logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Delhi Rains: ದೆಹಲಿಯಲ್ಲಿ ಪ್ರವಾಹ ಭೀತಿ; ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದಾಳೆ ಯಮುನೆ

Delhi Rains: ದೆಹಲಿಯಲ್ಲಿ ಪ್ರವಾಹ ಭೀತಿ; ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದಾಳೆ ಯಮುನೆ

Reshma HT Kannada

Aug 16, 2023 09:15 AM IST

google News

ತುಂಬಿ ಹರಿಯುತ್ತಿರುವ ಯಮುನಾ ನದಿ (ಸಾಂಕೇತಿಕ ಚಿತ್ರ)

    • Delhi Flood Alert: ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಯಮುನಾ ನದಿ ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿದೆ. ನೀರಿನ ಪ್ರಮಾಣ ಏರಿಕೆಯಾಗುತ್ತಲೇ ಇದ್ದು, ದೆಹಲಿಯಲ್ಲಿ ಪ್ರವಾಹ ಭೀತಿ ಎದುರಾಗುವ ಸಾಧ್ಯತೆ ಇದೆ. 
ತುಂಬಿ ಹರಿಯುತ್ತಿರುವ ಯಮುನಾ ನದಿ (ಸಾಂಕೇತಿಕ ಚಿತ್ರ)
ತುಂಬಿ ಹರಿಯುತ್ತಿರುವ ಯಮುನಾ ನದಿ (ಸಾಂಕೇತಿಕ ಚಿತ್ರ)

ದೆಹಲಿ: ಯಮುನಾ ನದಿಯಲ್ಲಿ ಮತ್ತೊಮ್ಮೆ ನೀರಿನ ಪ್ರಮಾಣವು ಅಪಾಯದ ಮಟ್ಟಕ್ಕಿಂತ ಏರಿಕೆಯಾಗಿದೆ. ಮಂಗಳವಾರ ದೆಹಲಿಯ ಹಳೆಯ ರೈಲ್ವೆ ಸೇತುವೆ ಅಡಿಯಲ್ಲಿ 205.39 ಮೀಟರ್‌ ತಲುಪಿದೆ. ಇದರಿಂದ ದೆಹಲಿಯಲ್ಲಿ ಪ್ರವಾಹ ಭೀತಿ ಎದುರಾಗುವ ಸಾಧ್ಯತೆ ಇದೆ.

ಕೇಂದ್ರಿಯ ಜಲ ಆಯೋಗದ (ಸಿಡಬ್ಲ್ಯೂಸಿ) ಅಂಕಿ-ಅಂಶಗಳ ಪ್ರಕಾರ ಮಂಗಳವಾರ ರಾತ್ರಿ 10 ಗಂಟೆಗೆ ನೀರಿನ ಮಟ್ಟವು 205.33 ಮೀಟರ್‌ಗಳಿಂದ 205.39 ಮೀಟರ್‌ಗೆ ಏರಿಕೆಯಾಗಿದೆ. ಅಲ್ಲದೇ ಅಪಾಯ ಮಟ್ಟವನ್ನು ಮೀರಿದೆ.

ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶದ ಕೆಲವು ಭಾಗಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಯಮುನೆಯ ನೀರಿನ ಮಟ್ಟ ತ್ವರಿತ ಏರಿಕೆಗೆ ಕಾರಣವಾಗಿದೆ.

ಹಳೆ ರೈಲ್ವೆ ಸೇತುವೆಯಲ್ಲಿ ಸಂಜೆ 6 ಗಂಟೆಗೆ ನೀರಿನ ಮಟ್ಟ 204.94 ಇತ್ತು.

ಸಿಡಬ್ಲ್ಯೂಸಿ ಪ್ರಕಾರ, ದೆಹಲಿಯಲ್ಲಿ ನೀರಿನ ಪ್ರಮಾಣವು ಎಚ್ಚರಿಕೆಯ ಮಟ್ಟ ದಾಟಿ 204.57 ಮೀಟರ್‌ಗೆ ಏರಿದೆ. 204.5 ಮೀ ಎಚ್ಚರಿಕೆ ಮಟ್ಟವಾಗಿದೆ. ಬುಧವಾರ ನೀರಿನ ಮಟ್ಟ ಇನ್ನೂ ಏರಿಕೆಯಾಗಲಿದೆ ಎಂದು ಕೇಂದ್ರ ಜಲ ಆಯೋಗ ಭವಿಷ್ಯ ನುಡಿದಿದೆ. ಭಾರಿ ಮಳೆಯ ಕಾರಣದಿಂದ ಒಂದು ತಿಂಗಳ ಹಿಂದೆ ನದಿಯ ಜಲಾನಯನ ಪ್ರದೇಶದಲ್ಲಿ ಪ್ರವಾಹ ಉಂಟಾಗಿತ್ತು. ಜುಲೈ 13 ರಂದು ದೆಹಲಿಯ ಯಮುನಾ ನದಿಯಲ್ಲಿ ಪ್ರವಾಹ ಮಟ್ಟ 208.66 ಮೀ ದಾಖಲಾಗಿತ್ತು.

ಇದನ್ನೂ ಓದಿ

Shimla landslide: ಶಿಮ್ಲಾದಲ್ಲಿ ಮತ್ತೊಂದು ಭೂಕುಸಿತ; ಕೃಷ್ಣನಗರದಲ್ಲಿ ಕನಿಷ್ಠ 7 ಮನೆ ಮಣ್ಣಿನಡಿಗೆ, ಭೂಕುಸಿತದ ವಿಡಿಯೋ ಇಲ್ಲಿದೆ

Shimla landslide: ಶಿಮ್ಲಾದ ಮತ್ತೊಂದು ಭೂಕುಸಿತದಲ್ಲಿ ಕೃಷ್ಣನಗರ ಪ್ರದೇಶದಲ್ಲಿ ಐದರಿಂದ ಏಳು ಮನೆಗಳು ಕುಸಿದಿವೆ. ಇಲ್ಲಿಯವರೆಗೆ ಸಿಕ್ಕಿಹಾಕಿಕೊಂಡಿರುವ ಜನರ ವಿವರಗಳಿಲ್ಲ ಎಂದುಶಿಮ್ಲಾದ ಡೆಪ್ಯುಟಿ ಕಮಿಷನರ್ ಆದಿತ್ಯ ನೇಗಿ ಹೇಳಿದ್ದಾರೆ.

ಶಿಮ್ಲಾದ ಮತ್ತೊಂದು ಭೂಕುಸಿತ ಸಂಭವಿಸಿದೆ. ಶಿಮ್ಲಾದ ಕೃಷ್ಣನಗರ ಪ್ರದೇಶದಲ್ಲಿ ಐದರಿಂದ ಏಳು ಮನೆಗಳು ಭೂಕುಸಿತಕ್ಕೆ ಸಿಲುಕಿ ಮಣ್ಣು ಸೇರಿವೆ. ಆ ಮನೆಗಳಲ್ಲಿ ಜನ ವಾಸ್ತವ್ಯ ಇದ್ದ ಬಗ್ಗೆ ಖಚಿತ ಮಾಹಿತಿ ಇಲ್ಲ. ಎಷ್ಟು ಜನ ಭೂಕುಸಿತಕ್ಕೆ ಸಿಲುಕಿದ್ದಾರೆ ಎಂಬ ಅಂದಾಜು ಕೂಡ ಸಿಕ್ಕಿಲ್ಲ ಎಂದು ಶಿಮ್ಲಾದ ಡೆಪ್ಯುಟಿ ಕಮಿಷನರ್ ಆದಿತ್ಯ ನೇಗಿಯನ್ನು ಉಲ್ಲೇಖಿಸಿ ಎಎನ್‌ಐ ವರದಿ ಮಾಡಿದೆ.

South India Rain: ತಮಿಳುನಾಡು, ಪುದುಚೇರಿಯಲ್ಲಿ ಮುಂದಿನ ಒಂದು ವಾರ ಭಾರಿ ಮಳೆಯ ಮುನ್ಸೂಚನೆ; ಈ ರಾಜ್ಯಗಳಲ್ಲಿ ಮುಂಗಾರು ದುರ್ಬಲ

ಮಹಾರಾಷ್ಟ್ರ, ಕೇರಳ ಹಾಗೂ ಆಂಧ್ರ ಪ್ರದೇಶ ಬಹುತೇಕ ಕಡೆಗಳಲ್ಲಿ ಮಳೆಯ ಕೊರತೆಯಾಗಿದೆ. ಇದು ವಿದ್ಯುತ್, ಕುಡಿಯುವ ನೀರಿನ ಮೇಲೂ ಪರಿಣಾಮ ಬೀರುತ್ತಿದೆ. ನಾಳೆ ತಮಿಳುನಾಡಿನಲ್ಲಿ ಭಾರಿ ಮಳೆಯ ಮುನ್ಸೂಚನೆ ಇದೆ.

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ