AP Train Accident: ವಿಜಯನಗರಂ ಜಿಲ್ಲೆಯಲ್ಲಿ ಭೀಕರ ರೈಲು ದುರಂತ, 2 ಪ್ಯಾಸೆಂಜರ್ ರೈಲು ಡಿಕ್ಕಿ ಹೊಡೆದು ಕನಿಷ್ಠ 6 ಜನ ಮೃತ, ಹಲವರಿಗೆ ಗಾಯ
Oct 29, 2023 10:59 PM IST
ರಾಯಗಡಕ್ಕೆ ತೆರಳುತ್ತಿದ್ದ ಪ್ಯಾಸೆಂಜರ್ ರೈಲು ವಿಜಯನಗರಂ ಜಿಲ್ಲೆಯಲ್ಲಿ ಭಾನುವಾರ ರಾತ್ರಿ ಹಳಿ ತಪ್ಪಿ ಸಂಭವಿಸಿದ ಅಪಘಾತದಲ್ಲಿ ಹಲವರು ಗಾಯಗೊಂಡಿದ್ದು, 6 ಪ್ರಯಾಣಿಕರು ಸಾವನ್ನಪ್ಪಿದ್ದಾರೆ
ಆಂಧ್ರಪ್ರದೇಶದ ವಿಜಯನಗರಂ ಜಿಲ್ಲೆಯಲ್ಲಿ ಎರಡು ಪ್ಯಾಸೆಂಜರ್ ರೈಲುಗಳು ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ ಆರು ಮಂದಿ ಸಾವನ್ನಪ್ಪಿದ್ದು, 25 ಮಂದಿ ಗಾಯಗೊಂಡಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ
ಹೈದರಾಬಾದ್: ಆಂಧ್ರಪ್ರದೇಶದ ವಿಜಯನಗರಂ ಜಿಲ್ಲೆಯಲ್ಲಿ 2 ಪ್ಯಾಸೆಂಜರ್ ರೈಲುಗಳು ಡಿಕ್ಕಿಯಾದ ಪರಿಣಾಮ 6 ಪ್ರಯಾಣಿಕರು ಸ್ಥಳದಲ್ಲೇ ಮೃತಪಟ್ಟಿದ್ದು, 25ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.
ವಿಜಯನಗರಂ ಸಮೀಪ ಭಾನುವಾರ ಈ ಭೀಕರ ರೈಲು ದುರಂತ ಸಂಭವಿಸಿದೆ. ಹೌರಾ-ಚೆನ್ನೈ ಮುಖ್ಯ ಮಾರ್ಗದಲ್ಲಿ ಇಕೋಆರ್‌ನ ವಾಲ್ಟೇರ್ ಡಿವ್ನ್‌ನ ವಿಜಯನಗರ-ಕೊತ್ತವಲಸ ರೈಲ್ ವಿಭಾಗದಲ್ಲಿ ಅಳಮಂಡ ಮತ್ತು ಕಂಟಕಪಲ್ಲಿ ನಡುವೆ ಸಂಭವಿಸಿದ ಈ ದುರಂತಕ್ಕೆ ನಿಖರ ಕಾರಣವೇನು ಎಂಬುದು ಇನ್ನೂ ಬಹಿರಂಗವಾಗಿಲ್ಲ.
ಒಂದು ರೈಲು ವಿಜಯನಗರಂನಿಂದ ಒಡಿಶಾದ ರಾಯಗಡ ಕಡೆಗೆ ಹೋಗುತ್ತಿತ್ತು. ಇನ್ನೊಂದು ವಿಶಾಖಪಟ್ಟಣಂನಿಂದ ಪಾಲಸ ಕಡೆಗೆ ಹೊರಟಿತ್ತು.
ಎರಡು ಪ್ಯಾಸೆಂಜರ್ ರೈಲುಗಳ ನಡುವೆ ಹಿಂಬದಿ ಡಿಕ್ಕಿ ಸಂಭವಿಸಿದೆ. 3 ಕೋಚ್‌ಗಳು ಅಪಘಾತಕ್ಕೆ ಒಳಗಾಗಿದ್ದು, 10 ಮಂದಿ ಗಾಯಗೊಂಡಿದ್ದಾರೆ. ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿವೆ. ಸಹಾಯ ಮತ್ತು ಆಂಬ್ಯುಲೆನ್ಸ್‌ಗಾಗಿ ಸ್ಥಳೀಯ ಆಡಳಿತ ಮತ್ತು ಎನ್‌ಡಿಆರ್‌ಎಫ್‌ಗೆ ತಿಳಿಸಲಾಗಿದೆ ಎಂದು ವಿಭಾಗೀಯ ರೈಲ್ವೆ ವ್ಯವಸ್ಥಾಪಕರು ಮಾಹಿತಿ ನೀಡಿದ್ದಾರೆ.
"ರೈಲು ಸಂಖ್ಯೆ 08532 ವಿಶಾಖಪಟ್ಟಣಂ-ಪಲಾಸ ಪ್ಯಾಸೆಂಜರ್ ಮತ್ತು ರೈಲು ಸಂಖ್ಯೆ 08504 ವಿಶಾಖಪಟ್ಟಣಂ-ರಾಯಗಡ ಪ್ಯಾಸೆಂಜರ್‌ಗೆ ಓವರ್‌ಶೂಟ್ ಆಗಿ ಅಪಘಾತ ಸಂಭವಿಸಿದೆ, ಅಲ್ಲಿ 3 ಕೋಚ್‌ಗಳು ಭಾಗಿಯಾಗಿವೆ ಮತ್ತು ಸುಮಾರು 10 ಜನರು ಗಾಯಗೊಂಡಿದ್ದಾರೆ" ಎಂದು ಪೂರ್ವ ಕರಾವಳಿ ರೈಲ್ವೆ ವಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಪಘಾತ ಪರಿಹಾರ ರೈಲುಗಳು ರೈಲು ಅಪಘಾತದ ಸ್ಥಳಕ್ಕೆ ತಲುಪಿವೆ. ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಅವರು ವಿಜಯನಗರದ ಹತ್ತಿರದ ಜಿಲ್ಲೆಗಳಾದ ವಿಶಾಖಪಟ್ಟಣಂ ಮತ್ತು ಅನಕಾಪಲ್ಲಿಯಿಂದ ತಕ್ಷಣದ ಪರಿಹಾರ ಕ್ರಮಗಳು ಮತ್ತು ಆಂಬ್ಯುಲೆನ್ಸ್‌ಗಳನ್ನು ರವಾನಿಸಲು ಆದೇಶಿಸಿದ್ದಾರೆ. ಉತ್ತಮ ವೈದ್ಯಕೀಯ ಸೇವೆಯನ್ನು ಒದಗಿಸಲು ಹತ್ತಿರದ ಆಸ್ಪತ್ರೆಗಳಲ್ಲಿ ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಮಾಡುವಂತೆ ಆಡಳಿತಕ್ಕೆ ನಿರ್ದೇಶನ ನೀಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ರೈಲು ಅಪಘಾತ ಸಂತ್ರಸ್ತರಿಗೆ ಸಹಾಯವಾಣಿ ಸಂಖ್ಯೆ
ಹೌರಾ-ಚೆನ್ನೈ ಮುಖ್ಯ ಮಾರ್ಗದಲ್ಲಿ ಇಕೋಆರ್‌ನ ವಾಲ್ಟೇರ್ ಡಿವ್ನ್‌ನ ವಿಜಯನಗರ-ಕೊತ್ತವಲಸ ರೈಲ್ ವಿಭಾಗದಲ್ಲಿ ಅಳಮಂಡ ಮತ್ತು ಕಂಟಕಪಲ್ಲಿ ನಡುವೆ ಸಂಭವಿಸಿದ ರೈಲು ಅಪಘಾತದ ಸಂತ್ರಸ್ತರಿಗೆ ಭಾರತೀಯ ರೈಲ್ವೆ ಸಹಾಯವಾಣಿ ಸಂಖ್ಯೆಗಳನ್ನು ಬಿಡುಗಡೆ ಮಾಡಿದೆ.
ಭುವನೇಶ್ವರ -
0674-2301625, 2301525, 2303069
ವಾಲ್ಟೇರ್
- 0891- 2885914
ರೈಲು ಅಪಘಾತಗಳ ಸಂತ್ರಸ್ತರ ತ್ವರಿತ ಪರಿಹಾರಕ್ಕಾಗಿ, ಆರೋಗ್ಯ, ಪೊಲೀಸ್ ಮತ್ತು ಕಂದಾಯ ಸೇರಿ ಇತರ ಸರ್ಕಾರಿ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಲು ಮತ್ತು ಗಾಯಾಳುಗಳಿಗೆ ತ್ವರಿತ ವೈದ್ಯಕೀಯ ಸೇವೆಗಳನ್ನು ಪಡೆಯುವಂತೆ ನೋಡಿಕೊಳ್ಳಲು ಮುಖ್ಯಮಂತ್ರಿ ಆದೇಶಿಸಿದ್ದಾರೆ ಎಂದು ಆಂಧ್ರಪ್ರದೇಶ ಸಿಎಂಒ ಹೇಳಿದರು.