Indian Railways: ಬುಕ್ಕಿಂಗ್, ಪ್ರಯಾಣದ ವೇಳೆ ರೈಲ್ವೆ ನಿಲ್ದಾಣಗಳ ಮಾಹಿತಿ ಗೊಂದಲ; ನಿಖರ ಮಾಹಿತಿಗೆ ಹೊಸ ವಿಧಾನ ರೂಪಿಸಿದ ರೈಲ್ವೆ ಇಲಾಖೆ
Jul 21, 2023 11:53 AM IST
ರೈಲ್ವೆ ನಿಲ್ದಾಣಗಳ ನಿಖರ ಮಾಹಿತಿಗೆ ಭಾರತೀಯ ರೈಲ್ವೆ ಮಾಹಿತಿ ನಿರ್ವಹಣಾ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಿದೆ.
- ನೀವು ಆನ್‌ಲೈನ್‌ನಲ್ಲೇ ಬುಕ್ಕಿಂಗ್ ಮಾಡುವಾಗ ಕೆಲವೊಂದು ರೈಲ್ವೆ ನಿಲ್ದಾಣಗಳ ಕೋಡ್ ಸಿಗದೇ ಇನ್ನಾವುದೋ ನಿಲ್ದಾಣಕ್ಕೆ ಬುಕ್ ಮಾಡಿ ತೊಂದರೆ ಅನುಭವಿಸಿದ್ದೂ ಇದೆ. ಇಂತಹ ಗೊಂದಲಗಳನ್ನು ತಪ್ಪಿಸಲೆಂದೇ ಭಾರತೀಯ ರೈಲ್ವೆ(INDIAN RAILWAYS ) ತನ್ನ ಮಾಹಿತಿ ನಿರ್ವಹಣಾ ವ್ಯವಸ್ಥೆಯಲ್ಲಿ( Management Information System) ಮಹತ್ವದ ಬದಲಾವಣೆ ತಂದಿದೆ.
ಬೆಂಗಳೂರು: ಭಾರತೀಯ ರೈಲ್ವೆ ಪ್ರಯಾಣಿಕರಿಗಾಗಿ ಜನಪ್ರಿಯ ಪ್ರದೇಶದ ಹೆಸರುಗಳನ್ನು ನಿಲ್ದಾಣದೊಂದಿಗೆ ಜೋಡಿಸುವ ಹೊಸ ವಿಧಾನವನ್ನು ಆರಂಭಿಸಿದ್ದು, ಶುಕ್ರವಾರದಿಂದಲೇ ಜಾರಿಗೆ ಬಂದಿದೆ.
175 ಜನಪ್ರಿಯ ನಗರ/ಪ್ರದೇಶಗಳನ್ನು 725 ನಿಲ್ದಾಣಗಳೊಂದಿಗೆ ಲಿಂಕ್ ಮಾಡಲಾಗಿದೆ,. ದೆಹಲಿ, ಮುಂಬೈ, ಅಹಮದಾಬಾದ್ ಸೇರಿದಂತೆ ದೇಶದ ಪ್ರಮುಖ ರೈಲ್ವೆ ನಿಲ್ದಾಣಗಳಿಗೆ ಹೊಂದಿಕೊಂಡಿರುವ ಸೆಟಲೈಟ್ ನಗರಗಳ ಮಾಹಿತಿ ಸುಲಭವಾಗಿ ಸಿಗಲಿದೆ. ಪ್ರಯಾಣಿಸುವ ಪ್ರವಾಸಿಗರಿಗಂತೂ ನಿಲ್ದಾಣದ ಹುಡುಕಾಟ ಸುಲಭವಾಗಲಿದೆ.
ನೀವು ರೈಲ್ವೆ ಮುಂಗಡ ಬುಕ್ಕಿಂಗ್ ಮಾಡುವಾಗ ನಿಲ್ದಾಣಗಳ ಕೋಡ್ ಗುರುತಿಸಲು ಇನ್ನಿಲ್ಲದ ಹರಸಾಹಸ ಮಾಡಬೇಕಿತ್ತು. ಆನ್‌ಲೈನ್‌ನಲ್ಲೇ ಬುಕ್ಕಿಂಗ್ ಮಾಡುವಾಗ ಕೆಲವೊಂದು ರೈಲ್ವೆ ನಿಲ್ದಾಣಗಳ ಕೋಡ್ ಸಿಗದೇ ಇನ್ನಾವುದೋ ನಿಲ್ದಾಣಕ್ಕೆ ಬುಕ್ ಮಾಡಿ ತೊಂದರೆ ಅನುಭವಿಸಿದ್ದೂ ಇದೆ. ಅಲ್ಲದೇ ಪ್ರಯಾಣಿಸುವಾಗಲೂ ಯಾವುದೇ ನಿಲ್ದಾಣ ಮಾಹಿತಿ ಪಡೆಯಲು ಸುಲಭವಿರಲಿಲ್ಲ. ಕೋಡ್ ಕಿರಿಕಿರಿ ಉಂಟಾಗುತ್ತಿತ್ತು. ಇಂತಹ ಗೊಂದಲಗಳನ್ನು ತಪ್ಪಿಸಲೆಂದೇ ಭಾರತೀಯ ರೈಲ್ವೆ(INDIAN RAILWAYS ) ತನ್ನ ಮಾಹಿತಿ ನಿರ್ವಹಣಾ ವ್ಯವಸ್ಥೆಯಲ್ಲಿ( Management Information System) ಮಹತ್ವದ ಬದಲಾವಣೆ ತಂದಿದೆ.
ಕೆಲವೊಂದು ಸಣ್ಣ ನಿಲ್ದಾಣಗಳು ಜನಪ್ರಿಯ ನಗರ ಮತ್ತು ಪ್ರದೇಶಗಳೊಂದಿಗೆ ಸಂಪರ್ಕ ಹೊಂದಿವೆ. ಕೆಲವೊಂದು ಜನಪ್ರಿಯ ಹೆಸರಿನ ರೈಲು ನಿಲ್ದಾಣದ ಹೆಸರುಗಳಿಗಿಂತ ಭಿನ್ನವಾಗಿರುತ್ತವೆ. ಆದರೆ, ಪ್ರಯಾಣದಲ್ಲಿರುವವರಿಗೆ ಇದರಿಂದ ಗೊಂದಲ ಉಂಟಾಗಲಿದ್ದು, ಈಗ ಲಿಂಕ್ ಮಾಡುವುದರಿಂದ ಅವರಿಗೆ ಊರು/ ನಿಲ್ದಾಣದ ನಿಖರ ಮಾಹಿತಿ ಪಡೆಯಲು ಸುಲಭವಾಗಲಿದೆ.
ಈ ಹೊಸ ತಂತ್ರಜ್ಞಾನದ ಅಪ್ಲಿಕೇಶನ್ ಬದಲಾವಣೆ ಮಾಡಲಾಗಿದೆ. ಈ ಬದಲಾವಣೆಗಳಿಂದ ಇ-ಟಿಕೆಟ್ ಬುಕಿಂಗ್ ವೆಬ್‌ಸೈಟ್‌ನಲ್ಲಿ ನಿಲ್ದಾಣದ ಹುಡುಕಾಟ ಸುಲಭವಾಗಲಿದೆ. ಎಲ್ಲಾ ಮಾಹಿತಿಗಳು ಎಲೆಕ್ಟ್ರಾನಿಕ್ ರಿಸರ್ವೇಶನ್ ಸ್ಲಿಪ್‌ನಲ್ಲಿ ಪ್ರದರ್ಶಿಸುವುದರಿಂದ ಗೊಂದಲವೂ ಆಗುವುದಿಲ್ಲ ಎನ್ನುವುದು ರೈಲ್ವೆ ಅಧಿಕಾರಿಗಳ ವಿವರಣೆ.
ಯೋಜನೆ ಸ್ವರೂಪ ಹೀಗಿದೆ
ಈ ಹೊಸ ವಿಧಾನವು ಪ್ರಯಾಣಿಕರಿಗೆ ಒಳ್ಳೆಯ ಯೋಜನೆ ಮತ್ತು ವೆಬ್‌ಸೈಟ್ ಮತ್ತು ಮೊಬೈಲ್ ಅಪ್ಲಿಕೇಶನ್‌ನಗಳಲ್ಲಿ ಟಿಕೆಟ್ ಬುಕಿಂಗ್ ಮಾಡುವ ಸಂದರ್ಭದಲ್ಲಿ ಸುಲಭವಾಗಿ ಗುರುತಿಸಲು ಸಹಾಯವಾಗಲಿದ್ದು, ಇದರಿಂದ ಪ್ರವಾಸಿಗರಿಗೆ ನಿಲ್ದಾಣಗಳನ್ನು ಹುಡುಕುವುದು ಹಾಗೂ ಉಪನಾಮವಿರುವ ನಗರಗಳನ್ನು ಸಂಪರ್ಕಿಸುವ ರೈಲು ನಿಲ್ದಾಣಗಳಿಗೆ ಲಿಂಕ್ ಮಾಡುವುದು ಮತ್ತಷ್ಟು ಸುಲಭವಾಗಲಿದ್ದು, ಶುಕ್ರವಾರದಿಂದಲೇ ಲಭ್ಯವಾಗಲಿದೆ.
ಭಾರತೀಯ ರೈಲ್ವೆ ಪ್ರಯಾಣಿಕರಿಗಾಗಿ ಜನಪ್ರಿಯ ಪ್ರದೇಶದ ಹೆಸರುಗಳ ನಿಲ್ದಾಣದೊಂದಿಗೆ ಜೋಡಿಸುವ ಹೊಸ ವಿಧಾನವನ್ನು ಶುಕ್ರವಾರದಿಂದಲೇ ಜಾರಿಗೆ ತಂದಿದೆ. ಇದರಿಂದ ಜನಪ್ರಿಯ ಪ್ರದೇಶ/ನಗರಗಳೊಂದಿಗೆ ಸಣ್ಣ ನಿಲ್ದಾಣಗಳನ್ನು ಗುರುತಿಸುವುದು ಈಗ ಮತ್ತಷ್ಟು ಸುಲಭವಾಗಲಿದೆಪ್ರಯಾಣಿಕರು ಮಾತ್ರವಲ್ಲದೆ ರೈಲು ನಿಲ್ದಾಣಗಳನ್ನು ಪ್ರಯಾಣ ಬೆಳೆಸುವ ಸರಿಯಾದ ಸ್ಥಳ ಗುರುತಿಸಲು ಈ ವ್ಯವಸ್ಥೆ ಸಹಕಾರಿಯಾಗಲಿದೆ.
ಉಪಯೋಗ ಹೇಗೆ?
ಈ ಯೋಜನೆಯಿಂದ ಉಪನಗರಗಳನ್ನು ಸಂಪರ್ಕಿಸುವ ರೈಲು ನಿಲ್ದಾಣಗಳಿಗೆ ಸಹಾಯವಾಗಲಿದೆ.ಉದಾಹರಣೆಗೆ ಈಗ ನೊಯ್ಡಾದಿಂದ ನವದೆಹಲಿಗೆ ಲಿಂಕ್ ಮಾಡಿದೆ. ಮೊದಲು ನೋಯ್ಡಾ, ನವದೆಹಲಿ ಪ್ರತ್ಯೇಕ ಕೋಡ್‌ಗಳಿಂದ ಪ್ರಯಾಣಿಕರು ಗೊಂದಲ ಅನುಭವಿಸಿದ್ದೂ ಇದೆ.
ಉದಾಹರಣೆಗೆ ಸಾರನಾಥನ್ನು ಬನಾರಸ್‌ನೊಂದಿಗೆ, ಸಾಬರಮತಿಯನ್ನು ಅಹಮದಾಬಾದ್ ನಗರದೊಂದಿಗೆ, ಪನ್ವೇಲ್‌ನ್ನು ಮುಂಬೈಯೊಂದಿಗೆ ಸೇರಿಸುವ ಮೂಲಕ ಸಂಪರ್ಕಿಸಲಾಗಿದೆ.
ರೈಲು ಸಂಖ್ಯೆ 19031 (ಅಹಮದಾಬಾದ್‌ದಿಂದ ಜೈಪುರ) ರೈಲು ಈ ಮೊದಲು ನಿಗದಿತ ಅಹಮದಾಬಾದ್ ನಿಲ್ದಾಣದ ಬದಲಾಗಿ ಅಸರ್ವಾದಿಂದ ಪ್ರಾರಂಭಿಸುವ ಯೋಚಿಸಲಾಗಿದ್ದು, ಪ್ರಸ್ತುತ ಈ ಕಾರ್ಯಚಟುವಟಿಕೆಯನ್ನು ಮ್ಯಾನ್ಯುವಲ್ ಆಗಿ ಮಾಡಲಾಗಿದೆ.
ಪ್ರವಾಸಿಯ ಪ್ರಮುಖ ಸ್ಥಳಗಳಾದ ಕಾಶಿ, ಖಾತು ಶ್ಯಾಮ್, ಬದರಿನಾಥ್, ಕೇದಾರನಾಥ, ವೈಷ್ಣೋದೇವಿ ಸೇರಿದಂತೆ ಇನ್ನಿತರ ಸಮೀಪದ ನಿಲ್ದಾಣಗಳ ನಕ್ಷೆಯ ಲಿಂಕ್ ಮಾಡಲಾಗಿದೆ. ಉತ್ತಮ ಸಂಪರ್ಕ ಒದಗಿಸಲಿದೆ. ಉಪ ನಗರವನ್ನು ಸಂಪರ್ಕಿಸುವ ಪ್ರಮುಖ ರೈಲು ನಿಲ್ದಾಣಗಳಿಗೆ ಲಿಂಕ್ ಮಾಡಲಾಗಿದೆ ಎನ್ನುತ್ತಾರೆ ನೈರುತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಅನೀಶ್ ಹೆಗ್ಡೆ.