logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಊಟಿಯಲ್ಲಿ ಎಲ್ಲೆಲ್ಲೂ ಹಿಮವೋ ಹಿಮ; ತಾಪಮಾನ ಕುಸಿತದಿಂದ ಮಿನಿ ಕಾಶ್ಮೀರದಂತಾಗಿದೆ ವಾತಾವರಣ; ವಿಡಿಯೊ ವೈರಲ್‌

ಊಟಿಯಲ್ಲಿ ಎಲ್ಲೆಲ್ಲೂ ಹಿಮವೋ ಹಿಮ; ತಾಪಮಾನ ಕುಸಿತದಿಂದ ಮಿನಿ ಕಾಶ್ಮೀರದಂತಾಗಿದೆ ವಾತಾವರಣ; ವಿಡಿಯೊ ವೈರಲ್‌

Reshma HT Kannada

Feb 18, 2024 12:57 PM IST

google News

ಊಟಿಯಲ್ಲಿ ಹಿಮ ಹಾಸಿದಂತಿರುವ ಪ್ರದೇಶ

    • ಊಟಿಗೆ ಪ್ರವಾಸ ಮಾಡಬೇಕು ಎಂದು ಪ್ಲಾನ್‌ ಮಾಡುತ್ತಿದ್ದರೆ ಗಮನಿಸಿ. ಊಟಿಯಲ್ಲಿ ತಾಪಮಾನ 1.3 ಡಿಗ್ರಿ ಕುಸಿದಿದ್ದು, ಎಲ್ಲೆಲ್ಲೂ ಹಿಮ ಹಾಸಿದಂತಿದೆ. ಮಂಜು ಮುಸುಕಿದ ವಾತಾವರಣ, ಸುರಿಯುತ್ತಿರುವ ಹಿಮದಿಂದಾಗಿ ಊಟಿಯು ಮಿನಿ ಕಾಶ್ಮೀರವಾಗಿ ಬದಲಾಗಿದೆ. ಇಲ್ಲಿನ ವಿಡಿಯೊವನ್ನು ನೀವೂ ಕಣ್ತುಂಬಿಕೊಳ್ಳಿ.
ಊಟಿಯಲ್ಲಿ ಹಿಮ ಹಾಸಿದಂತಿರುವ ಪ್ರದೇಶ
ಊಟಿಯಲ್ಲಿ ಹಿಮ ಹಾಸಿದಂತಿರುವ ಪ್ರದೇಶ

ನೀಲಗಿರಿ ಬೆಟ್ಟಗಳು, ಹಸಿರು ಹಾಸಿದಂತಿರುವ ಗುಡ್ಡಗಳು, ಅರಳಿ ನಿಂತಿರುವ ಬಣ್ಣ ಬಣ್ಣದ ಗುಲಾಬಿಗಳಿಂದ ತುಂಬಿರುವ ಅದ್ಭುತ ಪ್ರಕೃತಿ ರಮಣೀಯ ಕ್ಷೇತ್ರ ತಮಿಳುನಾಡಿನ ಊಟಿ. ದಕ್ಷಿಣ ಭಾರತದ ಕಾಶ್ಮೀರ ಎಂದೇ ಕರೆಸಿಕೊಳ್ಳುವ ಈ ಜಾಗವು ಇದೀಗ ಅಕ್ಷರಶಃ ಕಾಶ್ಮೀರದಂತಾಗಿದೆ. ಭಾನುವಾರ ಊಟಿಯ ತಾಪಮಾನವು 1.3 ಡಿಗ್ರಿ ಸೆಲ್ಸಿಯಸ್‌ಗೆ ಇಳಿದಿದೆ. ಈ ಮೂಲಕ ಮಿನಿ ಕಾಶ್ಮೀರದಂತಾಗಿದೆ.

ತಾಪಮಾನದಲ್ಲಿನ ಹಠಾತ್‌ ಕುಸಿತ ಹಾಗೂ ಮಂಜು ಮುಸುಕಿದ ವಾತಾವರಣ ಸಾಮಾನ್ಯ ಜನ ಜೀವನವನ್ನು ಅಸ್ತವ್ಯಸ್ಥಗೊಳಿಸಿದೆ. ಜನರು ಚಳಿ ತಡೆಯುವ ಸಲುವಾಗಿ ಫೈರ್‌ ಕ್ಯಾಂಪ್‌ ಮಾಡಿ ಮೈ ಬಿಸಿ ಮಾಡಿಕೊಳ್ಳುತ್ತಿದ್ದಾರೆ.

ಪ್ರತಿವರ್ಷ ನವೆಂಬರ್‌ನಿಂದ ಫೆಬ್ರುವರಿವರೆಗೆ ಊಟಿಯಲ್ಲಿ ಈ ರೀತಿಯ ವಾತಾವರಣ ಇರುತ್ತದೆ. ಆದರೆ ಈ ವರ್ಷ ತಾಪಮಾನ ವಿಪರೀತ ಕುಸಿದಿದೆ. ಊಟಿ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಾದ ಕಾಂತಲ್‌, ಪಿಂಕರ್‌ ಪೋಸ್ಟ್‌ ಮತ್ತು ತಲೈ ಕುಂಟಾಗಳು ಹಿಮಾವೃತವಾಗಿರುವುದನ್ನು ಕಾಣಬಹುದಾಗಿತ್ತು.

ಮಂಜಿನ ಕಾರಣದಿಂದ ಊಟಿ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹುಲ್ಲುಹಾಸಿನ ಮೇಲೆ ನೀರಿನ ಹನಿಗಳು ಹೆಪ್ಪುಗಟ್ಡಿದ್ದವು. ಹಸಿರಾಗಿ ಹರಡಿರುವ ಹುಲ್ಲಿನ ಮೇಲೆ ಹಿಮದ ಬಿಂದುಗಳು ಹರಡಿ ಬಿಳಿ ಕಾರ್ಪೇಟ್‌ ಹಾಸಿದಂತೆ ಕಾಣುತ್ತಿತ್ತು.

ಊಟಿಯ ಈ ರಮ್ಯ ಮನೋಹರ ದ್ರಶ್ಯವನ್ನು ಎಕ್ಸ್‌ನಲ್ಲಿ ಹಂಚಿಕೊಂಡಿದೆ ಎಎನ್‌ಐ ಸುದ್ದಿಸಂಸ್ಥೆ. ʼಊಟಿಯಲ್ಲಿ ಸಸ್ಯಗಳು ಹಾಗೂ ವಾಹನಗಳ ಮೇಲೆ ಹಿಮ ಹರಡಿದೆ. ತಾಪಮಾನವು ಕನಿಷ್ಠ 2.5ಡಿಗ್ರಿಗೆ ಇಳಿಯಲಿದೆʼ ಎಂದು ಬರೆದುಕೊಂಡಿದೆ.

ಜನವರಿ 27ರ ವಿಡಿಯೊವನ್ನು ಎಕ್ಸ್‌ನಲ್ಲಿ ಹಂಚಿಕೊಳ್ಳಲಾಗಿದೆ. ಅಂದಿನಿಂದ ಈವರೆಗೆ 30ಕ್ಕೂ ಅಧಿಕ ಮಂದಿ ಈ ಪೋಸ್ಟ್‌ ವೀಕ್ಷಿಸಿದ್ದಾರೆ. ಅದರ ಜೊತೆಗೆ ಈ ವಿಡಿಯೊಗೆ ಹಲವರು ಲೈಕ್ಸ್‌ ಹಾಗೂ ರೀಟ್ವೀಟ್‌ ಮಾಡಿದ್ದಾರೆ. ಕೆಲವರು ಕಾಮೆಂಟ್‌ ಮೂಲಕ ಮಿನಿ ಕಾಶ್ಮೀರದ ಬಗ್ಗೆ ಅಭಿಪ್ರಾಯ ತಿಳಿಸಿದ್ದಾರೆ.

ʼಅದ್ಭುತ, ರಮ್ಯ ಮನೋಹರ ದ್ರಶ್ಯʼ ಎಂದು ಹಲವರು ಕಾಮೆಂಟ್‌ ಮಾಡಿದ್ದಾರೆ. ಇದು ನಿಜಕ್ಕೂ ಕಾಶ್ಮೀರದಂತಿದೆ ಎಂದು ಇನ್ನೂ ಕೆಲವು ಕಾಮೆಂಟ್‌ ಮಾಡುವ ಮೂಲಕ ಮಿನಿ ಕಾಶ್ಮೀರದ ಅಂದವನ್ನು ಹಾಡಿ ಹೊಗಳಿದ್ದಾರೆ.

ಇದನ್ನೂ ಓದಿ

Bengaluru Metro: ಬೆಂಗಳೂರಿಗೆ ಹೊರಟಿದೆ ಚೀನಾ ಸಹಯೋಗದ ಚಾಲಕ ರಹಿತ ಮೆಟ್ರೋ ರೈಲು; ಹಳದಿ ಮಾರ್ಗದಲ್ಲಿ ಸಂಚಾರ ನಿರೀಕ್ಷೆ

Driverless Train For Bengaluru Metro: ಬೆಂಗಳೂರು ಮೆಟ್ರೋದ ಹಳದಿ ಮಾರ್ಗಕ್ಕೆ ಮೊದಲ ಚಾಲಕ ರಹಿತ ಮೆಟ್ರೋ ರೈಲು ಆಗಮಿಸುತ್ತಿದೆ. ಸೆಪ್ಟೆಂಬರ್‌ನಲ್ಲಿ ಇದು ಸಂಚಾರ ಪ್ರಾರಂಭಿಸುವ ಸಾಧ್ಯತೆ ಇದೆ. ಚೀನಾ ಸಹಭಾಗಿತ್ವದಲ್ಲಿ ಈ ಮೆಟ್ರೋ ರೈಲು ನಿರ್ಮಿಸಲಾಗಿದ್ದು, ಬಹಳ‍ಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದೆ.

(This copy first appeared in Hindustan Times Kannada website. To read more like this please logon to kannada.hindustantimes.com )

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ