Conjoined Twins: 1 ವರ್ಷದ ಸಯಾಮಿ ಅವಳಿಗಳ ಶಸ್ತ್ರಚಿಕಿತ್ಸೆ ಯಶಸ್ವಿ; ಒಂದು ದೇಹವನ್ನು ಎರಡು ದೇಹಗಳಾಗಿ ಬೇರ್ಪಡಿಸುವಲ್ಲಿ ಏಮ್ಸ್ ಸಫಲ
Jul 27, 2023 07:44 AM IST
ಸಯಾಮಿ ಅವಳಿಗಳ ಶಸ್ತ್ರಚಿಕಿತ್ಸೆ ಯಶಸ್ವಿ
- Delhi AIIMS: ಉತ್ತರ ಪ್ರದೇಶದ ಬರೇಲಿ ಮೂಲದ ದಂಪತಿಗೆ ಕಳೆದ ವರ್ಷ ರಿದ್ಧಿ ಮತ್ತು ಸಿದ್ಧಿ ಎಂಬ ಸಯಾಮಿ ಅವಳಿ ಹೆಣ್ಣು ಮಕ್ಕಳು ಜನಿಸಿದ್ದವು. ಈ ಮಕ್ಕಳ ಎದೆ ಮತ್ತು ಹೊಟ್ಟೆ ಕೂಡಿಕೊಂಡಿತ್ತು. ಇದೀಗ ಹುಟ್ಟಿದ ಒಂದು ವರ್ಷದ ಬಳಿಕ ಈ ಮಕ್ಕಳ ದೇಹವನ್ನು ದೆಹಲಿ ಏಮ್ಸ್ ಯಶಸ್ವಿಯಾಗಿ ಬೇರ್ಪಡಿಸಿದೆ.
ನವದೆಹಲಿ: ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (ಏಮ್ಸ್-AIIMS) ಸತತ 12 ಗಂಟೆಗಳ ಕಾಲ ನಡೆದ ಶಸ್ತ್ರಚಿಕಿತ್ಸೆಯಲ್ಲಿ ಒಂದು ವರ್ಷದ ಸಯಾಮಿ ಅವಳಿಗಳನ್ನು ಯಶಸ್ವಿಯಾಗಿ ಬೇರ್ಪಡಿಸಲಾಗಿದೆ.
ಉತ್ತರ ಪ್ರದೇಶದ ಬರೇಲಿ ಮೂಲದ ದಂಪತಿಗೆ ಕಳೆದ ವರ್ಷ ರಿದ್ಧಿ ಮತ್ತು ಸಿದ್ಧಿ ಎಂಬ ಸಯಾಮಿ ಅವಳಿ ಹೆಣ್ಣು ಮಕ್ಕಳು ಜನಿಸಿದ್ದವು. ಈ ಮಕ್ಕಳ ಎದೆ ಮತ್ತು ಹೊಟ್ಟೆ ಕೂಡಿಕೊಂಡಿತ್ತು. ಇದೀಗ ಹುಟ್ಟಿದ ಒಂದು ವರ್ಷದ ಬಳಿಕ ಜೂನ್ 8 ರಂದು ಮಕ್ಕಳ ದೇಹವನ್ನು ಬೇರ್ಪಡಿಸಲಾಗಿದೆ.
ತಾಯಿಯ ಗರ್ಭಧಾರಣೆಯ ನಾಲ್ಕನೇ ತಿಂಗಳಲ್ಲಿ ಅವಳಿಗಳನ್ನು 'ಥೋರಾಕೊ-ಆಂಫಾಲೋಪಾಗಸ್ ಸಂಯೋಜಿತ/ಸಯಾಮಿ ಅವಳಿಗಳು' ಎಂದು ಗುರುತಿಸಲಾಯಿತು. 2022ರ ಜುಲೈ 7 ರಂದು ಈ ಮಕ್ಕಳು ಜನಿಸಿದವು. ಜನಿಸಿದ ಐದು ತಿಂಗಳ ಕಾಲ ಐಸಿಯು (ತೀವ್ರ ನಿಗಾ ಘಟಕ)ನಲ್ಲಿ ಮಕ್ಕಳನ್ನು ಇರಿಸಲಾಗಿತ್ತು. ಮಕ್ಕಳಿಗೆ 11 ತಿಂಗಳು ಆದ ಬಳಿಕ ಇದೀಗ ಸತತ 12 ಗಂಟೆಗಳ ಶಸ್ತ್ರಚಿಕಿತ್ಸೆ ಮಾಡಿ ಬೇರ್ಪಡಿಸಲಾಗಿದೆ ಎಂದು ಮಕ್ಕಳ ಶಸ್ತ್ರಚಿಕಿತ್ಸೆ ವಿಭಾಗದ ಹೆಚ್ಚುವರಿ ಪ್ರಾಧ್ಯಾಪಕ ಪ್ರಬುದ್ ಗೋಯೆಲ್ ಹೇಳಿದ್ದಾರೆ.
ಎರಡೂ ಹೃದಯಗಳು, ಪಕ್ಕೆಲುಬು, ಯಕೃತ್ತು, ಒಂದಕ್ಕೊಂದು ಹತ್ತಿರವಾಗಿದ್ದವು. ಶಸ್ತ್ರಚಿಕಿತ್ಸೆ ಪ್ರಕ್ರಿಯೆ ಸುಮಾರು 9 ಗಂಟೆಗಳ ಕಾಲ ನಡೆಯಿತಾದರೂ ಅರಿವಳಿಕೆಗೆ ಮೂರೂವರೆ ಗಂಟೆಗಳು ಬೇಕಾಯಿತು. ಶಸ್ತ್ರಚಿಕಿತ್ಸೆಯ ನಂತರ, ಅವಳಿಗಳು ತಮ್ಮ ಮೊದಲ ಹುಟ್ಟುಹಬ್ಬವನ್ನು ಆಸ್ಪತ್ರೆಯಲ್ಲಿ ಆಚರಿಸಿಕೊಂಡರು ಎಂದು ವೈದ್ಯರು ತಿಳಿಸಿದ್ದಾರೆ.
ಏಮ್ಸ್ನಲ್ಲಿ ಇಂತಹ ಸಯಾಮಿ ಅವಳಿಗಳ ಯಶಸ್ವಿ ಶಸ್ತ್ರಚಿಕಿತ್ಸೆ ಇದೇ ಮೊದಲಲ್ಲ. 2017 ರಲ್ಲಿ ಒಡಿಶಾ ಮೂಲದ ಜಗನ್ನಾಥ್ ಮತ್ತು ಬಲರಾಮ್ ಎಂಬವರನ್ನು ಸಂಸ್ಥೆಯ ವೈದ್ಯರು ಯಶಸ್ವಿಯಾಗಿ ಬೇರ್ಪಡಿಸಿದ್ದರು.
ಸಯಾಮಿ ಅವಳಿಗಳು ಅಥವಾ ಸಂಯೋಜಿತ ಅವಳಿಗಳು ಗರ್ಭದಿಂದಲೇ ಶರೀರವನ್ನು ಜೋಡಿಸಿಕೊಂಡು ಹುಟ್ಟುವ ಅವಳಿ ಜೀವಗಳಾಗಿವೆ.
ತುಮಕೂರು ಜಿಲ್ಲಾ ಕೇಂದ್ರದಿಂದ 10 ಕಿಮೀ ಫಾಸಲೆಯೊಳಗೆ, ಬೆಂಗಳೂರು ಎನ್ನುವ ರಾಜ್ಯ ರಾಜಧಾನಿಯಿಂದ 100 ಕಿಮೀ ಅಂತರದಲ್ಲಿ ಸಂಭವಿಸಿರುವ ಮಗುವಿನ ಸಾವು ಇನ್ನಾದರೂ ಕರ್ನಾಟಕದ ಅಂತಃಕರಣವನ್ನು ಕಲಕಬೇಕು. ಈ ಸಮುದಾಯದ ಹೆಣ್ಮಕ್ಕಳ ಕಣ್ಣೀರು ಒರೆಸಲು, ಅವರ ಕಷ್ಟಕ್ಕೆ ಸ್ಪಂದಿಸಲು ಸಮರ್ಪಕ ಯೋಜನೆಗಳು ರೂಪುಗೊಳ್ಳಬೇಕು. ಏನಿದು ಪ್ರಕರಣ? ಇಲ್ಲಿದೆ ವಿವರ ಮಾಹಿತಿ