logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Lightning: ಬಿಹಾರದಲ್ಲಿ ಸಿಡಿಲು ಬಡಿದು 18 ಮಂದಿ ಸಾವು; ಸಿಡಿಲಿನಿಂದ ತಪ್ಪಿಸಿಕೊಳ್ಳಲು ಈ ಟಿಪ್ಸ್ ಅನುಸರಿಸಿ

Lightning: ಬಿಹಾರದಲ್ಲಿ ಸಿಡಿಲು ಬಡಿದು 18 ಮಂದಿ ಸಾವು; ಸಿಡಿಲಿನಿಂದ ತಪ್ಪಿಸಿಕೊಳ್ಳಲು ಈ ಟಿಪ್ಸ್ ಅನುಸರಿಸಿ

Meghana B HT Kannada

Jul 15, 2023 02:56 PM IST

google News

ಬಿಹಾರದಲ್ಲಿ ಸಿಡಿಲು ಬಡಿದು 18 ಮಂದಿ ಸಾವು (ಪ್ರಾತಿನಿಧಿಕ ಚಿತ್ರ)

    • Bihar Lightning: ಸಿಡಿಲು ಬಡಿದು ಬಿಹಾರದಲ್ಲಿ ಕಳೆದ 24 ಗಂಟೆಗಳಲ್ಲಿ 18 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಸಿಡಿಲಿನಿಂದ ತಪ್ಪಿಸಿಕೊಳ್ಳಲು ಈ ಟಿಪ್ಸ್ ಅನುಸರಿಸಿ.. 
ಬಿಹಾರದಲ್ಲಿ ಸಿಡಿಲು ಬಡಿದು 18 ಮಂದಿ ಸಾವು (ಪ್ರಾತಿನಿಧಿಕ ಚಿತ್ರ)
ಬಿಹಾರದಲ್ಲಿ ಸಿಡಿಲು ಬಡಿದು 18 ಮಂದಿ ಸಾವು (ಪ್ರಾತಿನಿಧಿಕ ಚಿತ್ರ)

ಪಾಟ್ನಾ: ಬಿಹಾರದಲ್ಲಿ ಭಾರೀ ಮಳೆ ನಡುವೆ ಸಿಡಿಲಿನ ಅಬ್ಬರವೂ ಜೋರಾಗಿದೆ. ಸಿಡಿಲು ಬಡಿದು ಕಳೆದ 24 ಗಂಟೆಗಳಲ್ಲಿ 18 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

18 ಮಂದಿ ಮೃತರ ಪೈಕಿ ರೋಹ್ಟಾಸ್ ಜಿಲ್ಲೆಯಲ್ಲಿ ಐವರು, ಅರ್ವಾಲ್‌ನಲ್ಲಿ ನಾಲ್ವರು, ಸರನ್‌ನಲ್ಲಿ ಮೂವರು, ಔರಂಗಾಬಾದ್ ಮತ್ತು ಪೂರ್ವ ಚಂಪಾರಣ್‌ನಲ್ಲಿ ತಲಾ ಇಬ್ಬರು, ಬಂಕಾ ಮತ್ತು ವೈಶಾಲಿ ಜಿಲ್ಲೆಯಲ್ಲಿ ತಲಾ ಒಬ್ಬರು ಸಾವನ್ನಪ್ಪಿದ್ದಾರೆ.

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಮೃತರ ಪ್ರತಿ ಕುಟುಂಬಕ್ಕೆ ತಲಾ 4 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ಜನರು ಮಳೆಗಾಲದಲ್ಲಿ ಸಿಡಿಲು ಬರುವ ವೇಳೆ ಗದ್ದೆ-ಜಮೀನಿಗೆ ಹೋಗದಿರಲು ಮತ್ತು ಮರಗಳು, ವಿದ್ಯುತ್ ಕಂಬಗಳು ಅಥವಾ ಮಣ್ಣಿನಿಂದ ಮಾಡಿದ ತಾತ್ಕಾಲಿಕ ಮನೆಗಳ ಕೆಳಗೆ ನಿಲ್ಲದಂತೆ ವಿಪತ್ತು ನಿರ್ವಹಣಾ ಸಂಸ್ಥೆ ಮನವಿ ಮಾಡಿದೆ.

ಸಿಡಿಲಿನಿಂದ ತಪ್ಪಿಸಿಕೊಳ್ಳಲು ಈ ಸಲಹೆಗಳನ್ನು ಅನುಸರಿಸಿ

  • ಸಿಡಿಲು ಸಹಿತ ಮಳೆ ಬರುವ ಸಮಯದಲ್ಲಿ ಜನರು ಕಿಟಕಿಗಳಿಂದ ದೂರವಿರಬೇಕು.
  • ರೆಫ್ರಿಜರೇಟರ್ ಮತ್ತು ಎಸಿ ಸೇರಿದಂತೆ ಎಲೆಕ್ಟ್ರಿಕಲ್ ಸಾಧನಗಳನ್ನು ಸ್ಪರ್ಶಿಸಬೇಡಿ.
  • ಕಟ್ಟಡಗಳ ಮೇಲ್ಛಾವಣಿಗೆ ಹೋಗದಂತೆ ಎಚ್ಚರವಹಿಸಿ.
  • ಕೇಬಲ್​​ ಹಾಗೂ ತಂತಿಯಿಂದ ಸಂಪರ್ಕ ಪಡೆದ ವಸ್ತುಗಳನ್ನು ಬಳಸಬೇಡಿ.
  • ಗುಡುಗು- ಸಿಡಿಲು ಬರುವ ವೇಳೆ ನೀವು ಮನೆಯಿಂದ ಹೊರಗಡೆಯಿದ್ದರೆ, ಯಾವುದಾದರೂ ಕಟ್ಟಡದೊಳಗೆ ಆಶ್ರಯ ಪಡೆಯಿರಿ ಅಥವಾ ಪೂರ್ತಿ ಕವರ್​ ಆಗಿರುವ ವಾಹನದೊಳಗೆ ಆಶ್ರಯ ಪಡೆಯಿರಿ.
  • ಕಿಟಕಿ-ಬಾಗಿಲು ಇರದ ಕಟ್ಟಡ, ಶೆಡ್‌ಗಳು, ತೆರೆದ ಮೈದಾನ, ಗುಡ್ಡ-ಬೆಟ್ಟ, ಪಿಕ್ನಿಕ್ ಶೆಲ್ಟರ್‌ಗಳಲ್ಲಿ ಆಶ್ರಯ ಪಡೆಯಬೇಡಿ. ಬಿರುಗಾಳಿ ಇರುವಾಗ ಮರ, ಕಂಬಗಳು ಅಥವಾ ಗೋಪುರಗಳಂತಹ ಎತ್ತರದವುಗಳನ್ನು ಏರಬೇಡಿ.
  • ಸಾಧ್ಯವಾದಷ್ಟು ತಗ್ಗು ಪ್ರದೇಶದಲ್ಲಿ ಆಶ್ರಯ ಪಡೆಯಿರಿ

ದೆಹಲಿಯಲ್ಲಿ ಮುಂದುವರೆದ ಪ್ರವಾಹ

ನಾಲ್ಕೈದು ದಿನದಿಂದ ಜಲ ದಿಗ್ಬಂಧನಕ್ಕೆ ಒಳಗಾಗಿರುವ ರಾಜಧಾನಿ ಕೇಂದ್ರ ದೆಹಲಿಯಲ್ಲಿ ಶನಿವಾರವೂ ಪರಿಸ್ಥಿತಿ ಬದಲಾಗಿಲ್ಲ. ಉಕ್ಕಿ ಹರಿಯುತ್ತಿರುವ ಯಮುನಾ ನದಿ ಸೃಷ್ಟಿಸಿರುವ ಅವಾಂತರಗಳು ಮುಂದುವರಿದಿವೆ. ಈಗಾಗಲೇ ದೆಹಲಿಯ ಪ್ರಮುಖ ಸ್ಥಳಗಳಿಗೂ ನೀರು ನುಗ್ಗಿದ್ದು, ಸುಪ್ರೀಂಕೋರ್ಟ್‌ ಆವರಣವನ್ನೂ ಬಿಟ್ಟಿಲ್ಲ. ಮಹಾತ್ಮಗಾಂಧಿ ಸಮಾಧಿ ರಾಜಘಾಟ್‌ ಕೂಡ ನೀರಿನಲ್ಲಿ ಮುಳುಗಿದೆ. ಶನಿವಾರವೂ ಮಳೆ ಶುರುವಾಗಿದ್ದು. ಜನ ಆತಂಕದಲ್ಲಿಯೇ ದಿನದೂಡುವ ಸನ್ನಿವೇಶವೂ ಎದುರಾಗಿದೆ.

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ