Name Change: ನೆಹರೂ ಮೆಮೋರಿಯಲ್ ಮ್ಯೂಸಿಯಂ ಆಂಡ್ ಲೈಬ್ರರಿ ಸೊಸೈಟಿ ಇನ್ನು ಪ್ರೈಮ್‌ಮಿನಿಸ್ಟರ್ಸ್ ಮ್ಯೂಸಿಯಂ ಆಂಡ್ ಲೈಬ್ರರಿ ಸೊಸೈಟಿ
Jun 17, 2023 03:00 PM IST
ಭಾರತದ ನವದೆಹಲಿಯಲ್ಲಿರುವ ನೆಹರೂ ಸ್ಮಾರಕ ವಸ್ತುಸಂಗ್ರಹಾಲಯ ಮತ್ತು ಗ್ರಂಥಾಲಯದ ಹಿಂದಿನ ನೋಟ.
India News: ನೆಹರೂ ಮೆಮೋರಿಯಲ್ ಮ್ಯೂಸಿಯಂ ಮತ್ತು ಲೈಬ್ರರಿ ಸೊಸೈಟಿಯ ವಿಶೇಷ ಸಭೆಯಲ್ಲಿ, ಅದರ ಹೆಸರನ್ನು ಪ್ರಧಾನ ಮಂತ್ರಿಗಳ ವಸ್ತುಸಂಗ್ರಹಾಲಯ ಮತ್ತು ಗ್ರಂಥಾಲಯ ಸೊಸೈಟಿ ಎಂದು ಬದಲಾಯಿಸಲು ನಿರ್ಧರಿಸಲಾಗಿದೆ ಎಂದು ಸಂಸ್ಕೃತಿ ಸಚಿವಾಲಯದ ಪ್ರಕಟಣೆ ತಿಳಿಸಿದೆ. ಇದರ ವಿವರ ಇಲ್ಲಿದೆ.
ನವದೆಹಲಿ: ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರ ಹೆಸರಿನ ನೆಹರು ಮ್ಯೂಸಿಯಂ ಸ್ಮಾರಕ ಮತ್ತು ಗ್ರಂಥಾಲಯ (Nehru Museum Memorial and Library) ವನ್ನು ಪ್ರಧಾನ ಮಂತ್ರಿ ಮ್ಯೂಸಿಯಂ ಮತ್ತು ಲೈಬ್ರರಿ ಸೊಸೈಟಿ (Prime Minister’s Museum and Library Society) ಎಂದು ಮರುನಾಮಕರಣ ಮಾಡಲಾಗಿದೆ ಎಂದು ಸಂಸ್ಕೃತಿ ಸಚಿವಾಲಯ (ministry of culture) ಶುಕ್ರವಾರ ತಿಳಿಸಿದೆ.
ನೆಹರೂ ಸ್ಮಾರಕ ವಸ್ತುಸಂಗ್ರಹಾಲಯ ಮತ್ತು ಗ್ರಂಥಾಲಯ ಸೊಸೈಟಿಯ ವಿಶೇಷ ಸಭೆಯಲ್ಲಿ, ಅದರ ಹೆಸರನ್ನು ಪ್ರಧಾನ ಮಂತ್ರಿಗಳ ವಸ್ತುಸಂಗ್ರಹಾಲಯ ಮತ್ತು ಗ್ರಂಥಾಲಯ ಸೊಸೈಟಿ ಎಂದು ಬದಲಾಯಿಸಲು ನಿರ್ಧರಿಸಲಾಯಿತು ಎಂದು ಕೇಂದ್ರ ಸಂಸ್ಕೃತಿ ಸಚಿವಾಲಯ ತಿಳಿಸಿದೆ.
ಸೊಸೈಟಿಯ ಉಪಾಧ್ಯಕ್ಷರಾಗಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಯಿತು ಎಂದು ವರದಿ ಹೇಳಿದೆ.
ಕಾರ್ಯಕಾರಿ ಮಂಡಳಿಯ ಅಧ್ಯಕ್ಷ ನೃಪೇಂದ್ರ ಮಿಶ್ರಾ ಅವರು ತಮ್ಮ ಸ್ವಾಗತ ಭಾಷಣದಲ್ಲಿ, ಹೆಸರಿನ ಬದಲಾವಣೆಯ ಅಗತ್ಯವು ಪ್ರಜಾಪ್ರಭುತ್ವಕ್ಕೆ ರಾಷ್ಟ್ರದ ಆಳವಾದ ಬದ್ಧತೆಯನ್ನು ಒತ್ತಿಹೇಳುತ್ತದೆ ಮತ್ತು ಆದ್ದರಿಂದ ಸಂಸ್ಥೆಯ ಹೆಸರು ಅದರ ಹೊಸ ಸ್ವರೂಪವನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು.
ರಾಜನಾಥ್ ಸಿಂಗ್ ಅವರು, ಈ ಹೆಸರಿನ ಬದಲಾವಣೆಯ ಪ್ರಸ್ತಾಪವನ್ನು ಸ್ವಾಗತಿಸಿದರು. ಏಕೆಂದರೆ ಸಂಸ್ಥೆಯು ಜವಾಹರಲಾಲ್ ನೆಹರೂ ಅವರಿಂದ ನರೇಂದ್ರ ಮೋದಿಯವರವರೆಗಿನ ಎಲ್ಲಾ ಪ್ರಧಾನ ಮಂತ್ರಿಗಳ ಕೊಡುಗೆಗಳನ್ನು ಮತ್ತು ಅವರು ಎದುರಿಸುತ್ತಿರುವ ವಿವಿಧ ಸವಾಲುಗಳಿಗೆ ಅವರ ಪ್ರತಿಕ್ರಿಯೆಗಳನ್ನು ಪ್ರದರ್ಶಿಸುತ್ತದೆ ಎಂದು ಹೇಳಿದ್ದಾಗಿ ಸಚಿವಾಲಯ ಪತ್ರಿಕಾ ಪ್ರಕಟಣೆ ತಿಳಿಸಿದೆ.
ಪ್ರಧಾನ ಮಂತ್ರಿ ಎಂದರೆ ಒಂದು ಸಂಸ್ಥೆ ಎಂದು ಬಣ್ಣಿಸಿದ ಮತ್ತು ವಿವಿಧ ಪ್ರಧಾನ ಮಂತ್ರಿಗಳ ಪ್ರಯಾಣವನ್ನು ಮಳೆಬಿಲ್ಲಿನ ವಿವಿಧ ಬಣ್ಣಗಳಿಗೆ ಹೋಲಿಸಿದ ರಾಜನಾಥ್ ಸಿಂಗ್, ಕಾಮನಬಿಲ್ಲಿನ ಎಲ್ಲಾ ಬಣ್ಣಗಳನ್ನು ಸುಂದರವಾಗಿಸಲು ಪ್ರಮಾಣಾನುಗುಣವಾಗಿ ಪ್ರತಿನಿಧಿಸಬೇಕು. ಆಗಲೇ ಅದರ ಸೌಂದರ್ಯ ಹೆಚ್ಚುವುದು ಎಂದು ಒತ್ತಿ ಹೇಳಿದರು.
ಹೀಗಾಗಿ ನಿರ್ಣಯವು ನಮ್ಮ ಹಿಂದಿನ ಎಲ್ಲಾ ಪ್ರಧಾನ ಮಂತ್ರಿಗಳಿಗೆ ಹೊಸ ಹೆಸರು, ಗೌರವವನ್ನು ನೀಡಿದೆ ಮತ್ತು ಈ ವಿಚಾರವಾಗಿ ನಿರ್ಧಾರವು ಪ್ರಜಾಸತ್ತಾತ್ಮಕವಾಗಿಯೇ ಇದೆ ಎಂದು ಸಚಿವರು ಹೇಳಿದ್ದಾಗಿ ಸಚಿವಾಲಯದ ಹೇಳಿಕೆ ತಿಳಿಸಿದೆ.
ಗಮನಸೆಳೆಯವ ಇತರೆ ಸುದ್ದಿಗಳು
Lok Sabha Election 2024: ಪ್ರತಿಪಕ್ಷಗಳ ಒಗ್ಗಟ್ಟು ಕೆಡಿಸಲು ಬಿಜೆಪಿ ಸಿದ್ಧತೆ; ಐದು ಹಂತಗಳಲ್ಲಿ ಅರ್ಥಮಾಡಿಕೊಳ್ಳಬಹುದು ಆಂತರಿಕ ಯೋಜನೆ
Karnataka police stations: ಇನ್ಮುಂದೆ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಉನ್ನತ ಪೊಲೀಸ್ ಅಧಿಕಾರಿಗಳ ಫೋನ್ ನಂಬರ್ ಪ್ರದರ್ಶನ; ಕಾರಣ ಹೀಗಿದೆ