logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Delhi Earth Quake: ದೆಹಲಿಯಲ್ಲಿ ಮತ್ತೆ ಭೂಕಂಪ, ಉತ್ತರ ಭಾರತದಲ್ಲೂ ನಲುಗಿದ ಭೂಮಿ

Delhi Earth quake: ದೆಹಲಿಯಲ್ಲಿ ಮತ್ತೆ ಭೂಕಂಪ, ಉತ್ತರ ಭಾರತದಲ್ಲೂ ನಲುಗಿದ ಭೂಮಿ

HT Kannada Desk HT Kannada

Jan 11, 2024 04:51 PM IST

google News

ದೆಹಲಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಭೂಕಂಪವಾಗಿದೆ.

    • ದೆಹಲಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಗುರುವಾರ ಮಧ್ಯಾಹ್ನ ಭೂಕಂಪನದ ಅನುಭವವಾಗಿದ್ದು. ಭಯಭೀತರಾದ ಜನ ಮನೆ, ಕಚೇರಿಯಿಂದ ಹೊರ ಬಂದಿದ್ದಾರೆ. ಅಫ್ಘಾನಿಸ್ತಾನ ಕೇಂದ್ರ ಬಿಂದುವಿನಲ್ಲಿ ಭೂಕಂಪನ ಸಂಭವಿಸಿರುವ ಕುರಿತು ಮಾಹಿತಿ ಕಲೆ ಹಾಕಲಾಗುತ್ತಿದೆ. 

ದೆಹಲಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಭೂಕಂಪವಾಗಿದೆ.
ದೆಹಲಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಭೂಕಂಪವಾಗಿದೆ.

ದೆಹಲಿ: ದೇಶದ ರಾಜಧಾನಿ ನಗರಿ ದೆಹಲಿಯಲ್ಲಿ ಗುರುವಾರ ಮಧ್ಯಾಹ್ನ ಭೂಕಂಪನವಾದ ಅನುಭವವಾಗಿದೆ. ದೆಹಲಿ ಮಾತ್ರವಲ್ಲದೇ ಉತ್ತರ ಭಾರತದ ಕೆಲವು ಕಡೆಗಳಲ್ಲಿ ಭೂಮಿ ಕಂಪಿಸಿದ ಅನುಭವ ಹಲವರಿಗೆ ಆಗಿದೆ. ಈ ಬಾರಿಯೂ ಭೂಕಂಪನದಿಂದ ಯಾವುದೇ ಪ್ರಾಣ ಇಲ್ಲವೇ ಆಸ್ತಿಪಾಸ್ತಿ ಹಾನಿಯಾದ ಕುರಿತು ಎಲ್ಲಿಯೂ ವರದಿಯಾಗಿಲ್ಲ ಭೂಮಿ ನಡುಗುತ್ತಲೇ ಕಂಪನವನ್ನು ಅನುಭವಿಸಿದವರು ಮನೆ ಹಾಗೂ ಕಚೇರಿಯಿಂದಲೂ ಹೊರ ಬಂದಿದ್ದಾರೆ. ಮೂರು ತಿಂಗಳ ಅವಧಿಯಲ್ಲಿ ಮೂರ್ನಾಲ್ಕು ಬಾರಿ ಇದೇ ರೀತಿ ದೆಹಲಿ ಹಾಗೂ ಸುತ್ತಮುತ್ತಲಿನ ಪ್ರದೇಶದ ಜನರಿಗೆ ಭೂಕಂಪದ ಅನುಭವವಾಗಿತ್ತು.

ದೆಹಲಿಯಲ್ಲಿ ಮಧ್ಯಾಹ್ನದ 2.50ರ ಸಮಯದಲ್ಲಿ ಭೂಕಂಪಿಸಿದ ಅನುಭವ ಹಲವು ಕಡೆ ಆಯಿತು. ಅದರಲ್ಲೂ ಕೆಲ ಸೆಕೆಂಡ್‌ಗಳ ಕಾಲ ಕಂಪನ ಆಗಿದ್ದೂ ಅಲ್ಲದೇ ಕಟ್ಟಡ, ಮನೆ ವಾಲುವ ಅನುಭವವೂ ಕೆಲವರಿಗೆ ಆಗಿಯಿತು. ಭಯಗೊಂಡ ಕೆಲವರು ಅಲ್ಲಿಯೇ ಕೂಗಿಕೊಂಡರೆ ಮತ್ತೆ ಕೆಲವರು ಮನೆ, ಕಚೇರಿಯಿಂದ ಹೊರ ಬಂದರು. ಭಯಭೀತರಾಗಿದ್ದ ಹಲವರು ಮನೆ, ಕಚೇರಿಯೊಳಗೆ ಹೋಗದೇ ಹೊರಗಡೆಯೇ ನಿಂತುಕೊಂಡಿದ್ದು ಕಂಡು ಬಂದಿತು.

ಪಂಜಾಬ್‌, ಹರಿಯಾಣ, ಜಮ್ಮು ಮತ್ತು ಕಾಶ್ಮೀರ ಸಹಿತ ಹಲವು ಕಡೆಗಳಲ್ಲೂ ಇದೇ ರೀತಿ ಭೂಮಿ ಕಂಪಿಸಿದ ವರದಿಗಳು ಬಂದಿವೆ. ಜಮ್ಮು ಮತ್ತು ಕಾಶ್ಮೀರದ ಪೂಂಛ್‌ ಜಿಲ್ಲೆಯ ಹಲವು ಕಡೆ, ಪಂಜಾಬ್‌ ಹಾಗೂ ಹರಿಯಾಣದ ರಾಜಧಾನಿ ಚಂಡೀಗಢ, ಗಾಜಿಯಾಬಾದ್​ನಲ್ಲೂ ಇದೇ ರೀತಿಯ ವಾತಾವರಣ ಕಂಡು ಬಂದಿದೆ.

ದೆಹಲಿ ಸೇರಿದಂತೆ ಹಲವು ನಾಲ್ಕೈದು ರಾಜ್ಯಗಳಲ್ಲಿ ಸಂಭವಿಸಿದ ಭೂಕಂಪದ ಪ್ರಮಾಣ ರಿಕ್ಟರ್‌ ಮಾಪಕದಲ್ಲಿ 6.1 ರಷ್ಟು ಇತ್ತು ಎಂದು ರಾಷ್ಟ್ರೀಯ ಭೂಗರ್ಭ ಶಾಸ್ತ್ರ ಹಾಗೂ ಭೂಕಂಪ ಮಾಪನ ಕೇಂದ್ರದ ಭೂ ವಿಜ್ಞಾನಿಗಳು ಮಾಹಿತಿ ನೀಡಿದ್ಧಾರೆ.

ಭಾರತ ಮಾತ್ರವಲ್ಲದೇ ಪಾಕಿಸ್ತಾನ ಹಾಗೂ ಆಫ್ಘಾನಿಸ್ತಾನದಲ್ಲೂ ಭೂಕಂಪವಾಗಿದೆ. ಗುರುವಾರ ಸಂಭವಿಸಿದ ಭೂಕಂಪನದ ಕೇಂದ್ರ ಬಿಂದು ಆಫ್ಘಾನಿಸ್ತಾನದಲ್ಲಿಯೇ ಇರಬಹುದು ಎಂದು ಭೂವಿಜ್ಞಾನಿಗಳು ಅಂದಾಜು ಮಾಡಿದ್ದಾರೆ.

ಪ್ರಬಲ ಭೂಕಂಪ ದೆಹಲಿ ಹಾಗೂ ಸುತ್ತಮುತ್ತಲಿನ ಪ್ರದೇಶ, ಹರಿಯಾಣ, ಪಂಜಾಬ್‌, ಜಮ್ಮು ಮತ್ತು ಕಾಶ್ಮೀರದ ಕೆಲವು ಭಾಗಗಳಲ್ಲಿ ಸಂಭವಿಸಿರುವುದು ರಿಕ್ಟರ್‌ ಮಾಪಕದಲ್ಲಿ ದಾಖಲಾಗಿದೆ. ಇದರ ಮೂಲ ಎಲ್ಲಿದೆ. ಏನು ಕಾರಣ ಎನ್ನುವ ಕುರಿತು ವೈಜ್ಞಾನಿಕ ಮಾಹಿತಿ ಕಲೆ ಹಾಕಲಾಗುತ್ತಿದೆ. ನಿಖರ ಕಾರಣ ಸದ್ಯವೇ ತಿಳಿಯಲಿದೆ ಎನ್ನುವುದು ಭೂ ವಿಜ್ಞಾನಿಗಳ ವಿವರಣೆ.

ಕೆಲ ದಿನಗಳ ಹಿಂದೆ ದೆಹಲಿ ನಗರ ಮಾತ್ರವಲ್ಲದೇ ಉತ್ತರ ಭಾರತದ ಹಲವು ಕಡೆ ಭೂಕಂಪನವಾಗಿತ್ತು. ಆಗ ನೇಪಾಳ ಕೇಂದ್ರಬಿಂದುವಾಗಿ ಇದೇ ಪ್ರಮಾಣದಲ್ಲಿ ಭೂಕಂಪನ ಸಂಭವಿಸಿದ್ದನ್ನು ಸ್ಮರಿಸಿಕೊಳ್ಳಬಹುದು.

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ