logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Covid Updates: ವಾರದಲ್ಲೇ ಕರ್ನಾಟಕಲ್ಲಿ ಮೂರು ಪಟ್ಟು ಕೋವಿಡ್‌ ಪ್ರಕರಣ ಹೆಚ್ಚಳ: ಕೇರಳದಲ್ಲಿ ತಗ್ಗಿದ ಸಂಖ್ಯೆ

Covid updates: ವಾರದಲ್ಲೇ ಕರ್ನಾಟಕಲ್ಲಿ ಮೂರು ಪಟ್ಟು ಕೋವಿಡ್‌ ಪ್ರಕರಣ ಹೆಚ್ಚಳ: ಕೇರಳದಲ್ಲಿ ತಗ್ಗಿದ ಸಂಖ್ಯೆ

Umesha Bhatta P H HT Kannada

Jan 01, 2024 02:33 PM IST

google News

ಕರ್ನಾಟಕದಲ್ಲಿ ಕೋವಿಡ್‌ ಪ್ರಕರಣಗಳಲ್ಲಿ ಏರಿಕೆ ಕಂಡು ಬಂದಿದೆ.

    • Covid cases rise ದೇಶದಲ್ಲಿ ಸಕ್ರಿಯ ಕೋವಿಡ್‌ ಪ್ರಕರಣಗಳ ಸಂಖ್ಯೆ ಕೊಂಚ ಹೆಚ್ಚಾಗಿದೆ. ಇದರಲ್ಲಿ ಕರ್ನಾಟಕ, ಮಹಾರಾಷ್ಟ್ರದಲ್ಲಿ ಹೆಚ್ಚಾಗಿದ್ದರೆ, ಕೇರಳದಲ್ಲಿ ಇಳಿಕೆ ಕಂಡು ಬಂದಿದೆ.
ಕರ್ನಾಟಕದಲ್ಲಿ ಕೋವಿಡ್‌ ಪ್ರಕರಣಗಳಲ್ಲಿ ಏರಿಕೆ ಕಂಡು ಬಂದಿದೆ.
ಕರ್ನಾಟಕದಲ್ಲಿ ಕೋವಿಡ್‌ ಪ್ರಕರಣಗಳಲ್ಲಿ ಏರಿಕೆ ಕಂಡು ಬಂದಿದೆ.

ದೆಹಲಿ: ಭಾರತದಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಕಂಡು ಬರುತ್ತದಲೇ ಇದೆ. ಅದರಲ್ಲೂ ಕರ್ನಾಟಕದಲ್ಲಿ ಪ್ರಕರಣಗಳ ಸಂಖ್ಯೆಯೂ ಏರಿಕೆ ಕಂಡಿದ್ದರೆ ಆತಂಕವಿದ್ದ ನೆರೆಯ ಕೇರಳದಲ್ಲಿ ಪ್ರಕರಣಗಳ ಸಂಖ್ಯೆಗಳಲ್ಲಿ ಇಳಿಕೆ ಕಂಡು ಬಂದಿದೆ.

ಕೇಂದ್ರ ಆರೋಗ್ಯ ಸಚಿವಾಲಯವು ಸೋಮವಾರ ಬಿಡುಗಡೆ ಮಾಡಿರುವ ವರದಿ ಪ್ರಕಾರ, ಕಳೆದ 24 ಗಂಟೆಗಳಲ್ಲೇ ಭಾರತದಲ್ಲಿ ಒಟ್ಟು 636 ಪ್ರಕರಣಗಳು ದಾಖಲಾಗಿವೆ. ಈ ಮೂಲಕ ಇಡೀ ದೇಶದಲ್ಲಿ ಸದ್ಯ 4394 ಸಕ್ರಿಯ ಪ್ರಕರಣಗಳು ಇವೆ. ಇದೇ ಅವಧಿಯಲ್ಲಿ ದೇಶದಲ್ಲಿ 3 ಸಾವಿನ ಪ್ರಕರಣಗಳು ವರದಿಯಾಗಿವೆ.

ಭಾರತದಲ್ಲಿ ಕಳೆದ ನಾಲ್ಕು ವರ್ಷದಲ್ಲಿ ಕೋವಿಡ್‌ನಿಂದ ಮೃತಪಟ್ಟವರ ಸಂಖ್ಯೆ 5,33,364ಕ್ಕೆ ಏರಿಕೆಯಾಗಿದೆ.

ಭಾರತದಲ್ಲಿ ಕೋವಿಡ್‌ನ ಹೊಸ ತಳಿ ಜೆಎನ್‌ 1 ಕಳೆದ ತಿಂಗಳು ಕಾಣಿಸಿಕೊಂಡ ನಂತರ ಅಲ್ಲಲ್ಲಿ ಆತಂಕದ ವಾತಾವರಣವಿದೆ. ಅದರಲ್ಲೂ ಕೇರಳ, ಕರ್ನಾಟಕ, ಮಹಾರಾಷ್ಟ್ರದಲ್ಲಿಯೇ ಜೆಎನ್‌ 1 ಪ್ರಕರಣಗಳು ಕಾಣಿಸಿಕೊಂಡು ಕೆಲವು ಕಡೆ ಸಾವಿನ ಪ್ರಕರಣಗಳೂ ದಾಖಲಾಗಿದ್ದು ಆತಂಕಕ್ಕೆ ಕಾರಣವಾಯಿತು.

ಕರ್ನಾಟಕದಲ್ಲಿಯೇ ಒಂದು ವಾರದ ಅವಧಿಯಲ್ಲಿ ಪ್ರಕರಣಗಳ ಸಂಖ್ಯೆ ಮೂರು ಪಟ್ಟು ಹೆಚ್ಚಿದೆ. ಕರ್ನಾಟಕದಲ್ಲಿ ಒಂದು ವಾರದಲ್ಲಿ ಸಕ್ರಿಯ ಪ್ರಕರಗಳ ಸಂಖ್ಯೆ 922 ವರದಿಯಾದವು. ಮೂರು ವಾರದ ಹಿಂದೆ ಕರ್ನಾಟಕದಲ್ಲಿದ್ದ ಸಕ್ರಿಯ ಪ್ರಕರಣಗಳ ಸಂಖ್ಯೆ 309 .

ಅದೇ ರೀತಿ ಮಹಾರಾಷ್ಟ್ರದಲ್ಲೂ ಮೂರು ವಾರಗಳಲ್ಲಿ 103 ಇದ್ದ ಸಕ್ರಿಯ ಪ್ರಕರಣಗಳ ಸಂಖ್ಯೆ 620 ಕ್ಕೇ ಏರಿಕೆ ಕಂಡಿದೆ.

ಆದರೆ ಕೇರಳದಲ್ಲಿ ಮಾತ್ರ ಹಿಂದಿನ ವಾರಗಳಿಗೆ ಹೋಲಿಸಿದರೆ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆ. ಹಿಂದಿನ ವಾರದಲ್ಲಿ ಇಡೀ ದೇಶದ ಪ್ರಕರಣಗಳಲ್ಲಿ ಕೇರಳದ ಸಂಖ್ಯೆಯೇ ಶೇ.80ರಷ್ಟಿತ್ತು. ಅದು ಈ ವಾರಕ್ಕೆ ಶೇ.50,ಕ್ಕೆ ಇಳಿಕೆ ಕಂಡು ಬಂದಿದೆ. ಅಂದರೆ ಹಿಂದಿನ ವಾರಗಳಲ್ಲಿ 3,018 ಸಕ್ರಿಯ ಪ್ರಕರಣಗಳಿದ್ದ ಕೇರಳದಲ್ಲಿ ಈ ವಾರಾಂತ್ಯಕ್ಕೆ 2,282 ಕ್ಕೆ ಇಳಿಕೆಯಾಗಿದೆ. ಅಂದರೆ ಶೇ. 24 ರಷ್ಟು ಕುಸಿತ ಕಂಡು ಬಂದಿದೆ ಎಂದು ಆರೋಗ್ಯ ಸಚಿವಾಲಯ ತನ್ನ ವರದಿಯಲ್ಲಿ ತಿಳಿಸಿದೆ.

ಒಂದು ವಾರದಲ್ಲಿ ಕೋವಿಡ್‌ನಿಂದ ಒಟ್ಟು 29 ಮಂದಿ ಮೃತಪಟ್ಟಿದ್ದಾರೆ. ಶನಿವಾರ ಮೂವರು ಮೃತಟಪಟ್ಟು 841 ಸಕ್ರಿಯ ಪ್ರಕರಣಗಳ ದಾಖಲಾಗಿದ್ದವು.

ಒಟ್ಟಾರೆ ದೇಶ ಹಾಗೂ ರಾಜ್ಯಗಳ ಜನಸಂಖ್ಯೆ, ಹಿಂದಿನ ಕೋವಿಡ್‌ ಅವಧಿಗಳಲ್ಲಿನ ಪ್ರಕರಣಗಳನ್ನು ಗಮನಿಸಿದರೆ ಇದು ದೊಡ್ಡ ಸಂಖ್ಯೆಯಲ್ಲ. ಆತಂಕ ಪಡುವ ಅಗತ್ಯವೂ ಇಲ್ಲ. ಎಚ್ಚರಿಕೆ ವಹಿಸುವುದು ಸೂಕ್ತ ಎನ್ನುವುದು ಇಲಾಖೆಯ ಸೂಚನೆ.

====

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ