logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Republic Day 2024: 75ನೇ ಗಣರಾಜ್ಯೋತ್ಸವಕ್ಕೆ ಗೂಗಲ್‌ ಡೂಡಲ್‌ ಗೌರವ; ಕಣ್ತುಂಬಿಕೊಳ್ಳಿ ಪರೇಡ್‌ ದೃಶ್ಯ ವೈಭವ

Republic Day 2024: 75ನೇ ಗಣರಾಜ್ಯೋತ್ಸವಕ್ಕೆ ಗೂಗಲ್‌ ಡೂಡಲ್‌ ಗೌರವ; ಕಣ್ತುಂಬಿಕೊಳ್ಳಿ ಪರೇಡ್‌ ದೃಶ್ಯ ವೈಭವ

Reshma HT Kannada

Feb 18, 2024 12:40 PM IST

google News

ಗಣರಾಜ್ಯೋತ್ಸವಕ್ಕೆ ಗೂಗಲ್‌ ಡೂಡಲ್‌ ಗೌರವ

    • ಇಂದು ಭಾರತವು 75ನೇ ಗಣರಾಜ್ಯೋತ್ಸವವನ್ನು ಆಚರಿಸುತ್ತಿದೆ. ಈ ಶುಭ ಸಂದರ್ಭದಲ್ಲಿ ಗೂಗಲ್‌ ತನ್ನ ಡೂಡಲ್‌ನಲ್ಲಿ ಐತಿಹಾಸಿಕ ಪರೇಡ್‌ ಚಿತ್ರವನ್ನು ರಚಿಸಿ ಗೌರವ ಸಲ್ಲಿಸಿದೆ.
ಗಣರಾಜ್ಯೋತ್ಸವಕ್ಕೆ ಗೂಗಲ್‌ ಡೂಡಲ್‌ ಗೌರವ
ಗಣರಾಜ್ಯೋತ್ಸವಕ್ಕೆ ಗೂಗಲ್‌ ಡೂಡಲ್‌ ಗೌರವ

ಭಾರತದಾದ್ಯಂತ ಇಂದು ಗಣರಾಜ್ಯೋತ್ಸವ ಸಂಭ್ರಮ. 1950ರಲ್ಲಿ ಭಾರತವು ಪ್ರಜಾಪ್ರಭುತ್ವ ರಾಷ್ಟ್ರವಾದ ಸವಿನೆನಪಿನಲ್ಲಿ ಪ್ರತಿವರ್ಷ ಜನವರಿ 26 ರಂದು ಗಣರಾಜ್ಯೋತ್ಸವ ಆಚರಿಸಲಾಗುತ್ತದೆ. ಇಂದಿನ ಗಣರಾಜ್ಯೋತ್ಸವದ ಸಂಭ್ರಮಕ್ಕೆ ಗೂಗಲ್‌ ಡೂಡಲ್‌ ಕೂಡ ಕೈ ಜೊತೆಯಾಗಿದೆ. ಐತಿಹಾಸಿಕ ಪರೇಡ್‌ ದೃಶ್ಯಗಳನ್ನು ತನ್ನ ಡೂಡಲ್‌ನಲ್ಲಿ ಪ್ರಕಟಿಸುವ ಮೂಲಕ ಗೂಗಲ್‌ ಗೌರವ ಸಲ್ಲಿಸಿದೆ. ವಿವಿಧ ದಶಕಗಳ ಗಣರಾಜ್ಯೋತ್ಸವ ಪರೇಡ್‌ ಅನ್ನು ನಾವು ಇದರಲ್ಲಿ ಕಾಣಬಹುದಾಗಿದೆ.

ಇದರೊಂದಿಗೆ ಗೂಗಲ್‌ ಐತಿಹಾಸಿಕ ದಿನ ಮಹತ್ವ ಹಾಗೂ ಈ ಡೂಡಲ್‌ ರಚಿಸಿದ ಕಲಾವಿದರ ಬಗ್ಗೆಯೂ ವಿವರಿಸಿದೆ.

ʼಈ ಡೂಡಲ್‌ ಭಾರತದ ಗಣರಾಜ್ಯೋತ್ಸವವನ್ನು ಆಚರಿಸುತ್ತಿದೆ. ಇದು 1950ರಲ್ಲಿ ಭಾರತದ ಸಂವಿಧಾನವನ್ನು ಅಂಗೀಕರಿಸಿದ ದಿನವನ್ನು ನೆನಪಿಸುತ್ತದೆ ಮತ್ತು ರಾಷ್ಟ್ರವು ತನ್ನನ್ನು ತಾನು ಸಾರ್ವಭೌಮ, ಪ್ರಜಾಪ್ರಭುತ್ವ ಮತ್ತು ಗಣರಾಜ್ಯ ರಾಜ್ಯವೆಂದು ಘೋಷಿಸಿತು. ಇಂದಿನ ಗೂಗಲ್‌ ಡೂಡಲ್‌ ರಚಿಸಿದ ಅತಿಥಿ ಕಲಾವಿದೆ ವೃಂದಾ ಝವೇರಿ. ಇದರಲ್ಲಿ ವಿವಿಧ ದಶಕಗಳ ಗಣರಾಜ್ಯೋತ್ಸವ ಪರೇಡ್‌ ಅನ್ನು ಕಾಣಬಹುದಾಗಿದೆʼ ಎಂದು ಗೂಗಲ್‌ ಹೇಳಿದೆ.

ಕಳೆದ ವರ್ಷ ಕೂಡ ಗೂಗಲ್‌ ಡೂಡಲ್‌ ರಚಿಸುವ ಮೂಲಕ ಭಾರತದ ಗಣರಾಜೋತ್ಸವವನ್ನು ಸಂಭ್ರಮಿಸಿತ್ತು. ರಾಷ್ಟ್ರಪತಿ ಭವನ, ಇಂಡಿಯಾ ಗೇಟ್‌, ಪರೇಡ್‌ನ ದ್ರಶ್ಯವನ್ನು ಡೂಡಲ್‌ನಲ್ಲಿ ಸೇರಿಸಲಾಗಿತ್ತು.

ಗೂಗಲ್‌ ಡೂಡಲ್‌ ಇಂತಹ ವಿಶೇಷ ಸಂದರ್ಭದಲ್ಲಿ ಗೌರವ ಸಲ್ಲಿಸುವ ಉದ್ದೇಶದಿಂದ ಡೂಡಲ್‌ಗಳನ್ನು ರಚಿಸಿ ಪ್ರಕಟಿಸುತ್ತದೆ. ಇದು ಪ್ರಮುಖ ದಿನಗಳು, ಹಬ್ಬಗಳು ಮತ್ತು ಪ್ರಸಿದ್ಧ ಕಲಾವಿದರು, ಪ್ರವರ್ತಕರು ಮತ್ತು ವಿಜ್ಞಾನಿಗಳ ಜೀವನವನ್ನು ಸ್ಮರಿಸುವ ಗುರಿಯನ್ನು ಹೊಂದಿದೆ.

ಈ ಬಾರಿ ಭಾರತದಲ್ಲಿ ನಡೆಯುತ್ತಿರುವ 75ನೇ ಗಣರಾಜ್ಯೋತ್ಸವದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಧ್ವಜಾರೋಹಣ ಮಾಡಲಿದ್ದಾರೆ. ಫ್ರಾನ್ಸ್‌ ಅಧ್ಯಕ್ಷ ಇಮ್ಯಾನುಯೆಲ್‌ ಮ್ಯಾಕ್ರನ್‌ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.

'ವಿಕ್ಷಿತ್ ಭಾರತ್' ಮತ್ತು 'ಭಾರತ್ - ಲೋಕತಂತ್ರ ಕಿ ಮಾತೃಕಾ' ಎಂಬ ಥೀಮ್‌ನಲ್ಲಿ ಗಣರಾಜ್ಯೋತ್ಸವ ಪರೇಡ್‌ ನಡೆಯುತ್ತದೆ. ಆಕರ್ಷಕ ಪರೇಡ್‌, ಗಮನ ಸೆಳೆವ ವಿವಿಧ ರಾಜ್ಯಗಳ ಟ್ಲಾಬ್ಲೋಗಳು ಗಣರಾಜ್ಯೋತ್ಸವದ ಮುಖ್ಯ ಆಕರ್ಷಣೆಯಾಗಿರುತ್ತದೆ.

ಇದನ್ನೂ ಈ ಸ್ಟೋರಿಯನ್ನೂ ನೋಡಿ

Republic Day 2024: ಗಣರಾಜ್ಯೋತ್ಸವ ಕುರಿತು ನೀವು ತಿಳಿಯಬೇಕಾದ 15 ಕುತೂಹಲಕಾರಿ ಸಂಗತಿಗಳಿವು

ಬೆಂಗಳೂರ: ಪ್ರತಿ ವರ್ಷ ಜನವರಿ 26 ರಂದು ಗಣರಾಜ್ಯೋತ್ಸವನ್ನು ಆಚರಿಸಲಾಗುತ್ತದೆ. ಈ ಬಾರಿ 74ನೇ ಗಣರಾಜ್ಯೋತ್ಸವದ ಆಚರಣೆಗೆ ಸಕಲ ಸಿದ್ಧತೆಗಳನ್ನು ನಡೆದಿದ್ದು, ನಾಳೆ (ಜನವರಿ 29, ಶುಕ್ರವಾರ) ರಾಷ್ಟ್ರ ರಾಜಧಾನಿ ದೆಹಲಿಯ ಕರ್ತವ್ಯಪಥದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಧ್ವಜಾರೋಹಣ ನೆರವೇರಿಸಲಿದ್ದಾರೆ.

(This copy first appeared in Hindustan Times Kannada website. To read more like this please logon to kannada.hindustantimes.com )

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ