ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಖಾತೆಯಲ್ಲಿರುವ ಹಣ ಹಿಂಪಡೆಯುವುದು ಹೇಗೆ; ನಿಮ್ಮ ಪ್ರಶ್ನೆ ಹಾಗೂ ಗೊಂದಲಗಳಿಗೆ ಇಲ್ಲಿವೆ ಉತ್ತರ
Feb 16, 2024 10:53 PM IST
ಪೇಟಿಎಂ ಪೇಮೆಂಟ್ ಬ್ಯಾಂಕ್ ಖಾತೆಯಲ್ಲಿರುವ ಹಣ ಹಿಂಪಡೆಯುವುದು ಹೇಗೆ; ನಿಮ್ಮ ಪ್ರಶ್ನೆ ಹಾಗೂ ಗೊಂದಲಗಳಿಗೆ ಇಲ್ಲಿವೆ ಉತ್ತರ
- Paytm Payment Bank: ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ವಹಿವಾಟುಗಳಿಗೆ ಆರ್‌ಬಿಐ ನಿರ್ಬಂಧ ಹೇರಿದ್ದು, ಮಾರ್ಚ್ 15ರವರೆಗೆ ಇದರ ಗುಡುವು ವಿಸ್ತರಿಸಲಾಗಿದೆ. ಈಗಾಗಲೇ ಪೇಟಿಎಂ ಖಾತೆಯಲ್ಲಿ ಹಣ ಹೊಂದಿರುವವರಲ್ಲಿ ಒಂದಿಷ್ಟು ಪ್ರಶ್ನೆಗಳಿರುವುದು ಸಹಜ. ಅಂಥ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.
ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ವ್ಯವಹಾರಗಳ ಮೇಲೆ ಆರ್‌ಬಿಐ ನಿರ್ಬಂಧ ಹೇರಿದೆ. ಮಾರ್ಚ್ 15ರ ನಂತರ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಮೂಲಕ ವ್ಯಾಲೆಟ್, ಠೇವಣಿ, ಫಾಸ್ಟ್ಯಾಗ್‌ನಂತಹ ವ್ಯವಹಾರಗಳು ನಡೆಸಲು ಆಗಲ್ಲ. ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ನಿಂದ ಕೆವೈಸಿ ನಿಯಮಗಳ ಪಾಲನೆ ಆಗದೇ ಇರುವ ಕಾರಣ ಆರ್‌ಬಿಐ ಈ ಕ್ರಮ ತೆಗೆದುಕೊಂಡಿದೆ ಎನ್ನಲಾಗುತ್ತದೆ. ಇದೀಗ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ವ್ಯವಹಾರಗಳಿಗೆ ಸಂಬಂಧಿಸಿದಂತೆ ಗ್ರಾಹಕರಿಗೆ ಮಾಹಿತಿ ನೀಡಿರುವ ಪ್ರಶ್ನೋತ್ತರ ಸರಣಿಯನ್ನು ಶುಕ್ರವಾರ (ಫೆ. 16) ಸಂಜೆ ಆರ್‌ಬಿಐ ಬಿಡುಗಡೆ ಮಾಡಿದೆ.
ಈಗಾಗಲೇ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಖಾತೆಯಲ್ಲಿರುವ ಹಣ ಹಿಂಪಡೆಯುವ ವಿಧಾನ, ಫ್ರೀಸ್ ಆಗಿರುವ ಖಾತೆಯ ಮಾಹಿತಿ ಹಾಗೂ ಹೊಸ ಗ್ರಾಹಕರಿಗೆ ಸಂಬಂಧಿಸಿದ ವಿವರಗಳ ಬಗ್ಗೆ ಪ್ರಶ್ನೋತ್ತರ ರೂಪದಲ್ಲಿ ಆರ್‌ಬಿಐ ಉತ್ತರಿಸಿದೆ. ಈ ಕುರಿತ ವಿವರ ಇಲ್ಲಿದೆ.
- ಆಧಾರ್ ಸಕ್ರಿಯಗೊಳಿಸಿದ ಪಾವತಿ ವ್ಯವಸ್ಥೆ ಅಡಿಯಲ್ಲಿ ಬಯೊಮೆಟ್ರಿಕ್ ದೃಢೀಕರಣದೊಂದಿಗೆ ನನ್ನ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಖಾತೆಯಿಂದ ಹಣ ಹಿಂಪಡೆಯಬಹುದೇ?
ಹೌದು, ನಿಮ್ಮ ಖಾತೆಯಲ್ಲಿ ಬ್ಯಾಲೆನ್ಸ್ ಇರುವವರೆಗೆ ನೀವು ಎಇಪಿಎಸ್ ದೃಢೀಕರಣ ಬಳಸಿಕೊಂಡು ಹಣ ವಿದ್‌ಡ್ರಾ ಮಾಡಬಹುದು.
ಯುಪಿಐ, ಐಎಂಪಿಎಸ್ ಮೂಲಕ ಹಣ ವರ್ಗಾವಣೆ
2. ನಾನು ಮಾರ್ಚ್ 15ರ ನಂತರ ಯುಪಿಐ ಅಥವಾ ಐಎಂಪಿಎಸ್ ವಿಧಾನದ ಮೂಲಕ ನನ್ನ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಖಾತೆಯಲ್ಲಿರುವ ಹಣವನ್ನು ಟ್ರಾನ್ಸ್‌ಫರ್ ಮಾಡಬಹುದೇ?
ಖಂಡಿತ, ನೀವು ಯುಪಿಐ ಅಥವಾ ಐಎಂಪಿಎಸ್ ಮೂಲಕ ನಿಮ್ಮ ಖಾತೆಯಲ್ಲಿ ಉಳಿದಿರುವ ಹಣ ವರ್ಗಾಯಿಸಹುದು.
ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಬ್ಯುಸಿನೆಸ್ ಕರೆಸ್ಪಾಡೆಂಟ್
3. ನಾನು ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಖಾತೆ ಹೊಂದಿದ್ದೇನೆ. ಮಾರ್ಚ್ 15ರ ನಂತರ ಪೇಮೆಂಟ್ಸ್ ಬ್ಯಾಂಕ್ ಬ್ಯುಸಿನೆಸ್ ಕರೆಸ್ಪಾಡೆಂಟ್ ನನ್ನ ಖಾತೆಯಿಂದ ಹಣ ವಿತ್‌ಡ್ರಾ ಮಾಡಲು ನನಗೆ ಸಹಾಯ ಮಾಡಬಲ್ಲರೇ?
ಖಂಡಿತ ಸಾಧ್ಯ. ನಿಮ್ಮ ಪೇಮೆಂಟ್ಸ್ ಬ್ಯಾಂಕ್ ಖಾತೆಯಲ್ಲಿ ಹಣ ಇರುವವರೆಗೆ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಬ್ಯುಸಿನೆಸ್ ಕರೆಸ್ಪಾಡೆಂಟ್ ಅಂದರೆ, ಬ್ಯಾಂಕ್ ಸಿಬ್ಬಂದಿ ನಿಮ್ಮ ಖಾತೆಯಿಂದ ಹಣ ವಿತ್ ಡ್ರಾ ಮಾಡಲು ನಿಮಗೆ ಸಹಾಯ ಮಾಡುತ್ತಾರೆ.
ಅಕೌಂಟ್ ಫ್ರೀಸ್ ಮಾಡುವುದು, ಲೈನ್‌ಮಾರ್ಕ್ ಮಾಡುವುದು ಇತ್ಯಾದಿ
4. ಕಾನೂನು ಅಥವಾ ನ್ಯಾಯಾಂಗ ನಿರ್ದೇಶನದ ಮೇರೆಗೆ ಅಕೌಂಟ್ ಫ್ರೀಸ್ ಮಾಡಿದರೆ, ನನ್ನ ಪೇಟಿಎಂ ಪೇಮೆಂಟ್ ಬ್ಯಾಂಕ್ ಖಾತೆಗೆ ಏನಾಗುತ್ತದೆ?
ಯಾವುದೇ ಕಾನೂನು ಸೂಚನೆಗಳ ಪ್ರಕಾರ ಖಾತೆಯನ್ನು ಫ್ರೀಜ್ ಮಾಡಿದರೆ, ಆಯಾ ಪ್ರಾಧಿಕಾರದ ಅಧಿಕಾರಿಗಳ ಆದೇಶದಂತೆ ಖಾತೆ ನಿಯಂತ್ರಿಸಲ್ಪಡುತ್ತದೆ.
5. ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ನ ಆಂತರಿಕ ನಿಯಮಗಳ ಅನುಸಾರ ನನ್ನ ಖಾತೆಯನ್ನು ಫ್ರೀಸ್ ಮಾಡಿದ್ದರೆ ಅಂತಹ ಸಂದರ್ಭದಲ್ಲಿ ನನ್ನ ಖಾತೆಗೆ ಏನಾಗುತ್ತದೆ?
ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಖಾತೆ ಅಥವಾ ವಾಲೆಟ್‌ನಲ್ಲಿ ಲಭ್ಯವಿರುವ ಬ್ಯಾಲೆನ್ಸ್ ಹಿಂಪಡೆಯಲು ಅವಕಾಶ ಕಲ್ಪಿಸಲು ಅಥವಾ ಗ್ರಾಹಕರ ಇನ್ನೊಂದು ಬ್ಯಾಂಕ್ ಖಾತೆಗೆ ವರ್ಗಾಯಿಸುವಂತೆ ಬ್ಯಾಂಕ್‌ಗೆ ನಿರ್ದೇಶನ ನೀಡಲಾಗುತ್ತದೆ.
ಹೊಸ ಗ್ರಾಹಕರಿಗೆ...
ಮಾಚ್ 11, 2022ರಲ್ಲಿ ಆರ್‌ಬಿಐ ಹೊರಡಿಸಿದ ಪತ್ರಿಕಾ ಹೇಳಿಕೆಯ ಪ್ರಕಾರ, ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ತನ್ನ ಯಾವುದೇ ಸೇವೆಗಳನ್ನು ಯಾವುದೇ ಹೊಸ ಗ್ರಾಹಕರಿಗೆ ನೀಡುವಂತಿಲ್ಲ. ಆದ್ದರಿಂದ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಯಾವುದೇ ಹೊಸ ಗ್ರಾಹಕರನ್ನು ಪಡೆಯುವಂತಿಲ್ಲ.