logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Covid Updates: ಭಾರತದಲ್ಲಿ ಒಂದೇ ದಿನ 636 ಸಕ್ರಿಯ ಪ್ರಕರಣ, 3 ಸಾವು: ಯಾವ ರಾಜ್ಯದಲ್ಲಿ ಎಷ್ಟು

Covid Updates: ಭಾರತದಲ್ಲಿ ಒಂದೇ ದಿನ 636 ಸಕ್ರಿಯ ಪ್ರಕರಣ, 3 ಸಾವು: ಯಾವ ರಾಜ್ಯದಲ್ಲಿ ಎಷ್ಟು

Umesha Bhatta P H HT Kannada

Jan 02, 2024 02:27 PM IST

google News

ಭಾರತದಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ಪ್ರತಿದಿನ ವರದಿಯಾಗುತ್ತಲೇ ಇವೆ.

    • Covid Updates ಭಾರತದಲ್ಲಿ ಕೋವಿಡ್‌ ಪ್ರಕರಣಗಳ ಸೋಮವಾರವೂ ದೇಶದ ಹಲವು ರಾಜ್ಯಗಳಲ್ಲಿ ವರದಿಯಾಗಿವೆ. 
ಭಾರತದಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ಪ್ರತಿದಿನ ವರದಿಯಾಗುತ್ತಲೇ ಇವೆ.
ಭಾರತದಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ಪ್ರತಿದಿನ ವರದಿಯಾಗುತ್ತಲೇ ಇವೆ.

ದೆಹಲಿ: ಭಾರತದಲ್ಲಿ ಹೊಸ ವರ್ಷದ ಸೋಮವಾರ ಒಂದೇ ದಿನ 636 ಸಕ್ರಿಯ ಕೋವಿಡ್‌ ಪ್ರಕರಣಗಳು ವರದಿಯಾಗಿವೆ. ಇದರಲ್ಲಿ ಮೂವರು ಕೋವಿಡ್‌ನ ಕಾರಣದಿಂದ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಸಚಿವಾಲಯವು ವರದಿ ಬಿಡುಗಡೆ ಮಾಡಿದೆ.

ಈವರೆಗೂ ಭಾರತದಲ್ಲಿ ಕೋವಿಡ್‌ನ ಸಕ್ರಿಯ ಪ್ರಕರಣಗಳ ಸಂಖ್ಯೆ 4394ಕ್ಕೆ ತಲುಪಿದೆ. ಅದರಲ್ಲೂ ಜೆಎನ್‌ 1 ತಳಿಯ ಪತ್ತೆಯಾದ ನಂತರ ಕೋವಿಡ್‌ ಪ್ರಕರಣಗಳು ನಿಧಾನಗತಿಯಲ್ಲಿ ಏರಿಕೆ ಕಾಣುತ್ತಿವೆ. ಕೇರಳ, ಕರ್ನಾಟಕ, ಮಹಾರಾಷ್ಟ್ರದಲ್ಲಿ ಈ ಪ್ರಮಾಣ ಹೆಚ್ಚಾಗಿದೆ.

ಈವರೆಗೂ ಭಾರತದಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ 4,44,76,550. ಇದರಲ್ಲಿ ಮಹಾರಾಷ್ಟ್ರದಲ್ಲಿ 8172906 ಮಂದಿಗೆ ಕೋವಿಡ್‌ ಕಾಣಿಸಿಕೊಂಡು 8023608 ಮಂದಿ ಚಿಕಿತ್ಸೆ ಪಡೆದು ಬಿಡುಗಡೆಯಾಗಿದ್ದಾರೆ. ಈವರೆಗೂ ಕೋವಿಡ್‌ಗೆ 148567 ಮಂದಿ ಬಲಿಯಾಗಿದ್ದಾರೆ.

ಈವರೆಗೂ ಕೇರಳದಲ್ಲಿ ಈವರೆಗೂ 6915877 ಮಂದಿಗೆ ಕೋವಿಡ್‌ ಬಂದು, 6842092 ಮಂದಿ ಗುಣಮುಖರಾಗಿದ್ದಾರೆ. ಈವರೆಗೂ 72073 ಮಂದಿ ಮೃತಪಟ್ಟಿದ್ದಾರೆ,

ಕರ್ನಾಟಕದಲ್ಲಿ 4090803 ಪ್ರಕರಣ ಕಂಡು ಬಂದಿದ್ದು, 4049185 ಮಂದಿ ಬಿಡುಗಡೆಯಾಗಿದ್ದು. 40373 ಮಂದಿ ಮೃತಪಟ್ಟಿದ್ದಾರೆ.

ತಮಿಳುನಾಡಿನಲ್ಲಿ 3611208 ಮಂದಿಗೆ ಕೋವಿಡ್‌ ಬಂದು 3572943 ಮಂದಿ ಗುಣಮುಖರಾಗಿದ್ದಾರೆ. ಒಟ್ಟು 38084 ಮಂದಿ ಮೃತಪಟ್ಟಿರುವುದಾಗಿ ಅಂಕಿ ಅಂಶಗಳು ಹೇಳುತ್ತವೆ.

ನೆರೆಯ ಆಂಧ್ರ ಪ್ರದೇಶದಲ್ಲಿ 2340829 ಮಂದಿಗೆ ಕೋವಿಡ್‌ ಸೋಂಕು ತಗುಲಿ, 2325977 ಮಂದಿ ಗುಣಮುಖರಾಗಿದ್ದಾರೆ. 14733 ಮಂದಿ ಜೀವ ಕಳೆದುಕೊಂಡಿದ್ದಾರೆ.

ತೆಲಂಗಾಣದಲ್ಲಿ 844608 ಮಂದಿಗೆ ಕೋವಿಡ್‌ ಸೋಂಕು ಹರಡಿ 840447 ಮಂದಿ ಗುಣಮುಖರಾಗಿದ್ದಾರೆ. ಒಟ್ಟು 4111 ಇಲ್ಲಿ ಕೋವಿಡ್‌ನಿಂದ ಮೃತಪಟ್ಟಿದ್ದಾರೆ.

ಈವರೆಗೂ ಒಟ್ಟು ಹತ್ತು ರಾಜ್ಯಗಳಲ್ಲಿ ಜೆಎನ್‌ 1 ಪ್ರಕರಣಗಳು ಕಂಡು ಬಂದಿವೆ. ಇದರಲ್ಲಿ ಕೇರಳ ಅತ್ಯಧಿಕ 83, ಗೋವಾ 51, ಗುಜರಾತ್‌ 34, ಕರ್ನಾಟಕ 8, ಮಹಾರಾಷ್ಟ್ರ 7, ರಾಜಸ್ಥಾನ 5, ತಮಿಳುನಾಡು 4 ತೆಲಂಗಾಣದಲ್ಲಿ 2, ಒಡಿಶಾ ಹಾಗೂ ದೆಹಲಿಯಲ್ಲಿ ತಲಾ ಒಂದು ಪ್ರಕರಣ 1 ಪ್ರಕರಣಗಳು ವರದಿಯಾಗಿವೆ.

ಕರ್ನಾಟಕ ರಾಜ್ಯದಲ್ಲಿ ಸೋಮವಾರ ಒಂದೇ ದಿನದಲ್ಲಿ 296 ಹೊಸ ಪ್ರಕರಣಗಳು ವರದಿಯಾಗಿವೆ. ಇದರಲ್ಲಿ ಒಬ್ಬರ ಸಾವು ಕೂಡ ಆಗಿದೆ. ಈವರೆಗೂ ಕರ್ನಾಟಕದಲ್ಲಿ 1,245 ಸಕ್ರಿಯ ಪ್ರಕರಣಗಳು ಇವೆ. ಪ್ರತಿ ನಿತ್ಯ 50 ಮಂದಿ ಗುಣಮುಖರಾಗಿ ಬಿಡುಗಡೆ ಹೊಂದುತ್ತಿದ್ದಾರೆ ಎಂದು ಆರೋಗ್ಯ ಸಚಿವಾಲಯವು ಮಾಹಿತಿ ನೀಡಿದೆ.

ಮೊದಲ ಬಾರಿಗೆ ಉತ್ತರಾಖಂಡದಲ್ಲೂ ಎರಡು ಕೋವಿಡ್‌ ಪ್ರಕಗಣ ದಾಖಲಾಗಿವೆ. ಇಬ್ಬರೂ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಇಬ್ಬರೂ ಹಿರಿಯ ನಾಗರೀಕರು ಎಂದು ತಿಳಿಸಲಾಗಿದೆ.

ಇಡೀ ದೇಶದಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ಡಿಸೆಂಬರ್‌ ಕೊನೆ ವಾರದಲ್ಲಿ ಕೊಂಚ ಹೆಚ್ಚಿವೆ. ಎಲ್ಲೆಡೆ ಮುನ್ನೆಚ್ಚರಿಕೆಯನ್ನೂ ಕೈಗೊಳ್ಳಲಾಗುತ್ತಿದ್ದು, ಆತಂಕ ಪಡುವ ಅಗತ್ಯವಿಲ್ಲ. ಸ್ವಯಂ ಮುನ್ನೆಚ್ಚರಿಕೆಯಿಂದ ಮಾತ್ರ ಕೋವಿಡ್‌ ನಿಗ್ರಹಿಸಬಹುದು ಎಂದು ಆರೋಗ್ಯ ಸಚಿವಾಲಯವು ತಿಳಿಸಿದೆ.

=====

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ