logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಬಾಲರಾಮನ ಶಿಲ್ಪಿಯ ಜತೆಗಿರುವ ನಾನು ಧನ್ಯ; ಅಯೋಧ್ಯೆಯಲ್ಲಿ ಅರುಣ್‌ ಯೋಗಿರಾಜ್‌ ಜತೆ ಬಿಎಲ್‌ ಸಂತೋಷ್‌

ಬಾಲರಾಮನ ಶಿಲ್ಪಿಯ ಜತೆಗಿರುವ ನಾನು ಧನ್ಯ; ಅಯೋಧ್ಯೆಯಲ್ಲಿ ಅರುಣ್‌ ಯೋಗಿರಾಜ್‌ ಜತೆ ಬಿಎಲ್‌ ಸಂತೋಷ್‌

Praveen Chandra B HT Kannada

Jan 22, 2024 11:33 AM IST

google News

ಅಯೋಧ್ಯೆಯಲ್ಲಿ ಅರುಣ್‌ ಯೋಗಿರಾಜ್‌ ಜತೆ ಬಿಎಲ್‌ ಸಂತೋಷ್‌

    • ಅಯೋಧ್ಯೆ ರಾಮಮಂದಿರದಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠೆ ಮತ್ತು ಲೋಕಾರ್ಪಣೆ ಕಾರ್ಯಕ್ರಮ ಇಂದು ನಡೆಯುತ್ತಿದೆ. ಈ ಕಾರ್ಯಕ್ರಮಕ್ಕೆ ಆಗಮಿಸಿರುವ ಕನ್ನಡಿಗ ಅರುಣ್‌ ಯೋಗಿರಾಜ್‌ ಮತ್ತು ಬಿಜೆಪಿಯ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್ ಭೇಟಿಯಾಗಿದ್ದಾರೆ.
ಅಯೋಧ್ಯೆಯಲ್ಲಿ  ಅರುಣ್‌ ಯೋಗಿರಾಜ್‌ ಜತೆ ಬಿಎಲ್‌ ಸಂತೋಷ್‌
ಅಯೋಧ್ಯೆಯಲ್ಲಿ ಅರುಣ್‌ ಯೋಗಿರಾಜ್‌ ಜತೆ ಬಿಎಲ್‌ ಸಂತೋಷ್‌

ಬೆಂಗಳೂರು: ಅಯೋಧ್ಯೆ ರಾಮಮಂದಿರದಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠೆ ಮತ್ತು ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಕನ್ನಡಿಗ ಅರುಣ್‌ ಯೋಗಿರಾಜ್‌ ಜತೆ ಬಿಜೆಪಿಯ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್ ಫೋಟೋ ತೆಗಿಸಿಕೊಂಡು "ನಾನು ಧನ್ಯ" ಎಂದು ಟ್ವೀಟ್‌ ಮಾಡಿದ್ದಾರೆ. ಮೈಸೂರಿನ ಶಿಲ್ಪಿ ಅರುಣ್‌ ಯೋಗಿರಾಜ್‌ ಕೆತ್ತಿರುವ ಬಾಲರಾಮನ ಮೂರ್ತಿ ಇಂದು ಅಯೋಧ್ಯೆ ರಾಮಮಂದಿರದಲ್ಲಿ ಪ್ರತಿಷ್ಠಾಪನೆಗೊಳ್ಳಲಿದೆ.

"ಶ್ರೀಯುತ ಅರುಣ್‌ ಯೋಗಿರಾಜ್‌, ಶ್ರೀ ರಾಮಲಲ್ಲಾನ ಶಿಲ್ಪಿ. ಅಯೋಧ್ಯೆಯ ದೇವಾಲಯದೊಳಗೆ ಇವರ ಜತೆ ಇರುವಂತಹ ಆಶೀರ್ವಾದ ನನಗೆ ದೊರಕಿತು. ರಾಷ್ಟ್ರದ ಕನಸುಗಳನ್ನು ನನಸಾಗಿಸುವ ಅವರ ಶ್ರದ್ಧೆ, ಸಂವೇದನಶೀಲವಾಗಿದೆ. ಧನ್ಯನಾದೆ" ಎಂದು ಬಿಎಲ್‌ ಸಂತೋಷ್‌ ಟ್ವೀಟ್‌ ಮಾಡಿದ್ದಾರೆ.

ಯಾರಿದು ಅರುಣ್‌ ಯೋಗಿರಾಜ್‌?

ಇಂದು ಅಯೋಧ್ಯೆಯಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ ಬಾಲರಾಮನ ವಿಗ್ರಹವನ್ನು ಕೆತ್ತಿರುವ ಶಿಲ್ಪಿ ಅರುಣ್‌ ಯೋಗಿರಾಜ್‌. ಇವರು ಮೈಸೂರಿನ ಹಿರಿಯ ಶಿಲ್ಪ ಕಲಾವಿದರ ಕುಟುಂಬದ ಐದನೇ ತಲೆಮಾರಿನ ಕುಡಿ ಎನ್ನುವುದು ಕನ್ನಡಿಗರಿಗೆ ಹೆಮ್ಮೆಯ ಸಂಗತಿ. ಕಳೆದ ವರ್ಷವೇ ಅಯೋಧ್ಯೆಯ ಬಾಲರಾಮನ ವಿಗ್ರಹ ತಯಾರಿಸಲು ದೇಶದ ಹಲವಾರು ಕಲಾವಿದರನ್ನು ಆಯ್ಕೆ ಮಾಡಲಾಗಿತ್ತು. ಇವರು ಕಳುಹಿಸಿದ ಮಾದರಿಗಳನ್ನು ಗುರುತಿಸಿ ಕೊನೆಗೆ ಕರ್ನಾಟಕದ ಇಬ್ಬರು ಹಾಗೂ ರಾಜಸ್ಥಾನದ ಒಬ್ಬರು ಕಲಾವಿದರ ಹೆಸರು ಅಂತಿಮಗೊಳಿಸಲಾಗಿತ್ತು. ಇದರಲ್ಲಿ ಅರುಣ್‌ ಯೋಗಿರಾಜ್‌, ಜಿ.ಎಸ್.‌ಭಟ್‌ ಕರ್ನಾಟಕದವರಾದರೇ. ಸಂಜಯ್‌ ಪಾಂಡೆ ಎನ್ನುವ ಕಲಾವಿದರು ರಾಜಸ್ಥಾನದವರು. ಈ ಮೂವರು ತಾವು ಕೆತ್ತಿದ್ದ ಮೂರ್ತಿಗಳನ್ನು ತೆಗೆದುಕೊಂಡು ಹೋಗಿದ್ದರು. ಇದರಲ್ಲಿ ಅತ್ಯುತ್ತಮ ಎನ್ನುವ ರೀತಿಯಲ್ಲಿರುವ ಅರುಣ್‌ ರೂಪಿಸಿದ ಸುಮಾರು 5 ಅಡಿ ಎತ್ತರದ ವಿಗ್ರಹವನ್ನು ಅಂತಿಮಗೊಳಿಸಲಾಗಿದೆ. ಇಂದು ಅರುಣ್‌ ಯೋಗಿರಾಜ್‌ ಕೆತ್ತಿರುವ ಮೂರ್ತಿಯೇ ಪ್ರತಿಷ್ಠಾಪನೆಗೊಳ್ಳುತ್ತಿದೆ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ