logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Delhi Services Bill: ದೆಹಲಿ ಸೇವಾ ಮಸೂದೆಗೆ ರಾಜ್ಯಸಭೆ ಅಂಗೀಕಾರ; 131 ಪರ, 102 ವಿರೋಧ ಮತ; ವಿರೋಧ ಪಕ್ಷಗಳ ಮೈತ್ರಿಕೂಟ ಇಂಡಿಯಾಗೆ ಹಿನ್ನಡೆ

Delhi Services Bill: ದೆಹಲಿ ಸೇವಾ ಮಸೂದೆಗೆ ರಾಜ್ಯಸಭೆ ಅಂಗೀಕಾರ; 131 ಪರ, 102 ವಿರೋಧ ಮತ; ವಿರೋಧ ಪಕ್ಷಗಳ ಮೈತ್ರಿಕೂಟ ಇಂಡಿಯಾಗೆ ಹಿನ್ನಡೆ

Reshma HT Kannada

Aug 08, 2023 08:38 AM IST

google News

ಸಾಂದರ್ಭಿಕ ಚಿತ್ರ

    • Delhi Services Bill: ವಿರೋಧ ಪಕ್ಷ ಹಾಗೂ ಆಮ್‌ ಆದ್ಮಿ ಪಕ್ಷದ ತೀವ್ರ ವಿರೋಧದ ನಡುವೆಯೂ ದೆಹಲಿ ಸೇವಾ ಮಸೂದೆಗೆ ಅಂಗೀಕಾರ ದೊರೆತಿದೆ. ಮಸೂದೆಯ ಪರ 131 ಹಾಗೂ ವಿರೋಧ 102 ಮತದಾನ ಚಲಾವಣೆಯಾಗಿದ್ದು, ರಾಜ್ಯಸಭೆಯು ಮಸೂದೆಯನ್ನು ಅಂಗೀಕರಿಸಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ (ANI)

ನವದೆಹಲಿ: ಆಮ್‌ ಆದ್ಮಿ ಪಕ್ಷದ ಸರ್ಕಾರದಲ್ಲಿ ಅಧಿಕಾರಿಶಾಹಿಗಳ ಮೇಲೆ ಗವರ್ನರ್‌ ನಿಯಂತ್ರಣ ಮಾಡಲು ಪ್ರಯತ್ನಿಸುವ ದೆಹಲಿ ಸೇವೆಗಳ ಮಸೂದೆಯನ್ನು ಸಂಸತ್ತು ಸೋಮವಾರ ಅಂಗೀಕರಿಸಿತು. ಆ ಮಸೂದೆಗೆ ಆಮ್‌ ಆದ್ಮಿ ಪಕ್ಷ ಹಾಗೂ ವಿರೋಧ ಪಕ್ಷಗಳ ತೀವ್ರ ವಿರೋಧವಿತ್ತು.

ಈ ನಡುವೆ ಮಸೂದೆಯ ಪರ 131 ಮತಗಳು ಚಲಾವಣೆಯಾಗಿದ್ದರೆ, ವಿರುದ್ಧ 102 ಮತಗಳು ಚಲಾವಣೆಯಾಗಿದ್ದವು. ಈ ಮಸೂದೆಯನ್ನು ಲೋಕಸಭೆಯು ಈಗಾಗಲೇ ಅಂಗೀಕರಿಸಿದೆ.

ಕೇಂದ್ರ ಈ ಹಿಂದೆ ತಂದ ಸುಗ್ರೀವಾಜ್ಞೆಯನ್ನು ಬದಲಿಸುವ ಮಸೂದೆಯನ್ನು ಈಗ ಕಾನೂನನ್ನಾಗಿ ಮಾಡಲು ರಾಷ್ಟ್ರಪತಿ ಮುರ್ಮು ಅವರಿಗೆ ಕಳುಹಿಸಲಾಗುವುದು. ರಾಷ್ಟ್ರಪತಿ ಅವರ ಒಪ್ಪಿಗೆ ಪಡೆದ ಬಳಿಕ ಈ ಕಾಯ್ದೆಯನ್ನು ಜಾರಿಗೊಳಿಸಲಾಗುತ್ತದೆ.

ಈ ಮಸೂದೆ ಸಂಬಂಧಿಸಿ ಸಾಕಷ್ಟು ಮಹತ್ವದ ಬೆಳವಣಿಗೆಗಳು ಹಾಗೂ ಚರ್ಚೆಗಳು ನಡೆದಿದ್ದವು. ನಂತರ ಮತದಾನ ಮೂಲಕ ಮಸೂದೆಯನ್ನು ಜಾರಿಗೆ ತರಲು ನಿರ್ಧರಿಸಲಾಗಿತ್ತು.

ಕೇಂದ್ರ ಗೃಹಸಚಿವ ಅಮಿತ್‌ ಶಾ ಈ ಮಸೂದೆಯನ್ನು ರಾಜ್ಯಸಭೆಯಲ್ಲಿ ಮಂಡಿಸಿದ್ದು, ಮಸೂದೆಯ ಪರ 131 ಮತಗಳು ಚಲಾವಣೆಯಾಗಿದ್ದರೆ, ವಿರುದ್ಧ 102 ಮತಗಳನ್ನು ಚಲಾಯಿಸಲಾಗಿತ್ತು.

ಬಿಜೆಡಿ ಹಾಗೂ ವೈಎಸ್‌ಆರ್‌ ಕಾಂಗ್ರೆಸ್‌ ಸದಸ್ಯರು ಈ ಮಸೂದೆ ಅಂಗೀಕಾರಕ್ಕೆ ಬೆಂಬಲ ನೀಡಿದ್ದರು.

ಈ ಮಸೂದೆ ಮಂಡನೆಯ ಚರ್ಚೆ ವೇಳೆ ಮಾತನಾಡಿದ್ದ ಅಮಿತ್‌ ಶಾ ʼನಾವು ಸಂವಿಧಾನವನ್ನು ತಿದ್ದುಪಡಿ ಮಾಡುತ್ತಿದ್ದೇವೆ, ಆದರೆ ಮತ್ತೊಂದು ತುರ್ತು ಪರಿಸ್ಥಿತಿ ಹೇರುತ್ತಿಲ್ಲ. ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುವ ಹಕ್ಕು ಕಾಂಗ್ರೆಸ್‌ ಇಲ್ಲʼ ಎಂದಿದ್ದಾರೆ.

́ʼಇಂಡಿಯಾʼ ವಿರೋಧ

ವಿರೋಧ ಪಕ್ಷಗಳ ಮೈತ್ರಿಕೂಟ ಇಂಡಿಯಾ ದೆಹಲಿ ಸೇವಾ ಮಸೂದೆಗೆ ಅಂಗೀಕಾರಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಆದರೆ ನವೀನ್‌ ಪಟ್ನಾಯಕ್‌ ಅವರ ಬಿಜೆಡಿ ಮತ್ತು ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷಗಳು ಈ ಮಸೂದೆಗೆ ಬೆಂಬಲ ಸೂಚಿಸಿ ತಮ್ಮ ಮತ ಚಲಾವಣೆ ಮಾಡಿದ್ದವು. ಇದು ಬಿಜೆಪಿಗೆ ನೆರವಾಗಿದ್ದು, ಮಸೂದೆಗೆ ಅಂಗೀಕಾರಕ್ಕೆ ಬೆಂಬಲ ಸಿಕ್ಕಂತಾಗಿತ್ತು.

ʼದೆಹಲಿ ಸೇವಾ ಮಸೂದೆಯು ಅಸಂವಿಧಾನಿಕವಾಗಿದ್ದು, ಈ ಮಸೂದೆಯ ಅಂಗೀಕಾರವನ್ನು ಎಲ್ಲಾ ವಿರೋಧ ಪಕ್ಷಗಳು ವಿರೋಧಿಸಬೇಕು ಎಂದು ಕಾಂಗ್ರೆಸ್‌ ನಾಯಕ ಅಭಿಷೇಕ್‌ ಸಿಂಘ್ವಿ ಮನವಿ ಮಾಡಿದ್ದರು.

ಎಎಪಿ ಸದಸ್ಯ ರಾಘವ್‌ ಚಡ್ಡಾ ಈ ಮಸೂದೆಯನ್ನು ʼಸಾಂವಿಧಾನಿಕ ಅಪರಾಧʼ ಎಂದು ಕರೆದಿದ್ದರು.

ಈ ಎಲ್ಲಾ ವಿರೋಧದ ನಡುವೆಯೂ ಬಹುಮತ ಪಡೆದು ದೆಹಲಿ ಸೇವಾ ಮಸೂದೆಯು ಅಂಗೀಕಾರಗೊಂಡಿದೆ.

ಇದನ್ನೂ ಓದಿ

Raghav Chadha: ದೆಹಲಿ ಸೇವಾ ಮಸೂದೆ ಆಯ್ಕೆ ಸಮಿತಿಯಲ್ಲಿ ನಕಲಿ ಸಹಿ ಆರೋಪ; ಎಎಪಿ ಸಂಸದ ರಾಘವ್‌ ಚಡ್ಡಾ ವಿರುದ್ಧ ವಿವಿಧ ಪಕ್ಷದ ಸಂಸದರ ದೂರು

ದೆಹಲಿ ಸೇವಾ ಮಸೂದೆಯ ಆಯ್ಕೆ ಸಮಿತಿಗೆ ತಮ್ಮ ಒಪ್ಪಿಗೆ ಇಲ್ಲದೆ, ನಕಲಿ ಸಹಿ ಮಾಡಿದ್ದಾರೆ ಎಂದು ಆರೋಪಿಸಿ ಐವರು ಸಂಸದರು ಎಎಪಿ ಸಂಸದ ರಾಘವ್‌ ಚಡ್ಡಾ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಇದೀಗ ಈ ಪ್ರಕರಣವು ರಾಘವ್‌ ಅವರಿಗೆ ಉರುಳಾಗುವ ಸಾಧ್ಯತೆ ಇದೆ.

ನವದೆಹಲಿ: ರಾಜ್ಯಸಭೆಯಲ್ಲಿ ದೆಹಲಿ ಸೇವಾ ಮಸೂದೆ ಅಂಗಿಕಾರಕ್ಕೆ ನಡೆದ ಮತದಾನ ವೇಳೆ ನಕಲಿ ಸಹಿ ಮಾಡಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿ ಕೇಂದ್ರ ಸಚಿವರಾದ ಹರ್‌ದೀಪ್‌ ಸಿಂಗ್‌ ಪುರಿ ಮತ್ತು ವಿ ಮುರುಳೀಧರನ್‌ ತನಿಖೆಗೆ ಆದೇಶಿಸಿದ್ದಾರೆ. ಆಪ್‌ ಸಂಸದ ರಾಘವ್‌ ಚಡ್ಡಾ ತಮ್ಮ ನಕಲಿ ಸಹಿ ಹಾಕಿದ್ದಾರೆ ಎಂದು ಐವರು ಸದಸ್ಯರು ಆರೋಪ ಮಾಡಿದ್ದು, ಇದು ಗಂಭೀರ ಪ್ರಕರಣ ಎಂದು ಕರೆದಿದ್ದಾರೆ.

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ