Padma Awards: ಕರ್ನಾಟಕದ 9 ಮಂದಿಗೆ ಸೇರಿ ಒಟ್ಟು 132 ಜನರಿಗೆ ಪದ್ಮ ಪ್ರಶಸ್ತಿ; ಇಲ್ಲಿದೆ ಪುರಸ್ಕೃತರ ಸಂಪೂರ್ಣ ವಿವರ
Feb 18, 2024 12:43 PM IST
ಪದ್ಮಪ್ರಶಸ್ತಿಗಳು
- ಕೇಂದ್ರ ಸರ್ಕಾರವು ನೀಡುವ ಅತ್ಯುನ್ನತ ನಾಗರಿಕ ಸೇವಾ ಪ್ರಶಸ್ತಿಗಳಾದ ಪದ್ಮವಿಭೂಷಣ, ಪದ್ಮಭೂಷಣ ಹಾಗೂ ಪ್ರದ್ಮಶ್ರೀ ಪ್ರಶಸ್ತಿಗಳಿಗೆ ಕರ್ನಾಟಕ 9 ಮಂದಿ ಸೇರಿ ಒಟ್ಟು 132 ಜನರು ಆಯ್ಕೆಯಾಗಿದ್ದಾರೆ. ಪದ್ಮ ಪ್ರಶಸ್ತಿ ಪಡೆದವರ ಸಂಪೂರ್ಣ ಪಟ್ಟಿ ಇಲ್ಲಿದೆ.
ಪ್ರತಿ ವರ್ಷ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಕೇಂದ್ರ ಸರ್ಕಾರವು ನೀಡುವ ಪದ್ಮ ಪ್ರಶಸ್ತಿಯ ಪಟ್ಟಿ ಪ್ರಕಟವಾಗಿದೆ. 2024ರ ಸಾಲಿನಲ್ಲಿ ಕೇಂದ್ರ ಸರ್ಕಾರ ಅತ್ಯುನ್ನತ ನಾಗರಿಕ ಸೇವಾ ಪ್ರಶಸ್ತಿಗಳಾದ ಪದ್ಮವಿಭೂಷಣ, ಪದ್ಮಭೂಷಣ ಹಾಗೂ ಪದ್ಮಶ್ರೀ ಪ್ರಶಸ್ತಿಗಳಿಗೆ ರಾಜ್ಯದ 9 ಮಂದಿ ಸೇರಿ ಒಟ್ಟು 132 ಜನರು ಆಯ್ಕೆಯಾಗಿದ್ದಾರೆ.
ಮಾಜಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ದು, ನಟಿ ಹಾಗೂ ಸಂಸದೆ ವೈಜಯಂತಿ ಮಾಲಾ ಬಾಲಿ, ನಟ ಚಿರಂಜೀವಿ ಕೊನಿಡೇಲ, ಕರ್ನಾಟಕ ಗಿರಿಜನ ಕಲ್ಯಾಣ ಕಾರ್ಯಕರ್ತ ಸೋಮಣ್ಣ, ಸಾಮಾಜಿಕ ಕಾರ್ಯಕರ್ತೆ ಪ್ರೇಮಾಧನರಾಜ್, ರೋಹನ್ ಬೋಪಣ್ಣ ಸೇರಿ ಹಲವರಿಗೆ ಈ ಪ್ರಶಸ್ತಿ ಲಭಿಸಿದೆ.
ಒಟ್ಟು 132 ಪದ್ಮ ಪ್ರಶಸ್ತಿಗಳಲ್ಲಿ 5 ಜನರಿಗೆ ಪದ್ಮವಿಭೂಷಣ, 17 ಮಂದಿಗೆ ಪದ್ಮಭೂಷಣ ಹಾಗೂ 110 ಜನರಿಗೆ ಪದ್ಮಶ್ರೀ ಪ್ರಶಸ್ತಿ ಲಭಿಸಿದೆ.
ಪದ್ಮ ಪ್ರಶಸ್ತಿ ಪಡೆದ ಕರ್ನಾಟಕದವರು
* ಸೋಮಣ್ಣ, ಮೈಸೂರು (ಗಿರಿಜನ ಜನ ಕಲ್ಯಾಣ ಕಾರ್ಯಕರ್ತ)
* ಪ್ರೇಮಾ ಧನರಾಜ್, ಬೆಂಗಳೂರು (ಸಾಮಾಜಿಕ ಕಾರ್ಯಕರ್ತೆ)
* ರೋಹನ್ ಬೋಪಣ್ಣ (ಕ್ರೀಡೆ)
* ಅನುಪಮಾ ಹೊಸಕೆರೆ (ಕಲೆ)
* ಶ್ರೀಧರ್ ಮಾಕಂ ಕೃಷ್ಣಮೂರ್ತಿ (ಸಾಹಿತ್ಯ-ಶಿಕ್ಷಣ)
* ಕೆಎಸ್ ರಾಜಣ್ಣ - (ಸಾಮಾಜಿಕ ಕಾರ್ಯ)
* ಚಂದ್ರಶೇಖರ್ ಚನ್ನಪಟ್ಟಣ (ವೈದ್ಯಕೀಯ)
* ಶನಿ ಸೋನಿ - (ವ್ಯಾಪಾರ ಮತ್ತು ಕೈಗಾರಿಕೆ)
ಪದ್ಮಭೂಷಣ ಪ್ರಶಸ್ತಿ ಪಡೆದವರು: ಸೀತಾರಾಮ್ ಜಿಂದಾಲ್ (ವ್ಯಾಪಾರ ಮತ್ತು ಕೈಗಾರಿಕೆ)
ಪದ್ಮವಿಭೂಷಣ ಪ್ರಶಸ್ತಿ ಪಡೆದವರ ವಿವರ
* ವೈಜಯಂತಿ ಮಾಲಾ, ತಮಿಳುನಾಡು (ಕಲೆ)
* ಕೊನಿಡೆಲಾ ಚಿರಂಜೀವಿ, ಆಂಧ್ರಪ್ರದೇಶ (ಕಲೆ)
* ಎಂ. ವೆಂಕಯ್ಯ ನಾಯ್ಡು, ಆಂಧ್ರಪ್ರದೇಶ, (ಸಾರ್ವಜನಿಕ ವ್ಯವಹಾರ)
* ಬಿಂದೇಶ್ವರ ಪಾಠಕ್, ಬಿಹಾರ (ಸಾಮಾಜಿಕ ಕಾರ್ಯ)
* ಪದ್ಮ ಸುಬ್ರಹ್ಮಣ್ಯಂ, ತಮಿಳುನಾಡು (ಕಲೆ).
ಪದ್ಮಭೂಷಣ ಪ್ರಶಸ್ತಿ ಪಡೆದವವರ ವಿವರ
ಎಂ. ಫಾಹಿಮಾ ಬಿ.ವಿ (ಮರಣೋತ್ತರ) ಕೇರಳ, (ಸಾರ್ವಜನಿಕ ವ್ಯವಹಾರ)
* ಹಾರ್ಮುಸ್ಜಿ ಎನ್ ಕಾಮಾ, ಮಹಾರಾಷ್ಟ್ರ (ಸಾಹಿತ್ಯ ಶಿಕ್ಷಣ) *ಮಿಥುನ್ ಚಕ್ರವರ್ತಿ, ಪಶ್ಚಿಮ ಬಂಗಾಳ (ಕಲೆ)
* ಯಂಗ್ ಲಿಯು, ತೈವಾನ್ (ಉದ್ಯಮ)
* ಅಶ್ವಿನ್ ಬಾಲಚಂದ್ ಮೆಹ್ತಾ, ಮಹಾರಾಷ್ಟ್ರ (ವೈದ್ಯಕೀಯ)
ಸತ್ಯಬ್ರತ ಮುಖರ್ಜಿ (ಮರಣೋತ್ತರ) ಪಶ್ಚಿಮ ಬಂಗಾಳ, ಸಾರ್ವಜನಿಕ ವ್ಯವಹಾರ
* ರಾಮ್ ನಾಯಕ್, ಮಹಾರಾಷ್ಟ್ರ (ಸಾರ್ವಜನಿಕ ವ್ಯವಹಾರ)
* ತೇಜಸ್ ಮಧುಸೂದನ್ ಪಟೇಲ್, ಗುಜರಾತ್ (ವೈದ್ಯಕೀಯ)
* ಓ. ರಾಜಗೋಪಾಲ್, ಕೇರಳ (ಸಾರ್ವಜನಿಕ ವ್ಯವಹಾರ)
* ದತ್ತಾತ್ರೇಯ ಅಂಬಾದಾಸ್ ಮೇಲೂ ಅಲಿಯಾಸ್ ರಾಜ್ದತ್, ಮಹಾರಾಷ್ಟ್ರ (ಕಲೆ)
* ತೊಗ್ಡಾನ್ ರಿಂಪೋಚೆ (ಮರಣೋತ್ತರ), ಲಡಾಕ್ (ಆಧ್ಯಾತ್ಮ)
* ಪ್ಯಾರೇಲಾಲ್ ಶರ್ಮಾ, ಮಹಾರಾಷ್ಟ್ರ (ಕಲೆ)
* ಚಂದ್ರೇಶ್ವರ ಪ್ರಸಾದ್ ಠಾಕೂರ್, ಬಿಹಾರ್ (ವೈದ್ಯಕೀಯ)
* ಉಷಾ ಉತ್ತುಪ್, ಪಶ್ಚಿಮ ಬಂಗಾಳ (ಕಲೆ)
ವಿಜಯಕಾಂತ್ (ಮರಣೋತ್ತರ), ತಮಿಳುನಾಡು (ಕಲೆ)
* ಕುಂದರ್ ವ್ಯಾಸ್, ಮಹಾರಾಷ್ಟ್ರ (ಸಾಹಿತ್ಯ, ಶಿಕ್ಷಣ-ಪತ್ರಿಕೋದ್ಯಮ)
ಪದ್ಮಶ್ರೀ ಪುರಸ್ಕೃತರ ಪಟ್ಟಿ
* ಪಾರ್ವತಿ ಬರೂವಾ, ಅಸ್ಸಾಂ (ಸಮಾಜ ಸೇವೆ, ಪ್ರಾಣಿ ಕಲ್ಯಾಣ)
* ಜಗೇಶ್ವರ್ ಯಾದವ್, ಛತ್ತೀಸಗಢ (ಸಮಾಜಸೇವೆ, ಬುಡಕಟ್ಟು ಅಭಿವೃದ್ಧಿ)
ಚಾಮಿ ಮುರ್ಮು, ಜಾರ್ಖಂಡ್ (ಸಮಾಜ ಸೇವೆ, ಪರಿಸರ ಸಂರಕ್ಷಣೆ)
* ಗುರ್ವಿಂದರ್ ಸಿಂಗ್, ಹರಿಯಾಣ (ಸಮಾಜಸೇವೆ)
* ದುಖು ಮಾಂಝಿ, ಪಶ್ಚಿಮ ಬಂಗಾಳ (ಸಮಾಜ ಸೇವೆ)
* ಕೆ. ಚೆಲ್ಲಮ್ಮಾಳ, ಅಂಡಮಾನ್ ಮತ್ತು ನಿಕೋಬಾರ್ (ಕೃಷಿ, ಜೈವಿಕ- ಇತರೆ)
* ಸಂಗತಂಕಿಮ, ಮಿಜೋರಾಂ (ಸಮಾಜಸೇವೆ)
* ಹೇಮಚಂದ್ ಮಾಂಝಿ, ಛತ್ತೀಸಗಢ (ಆಯುಷ್- ಆಯುರ್ವೇದ ವೈದ್ಯ)
* ಯಾನುಂಗ ಜಮೋಹ್ ಲೆಗೊ, ಅರುಣಾಚಲ ಪ್ರದೇಶ (ಕೃಷಿ)
* ಸರ್ಬೇಶ್ವರ ಬಾಸುಮತರಿ, ಅಸ್ಸಾಂ (ಕೃಷಿ)
ಉದಯ ವಿಶ್ವನಾಥ ದೇಶಪಾಂಡೆ ಮಹಾರಾಷ್ಟ್ರ, ಕ್ರೀಡೆ
* ಯಾಜ್ದಿ ಮಾನೇಕ್ಷಾ ಇಟಾಲಿಯಾ, ಗುಜರಾತ್ (ವೈದ್ಯಕೀಯ)
* ಶಾಂತಿ ದೇವಿ ಪಾಸ್ವಾನ್ ಹಾಗೂ ಶಿವನ್ ಪಾಸ್ವಾನ್, ಬಿಹಾರ್ (ಕಲೆ)
* ರತನ್ ಕಹಾರ್, ಪಶ್ಚಿಮ ಬಂಗಾಳ (ಕಲೆ)
* ಅಶೋಕ್ ಕುಮಾರ್ ಬಿಶ್ವಾಸ್, ಬಿಹಾರ (ಕಲೆ)
ಬಾಲಕೃಷ್ಣನ್ ಸದನಂ ಪುದಿಯ, ಕೇರಳ (ಕಲೆ)
* ಉಮಾಮಹೇಶ್ವರಿ ಡಿ., ಆಂಧ್ರಪ್ರದೇಶ (ಕಲೆ)
* ಗೋಪಿನಾಥ ಸ್ವೈನ್, ಒಡಿಶಾ (ಕಲೆ)
* ಸ್ಮೃತಿ ರೇಖಾ ಚಕ್ಕಾ, ತ್ರಿಪುರ (ಕಲೆ)
* ಓಂಪ್ರಕಾಶ್ ಶರ್ಮಾ, ಮಧ್ಯಪ್ರದೇಶ (ಕಲೆ)
* ನಾರಾಯಣನ್ ಇ.ಪಿ, ಕೇರಳ (ಕಲೆ)
* ಭಗಬತ್ ಪದಾನ್, ಒಡಿಶಾ (ಕಲೆ)
* ಸನಾತನ ರುದ್ರಪಾಲ್, ಪಶ್ಚಿಮ ಬಂಗಾಳ (ಕಲೆ)
* ಭದ್ರಪ್ಪನ್ ಎಂ., ತಮಿಳುನಾಡು (ಕಲೆ)
* ಜೋರ್ಡಾನ್ ಲೆಪ್ಚಾ, ಸಿಕ್ಕಿಂ ಕಲೆ
* ಮಚಿಹಾನ್ ಸಾಸಾ, ಮಣಿಪುರ (ಕಲೆ)
* ಗದ್ದಂ ಸಮ್ಮಯ್ಯ, ತೆಲಂಗಾಣ (ಕಲೆ)
ಜಾನಕಿಕಾಲ್, ರಾಜಸ್ಥಾನ (ಕಲೆ)
* ದಾಸರಿ ಕೊಂಡಪ್ಪ, ತೆಲಂಗಾಣ (ಕಲೆ)
* ಬಾಬುರಾಮ್ ಯಾದವ್, ಉತ್ತರ ಪ್ರದೇಶ (ಕಲೆ)
* ನೇಪಾಳ್‌ಚಂದ್ರ ಸೂತ್ರಧಾರ್, ಪಶ್ಚಿಮ ಬಂಗಾಳ (ಕಲೆ),
ಖಲೀಲ್ ಅಹಮದ್, ಉತ್ತರಪ್ರದೇಶ (ಕಲೆ)
* ಕಾಲೂರಮ್ ಬಮಾನಿಯಾ, ಮಧ್ಯಪ್ರದೇಶ (ಕಲೆ)
* ರೆಜ್ವಾನಾ ಚೌಧರಿ ಬನ್ಯಾ, ಬಾಂಗ್ಲಾದೇಶ (ಕಲೆ)
* ನಸೀಮ್ ಬಾನೋ, ಉತ್ತರಪ್ರದೇಶ (ಕಲೆ)
* ರಾಮಲಾಲ್ ಬರೆತ್, ಛತ್ತೀಸ್‌ಗಢ (ಕಲೆ)
* ಗೀತಾ ರಾಯ್ ಬರ್ಮನ್, ಪಶ್ಚಿಮ ಬಂಗಾಳ (ಕಲೆ)
* ಸೋಮ್ ದತ್ ಬಟ್ಟು, ಹಿಮಾಚಲ ಪ್ರದೇಶ (ಕಲೆ)
* ತಕ್ದಿರಾ ಬೇಗಂ, ಪಶ್ಚಿಮ ಬಂಗಾಳ (ಕಲೆ)
* ದ್ರೋಣ ಭೂಯಾನ್, ಅಸ್ಸಾ (ಕಲೆ)
* ನಾರಾಯಣ ಚಕ್ರವರ್ತಿ, ಪಶ್ಚಿಮ ಬಂಗಾಳ (ವಿಜ್ಞಾನ ಮತ್ತು ಎಂಜಿನಿಯರಿಂಗ್)
* ರಾಮ್ ಚೇತ್ ಚೌದರಿ, ಉತ್ತರಪ್ರದೇಶ (ವಿಜ್ಞಾನ)
* ಜೋಸ್ನಾ ಚಿನ್ನಪ್ಪ, ತಮಿಳುನಾಡು (ಕ್ರೀಡೆ)
* ಪಾರ್ಲೆಟ್ ಚಾಪಿನ್, ಫ್ರಾನ್ಸ್ (ಯೋಗ)
* ರಘುವೀರ್ ಚೌಧರಿ, ಗುಜರಾತ್ (ಸಾಹಿತ್ಯ-ಶಿಕ್ಷಣ)
* ಜೋ ಡಿ ಕ್ರೂಜ್, ತಮಿಳುನಾಡು (ಸಾಹಿತ್ಯ ಶಿಕ್ಷಣ)
* ಗುಲಾಂ ನಬಿ ದಾರ್, ಜಮ್ಮುಕಾಶ್ಮೀರ (ಕಲೆ)
ಚಿತ್ತರಂಜನ್ ದೇವವರ್ಮಾ, ತ್ರಿಪುರ (ಆಧ್ಯಾತ್ಮಿಕ)
* ರಾಧಾ ಕಿಶನ್ ಧಿಮಾನ್, ಉತ್ತರ ಪ್ರದೇಶ (ವೈದ್ಯಕೀಯ)
* ಮನೋಹರ್ ಕೃಷ್ಣಡೋಲ್, ಮಹಾರಾಷ್ಟ್ರ (ವೈದ್ಯಕೀಯ)
* ಪಿಯರೆ ಸಿಲ್ವೈನ್ ಫಿಲಿಯೋಜಾಟ್,ಫ್ರಾನ್ಸ್ (ಸಾಹಿತ್ಯ-ಶಿಕ್ಷಣ)
* ಮಹಾಬೀರ್ ಸಿಂಗ್ ಗುಡ್ಡು, ಹರಿಯಾಣ (ಕಲೆ)
* ರಾಜಾರಾಂ ಜೈನ್, ಉತ್ತರ ಪ್ರದೇಶ (ಸಾಹಿತ್ಯ-ಶಿಕ್ಷಣ)
ಯಶವಂತ್ ಸಿಂಗ್ ಕಟೋಚ್, ಉತ್ತರಾಖಂಡ (ಸಾಹಿತ್ಯ-ಶಿಕ್ಷಣ)
ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಲ್ಲಿ ಒಂದಾದ ಪದ್ಮ ಪ್ರಶಸ್ತಿಗಳನ್ನು ಪದ್ಮವಿಭೂಷಣ, ಪದ್ಮಭೂಷಣ ಮತ್ತು ಪದ್ಮಶ್ರೀ ಈ ಮೂರು ವಿಭಾಗಗಳಲ್ಲಿ ನೀಡಲಾಗುತ್ತದೆ. ಕಲೆ, ಸಾಮಾಜಿಕ ಕಾರ್ಯ, ಸಾರ್ವಜನಿಕ ವ್ಯವಹಾರ, ವಿಜ್ಞಾನ ಮತ್ತು ಎಂಜಿನಿಯರಿಂಗ್, ವ್ಯಾಪಾರ ಮತ್ತು ಕೈಗಾರಿಕೆ, ವೈದ್ಯಕೀಯ, ಸಾಹಿತ್ಯ ಮತ್ತು ಶಿಕ್ಷಣ, ಕ್ರೀಡೆ, ನಾಗರಿಕ ಸೇವೆ, ಇತ್ಯಾದಿ ವಿವಿಧ ವಿಭಾಗಳಲ್ಲಿ ಪ್ರಶಸ್ತಿಗಳನ್ನು ನೀಡಲಾಗುತ್ತದೆ ಪ್ರತಿ ವರ್ಷ ಗಣರಾಜ್ಯೋತ್ಸವದ ಸಂದರ್ಭ ಪ್ರಶಸ್ತಿಗಳನ್ನು ಘೋಷಿಸಲಾಗುತ್ತದೆ. ಸಾಮಾನ್ಯವಾಗಿ ಮಾರ್ಚ್ ಅಥವಾ ಏಪ್ರಿಲ್‌ನಲ್ಲಿ ನಡೆಯುವ ಸಮಾರಂಭದಲ್ಲಿ ರಾಷ್ಟ್ರಪತಿ ಭವನ ರಾಷ್ಟ್ರಪತಿಗಳು ಪ್ರಶಸ್ತಿ ಪ್ರದಾನ ಮಾಡುತ್ತಾರೆ.
(This copy first appeared in Hindustan Times Kannada website. To read more like this please logon to kannada.hindustantimes.com )