logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Ayodhya Ram Lalla: ಅಯೋಧ್ಯೆ ಬಾಲರಾಮನ ನಿದ್ದೆ‌ಗೆ ಮಧ್ಯಾಹ್ನ ಒಂದು ಗಂಟೆ ರಾಮಮಂದಿರ ಬಂದ್ !

Ayodhya Ram Lalla: ಅಯೋಧ್ಯೆ ಬಾಲರಾಮನ ನಿದ್ದೆ‌ಗೆ ಮಧ್ಯಾಹ್ನ ಒಂದು ಗಂಟೆ ರಾಮಮಂದಿರ ಬಂದ್ !

Umesha Bhatta P H HT Kannada

Feb 18, 2024 07:10 PM IST

google News

ಬಾಲ ರಾಮ ಮೂರ್ತಿಯ ನಿದ್ರೆಗೆ ಒಂದು ಗಂಟೆ ಮಧ್ಯಾಹ್ನ ಅಯೋಧ್ಯೆ ರಾಮಮಂದಿರ ಬಂದ್‌ ಅಗಲಿದೆ.

    • ಅಯೋಧ್ಯೆ ಬಾಲರಾಮಮೂರ್ತಿಗೆ ನಿತ್ಯ ಮಧ್ಯಾಹ್ನ ನಿದ್ರೆಗೆ ಒಂದು ಗಂಟೆಯ ಬಿಡುವು. ಇದಕ್ಕಾಗಿ ದರ್ಶನದ ಸಮಯದಲ್ಲಿ ಬದಲಾವಣೆಯೂ ಆಗಿದೆ. 
ಬಾಲ ರಾಮ ಮೂರ್ತಿಯ ನಿದ್ರೆಗೆ ಒಂದು ಗಂಟೆ ಮಧ್ಯಾಹ್ನ ಅಯೋಧ್ಯೆ ರಾಮಮಂದಿರ ಬಂದ್‌ ಅಗಲಿದೆ.
ಬಾಲ ರಾಮ ಮೂರ್ತಿಯ ನಿದ್ರೆಗೆ ಒಂದು ಗಂಟೆ ಮಧ್ಯಾಹ್ನ ಅಯೋಧ್ಯೆ ರಾಮಮಂದಿರ ಬಂದ್‌ ಅಗಲಿದೆ.

ಅಯೋಧ್ಯೆ: ತಿಂಗಳ ಹಿಂದೆಯಷ್ಟೇ ದರ್ಶನಕ್ಕೆ ಮುಕ್ತವಾಗಿರುವ ಅಯೋಧ್ಯೆ ರಾಮಮಂದಿರದಲ್ಲಿ ಇನ್ನೂ ಭಕ್ತಸಾಗರ. ನಿತ್ಯ ಸಹಸ್ರಾರು ಸಂಖ್ಯೆಯಲ್ಲಿಯೇ ಭಕ್ತರು ಆಗಮಿಸುತ್ತಲೇ ಇದ್ಧಾರೆ. ಆರಂಭಕ್ಕಿಂತ ಈಗ ಭಕ್ತರ ಭೇಟಿ ಕೊಂಚ ಕಡಿಮೆಯಾದರೂ ಭಕ್ತರ ಉತ್ಸಾಹ ಒಂದಿನಿತೂ ಕುಂದಿಲ್ಲ. ಅಯೋಧ್ಯೆ ರಾಮಮಂದಿರ ಟ್ರಸ್ಟ್‌ನವರಿಗೆ ಭಕ್ತರನ್ನು ನಿಭಾಯಿಸುವುದೇ ಸವಾಲು. ಇದಕ್ಕಾಗಿ ದರ್ಶನದ ಸಮಯವನ್ನು ಈಗಾಗಲೇ ಬದಲಾಯಿಸಲಾಗಿದೆ. ಇದರ ನಡುವೆ ಭಕ್ತರ ಒತ್ತಡದಿಂದ ಅಯೋಧ್ಯೆ ಬಾಲರಾಮನಿಗೆ ಮಧ್ಯಾಹ್ನ ನಿದ್ದೆಯ ಬಿಡುವನ್ನು ಟ್ರಸ್ಟ್‌ ನೀಡಿದೆ. ಒಂದು ತಾಸು ಬಾಲರಾಮ ನಿದ್ರಿಸಲಿದ್ದು. ಈ ವೇಳೆ ಭಕ್ತರೂ ಹೊರಗೆ ಕಾಯಬೇಕು.

ಅಯೋಧ್ಯೆ ರಾಮಮಂದಿರದಲ್ಲಿ ಭಕ್ತರ ಸಮಯವನ್ನು ಮೂರು ದಿನದ ಹಿಂದೆಯೇ ಬದಲು ಮಾಡಲಾಗಿದೆ. ಜನವರಿ 22 ರಂದು ರಾಮಮಂದಿರ ಉದ್ಘಾಟನೆಗೂ ಮುನ್ನ ಬೆಳಿಗ್ಗೆ 7ರಿಂದ ಸಂಜೆ 6ರವರೆಗೆ ದರ್ಶನಕ್ಕೆ ವ್ಯವಸ್ಥೆ ಇತ್ತು. ಇದರ ನಡುವೆ ಮಧ್ಯಾಹ್ನ 1:30 ರಿಂದ 3:30 ಬಿಡುವು ಇರುತ್ತಿತ್ತು. ಉದ್ಘಾಟನೆಯ ಬಳಿಕ ಬೆಳಿಗ್ಗೆ 7ರಿಂದ ರಾತ್ರಿ 10ರವರೆಗೂ ವಿಸ್ತರಿಸಲಾಯಿತು.

ಈಗ ಮತ್ತೆ ಸಮಯ ಬದಲಾವಣೆ ಮಾಡಲಾಗಿದೆ. ಬೆಳಿಗ್ಗೆ 6ರಿಂದಲೇ ದೇವರ ದರ್ಶನ ಶುರುವಾಗಲಿದೆ. ರಾತ್ರಿ10ವರೆಗೂ ದರ್ಶನ ಇರಲಿದೆ. ಇದರ ನಡುವೆ ಮಧ್ಯಾಹ್ನದ ಬಿಡುವಿನ ಸಮಯವನ್ನು ತರಲಾಗಿದೆ. ಮಧ್ಯಾಹ್ನ 12.30 ರಿಂದ 1.30ರವರೆಗೆ ಒಂದು ಗಂಟೆ ಕಾಲ ಬಿಡುವು ಇರಲಿದೆ.

ಅಯೋಧ್ಯೆ ರಾಮಮಂದಿರದ ಮುಖ್ಯ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್‌ ಅವರ ಪ್ರಕಾರ, ಬಾಲರಾಮಮೂರ್ತಿಗೆ ಇನ್ನೂ ಐದು ವರ್ಷ. ಆತನಿಗೆ ಹೆಚ್ಚಿನ ಒತ್ತಡ ನೀಡಲು ಆಗುವುದಿಲ್ಲ. ಈ ಕಾರಣಕ್ಕೆ ಬಾಲರಾಮಮೂರ್ತಿ ನಿದ್ರಿಸಲು ಒಂದು ಗಂಟೆ ಬಿಡುವು ನೀಡಲು ನಿರ್ಧರಿಸಲಾಗಿದೆ. ಮಧ್ಯಾಹ್ನ 12.30 ರಿಂದ 1.30 ರವರೆಗೆ ಬಿಡುವು ಇರಲಿದೆ ಎನ್ನುತ್ತಾರೆ.

ದೇಗುಲ ಉದ್ಘಾಟನೆಯಾದ ಮರು ದಿನದಿಂದಲೇ ಬೆಳಿಗ್ಗೆ 4 ಕ್ಕೆ ಪೂಜಾ ಕಾರ್ಯಗಳು ಶುರುವಾಗುತ್ತವೆ.ಬಾಲರಾಮನೂ ಬೇಗನೇ ಏಳುವುದರಿಂದ ಇದಾದ ನಂತರ ನಿರಂತರ ರಾತ್ರಿ 10ರವರೆಗೂ ದರ್ಶನ ನೀಡುವುದರಿಂದ ಬಿಡುವು ಬೇಕಾಗುತ್ತದೆ ಎನ್ನುವುದು ಅವರ ವಿವರಣೆ.

ದೇಗುಲ ಉದ್ಘಾಟನೆ ಆದ ನಂತರ ಭಕ್ತರ ಸಂಖ್ಯೆ ಹೆಚ್ಚಿದ್ದು, 10 ಲಕ್ಷಕ್ಕೂ ಅಧಿಕ ಮಂದಿ ಭೇಟಿ ನೀಡಿದ ಅಂದಾಜಿದೆ. ಏಪ್ರಿಲ್‌ನ ನಂತರ ಸಾಲು ಸಾಲು ರಜೆಗಳು ಬರುವುದರಿಂದ ಹೆಚ್ಚಿನ ಭಕ್ತರು ಅಯೋಧ್ಯೆಗೆ ಭೇಟಿ ನೀಡುವ ಸಾಧ್ಯತೆಯಿದೆ.

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ