logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Savitri Jindal: ಅಂಬಾನಿ, ಅದಾನಿಗಿಂತಲೂ ಹೆಚ್ಚು ಸಂಪತ್ತು ಸೇರಿತು ಸಾವಿತ್ರಿ ಜಿಂದಾಲ್ ಖಜಾನೆಗೆ

Savitri Jindal: ಅಂಬಾನಿ, ಅದಾನಿಗಿಂತಲೂ ಹೆಚ್ಚು ಸಂಪತ್ತು ಸೇರಿತು ಸಾವಿತ್ರಿ ಜಿಂದಾಲ್ ಖಜಾನೆಗೆ

HT Kannada Desk HT Kannada

Dec 19, 2023 04:15 PM IST

google News

ಭಾರತದ ಅತಿಶ್ರೀಮಂತ ಮಹಿಳೆ ಜಿಂದಾಲ್‌ ಗ್ರೂಪ್ ಮುಖ್ಯಸ್ಥರಾದ ಸಾವಿತ್ರಿ ಜಿಂದಾಲ್‌

  • ಭಾರತದ ಅತಿಶ್ರೀಮಂತರ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿರುವ ಒಪಿ ಜಿಂದಾಲ್ ಗ್ರೂಪ್‌ ಮುಖ್ಯಸ್ಥೆ ಸಾವಿತ್ರಿ ಜಿಂದಾಲ್ ಅವರ ಸಂಪತ್ತು ಹೆಚ್ಚಳ ಪ್ರಮಾಣ ಈ ವರ್ಷ ಅಂಬಾನಿ, ಅದಾನಿಗಿಂತಲೂ ಹೆಚ್ಚಿದೆ. ಭಾರತದ ಅತಿಶ್ರೀಮಂತ ಮಹಿಳೆಯ ಸಂಪತ್ತು ಈ ವರ್ಷ 9 ಶತಕೋಟಿ ಡಾಲರ್ ವೃದ್ಧಿಯಾಗಿದೆ. ಅಂಬಾನಿ ಮತ್ತು ಅದಾನಿ ಸಂಪತ್ತು ಹೆಚ್ಚಳ ಪ್ರಮಾಣ ಎಷ್ಟು ಎಂಬ ವಿವರ ಇಲ್ಲಿದೆ.

ಭಾರತದ ಅತಿಶ್ರೀಮಂತ ಮಹಿಳೆ ಜಿಂದಾಲ್‌ ಗ್ರೂಪ್ ಮುಖ್ಯಸ್ಥರಾದ ಸಾವಿತ್ರಿ ಜಿಂದಾಲ್‌
ಭಾರತದ ಅತಿಶ್ರೀಮಂತ ಮಹಿಳೆ ಜಿಂದಾಲ್‌ ಗ್ರೂಪ್ ಮುಖ್ಯಸ್ಥರಾದ ಸಾವಿತ್ರಿ ಜಿಂದಾಲ್‌ (X)

ಭಾರತದ ಶತಕೋಟ್ಯಧಿಪತಿ ಮಹಿಳೆ ಸಾವಿತ್ರ ಜಿಂದಾಲ್‌ ಅವರು ದೇಶದ ಅತಿ ಶ್ರೀಮಂತರ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದ್ದಾರೆ. ಈ ಕ್ಯಾಲೆಂಡರ್ ವರ್ಷ ಅವರ ಸಂಪತ್ತು ಹೆಚ್ಚಳ ಪ್ರಮಾಣ ಅಂಬಾನಿ, ಅಧಾನಿ ಅವರ ಸಂಪತ್ತು ಹೆಚ್ಚಳ ಪ್ರಮಾಣಕ್ಕಿಂತ ಅಧಿಕವಾಗಿದೆ.

ಈ ಅವಧಿಯಲ್ಲಿ ಅವರ ಸಂಪತ್ತು 9.6 ಶತಕೋಟಿ ಡಾಲರ್ ಏರಿಕೆಯಾಗಿದೆ. ಇದೇ ಅವಧಿಯಲ್ಲಿ ಅಂಬಾನಿ, ಅದಾನಿ ಅವರ ಸಂಪತ್ತು ಈ ಪ್ರಮಾಣದಲ್ಲಿ ಏರಿಕೆಯಾಗಿಲ್ಲ ಎಂದು ಬ್ಲೂಮ್‌ಬರ್ಗ್ ಬಿಲಿಯನೇರ್ಸ್‌ ಇಂಡೆಕ್ಸ್ ಉಲ್ಲೇಖಿಸಿ ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ.

ಸಾವಿತ್ರಿ ಜಿಂದಾಲ್ ಅವರ ಸಂಪತ್ತು 9.6 ಶತಕೋಟಿ ಡಾಲರ್ ಏರಿಕೆಯೊಂದಿಗೆ ಒಟ್ಟು 25 ಶತಕೋಟಿ ಡಾಲರ್‌ಗೇರಿದೆ. ಇದರೊಂದಿಗೆ ಸಾವಿತ್ರಿ ಜಿಂದಾಲ್ ಅವರು ವಿಪ್ರೋ ಮುಖ್ಯಸ್ಥ ಅಜೀಂ ಪ್ರೇಮ್‌ಜಿ ಅವರನ್ನು ಅತಿಶ್ರೀಮಂತರ ಪಟ್ಟಿಯಲ್ಲಿ ಹಿಂದಿಕ್ಕಿದ್ದಾರೆ. ಅಜೀಂ ಪ್ರೇಮ್‌ಜಿ ಅವರ ಸಂಪತ್ತು ಅಂದಾಜು 24 ಶತಕೋಟಿ ಡಾಲರ್ ಇದೆ.

ಭಾರತದ ಅತಿಶ್ರೀಮಂತರ ಪಟ್ಟಿಯಲ್ಲಿ ನಂಬರ್ 1 ಸ್ಥಾನದಲ್ಲಿರುವ ಮುಕೇಶ್ ಅಂಬಾನಿ ಅವರ ಸಂಪತ್ತು ಈ ವರ್ಷ 5 ಶತಕೋಟಿ ಡಾಲರ್ ಏರಿಕೆಯಾಗಿದೆ. ಒಟ್ಟು ಸಂಪತ್ತು 92.3 ಲಕ್ಷ ಕೋಟಿ ಡಾಲರ್ ಆಗಿದೆ ಎಂದು ವರದಿ ಹೇಳಿದೆ.

ಇನ್ನು ಅಂಬಾನಿ, ಅದಾನಿ ಅವರಿಗಿಂತಲೂ ಈ ವರ್ಷ ಹೆಚ್ಚು ಸಂಪತ್ತು ಗಳಿಸಿರುವ ಸಾವಿತ್ರಿ ಜಿಂದಾಲ್ ಅವರು, ಒಪಿ ಜಿಂದಾಲ್ ಗ್ರೂಪ್‌ನ ಚೇರ್‌ಪರ್ಸನ್‌. ಹರಿಯಾಣ ಮೂಲದವರು. ಅವರ ಪತಿ ದಿವಂಗತ ಒಪಿ ಜಿಂದಾಲ್ ಅವರು ಈ ಕಂಪನಿಯನ್ನು ಹುಟ್ಟುಹಾಕಿದ್ದು. ಒಪಿ ಜಿಂದಾಲ್ ಗ್ರೂಪ್‌ನಲ್ಲಿ ಜೆಎಸ್‌ಡಬ್ಲ್ಯು ಸ್ಟೀಲ್, ಜಿಂದಾಲ್ ಸ್ಟೀಲ್‌ ಆಂಡ್ ಪವರ್, ಜೆಎಸ್‌ಡಬ್ಲ್ಯು ಎನರ್ಜಿ, ಜೆಎಸ್‌ಡಬ್ಲ್ಯು ಸಾ, ಜಿಂದಾಲ್ ಸ್ಟೈನ್‌ಲೆಸ್‌, ಜೆಎಸ್‌ಡಬ್ಲ್ಯು ಹೋಲ್ಡಿಂಗ್ಸ್‌ ಮುಂತಾದ ಕಂಪನಿಗಳಿವೆ. ಸಾವಿತ್ರಿ ಜಿಂದಾಲ್ ಅವರಿಗೆ ಸಜ್ಜನ್ ಜಿಂದಾಲ್ ಸೇರಿ ನಾಲ್ವರು ಪುತ್ರರು.

ಇನ್ನುಳಿದಂತೆ, ಎಚ್‌ಸಿಎಲ್‌ನ ಶಿವ ನಾಡಾರ್ ಅವರ ಎರಡನೇ ಸ್ಥಾನದಲ್ಲಿದ್ದು, ಈ ಕ್ಯಾಲೆಂಡರ್ ವರ್ಷದಲ್ಲಿ 8 ಶತಕೋಟಿ ಡಾಲರ್ ಸಂಪತ್ತು ಹೆಚ್ಚಿಸಿಕೊಂಡಿದ್ದಾರೆ. ಡಿಎಲ್‌ಎಫ್‌ನ ಕೆಪಿ ಸಿಂಗ್ 7 ಶತಕೋಟಿ ಡಾಲರ್‌, ಕುಮಾರ ಮಂಗಲಂ ಬಿರ್ಲಾ ಮತ್ತು ಶಾಪೂರ್ ಮಿಸ್ತ್ರಿ ಅವರು ತಲಾ 6.3 ಶತಕೋಟಿ ಡಾಲರ್‌ ಸಂಪತ್ತು ಹೆಚ್ಚಿಸಿಕೊಂಡಿದ್ದಾರೆ.

ಕ್ಯಾಲೆಂಡರ್ ವರ್ಷದಲ್ಲಿ ಹೆಚ್ಚು ಸಂಪತ್ತು ಗಳಿಸಿದವರ ಪಟ್ಟಿಯಲ್ಲಿ ದಿಲೀಪ್ ಶಾಂಘವಿ, ರವಿ ಜೈಪುರಿಯಾ, ಎಂಪಿ ಲೋಧಾ, ಸುನಿಲ್ ಮಿತ್ತಲ್ ಮತ್ತುಇತರರೂ ಇದ್ದಾರೆ.

ಇನ್ನೊಂದೆಡೆ, ಗೌತಮ್ ಅದಾನಿ ಅವರು ಮಾತ್ರ ಸಂಪತ್ತು ಕಳೆದುಕೊಂಡಿರುವಂಥದ್ದು. ಅವರು ಈ ಕ್ಯಾಲೆಂಡರ್ ವರ್ಷದಲ್ಲಿ 35.4 ಶತಕೋಟಿ ಡಾಲರ್ ಸಂಪತ್ತು ಕಳೆದುಕೊಂಡಿದ್ದಾರೆ. ಅವರ ಸಂಪತ್ತು ಈಗ 85.1 ಶತಕೋಟಿ ಡಾಲರ್‌. ಆದಾಗ್ಯೂ, ಭಾರತದ ಅತಿಶ್ರೀಮಂತರ ಪಟ್ಟಿಯಲ್ಲಿ ಗೌತಮ್ ಅದಾನಿ ಅವರು ಎರಡನೇ ಸ್ಥಾನದಲ್ಲಿದ್ದಾರೆ. ಮೊದಲನೇ ಸ್ಥಾನದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್‌ನ ಮುಕೇಶ್ ಅಂಬಾನಿ ಇದ್ದಾರೆ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ