logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  India China Border Clash: ಭಾರತ-ಚೀನಾ ಸಂಘರ್ಷದಲ್ಲಿ ಯೋಧರು ಮೃತಪಟ್ಟಿಲ್ಲ, ಗಂಭೀರ ಗಾಯಗೊಂಡಿಲ್ಲ- ರಾಜನಾಥ್‌ ಸಿಂಗ್‌ ಭಾಷಣ

India China Border clash: ಭಾರತ-ಚೀನಾ ಸಂಘರ್ಷದಲ್ಲಿ ಯೋಧರು ಮೃತಪಟ್ಟಿಲ್ಲ, ಗಂಭೀರ ಗಾಯಗೊಂಡಿಲ್ಲ- ರಾಜನಾಥ್‌ ಸಿಂಗ್‌ ಭಾಷಣ

HT Kannada Desk HT Kannada

Dec 13, 2022 12:47 PM IST

google News

India China Border clash: ಭಾರತ-ಚೀನಾ ಸಂಘರ್ಷದಲ್ಲಿ ಯೋಧರು ಮೃತಪಟ್ಟಿಲ್ಲ, ಗಂಭೀರ ಗಾಯಗೊಂಡಿಲ್ಲ- ರಾಜನಾಥ್‌ ಸಿಂಗ್‌ ಭಾಷಣ

    • ಕಳೆದ ವಾರ ಅರುಣಾಚಲಯದಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವೆ ನಡೆದ ಘರ್ಷಣೆಯಲ್ಲಿ ಯಾವುದೇ ಯೋಧರು ಮೃತಪಟ್ಟಿಲ್ಲ ಅಥವಾ ಗಂಭೀರವಾಗಿ ಗಾಯಗೊಂಡಿಲ್ಲ ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಮಾಹಿತಿ ನೀಡಿದ್ದಾರೆ.
India China Border clash: ಭಾರತ-ಚೀನಾ ಸಂಘರ್ಷದಲ್ಲಿ ಯೋಧರು ಮೃತಪಟ್ಟಿಲ್ಲ, ಗಂಭೀರ ಗಾಯಗೊಂಡಿಲ್ಲ- ರಾಜನಾಥ್‌ ಸಿಂಗ್‌ ಭಾಷಣ
India China Border clash: ಭಾರತ-ಚೀನಾ ಸಂಘರ್ಷದಲ್ಲಿ ಯೋಧರು ಮೃತಪಟ್ಟಿಲ್ಲ, ಗಂಭೀರ ಗಾಯಗೊಂಡಿಲ್ಲ- ರಾಜನಾಥ್‌ ಸಿಂಗ್‌ ಭಾಷಣ (PTI)

ನವದೆಹಲಿ: ಕಳೆದ ವಾರ ಅರುಣಾಚಲಯದಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವೆ ನಡೆದ ಘರ್ಷಣೆಯಲ್ಲಿ ಯಾವುದೇ ಯೋಧರು ಮೃತಪಟ್ಟಿಲ್ಲ ಅಥವಾ ಗಂಭೀರವಾಗಿ ಗಾಯಗೊಂಡಿಲ್ಲ ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಮಾಹಿತಿ ನೀಡಿದ್ದಾರೆ. ಗಡಿವಿವಾದದ ಕುರಿತು ಚರ್ಚೆ ನಡೆಸಬೇಕೆಂದು ಪ್ರತಿಪಕ್ಷಗಳು ಆಗ್ರಹಿಸಿದ ಬಳಿಕ ರಕ್ಷಣಾ ಸಚಿವರು ಈ ಹೇಳಿಕೆ ನೀಡಿದ್ದಾರೆ.

ಈ ಕುರಿತು ರಾಜ್ಯಸಭೆಯಲ್ಲಿ ರಕ್ಷಣಾ ಸಚಿವರು ಮಾತನಾಡಿದ್ದಾರೆ.

"ಗಡಿ ಸಂಘರ್ಷಧ ಬಳಿಕ ಸರಕಾರವು ರಾಜತಾಂತ್ರಿಕ ಮಾರ್ಗಗಳ ಮೂಲಕ ಚೀನಾದೊಂದಿಗೆ ಸಂವಹನ ನಡೆಸಿದೆʼʼ ಎಂದು ಹೇಳಿದ್ದಾರೆ. "ಗಡಿಯಲ್ಲಿ ಯಾವುದೇ ಸವಾಲುಗಳನ್ನು ಎದುರಿಸಲು ನಮ್ಮ ಪಡೆಗಳು ಸಿದ್ಧವಾಗಿವೆ ಎಂದು ಅವರು ಹೇಳಿದ್ದಾರೆ. "ಚೀನಾದ ಸೈನಿಕರು ಎಲ್‌ಎಸಿಯನ್ನು ಉಲ್ಲಂಘಿಸಲು ಪ್ರಯತ್ನಿಸಿದರು ಮತ್ತು ಯಥಾಸ್ಥಿತಿ ಬದಲಾಯಿಸಲು ಪ್ರಯತ್ನಿಸಿದರುʼʼ ಎಂದು ರಾಜನಾಥ್‌ ಸಿಂಗ್‌ ಅವರು ಲೋಕಸಭೆಗೆ ಮಾಹಿತಿ ನೀಡಿದ್ದಾರೆ.

ಲೋಕಸಭೆಯಲ್ಲಿ ಮಾತನಾಡಿದ ಸಿಂಗ್, ಗಡಿ ಘರ್ಷಣೆಯ ನಂತರ ಸರ್ಕಾರ ರಾಜತಾಂತ್ರಿಕ ಮಾರ್ಗಗಳ ಮೂಲಕ ಚೀನಾದೊಂದಿಗೆ ಮಾತನಾಡಿದೆ ಎಂದು ಹೇಳಿದರು. ಗಡಿಯಲ್ಲಿ ಯಾವುದೇ ಸವಾಲನ್ನು ಎದುರಿಸಲು ನಮ್ಮ ಪಡೆಗಳು ಸಿದ್ಧವಾಗಿವೆ ಎಂದು ಅವರು ಒತ್ತಿ ಹೇಳಿದರು. ಚೀನಾದ ಸೈನಿಕರು "ಎಲ್‌ಎಸಿಯನ್ನು ಉಲ್ಲಂಘಿಸಲು" ಮತ್ತು "ಏಕಪಕ್ಷೀಯವಾಗಿ ಯಥಾಸ್ಥಿತಿಯನ್ನು ಬದಲಾಯಿಸಲು" ಪ್ರಯತ್ನಿಸಿದ್ದಾರೆ ಎಂದು ಅವರು ಹೇಳಿದರು.

ಡಿಸೆಂಬರ್‌ 9ರಂದು ಚೀನಾ ಸೈನಿಕರು ಯಥಾಸ್ಥಿತಿ ಬದಲಾಯಿಸಲು ಪ್ರಯತ್ನಿಸಿದರು. ಇದನ್ನು ನಮ್ಮ ಸೈನಿಕರು ದೃಢವಾದ ರೀತಿಯಲ್ಲಿ ನಿಭಾಯಿಸಿದರು. ನಮ್ಮ ಪಡೆಗಳು ನಮ್ಮ ಭೂಪ್ರದೇಶದ ಮೇಲೆ ಅತಿಕ್ರಮಣ ಮಾಡದಂತೆ ಶತ್ರು ಸೈನಿಕರನ್ನು ಹಿಮ್ಮೆಟ್ಟಿಸಿವೆ ಎಂದು ರಾಜನಾಥ್‌ ಸಿಂಗ್‌ ಅವರು ತಮ್ಮ ಭಾಷಣದಲ್ಲಿ ಹೇಳಿದ್ದಾರೆ.

ಅರುಣಾಚಲ ಪ್ರದೇಶದಲ್ಲಿ ಇರುವ ತವಾಂಗ್ ಗಡಿಯಲ್ಲಿ ಕೆಲವು ದಿನಗಳ ಹಿಂದೆ ನಡೆದಿದ್ದ ಘರ್ಷಣೆ ಪ್ರಕರಣ ಸೋಮವಾರ ಸಂಜೆಯಷ್ಟೇ ಬೆಳಕಿಗೆ ಬಂದಿತ್ತು. ಭಾರತ ಮತ್ತು ಚೀನಾ ಗಡಿಯ ಎಲ್‌ಎಸಿ (ವಾಸ್ತವ ಗಡಿ ನಿಯಂತ್ರಣ ರೇಖೆ) ಬಳಿ ಈ ಘರ್ಷಣೆ ಸಂಭವಿಸಿತ್ತು. ಈ ಕುರಿತಾಗಿ ಸಂಸತ್‌ನಲ್ಲಿ ಸಮಗ್ರ ಚರ್ಚೆ ನಡೆಯಬೇಕು ಎಂದು ಹಲವು ಸಂಸದರು ಆಗ್ರಹಿಸಿದ್ದರು.

ಚೀನಾದಿಂದ ಭಾರತದ ಗಡಿ ಪ್ರದೇಶದ ಒಳಗೆ ವಾಯುಪ್ರದೇಶದ ಉಲ್ಲಂಘನೆಯಾಗುತ್ತದೆಯೇ ಎಂದು ಪರೀಕ್ಷಿಸಲು ಭಾರತೀಯ ವಾಯುಪಡೆ (IAF) ಅರುಣಾಚಲ ಪ್ರದೇಶದ ಮೇಲೆ ಯುದ್ಧ ಗಸ್ತು ನಡೆಸುತ್ತಿದೆ. ಅರುಣಾಚಲ ಪ್ರದೇಶದ ತವಾಂಗ್ ನಲ್ಲಿ ಭಾರತ-ಚೀನಾ ಗಡಿ ಸಂಘರ್ಷದ ನಂತರ ಯುದ್ಧ ವಿಮಾನಗಳನ್ನು ಎರಡು ಮೂರು ಬಾರಿ ಗಸ್ತು ತಿರುಗಿಸಲಾಗಿದೆ. ವಾಯುಪಡೆಯು ಅರುಣಾಚಲದಲ್ಲಿ ಲೈನ್ ಆಫ್ ಆಕ್ಚುವಲ್ ಕಂಟ್ರೋಲ್ ನಾದ್ಯಂತ ಚೀನಾದ ವಾಯು ಚಟುವಟಿಕೆ ಪತ್ತೆಯಾಗಿದೆ ಎನ್ನಲಾಗಿದೆ.

ಸಂಸದರಾದ ರಂಜೀತ್ ರಂಜನ್, ರಣದೀಪ್ ಸಿಂಗ್ ಸುರ್ಜೇವಾಲಾ, ಎಲ್. ಹನುಮಂತಯ್ಯ, ಜೆಬಿ ಮಾಥರ್, ಜಗನಿ ಪಾಟೀಲ್, ನಾಸೀರ್ ಹುಸೇನ್, ಮನೀಶ್ ತಿವಾರಿ, ಮನೋಜ್ ಕುಮಾರ್ ಝಾ ಹಾಗೂ ಪ್ರಿಯಾಂಕಾ ಚತುರ್ವೇದಿ ಸೇರಿದಂತೆ ಹಲವು ಸಂಸದರು ಗಡಿ ಗುದ್ದಾಟದ ಕುರಿತಾಗಿ ಸಂಸತ್‌ನ ಉಭಯ ಸದನಗಳಲ್ಲೂ ಸಮಗ್ರ ಚರ್ಚೆ ನಡೆಸುವಂತೆ ಆಗ್ರಹಿಸಿದ್ದರು.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ