logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Ips Officer Resign: ಸ್ವಾತಂತ್ರ್ಯ ಬಯಸಿ ಐಪಿಎಸ್‌ ಹುದ್ದೆ ತೊರೆದ ಹಿರಿಯ ಅಧಿಕಾರಿ

IPS officer Resign: ಸ್ವಾತಂತ್ರ್ಯ ಬಯಸಿ ಐಪಿಎಸ್‌ ಹುದ್ದೆ ತೊರೆದ ಹಿರಿಯ ಅಧಿಕಾರಿ

HT Kannada Desk HT Kannada

Dec 27, 2023 11:59 AM IST

google News

ಐಪಿಎಸ್‌ ಅಧಿಕಾರಿ ಆನಂದ ಮಿಶ್ರ ರಾಜೀನಾಮೆ ನೀಡಿದ್ದಾರೆ.

    • Assam ips officer ಅಸ್ಸಾಂ ಕೇಡರ್‌ನ ಅಧಿಕಾರಿ ಆನಂದ್‌ ಮಿಶ್ರ ಹೆಚ್ಚಿನ ಸ್ವಾತಂತ್ರ್ಯ ಬಯಸಿ ತಮ್ಮ ಐಪಿಎಸ್‌ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.
ಐಪಿಎಸ್‌ ಅಧಿಕಾರಿ ಆನಂದ ಮಿಶ್ರ ರಾಜೀನಾಮೆ ನೀಡಿದ್ದಾರೆ.
ಐಪಿಎಸ್‌ ಅಧಿಕಾರಿ ಆನಂದ ಮಿಶ್ರ ರಾಜೀನಾಮೆ ನೀಡಿದ್ದಾರೆ.

ದೆಹಲಿ: ಇವರು ಹಿರಿಯ ಭಾರತೀಯ ಪೊಲೀಸ್‌ ಸೇವೆಯ ಅಧಿಕಾರಿ( IPS). ಅಸ್ಸಾಂ ಕೇಡರ್‌ ನಲ್ಲಿ ಹಲವು ವರ್ಷದಿಂದ ಕೆಲಸ ಮಾಡುತಿದ್ದರು. ಏಕಾಏಕಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಲು ತೀರ್ಮಾನಿಸಿದರು. ಅದಕ್ಕೆ ಅವರು ನೀಡಿದ ಕಾರಣ ತಮಗೆ ಸ್ವಾತಂತ್ರ್ಯ ಬೇಕು.

ಅಸ್ಸಾಂ ರಾಜ್ಯದ ಲಖೀಂಪುರ್‌ ಜಿಲ್ಲೆಯಲ್ಲಿ ಹಿರಿಯ ಎಸ್‌ಪಿಯಾಗಿ ಕಾರ್ಯನಿರ್ವಹಿಸುತ್ತಿರುವ ಆನಂದ ಮಿಶ್ರ ಕೆಲ ದಿನಗಳ ಹಿಂದೆ ಅಸ್ಸಾಂ ಮುಖ್ಯಕಾರ್ಯದರ್ಶಿ ಹಾಗೂ ಕೇಂದ್ರ ಗೃಹ ಸಚಿವಾಲಯಕ್ಕೆ ತಮ್ಮ ರಾಜೀನಾಮೆ ಪತ್ರ ಸಲ್ಲಿಸಿದ್ದರು. ಆ ಪತ್ರದಲ್ಲಿ ಅವರು ಬರೆದಿದ್ದು ಹೀಗಿತು. ನಾನು ನನ್ನಐಪಿಎಸ್‌ ಹುದ್ದೆಗೆ ಯಾವುದೇ ಷರತ್ತುಗಳಲ್ಲಿದೇ ರಾಜೀನಾಮೆ ನೀಡುತ್ತಿದ್ದೇನೆ. ನನಗೆ ಸ್ವಾತಂತ್ರ್ಯ ಬೇಕಾಗಿದೆ. ಸ್ವಾತಂತ್ರ್ಯದ ಬದುಕು ನಡೆಸಬೇಕು ಎನ್ನುವುದು ನನ್ನ ಬಯಕೆ. ಹಲವಾರು ಸಾಮಾಜಿಕ ಚಟುವಟಿಕೆಗಳ ಮೂಲಕ ನನ್ನನ್ನು ನಾನು ತೊಡಗಿಸಿಕೊಳ್ಳಲು ಬಯಸುವೆ. ಆ ಸಾಮಾಜಿಕ ಚಟುವಟಿಕೆಗಳು ಐಪಿಎಸ್‌ ಹುದ್ದೆಯನ್ನು ಮೀರಿದಂತವು. ನನ್ನ ರಾಜೀನಾಮೆ ಅಂಗೀಕಾರ ಮಾಡಿ ಎಂದು ಅವರು ಪತ್ರದಲ್ಲಿ ಬರೆದಿದ್ದರು.

ಈ ಕುರಿತು ಅವರ ಹೇಳಿಕೆಯನ್ನು ಪಡೆದು ಸಚಿವಾಲಯ ಎಲ್ಲ ಪ್ರಕ್ರಿಯೆಗಳನ್ನು ಮುಗಿಸಿ ಅವರ ರಾಜೀನಾಮೆ ಪತ್ರವನ್ನು ಅಂಗೀಕರಿಸಿದೆ. ಅವರ ರಾಜೀನಾಮೆಯು 2024ರ ಜನವರಿ 16ರಿಂದ ಜಾರಿಗೆ ಬರಲಿದೆ.

ಪೊಲೀಸ್‌ ಇಲಾಖೆಯಲ್ಲಿ ಉತ್ತಮ ಹೆಸರು ಪಡೆದಿರುವ ಆನಂದ್‌ ಮಿಶ್ರ ಅವರು ಅಸ್ಸಾಂನಲ್ಲಿ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡಿದವರು. ಎಎಸ್‌ಪಿ,. ಎಸ್‌ಪಿ ಹಾಗೂ ಹಿರಿಯ ಎಸ್‌ಪಿ ಹುದ್ದೆಯಲ್ಲಿದ್ದವರು. ಅದರಲ್ಲೂ ಅಸ್ಸಾಂನ ಹಲವೆಡೆ ಕಾನೂನು ಮತ್ತು ಸುವ್ಯವಸ್ಥೆ ಜಾರಿಗೊಳಿಸುವಲ್ಲಿ ಆನಂದ್‌ ಮಿಶ್ರ ಹೆಸರು ಮಾಡಿದ್ದರು. ಅಲ್ಲದೇ ಅಸ್ಸಾಂನಲ್ಲಿ ಮಿತಿ ಮೀರಿರುವ ಮಾದಕ ವಸ್ತುಗಳ ನಿಗ್ರಹ, ರಾಸುಗಳ ಸಾಗಣೆ,, ಡಕಾಯಿತಿ ಸಹಿತ ಹಲವು ಅಪರಾಧ ಪ್ರಕರಣಗಳನ್ನು ಬೇಧಿಸುವಲ್ಲಿ ಶ್ರಮಿಸಿದ್ದರು. ಪ್ರಾಮಾಣಿಕ ಹಾಗೂ ದಕ್ಷ ಅಧಿಕಾರಿ ಎಂದೇ ಹೆಸರು ಪಡೆದಿದ್ದರು, ಅಸ್ಸಾಂ ಜನ ಅವರನ್ನು ಸಿಂಗಂ ಎಂದೇ ಕರೆಯುತ್ತಿದ್ದರು. ಲಖೀಂಪುರ್‌ಗೂ ಮುಂಚೆ ದುಬ್ರಿ ಹಾಗೂ ನಾಗೌನ್‌ ಎಸ್ಪಿಯಾಗಿಯೂ ಮಿಶ್ರ ಕೆಲಸ ಮಾಡಿದ್ದರು.

ಅವರ ಆಪ್ತ ಮೂಲಗಳ ಪ್ರಕಾರ ಆನಂದ್‌ ಮಿಶ್ರ ಅವರು ರಾಜಕೀಯಕ್ಕೆ ಸೇರ್ಪಡೆಗೊಳ್ಳುವ ಸಾಧ್ಯತೆಯಿದೆ. ಬಿಹಾರದ ಬುಕ್ಸಾರ್‌ ಲೋಕಸಭಾ ಕ್ಷೇತ್ರದಿಂದ ಕಣಕ್ಕೆ ಇಳಿಯಬಹುದು ಎನ್ನಲಾಗುತ್ತಿದೆ.

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ