Gold Rate Today: ವರ ಮಹಾಲಕ್ಷ್ಮಿ ಹಬ್ಬದ ಹಿಂದಿನ ದಿನ ಚಿನ್ನ ಖರೀದಿಸುವಿರಾ, ಕರ್ನಾಟಕದಲ್ಲಿ ಮತ್ತೆ ದುಬಾರಿಯಾದ ಬಂಗಾರ
Aug 24, 2023 06:00 AM IST
ಕರ್ನಾಟಕದಲ್ಲಿ ಮತ್ತೆ ದುಬಾರಿಯಾದ ಬಂಗಾರ
- Gold Rate Today: ಶುಕ್ರವಾರ ವರಮಹಾಲಕ್ಷ್ಮಿ ಹಬ್ಬ. ಲಕ್ಷ್ಮೀ ದೇವಿಯ ಈ ಹಬ್ಬದ ಸಮಯದಲ್ಲಿ ಚಿನ್ನ ಅಥವಾ ಬೆಳ್ಳಿ ಖರೀದಿಸಲು ಬಯಸುವವರಿಗೆ ತುಸು ನಿರಾಶೆಯಾದೀತು. ಗುರುವಾರ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳ ಪ್ರಮುಖ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿ ದರ ಏರಿಕೆ ಕಂಡಿದೆ.
ಬೆಂಗಳೂರು: ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಶುಕ್ರವಾರ ವರಮಹಾಲಕ್ಷ್ಮೀ ವ್ರತ. ಹಬ್ಬದ ಸಮಯದಲ್ಲಿ ಮನೆಯಲ್ಲಿ ಸಮೃದ್ಧಿ, ಐಶ್ವರ್ಯ ಹೆಚ್ಚಾಗಲಿ ಎಂದು ಗುರುವಾರ ಅಂದರೆ ಇಂದು ಚಿನಿವಾರ ಪೇಟೆಗೆ ಹೋಗುವವರಿಗೆ ಕೆಲವು ನೂರು ರೂಪಾಯಿ ನಷ್ಟವಾಗಬಹುದು. ಕಳೆದ ಒಂದೆರಡು ಮೂರು ದಿನಗಳಲ್ಲಿಂದ ಚಿನಿವಾರ ಪೇಟೆಯಲ್ಲಿ ಚಿನ್ನದ ದರ ಏರಿಕೆ ಕಾಣುತ್ತಿದೆ. ನಿನ್ನೆ ಚಿನ್ನ ಗ್ರಾಂಗೆ ಐದು ರೂಪಾಯಿ ಏರಿಕೆ ಕಂಡಿತ್ತು. ಇಂದು ಗ್ರಾಂಗೆ ಹತ್ತು ರೂಪಾಯಿ ಏರಿಕೆ ಕಂಡಿದೆ. ದೊಡ್ಡ ಮಟ್ಟದಲ್ಲಿ ಚಿನ್ನ ಖರೀದಿಸುವವರಿಗೆ ಇಂದು ಕೆಲವು ನೂರು ರೂಪಾಯಿ ನಷ್ಟವಾಗಬಹುದು. ಹಬ್ಬದ ಋತು ದೀಪಾವಳಿವರೆಗೆ ಇರುವುದರಿಂದ ಮುಂದಿನ ದಿನಗಳಲ್ಲಿಯೂ ಚಿನ್ನ ಮತ್ತು ಬೆಳ್ಳಿ ದರ ಏರಿಕೆ ಕಾಣುವ ಸಾಧ್ಯತೆಯಿದೆ.
22 ಕ್ಯಾರೆಟ್ ಚಿನ್ನದ ದರ
ವರಮಹಾಲಕ್ಷ್ಮಿ ಹಿಂದಿನ ದಿನ 22 ಕ್ಯಾರೆಟ್ ಚಿನ್ನ ಖರೀದಿಸಲು ಅಥವಾ ಇನ್ನಿತರ ಅವಶ್ಯಕತೆಗಳಿಗೆ, ಹೂಡಿಕೆಯ ದೃಷ್ಟಿಯಿಂದ ಚಿನ್ನಾಭರಣ ಖರೀದಿಸಲು ಬಯಸಿದರೆ ದರ ಈ ಮುಂದಿನಂತೆ ಇರುತ್ತದೆ. ಇಂದು ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ ದರ 5,430 ರೂ ಇದೆ. ನಿನ್ನೆಯ 5,420 ರೂ ದರಕ್ಕೆ ಹೋಲಿಸಿದರೆ 10 ರೂಪಾಯಿಯಷ್ಟು ದರ ಹೆಚ್ಚಾಗಿದೆ. ಇಂದು 8 ಗ್ರಾಂ ಚಿನ್ನದ ಬೆಲೆ 43,440 ರೂಪಾಯಿ ಇದೆ. ನಿನ್ನೆ 43,360 ರೂ., ಇತ್ತು. ನಿನ್ನೆಗೆ ಹೋಲಿಸಿದರೆ ಇಂದು ಚಿನ್ನದ ದರ 80 ರೂ. ಏರಿಕೆಯಾಗಿದೆ. ಕರ್ನಾಟಕದ ವಿವಿಧ ನಗರಗಳಲ್ಲಿ ಇಂದು ಹತ್ತು ಗ್ರಾಂ ಚಿನ್ನದ ದರ 54,300 ರೂ. ಇದೆ. ನಿನ್ನೆಯ 54,200 ರೂ. ಗೆ ಹೋಲಿಸಿದರೆ 100 ರೂ. ಏರಿಕೆ ಕಂಡಿದೆ. ನೂರು ಗ್ರಾಂ ಚಿನ್ನ ಖರೀದಿಸುವುದಾದರೆ ಇಂದು 5,43,000 ರೂ. ನೀಡಬೇಕು. ನಿನ್ನೆಯ 5,42,000 ರೂ.ಗೆ ಹೋಲಿಸಿದರೆ 1000 ರೂಪಾಯಿ ಏರಿಕೆಯಾಗಿದೆ.
ಅಪರಂಜಿ ಚಿನ್ನದ ದರ ಎಷ್ಟಿದೆ?
ವರಮಹಾಲಕ್ಷ್ಮಿ ಹಬ್ಬಕ್ಕೆ ಅಪರಂಜಿ ಚಿನ್ನವೇ ಬೇಕು ಎಂದು ಇಂದು ನೀವು ಚಿನಿವಾರ ಪೇಟೆಗೆ ಹೋದರೆ ನಿನ್ನೆಗೆ ಹೋಲಿಸಿದರೆ ಹತ್ತು ರೂಪಾಯಿ ಹೆಚ್ಚು ನೀಡಬೇಕು. ಇಂದು ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ದರ 5,923 ರೂ. ಇದೆ. ನಿನ್ನೆಯ 5,913 ರೂ.ಗೆ ಹೋಲಿಸಿದರೆ 10 ರೂ. ಏರಿಕೆಯಾಗಿದೆ. ನೀವು 8 ಗ್ರಾಂ ಚಿನ್ನ ಖರೀದಿಸುವುದಾದರೆ ಇಂದು 47,384 ರೂ. ನೀಡಬೇಕಾಗುತ್ತದೆ. ನಿನ್ನೆ 47,304 ರೂ. ಇತ್ತು. ನಿನ್ನೆಗೆ ಹೋಲಿಸಿದರೆ ಇಂದು 80 ರೂಪಾಯಿ ಏರಿಕೆಯಾಗಿದೆ. ಹತ್ತು ಗ್ರಾಂ ಚಿನ್ನದ ದರ ಇಂದು 59,230 ರೂ. ಇದೆ. ನಿನ್ನೆಯ 59,130 ರೂ. ಗೆ ಹೋಲಿಸಿದರೆ 100 ರೂ. ಏರಿಕೆಯಾಗಿದೆ. ನೂರು ಗ್ರಾಂ ಚಿನ್ನ ಖರೀದಿಸುವುದಾದರೆ ಇಂದು 5,92,300 ರೂ. ನೀಡಬೇಕು. ಮಂಗಳವಾರದ 5,91,300 ರೂ.ಗೆ ಹೋಲಿಸಿದರೆ ಬುಧವಾರ 1000 ರೂ. ಏರಿಕೆಯಾಗಿದೆ.
ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ದರ
ಗುರುವಾರದ ಬೆಳಗ್ಗಿನ ಧಾರಣೆಯಂತೆ 10 ಗ್ರಾಂ 22 ಕ್ಯಾರೆಟ್ ಚಿನ್ನದ ದರ ಬೆಂಗಳೂರಿನಲ್ಲಿ 54,300 ರೂ. ಇದೆ. ಮಂಗಳೂರು 54,300 ರೂ., ಮೈಸೂರಿನಲ್ಲಿ 54,300 ರೂ. ಇದೆ. ಸಾಮಾನ್ಯವಾಗಿ ರಾಜ್ಯದ ಬಹುತೇಕ ನಗರಗಳಲ್ಲಿ ಇಂದು ಇದೇ ದರ ಇರುತ್ತದೆ. ಮಜೂರಿ, ಇತರೆ ಶುಲ್ಕ ಇತ್ಯಾದಿಗಳಿಂದ ಚಿನ್ನದಂಗಡಿಯಿಂದ ಚಿನ್ನದಂಗಡಿಗೆ ದರ ವ್ಯತ್ಯಾಸ ಇರಬಹುದು. ಚೆನ್ನೈನಲ್ಲಿ 54,660 ರೂ., ಮುಂಬೈನಲ್ಲಿ 54,300 ರೂ., ದೆಹಲಿಯಲ್ಲಿ 54,450 ರೂ., ಕೋಲ್ಕತಾದಲ್ಲಿ 54,300 ರೂ., ಹೈದರಾಬಾದ್ 54,300 ರೂ., ಕೇರಳ 54,300 ರೂ., ಪುಣೆ 54,300 ರೂ., ಅಹಮದಾಬಾದ್ 54,350 ರೂ., ಜೈಪುರ 54,450 ರೂ., ಲಖನೌ 54,450 ರೂ., ಕೊಯಮುತ್ತೂರು 54,660 ರೂ., ಮಧುರೈ 54,660 ರೂ. ಹಾಗೂ ವಿಜಯವಾಡ 54,300 ರೂ., ಇದೆ.
ಪ್ರಮುಖ ನಗರಗಳಲ್ಲಿ ಅಪರಂಜಿ ಚಿನ್ನದ ದರ
10 ಗ್ರಾಂ 24 ಕ್ಯಾರೆಟ್ ಚಿನ್ನದ ದರ ಬೆಂಗಳೂರಿನಲ್ಲಿ 59,230 ರೂ. ಇದೆ. ಮಂಗಳೂರು, ಮೈಸೂರು, ದಾವಣಗೆರೆ, ಬಳ್ಳಾರಿ ಸೇರಿದಂತೆ ರಾಜ್ಯದ ವಿವಿಧ ನಗರಗಳಲ್ಲಿಯೂ ಇದೇ ದರ ಇದೆ. ಚೆನ್ನೈನಲ್ಲಿ 59,630 ರೂ., ಮುಂಬೈನಲ್ಲಿ 59,230 ರೂ., ದೆಹಲಿಯಲ್ಲಿ 59,400 ರೂ., ಕೋಲ್ಕತಾದಲ್ಲಿ 59,230 ರೂ., ಹೈದರಾಬಾದ್ 59,230 ರೂ., ಕೇರಳ 59,230 ರೂ., ಪುಣೆ 59,230 ರೂ., ಅಹಮದಾಬಾದ್ 59,280 ರೂ., ಜೈಪುರ 59,400 ರೂ., ಲಖನೌ 59,400 ರೂ., ಕೊಯಮುತ್ತೂರು 59,630 ರೂ., ಮದುರೈ 59,630, ವಿಜಯವಾಡ 59,130 ರೂ. ಇದೆ.
ಬೆಳ್ಳಿ ದರ ಎಷ್ಟು?
ಚಿನಿವಾರ ಪೇಟೆಯ ಅಪ್‌ಡೇಟ್ ಪ್ರಕಾರ ಬುಧವಾರದ ಬೆಳ್ಳಿ ದರ ಏರಿಕೆ ಕಂಡಿದೆ. ಒಂದು ಗ್ರಾಂ ಬೆಳ್ಳಿಗೆ 74.50 ರೂ., 8 ಗ್ರಾಂ ಬೆಳ್ಳಿಗೆ 596 ರೂ., 10 ಗ್ರಾಂ ಬೆಳ್ಳಿ ದರ 745 ರೂ., 100 ಗ್ರಾಂ ಬೆಳ್ಳಿಗೆ 7,450 ಮತ್ತು 1 ಕೆ.ಜಿ. ಬೆಳ್ಳಿ ದರ 74,500 ರೂಪಾಯಿ ಇದೆ.
ಹಬ್ಬದ ಅವಧಿಯಲ್ಲಿ ಚಿನ್ನಾಭರಣ ಖರೀದಿಸುವವರಿಗೆ ಕೆಲವು ನೂರು ರೂಪಾಯಿ ಏರಿಕೆಯ ಪರಿಣಾಮ ಉಂಟಾಗಲಿದೆ. ಚಿನ್ನವು ವರ್ಷದಿಂದ ವರ್ಷಕ್ಕೆ ಏರಿಕೆ ಕಾಣುತ್ತಿರುವುದರಿಂದ ಹಣದುಬ್ಬರ ಕಾಲದಲ್ಲಿ ಹೂಡಿಕೆಗೆ ಅತ್ಯುತ್ತಮವಾಗಿದೆ. ಹೀಗಾಗಿ, ಚಿನ್ನಾಭರಣ ಖರೀದಿಸಿದರೆ ನಷ್ಟವಿಲ್ಲ.