logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Fake Sbi Branch: ಇದು ಸಿನಿಮಾವನ್ನೂ ಮೀರಿಸುವ ಕಥೆ, ನಕಲಿ ಎಸ್​ಬಿಐ ಬ್ಯಾಂಕನ್ನೇ ತೆರೆದು ಮಹಾಮೋಸ

Fake SBI branch: ಇದು ಸಿನಿಮಾವನ್ನೂ ಮೀರಿಸುವ ಕಥೆ, ನಕಲಿ ಎಸ್​ಬಿಐ ಬ್ಯಾಂಕನ್ನೇ ತೆರೆದು ಮಹಾಮೋಸ

Prasanna Kumar P N HT Kannada

Oct 05, 2024 03:51 PM IST

google News

ನಕಲಿ ಎಸ್​ಬಿಐ ಬ್ಯಾಂಕನ್ನೇ ತೆರೆದು ಮಹಾಮೋಸ

    • Fake SBI branch in Chhattisgarh: ನಕಲಿ ಎಸ್​ಬಿಐ ಬ್ಯಾಂಕನ್ನೇ ತೆರೆದು ನೂರಾರು ಜನರಿಗೆ ವಂಚಿಸಿರುವ ಘಟನೆ ಛತ್ತೀಸ್‌ಗಢದ ರಾಜಧಾನಿ ರಾಯ್​ಪುರದಿಂದ ಸುಮಾರು 250 ಕಿಲೋಮೀಟರ್​​ ದೂರದಲ್ಲಿರುವ ಸಕ್ತಿ ಜಿಲ್ಲೆಯ ಛಪೋರಾ ಎಂಬ ಪ್ರಶಾಂತ ಹಳ್ಳಿಯಲ್ಲಿ ನಡೆದಿದೆ.
ನಕಲಿ ಎಸ್​ಬಿಐ ಬ್ಯಾಂಕನ್ನೇ ತೆರೆದು ಮಹಾಮೋಸ
ನಕಲಿ ಎಸ್​ಬಿಐ ಬ್ಯಾಂಕನ್ನೇ ತೆರೆದು ಮಹಾಮೋಸ

ಛತ್ತೀಸ್‌ಗಢ: ಇತ್ತೀಚೆಗೆ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿವೆ. ಬ್ಯಾಂಕ್ ವಹಿವಾಟು, ಆನ್​ಲೈನ್ ವ್ಯವಹಾರ ಸೇರಿ ಇತರ ಹಣಕಾಸು ವಂಚನೆಗಳ ವಿವಿಧ ಪ್ರಕರಣಗಳು ಪತ್ತೆಯಾಗುತ್ತಿವೆ. ಆದರೆ, ಛತ್ತೀಸ್​ಗಢದಲ್ಲಿ ನಡೆದ ಘಟನೆ ಹಿಂದೆಂದೂ ನಡೆಯದ ವಂಚನೆ ಪ್ರಕರಣಗಳಲ್ಲಿ ಒಂದಾಗಿದೆ. ಇಲ್ಲಿನ ಮೋಸದ ಕಥೆ, ಸಿನಿಮಾ ಕಥೆಯನ್ನೂ ಮೀರಿಸುವಂತಿದೆ ಎಂದರೂ ತಪ್ಪಾಗಲ್ಲ. ಹೌದು ನಕಲಿ ಎಸ್​ಬಿಐ ಬ್ಯಾಂಕನ್ನೇ ತೆರೆದು ನೂರಾರು ಜನರಿಗೆ ವಂಚಿಸಿರುವ ಘಟನೆ ರಾಜ್ಯದ ರಾಜಧಾನಿ ರಾಯ್​ಪುರದಿಂದ ಸುಮಾರು 250 ಕಿಲೋಮೀಟರ್​​ ದೂರದಲ್ಲಿರುವ ಸಕ್ತಿ ಜಿಲ್ಲೆಯ ಛಪೋರಾ ಎಂಬ ಪ್ರಶಾಂತ ಹಳ್ಳಿಯಲ್ಲಿ ನಡೆದಿದೆ.

ಇದು ದೇಶದ ಅತಿ ದೊಡ್ಡ ಬ್ಯಾಂಕಿಂಗ್ ವಂಚನೆ ಪ್ರಕರಣ ಎಂದು ಹೇಳಲಾಗುತ್ತಿದೆ. ದೇಶದ ಅತಿ ದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ತೆರೆದ ಆರು ಅಪರಿಚಿತ ವ್ಯಕ್ತಿಗಳು, ಹಳ್ಳಿಯ ಜನರನ್ನು ನಂಬಿಸಿದ್ದರು. ನಿಖರವಾದ ಯೋಜನೆಯೊಂದಿಗೆ ನಕಲಿ ಬ್ಯಾಂಕ್ ತೆರೆದು ಗ್ರಾಮಸ್ಥರನ್ನು ನಂಬಿಸಲು ಅತ್ಯುತ್ತಮ ಸೆಟಪ್‌ ಮಾಡಿಕೊಂಡಿದ್ದರು. ಕೇವಲ 10 ದಿನಗಳ ಹಿಂದೆ ಪ್ರಾರಂಭವಾದ ಎಸ್​ಬಿಐ ಶಾಖೆಯು ನೈಜ ಬ್ಯಾಂಕ್‌ನ ಎಲ್ಲಾ ಅಂಶಗಳನ್ನು ಒಳಗೊಂಡಿತ್ತು. ಹೊಸ ಪೀಠೋಪಕರಣಗಳು, ವೃತ್ತಿಪರ ಪೇಪರ್‌ಗಳು, ಕಾರ್ಯನಿರ್ವಹಿಸುವ ಬ್ಯಾಂಕ್ ಕೌಂಟರ್ಸ್, ಬೋರ್ಡ್​ಗಳು... ಹೀಗೆ ಎಲ್ಲವೂ ನೈಜವಾಗಿದ್ದವು. ಗ್ರಾಮಸ್ಥರನ್ನು ನಂಬಿಸಲು ಏನೆಲ್ಲಾ ಮಾಡಬೇಕೋ ಅದೆಲ್ಲವನ್ನೂ ಮಾಡಿದ್ದರು. ಜನರು ಕೂಡ ನಂಬಿದ್ದರು.

ಎಲ್ಲವೂ ಒರಿಜಿನಲ್​ ಆಗಿಯೇ ರೆಡಿ ಮಾಡಿಸಿದ್ದ

ನಡೆಯುತ್ತಿರುವ ಹಗರಣದ ಅರಿವಿಲ್ಲದ ಗ್ರಾಮಸ್ಥರು ಖಾತೆ ತೆರೆಯಲು, ವಹಿವಾಟು ನಡೆಸಲು 'ಬ್ಯಾಂಕ್'ಗೆ ಭೇಟಿ ನೀಡಲು ಪ್ರಾರಂಭಿಸಿದರು. ಹೊಸದಾಗಿ ನೇಮಕಗೊಂಡ ಉದ್ಯೋಗಿಗಳು ಪ್ರತಿಷ್ಠಿತ ಬ್ಯಾಂಕ್‌ನಲ್ಲಿ ಉದ್ಯೋಗ ಪಡೆದಿದ್ದಕ್ಕೆ ಫುಲ್ ಖುಷ್ ಆದರು. ಎಲ್ಲವೂ ಒರಿಜಿನಲ್ ಆಗಿಯೇ ಇರುವಂತೆ ಆಫರ್ ಲೆಟರ್ಸ್, ಮ್ಯಾನೇಜರ್ಸ್​, ಮಾರ್ಕೆಟಿಂಗ್ ಅಧಿಕಾರಿಗಳು, ಕ್ಯಾಷಿಯರ್ಸ್​ ಮತ್ತು ಕಂಪ್ಯೂಟರ್ ಆಪರೇಟರ್​ಗಳನ್ನು ನೇಮಕ ಮಾಡಿಕೊಂಡಿದ್ದ. ವಂಚಕನು ಎಲ್ಲಾ ಉದ್ಯೋಗಿಗಳಿಗೆ ತರಬೇತಿ ಕೂಡ ನೀಡಿದ್ದ. ಆದರೆ ಈ ಉದ್ಯೋಗಿಗಳು ಉದ್ಯೋಗ ಪಡೆಯಲು 2 ಲಕ್ಷದಿಂದ 6 ಲಕ್ಷ ರೂಪಾಯಿ ಪಾವತಿಸಿದ್ದರು ಎಂಬುದು ಮತ್ತೊಂದು ಅಚ್ಚರಿ ಸಂಗತಿ.

ಆದರೆ, ಅಜಯ್ ಕುಮಾರ್ ಅಗರ್ವಾಲ್ ಎಂಬ ಸ್ಥಳೀಯ ಗ್ರಾಮಸ್ಥರು ಛಪೋರಾದಲ್ಲಿ ಎಸ್‌ಬಿಐ ಕಿಯೋಸ್ಕ್‌ಗಾಗಿ ಅರ್ಜಿ ಸಲ್ಲಿಸಿದ್ದರು. ರಾತ್ರೋರಾತ್ರಿ ಇದ್ದಕ್ಕಿದ್ದಂತೆ ಎಸ್‌ಬಿಐ ಶಾಖೆಯೊಂದು ತೆರೆದಿದ್ದೇಗೆ? ಏಕೆಂದರೆ ಕಾನೂನುಬದ್ಧ ಶಾಖೆ ದಾಬ್ರಾದಲ್ಲಿದ್ದರೂ ಇದ್ದಕ್ಕಿದ್ದಂತೆ ಬ್ರಾಂಚ್ ಓಪನ್ ಮಾಡಿದ್ದೇಗೆ ಎಂಬ ಅನುಮಾನ ಎಂದು ವ್ಯಕ್ತಪಡಿಸಿದ್ದರು. ಅಲ್ಲದೆ, ಅಜಯ್ ಬ್ಯಾಂಕ್ ಉದ್ಯೋಗಿಗಳನ್ನು ವಿಚಾರಿಸಿದ್ದರು. ಆದರೆ ಅವರಿಂದ ತೃಪ್ತಿದಾಯಕ ಉತ್ತರಗಳು ಬರಲಿಲ್ಲ. ಸೈನ್‌ಬೋರ್ಡ್‌ನಲ್ಲಿ ಯಾವುದೇ ಶಾಖೆಯ ಕೋಡ್ ಪಟ್ಟಿ ಮಾಡಿರಲಿಲ್ಲ. ಗ್ರಾಮದ ನಿವಾಸಿ ತೋಷ್ ಚಂದ್ರ ಎಂಬುವರಿಗೆ ಸೇರಿದ ಬಾಡಿಗೆ ಕಾಂಪ್ಲೆಕ್ಸ್​​ನಲ್ಲಿ ನಕಲಿ ಎಸ್​ಬಿಐ ಶಾಖೆಯನ್ನು ಸ್ಥಾಪಿಸಲಾಗಿತ್ತು.

30 ಸಾವಿರ ಸಂಬಳ ನೀಡುವ ಭರವಸೆ ನೀಡಿದ್ರು

ಆ ಜಾಗದ ಬಾಡಿಗೆ ತಿಂಗಳಿಗೆ 7,000 ಸಾವಿರ ರೂಪಾಯಿ ಇತ್ತು. ವಿವಿಧ ಜಿಲ್ಲೆಗಳ ನಿರುದ್ಯೋಗಿ ಯುವಕರನ್ನೇ ಈತ ಗುರಿಯಾಗಿಸಿಕೊಂಡಿದ್ದ. ಉದ್ಯೋಗಿಯಾಗಿ ನೇಮಕಗೊಂಡಿದ್ದ ಜ್ಯೋತಿ ಯಾದವ್ ಎಂಬವರು, 'ನಾನು ನನ್ನ ದಾಖಲೆಗಳನ್ನು ಸಲ್ಲಿಸಿದೆ. ಬಯೋಮೆಟ್ರಿಕ್ಸ್ ಪೂರ್ಣಗೊಳಿಸಿ ನನ್ನ ಕೆಲಸಕ್ಕೆ ಸೇರಿದ್ದನ್ನು ಖಚಿತಪಡಿಸಿದ್ದರು. ಇನ್ನೋರ್ವ ಸಂತ್ರಸ್ತೆ ಸಂಗೀತಾ ಕನ್ವರ್ ಎಂಬವರು ಮಾತನಾಡಿ, ‘ನನಗೆ 5 ಲಕ್ಷ ರೂಪಾಯಿ ಕೇಳಲಾಗಿತ್ತು. ಆದರೆ ಅಷ್ಟು ಪಾವತಿಸಲು ಸಾಧ್ಯವಿರಲಿಲ್ಲ ಎಂದು ಅವರಿಗೆ ಹೇಳಿದ್ದೆ. ಅಂತಿಮವಾಗಿ 2.5 ಲಕ್ಷ ರೂಪಾಯಿ ಹೊಂದಿಸಿದ್ದೆವು. ನನಗೆ 30,000 ರೂಪಾಯಿ ಸಂಬಳ ನೀಡುವುದಾಗಿ ಭರವಸೆ ನೀಡಲಾಯಿತು’ ಎಂದರು.

ಗ್ರಾಮಸ್ಥರು ಹೊಸ ಶಾಖೆ ತೆರೆದ ಕಾರಣ ಉತ್ಸುಕರಾಗಿದ್ದರು. ಬ್ಯಾಂಕ್ ಸಂಪೂರ್ಣವಾಗಿ ಕಾರ್ಯಾರಂಭ ನಂತರ ಉತ್ತಮ ವಹಿವಾಟು ನಡೆಯಿತು. ಸಾಲವನ್ನು ತೆಗೆದುಕೊಳ್ಳುವ ಬಗ್ಗೆ ಯೋಚಿಸಿದ್ದರು. ಹಲವರು ಚಿನ್ನಾಭರಣ ಅಡಮಾನವಿಟ್ಟು ಸಾಲ ಪಡೆದರು. ನಿರುದ್ಯೋಗಿ ಸಂತ್ರಸ್ತರು ಈಗ ಆರ್ಥಿಕ ನಷ್ಟದ ಜೊತೆಗೆ ಕಾನೂನು ತೊಂದರೆಗಳನ್ನೂ ಎದುರಿಸುತ್ತಿದ್ದಾರೆ ಎಂದು ಸ್ಥಳೀಯ ಅಂಗಡಿ ಮಾಲೀಕ ಯೋಗೇಶ್ ಸಾಹು ಹೇಳಿದ್ದಾರೆ. ಅಜಯ್‌ ಅವರ ಅನುಮಾನ ಮತ್ತು ನಂತರ ದಾಬ್ರಾ ಬ್ರಾಂಚ್ ಮ್ಯಾನೇಜರ್‌ಗೆ ನೀಡಿದ ವರದಿಯು ಈ ಸಂಕೀರ್ಣ ಹಗರಣವನ್ನು ಬಿಚ್ಚಿಡಲು ಕಾರಣವಾಯಿತು.

ಪೊಲೀಸರು ಹೇಳಿದ್ದೇನು?

ಛಪೋರಾದಲ್ಲಿ ಕಾರ್ಯಾಚರಿಸುತ್ತಿರುವ ನಕಲಿ ಬ್ಯಾಂಕ್ ಬಗ್ಗೆ ಡಾಬ್ರಾ ಶಾಖೆಯ ಮ್ಯಾನೇಜರ್ ಅನುಮಾನ ವ್ಯಕ್ತಪಡಿಸಿ ದೂರು ನೀಡಿದ್ದರು. ಆದರೆ ತನಿಖೆಯ ನಂತರ, ಬ್ಯಾಂಕ್ ನಕಲಿ ಎಂದು ದೃಢಪಟ್ಟಿತು. ಉದ್ಯೋಗಿಗಳನ್ನು ನಕಲಿ ದಾಖಲೆಗಳೊಂದಿಗೆ ನೇಮಿಸಲಾಗಿತ್ತು ಎಂದು ಹಿರಿಯ ಪೊಲೀಸ್ ಅಧಿಕಾರಿ ರಾಜೇಶ್ ಪಟೇಲ್ ಹೇಳಿದ್ದಾರೆ. ಇಲ್ಲಿ ನೂರಾರು ಜನರ ಕೋಟಿ ಕೋಟಿ ರೂಪಾಯಿ ವಂಚನೆಯಾಗಿದೆ. ನಕಲಿ ಎಸ್‌ಬಿಐ ಶಾಖೆಯ ಮ್ಯಾನೇಜರ್ ರೇಖಾ ಸಾಹು, ಮಂದಿರ್ ದಾಸ್ ಮತ್ತು ಪಂಕಜ್ ಸೇರಿದಂತೆ ಹಗರಣದಲ್ಲಿ ಭಾಗಿಯಾದವರ ನಾಲ್ವರನ್ನು ಈವರೆಗೆ ಗುರುತಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ