logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  South India Rain: ಇಂದು ಮಹಾರಾಷ್ಟ್ರ, ಆಂಧ್ರ ಪ್ರದೇಶದ ಕರಾವಳಿಯಲ್ಲಿ ಭಾರಿ ಮಳೆಯ ಮುನ್ಸೂಚನೆ; ಈ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ

South India Rain: ಇಂದು ಮಹಾರಾಷ್ಟ್ರ, ಆಂಧ್ರ ಪ್ರದೇಶದ ಕರಾವಳಿಯಲ್ಲಿ ಭಾರಿ ಮಳೆಯ ಮುನ್ಸೂಚನೆ; ಈ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ

Raghavendra M Y HT Kannada

Aug 15, 2023 05:51 AM IST

google News

ದಕ್ಷಿಣ ಭಾರತದ ಕೆಲವು ರಾಜ್ಯಗಳಲ್ಲಿ ಆಗಸ್ಟ್ 15 ರಂದು ಭಾರಿ ಮಳೆಯಾಗುವ ಮುನ್ಸೂಚನೆ ನೀಡಿದೆ. (HT)

  • ಮಹಾರಾಷ್ಟ್ರ, ಆಂಧ್ರಪ್ರದೇಶದ ಕರಾವಳಿ ಹಾಗೂ ತಮಿಳುನಾಡಿನಲ್ಲಿ ಇಂದು ಭಾರಿ ಮಳೆಯಾಗುವ ಮುನ್ಸೂಚನೆ ಇದೆ. ಆದರೆ ಕೇರಳದಲ್ಲಿ ಮುಂಗಾರು ದುರ್ಬಲಗೊಂಡಿದೆ.

ದಕ್ಷಿಣ ಭಾರತದ ಕೆಲವು ರಾಜ್ಯಗಳಲ್ಲಿ ಆಗಸ್ಟ್ 15 ರಂದು ಭಾರಿ ಮಳೆಯಾಗುವ ಮುನ್ಸೂಚನೆ ನೀಡಿದೆ. (HT)
ದಕ್ಷಿಣ ಭಾರತದ ಕೆಲವು ರಾಜ್ಯಗಳಲ್ಲಿ ಆಗಸ್ಟ್ 15 ರಂದು ಭಾರಿ ಮಳೆಯಾಗುವ ಮುನ್ಸೂಚನೆ ನೀಡಿದೆ. (HT)

ಬೆಂಗಳೂರು: ಕಳೆದ ಎರಡು ವಾರಗಳಿಂದ ತೆಲಂಗಾಣದ (Telangana Rains) ಕೆಲವೇ ಕೆಲವು ಸ್ಥಳಗಳಲ್ಲಿ ಸಾಧಾರಣ ಮಳೆ ಹೊರತುಪಡಿಸಿ ಬಹುತೇಕ ಕಡೆಗಳಲ್ಲಿ ಮಳೆಯಾಗಿಲ್ಲ. ಸಾಮಾನ್ಯವಾಗಿ ಜುಲೈ ಮತ್ತು ಆಗಸ್ಟ್‌ನಲ್ಲಿ ಉತ್ತಮ ಮಳೆಯಾಗುತ್ತದೆ. ಆದರೆ ಈ ಬಾರಿ ನಿರೀಕ್ಷೆಯಿಂದ ಕಡಿಮೆ ಮಳೆಯಾಗುತ್ತಿದೆ.

ಜುಲೈ ತಿಂಗಳ ಕೊನೆಯ ವಾರದಲ್ಲಿ ಭಾರಿ ಮಳೆಯಾಗಿತ್ತು. ಆ ಬಳಿಕ ನೆರೆಯ ರಾಜ್ಯಕ್ಕೆ ವರುಣ ಕೃಪೆಯನ್ನೇ ತೋರಲಿಲ್ಲ. ಇದರಿಂದ ರೈತರು ಆತಂಕಕ್ಕೀಡಾಗಿರುವ ಬೆನ್ನಲ್ಲೇ ಹವಾಮಾನ ಇಲಾಖೆ ಸಿಹಿ ಸುದ್ದಿಯನ್ನು ನೀಡಿದೆ. ಇನ್ನೂ ಮೂರು ದಿನ ತೆಲಂಗಾಣ ರಾಜಾದ್ಯಂತ ಭಾರಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಆಗಸ್ಟ್ 14ರ ಬೆಳಗ್ಗೆ 8.30ಕ್ಕೆ ದಾಖಲಾಗಿರುವ ವರದಿಯ ಪ್ರಕಾರ ವಾರಂಗಲ್ ಜಿಲ್ಲೆಯ ಚೆನ್ನರಾವ್‌ಪೇಟೆಯಲ್ಲಿ 5 ಸೆಂಟಿ ಮೀಟರ್ ಮಳೆಯಾಗಿದೆ. ಉಳಿದಂತೆ ಮಹಬೂಬಾಬಾದ್ ಜಿಲ್ಲೆಯ ಕೊತಗುಡ, ವಾರಂಗಲ್ ಜಿಲ್ಲೆಯ ನರಸಂಪೇಟೆಯಲ್ಲಿ ತಲಾ 4, ಮಹಬೂಬಾಬಾದ್ ಜಿಲ್ಲೆಯ ಗುಡೂರ್‌ವರ್ಗಲ್‌ನಲ್ಲಿ 3 ಸೆಂಟಿ ಮೀಟರ್ ಮಳೆಯಾಗಿದೆ.

ನೆರೆಯ ಆಂಧ್ರಪ್ರದೇಶದಲ್ಲೂ (Andhra Pradesh Rains) ಇಂದಿನಿಂದ ಎರಡ್ಮೂರು ದಿನಗಳ ಕಾಲ ಭಾರಿ ಮಳೆಯಾಗುವ ಮುನ್ಸೂಚನೆ ಇದೆ. ಹೈದರಾಬಾದ್, ಮಲ್ಕಾಜ್‌ಗಿರಿ, ಯಾದಾದ್ರಿ-ಭುವನಗಿರಿ, ಸಿದ್ದಿಪೇಟೆ, ನಲ್ಗೊಂಡ ಹಾಗೂ ಮೇಡ್ಚಲ್‌ ಜಿಲ್ಲೆಯಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಮೇಲೈ ಪರಿಚಲನೆಯಿಂದ ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್ ಬಳಿಯ ಮೋಡಗಳು ಆಂಧ್ರದ ಕರಾವಳಿಯತ್ತ ತಿರುಗಿದೆ. ಹೀಗಾಗಿ ತೆಲಂಗಾಣ ಹಾಗೂ ಆಂಧ್ರಪ್ರದೇಶದಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ಇದೆ.

ಮಹಾರಾಷ್ಟ್ರದಲ್ಲಿ (Maharashtra Rains) ಇಂದಿನಿಂದ ವ್ಯಾಪಕ ಮಳೆಯಾಗುವ ನಿರೀಕ್ಷೆ ಇದೆ. ಕೊಂಕಣ ಪ್ರದೇಶದ ಪ್ರತ್ಯೇಕ ಪ್ರದೇಶಗಳು, ವಿದರ್ಭದ ಪ್ರತ್ಯೇಕ ಪ್ರದೇಶಗಳಲ್ಲಿ ಭಾರಿಯಿಂದ ಕೂಡಿದ ಅತಿ ಭಾರಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಕಡಿಮೆ ಅವಧಿಯಲ್ಲೇ ಭಾರಿ ಮಳೆ ಬೀಳುವ ಬಹಳಷ್ಟು ಸಾಧ್ಯತೆ ಇದೆ. ಜುಲೈ ಕೊನೆಯ ವಾರದಲ್ಲಿ ಮಹಾರಾಷ್ಟ್ರದ ಬಹುತೇಕ ಕಡೆಗಳಲ್ಲಿ ವರುಣ ಅಬ್ಬರಿಸಿದ್ದ. ಆದರೆ ಆಗಸ್ಟ್ ಆರಂಭವಾಗುತ್ತಿದ್ದಂತೆ ಮಳೆರಾಯ ಫುಲ್ ಸೈಲೆಂಟ್ ಆಗಿದ್ದ. ಮರಾಠವಾಡದ ಹಲವು ಜಿಲ್ಲೆಗಳಲ್ಲಿ ನಿರೀಕ್ಷೆಗಿಂತ ಕಡಿಮೆ ಮಳೆಯಾಗಿದೆ. ಮುಂಬೈ, ಪಾಲ್ಘರ್, ಥಾಣೆ, ರಾಯಗಡ ಹಾಗೂ ನಾಂದೇಡ್ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಿತ್ತು. ಆದರೆ ಸತಾರಾ, ಸಾಂಗ್ಲಿ, ಅಹ್ಮದ್‌ನಗರ, ಔರಂಗಾಬಾದ್, ಬೀಡ್, ಜಲ್ನಾ, ಹಿಂಗೋಲಿ, ಅಕೋಲಾ ಹಾಗೂ ಜಲಗಾಂವ್ ಜಿಲ್ಲೆಗಳಲ್ಲಿ ಮಳೆಯ ಕೊರತೆಯಾಗಿದೆ. ಆಗಸ್ಟ್ 20ರ ನಂತರ ಮಹಾರಾಷ್ಟ್ರದಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಐಎಂಡಿ ಮುನ್ಸೂಚನೆ ನೀಡಿದೆ.

ಇತ್ತ ತಮಿಳುನಾಡಿನಲ್ಲೂ (Tamilnadu Rains) ಇಂದು ಗುಡುಗು ಸಹಿತ ಭಾರಿ ಮಳೆಯಾಗುವ ಮುನ್ಸೂಚನೆ ಇದೆ. ಈಗಾಗಲೇ ಚೆನ್ನೈನಲ್ಲಿ ಧಾರಾಕಾರ ಮಳೆಯಾಗುತ್ತಿರುವುದರಿಂದ ಅತಿಥಿಗಳಿಗೆ ಯಾವುದೇ ಸಮಸ್ಯೆಯಾಗದಂತೆ ಸೂಕ್ತ ಕ್ರಮ ಕೈಗೊಳ್ಳಲಾಗಿದ್ದು, ರಾಜಭವನದ ಒಳಗಡೆ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮಕ್ಕೆ ನಿರ್ಧರಿಸಲಾಗಿದೆ ಎಂದು ವರದಿಯಾಗಿದೆ.

ಕೇರಳದಲ್ಲಿ (Kerala Rains) ಮಾನ್ಸೂನ್ ದುರ್ಬಲವಾಗಿದ್ದು, ಬಿಸಿ ಏರುತ್ತಲೇ ಇದೆ. ನದಿಗಳಲ್ಲಿ ನೀರಿನ ಮಟ್ಟವು ನಾಟಕೀಯವಾಗಿ ಕುಸಿದಿದೆ. ಕುಡಿಯುವ ನೀರನ ಮೇಲೆ ಪರಿಣಾಮ ಬೀರುತ್ತದೆ. ಪಿರವಂ ನದಿಯಲ್ಲಿ ನೀರಿನ ಮಟ್ಟ 7 ಅಡಿಗೂ ಹೆಚ್ಚು ಕುಸಿದಿದೆ ಎಂದು ವರದಿಯಾಗಿದೆ. ಕೇರಳ, ಪುದುಚೇರಿ ಹಾಗೂ ಲಕ್ಷದ್ವೀಪದ ಕೆಲವು ಕಡೆಗಳಲ್ಲಿ ನಾಳೆ ಸಾಧಾರಣ ಮಳೆಯಾಗುವ ಮುನ್ಸೂಚನೆ ಇದೆ. ಉಳಿದಂತೆ ಒಣಹವೆ ಮುಂದುವರೆಯಲಿದೆ.

-----------------------------------------------------------------------------------

ಸಂಬಂಧಿತ ಲೇಖನ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ