಾಷ್ಟ್ರೀಯ ಅಂಕಿಅಂಶ ಕಚೇರಿ (NSO) ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, 2021-22ರ ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಒಟ್ಟು ದೇಶೀಯ ಉತ್ಪನ್ನ (gross domestic product ) 8.4ರಷ್ಟು ವಿಸ್ತರಿಸಿದೆ ಎಂದು ತಿಳಿದುಬಂದಿದೆ.

ಈ ಹಣಕಾಸು ವರ್ಷದಲ್ಲಿ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ದಾಖಲಾದ ಶೇಕಡಾ 13.5ರ ಬೆಳವಣಿಗೆಯ ದರದ ಅರ್ಧದಷ್ಟು ಭಾರತೀಯ ಆರ್ಥಿಕತೆಯು ವಿಸ್ತರಿಸಲಿದೆ ಎಂದು ವಿಶ್ಲೇಷಕರು ಅಂದಾಜಿಸಿದ್ದಾರೆ.

ರೇಟಿಂಗ್ ಏಜೆನ್ಸಿ Icra ಪ್ರಕಾರ, ಜಿಡಿಪಿಯು 6.5 ಶೇಕಡದಷ್ಟು ಬೆಳೆಯುವ ಸಾಧ್ಯತೆಯಿದೆ. ಆದರೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ವರದಿಯಲ್ಲಿ, ಜುಲೈನಿಂದ ಸೆಪ್ಟೆಂಬರ್ ತಿಂಗಳ ಬೆಳವಣಿಗೆ ದರವು ಶೇಕಡಾ 5.8 ಎಂದು ಅಂದಾಜಿಸಿದೆ.

ಕಳೆದ ವರ್ಷ, ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಜಿಡಿಪಿ ಬೆಳವಣಿಗೆ ದರವು 8.4% ಆಗಿತ್ತು.

ಈ ತಿಂಗಳ ಆರಂಭದಲ್ಲಿ, ಭಾರತೀಯ ರಿಸರ್ವ್ ಬ್ಯಾಂಕ್ (RBI) ಬುಲೆಟಿನ್‌ನಲ್ಲಿ ಪ್ರಕಟವಾದ ಲೇಖನದಲ್ಲಿ, ಈ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ ಜಿಡಿಪಿ ಬೆಳವಣಿಗೆಯು ಶೇಕಡಾ 6.1ರಿಂದ 6.3 ಎಂದು ನಿಗದಿಪಡಿಸಲಾಗಿದೆ.

ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಚೀನಾ 3.9 ಶೇಕಡಾ ಆರ್ಥಿಕ ಬೆಳವಣಿಗೆ ದರವನ್ನು ದಾಖಲಿಸಿದೆ.

ಈ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಕೃಷಿ ಮತ್ತು ಉತ್ಪಾದನೆಯಂತಹ ವಿವಿಧ ಕ್ಷೇತ್ರಗಳ ವಿಸ್ತರಣೆಯನ್ನು ಅಂಕಿ ಅಂಶವು ವಿವರಿಸಿದೆ.

ಕೇಂದ್ರ ಸರ್ಕಾರದ ಬಂಡವಾಳ ವೆಚ್ಚವು 40% ಕ್ಕಿಂತ ಹೆಚ್ಚಾಯಿತು. ಏಕೆಂದರೆ ಸರ್ಕಾರವು ರಸ್ತೆಗಳಿಂದ ರೈಲ್ವೇವರೆಗಿನ ಮೂಲಸೌಕರ್ಯಗಳ ಮೇಲಿನ ವೆಚ್ಚವನ್ನು ಹೆಚ್ಚಿಸಿದೆ.

ಗಮನಿಸಬಹುದಾದ ಇತರೆ ಸುದ್ದಿಗಳು

ನಾಳೆಯಿಂದ ಬೆಂಗಳೂರು ಸೇರಿದಂತೆ ನಾಲ್ಕು ನಗರಗಳಲ್ಲಿ ರಿಟೇಲ್‌ ಡಿಜಿಟಲ್‌ ರೂಪಾಯಿ ಆರಂಭ, ಏನಿದು ಹೊಸ ಕರೆನ್ಸಿ?

ಉದ್ಯಾನನಗರಿ ಬೆಂಗಳೂರು ಸೇರಿದಂತೆ ನಾಲ್ಕು ನಗರಗಳಲ್ಲಿ ನಾಳೆಯಿಂದ ಭಾರತದ ಅಧಿಕೃತ ಡಿಜಿಟಲ್‌ ರೂಪಾಯಿಯನ್ನು ಪ್ರಾಯೋಗಿಕವಾಗಿ ಚಲಾವಣೆಗೆ ತರಲು ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ (ಆರ್‌ಬಿಐ) ಉದ್ದೇಶಿಸಿದೆ. ಬೆಂಗಳೂರು, ಮುಂಬಯಿ, ನವದೆಹಲಿ, ಭುವನೇಶ್ವರ ನಗರಗಳಲ್ಲಿ ನಾಳೆ ಈ ರಿಟೇಲ್‌ ಟಿಜಿಟಲ್‌ ರೂಪಾಯಿಗೆ ಆರ್‌ಬಿಐ ಪ್ರಾಯೋಗಿಕವಾಗಿ ಚಾಲನೆ ನೀಡಲಿದೆ. ಮುಂದಿನ ದಿನಗಳಲ್ಲಿ ಇತರೆ ನಗರಗಳಿಗೂ ವಿಸ್ತರಿಸಲಾಗುವುದು ಎಂದು ಕೇಂದ್ರ ಬ್ಯಾಂಕ್‌ ತಿಳಿಸಿದೆ. ವಿವರಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

1 ಸಾವಿರ ಎಂಜಿನಿಯರ್‌ಗಳ ನೇಮಕಕ್ಕೆ ಮುಂದಾದ ಸ್ಯಾಮ್‌ಸಂಗ್‌, ಬೆಂಗಳೂರು ಸೇರಿದಂತೆ ದೇಶಾದ್ಯಂತ ನೇಮಕ

ದೇಶದ ವಿವಿಧೆಡೆ ಇರುವ ತನ್ನ ರಿಸರ್ಚ್‌ ಇನ್‌ಸ್ಟಿಟ್ಯೂಟ್‌ಗಳಿಗೆ ಭಾರತದ ಪ್ರಮುಖ ಗ್ರಾಹಕ ಎಲೆಕ್ಟ್ರಾನಿಕ್ಸ್ ಬ್ರ್ಯಾಂಡ್ ಸ್ಯಾಮ್‌ಸಂಗ್ ಸುಮಾರು 1,000 ಎಂಜಿನಿಯರ್‌ಗಳನ್ನು ನೇಮಿಸಿಕೊಳ್ಳಲು ಮುಂದಾಗಿದೆ. ಸ್ಯಾಮ್‌ಸಂಗ್‌ ಆರ್ ಮತ್ತು ಡಿ ಇನ್ಸ್ಟಿಟ್ಯೂಟ್ ಬೆಂಗಳೂರು, ಸ್ಯಾಮ್‌ಸಂಗ್‌ ಆರ್ ಮತ್ತು ಡಿ ಇನ್ಸ್ಟಿಟ್ಯೂಟ್ ನೋಯ್ಡಾ, ಸ್ಯಾಮ್‌ಸಂಗ್‌ ಆರ್ ಮತ್ತು ಡಿ ಇನ್ಸ್ಟಿಟ್ಯೂಟ್ ದೆಹಲಿ ಮತ್ತು ಸ್ಯಾಮ್‌ಸಂಗ್‌ ಸೆಮಿಕಂಡಕ್ಟರ್ ಇಂಡಿಯಾ ರಿಸರ್ಚ್ ಬೆಂಗಳೂರು ಸೇರಿದಂತೆ ವಿವಿಧ ರಿಸರ್ಚ್‌ ಸೆಂಟರ್‌ಗಳಲ್ಲಿ ಈ ನೇಮಕ ನಡೆಯಲಿದೆ. ವಿವರಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ