logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Upsc Prelims Results: ಯುಪಿಎಸ್‌ಸಿ ಪ್ರಿಲಿಮ್ಸ್‌ ಫಲಿತಾಂಶ ಪ್ರಕಟ, 14,624 ಅಭ್ಯರ್ಥಿಗಳು ಮುಖ್ಯ ಪರೀಕ್ಷೆಗೆ ಆಯ್ಕೆ, ಇಲ್ಲಿದೆ ವಿವರ

UPSC Prelims results: ಯುಪಿಎಸ್‌ಸಿ ಪ್ರಿಲಿಮ್ಸ್‌ ಫಲಿತಾಂಶ ಪ್ರಕಟ, 14,624 ಅಭ್ಯರ್ಥಿಗಳು ಮುಖ್ಯ ಪರೀಕ್ಷೆಗೆ ಆಯ್ಕೆ, ಇಲ್ಲಿದೆ ವಿವರ

Praveen Chandra B HT Kannada

Jun 12, 2023 03:15 PM IST

google News

UPSC Prelims results: ಯುಪಿಎಸ್‌ಸಿ ಪ್ರಿಲಿಮ್ಸ್‌ ಫಲಿತಾಂಶ ಪ್ರಕಟ, 14,624 ಅಭ್ಯರ್ಥಿಗಳು ಮುಖ್ಯ ಪರೀಕ್ಷೆಗೆ ಆಯ್ಕೆ, ಇಲ್ಲಿದೆ ವಿವರ

    • UPSC 2023: ಕೇಂದ್ರ ಲೋಕ ಸೇವಾ ಆಯೋಗವು 2023ನೇ ಸಾಲಿನ ನಾಗರಿಕ ಸೇವಾ ಪರೀಕ್ಷೆಗಳ ಫಲಿತಾಂಶ ಪ್ರಕಟಿಸಿದೆ. ಪ್ರಿಲಿಮ್ಸ್‌ ಪರೀಕ್ಷೆ ಬರೆದ ಅಭ್ಯರ್ಥಿಗಳು ತಮ್ಮ ಫಲಿತಾಂಶವನ್ನು ಯುಪಿಎಸ್‌ಸಿ ವೆಬ್‌ಸೈಟ್‌ನಲ್ಲಿ(upsc.gov.in) ಪರಿಶೀಲಿಸಬಹುದು.
UPSC Prelims results: ಯುಪಿಎಸ್‌ಸಿ ಪ್ರಿಲಿಮ್ಸ್‌ ಫಲಿತಾಂಶ ಪ್ರಕಟ, 14,624 ಅಭ್ಯರ್ಥಿಗಳು ಮುಖ್ಯ ಪರೀಕ್ಷೆಗೆ ಆಯ್ಕೆ, ಇಲ್ಲಿದೆ ವಿವರ
UPSC Prelims results: ಯುಪಿಎಸ್‌ಸಿ ಪ್ರಿಲಿಮ್ಸ್‌ ಫಲಿತಾಂಶ ಪ್ರಕಟ, 14,624 ಅಭ್ಯರ್ಥಿಗಳು ಮುಖ್ಯ ಪರೀಕ್ಷೆಗೆ ಆಯ್ಕೆ, ಇಲ್ಲಿದೆ ವಿವರ

ಕೇಂದ್ರ ಲೋಕ ಸೇವಾ ಆಯೋಗವು 2023ನೇ ಸಾಲಿನ ನಾಗರಿಕ ಸೇವಾ ಪರೀಕ್ಷೆಗಳ ಫಲಿತಾಂಶ ಪ್ರಕಟಿಸಿದೆ. ಪ್ರಿಲಿಮ್ಸ್‌ ಪರೀಕ್ಷೆ ಬರೆದ ಅಭ್ಯರ್ಥಿಗಳು ತಮ್ಮ ಫಲಿತಾಂಶವನ್ನು ಯುಪಿಎಸ್‌ಸಿ ವೆಬ್‌ಸೈಟ್‌ನಲ್ಲಿ ಪರಿಶೀಲಿಸಬಹುದು. ಅಂದರೆ, upsc.gov.in ವೆಬ್‌ಸೈಟ್‌ನಲ್ಲಿ ಫಲಿತಾಂಶ ಪರಿಶೀಲಿಸಬಹುದು.

ಯುಪಿಎಸ್‌ಸಿ ಪರೀಕ್ಷೆಯನ್ನು ಮೇ 28ರಂದು ನಡೆಸಲಾಗಿತ್ತು. ಇದೀಗ ಯುಪಿಎಸ್‌ಸಿಯು ಫಲಿತಾಂಶ ಪ್ರಕಟಿಸಿದೆ. ಆಯ್ಕೆಯಾದ ಅಭ್ಯರ್ಥಿಗಳು ಮುಖ್ಯ ಪರೀಕ್ಷೆ ಬರೆಯಲು ಅರ್ಹತೆ ಪಡೆದಿದ್ದಾರೆ. ಒಟ್ಟು 14,624 ಅಭ್ಯರ್ಥಿಗಳು ಯುಪಿಎಸ್‌ಸಿ ಮುಖ್ಯ ಪರೀಕ್ಷೆ ಬರೆಯಲು ಅರ್ಹತೆ ಪಡೆದಿದ್ದಾರೆ.

ಯುಪಿಎಸ್‌ಸಿಯು ಈಗ ಪ್ರಕಟಿಸಿರುವ ಪಟ್ಟಿಯು ಸಂಭಾವ್ಯ ಪಟ್ಟಿಯಾಗಿರುತ್ತದೆ. ಈ ಪಟ್ಟಿಯಲ್ಲಿರುವ ಅಭ್ಯರ್ಥಿಗಳು ಇದೀಗ ಮತ್ತೆ ಡಿಟೈಲ್ಡ್‌ ಅಪ್ಲಿಕೇಷನ್‌ ಫಾರ್ಮ್‌ 1 (ಡಿಎಎಫ್‌-1) ಮೂಲಕ ಮತ್ತೆ ಅರ್ಜಿ ಸಲ್ಲಿಸಬೇಕಿರುತ್ತದೆ. ಈ ರೀತಿ ಅರ್ಜಿ ಸಲ್ಲಿಸಿದವರು ಮಾತ್ರ ಮುಖ್ಯ ಪರೀಕ್ಷೆ ಬರೆಯಲು ಅರ್ಹತೆ ಪಡೆಯುತ್ತಾರೆ.

ಇದೇ ಸಮಯದಲ್ಲಿ ಯುಪಿಎಸ್‌ಸಿಯು ಭಾರತೀಯ ಅರಣ್ಯ ಸೇವೆ (ಮುಖ್ಯ) ಪರೀಕ್ಷೆಗೆ ಅಯ್ಕೆಯಾದ ಅಭ್ಯರ್ಥಿಗಳ ಪಟ್ಟಿಯನ್ನೂ ಪ್ರಕಟಿಸಿದೆ. 1,958 ಅಭ್ಯರ್ಥಿಗಳು ಭಾರತೀಯ ಅರಣ್ಯ ಸೇವೆ ಮುಖ್ಯ ಪರೀಕ್ಷೆಗೆ ಅರ್ಹತೆ ಪಡೆದಿದ್ದಾರೆ.

ಅಂಕಪಟ್ಟಿ, ಕಟ್‌ ಆಫ್‌ ಮಾರ್ಕ್‌ಗಳು ಮತ್ತು ಉತ್ತರ ಕೀಗಳನ್ನು ಕೇಂದ್ರ ಲೋಕ ಸೇವಾ ಆಯೋಗದ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು ಎಂದು ಅಧಿಕೃತ ಅಧಿಸೂಚನೆ ತಿಳಿಸಿದೆ.

ಇಂಪಾಲ್‌ ಕೇಂದ್ರದಲ್ಲಿ ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗೆ ಅಲ್ಲಿ ನಡೆಯುತ್ತಿರುವ ಗಲಾಟೆ, ಹಿಂಸೆಯ ಕಾರಣದಿಂದ ಪರೀಕ್ಷಾ ಕೇಂದ್ರ ಬದಲಾಯಿಸುವ ಅವಕಾಶವನ್ನೂ ನೀಡಿದೆ.

ಆಕೆಗೆ ಬಲಗೈ ಇಲ್ಲ, ಅವನಿಗೆ ಎರಡು ಕಾಲಿಲ್ಲ, ಯುಪಿಎಸ್‌ಸಿ ಸಾಧಕರ ಸ್ಪೂರ್ತಿದಾಯಕ ಯಶೋಗಾಥೆಗಳು ಇಲ್ಲಿವೆ ಓದಿ

ಕೇಂದ್ರ ಲೋಕಸೇವಾ ಆಯೋಗ ನಡೆಸುವ ನಾಗರಿಕ ಸೇವಾ ಪರೀಕ್ಷೆಯಲ್ಲಿ ಯಶಸ್ಸು ಪಡೆದು ಐಎಎಸ್‌, ಐಪಿಎಸ್‌, ಐಎಫ್‌ಎಸ್‌ ಅಧಿಕಾರಿಯಾಗಬೇಕೆಂದು ಬಹುತೇಕರು ಬಯಸುತ್ತಾರೆ. ಆದರೆ, ಈ ಪರೀಕ್ಷೆ ಎದುರಿಸಲು ತಮ್ಮಿಂದಾಗದು ಎಂದು ಪ್ರಯತ್ನವೇ ನಡೆಸದೆ ಕೈಚೆಲ್ಲುತ್ತಾರೆ. ಆದರೆ, ಜೀವನದಲ್ಲಿ ಸಾಕಷ್ಟು ಕಷ್ಟ ಕಾರ್ಪಣ್ಯಗಳನ್ನು ಕಂಡವರು, ವಿಶೇಷ ಚೇತನರು ಅಥವಾ ಬಡವರು ಕೂಡ ಈ ನಾಗರಿಕ ಸೇವೆ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿ ಉಳಿದವರಿಗೆ ಸ್ಪೂರ್ತಿಯಾಗುತ್ತಾರೆ.

ಇತ್ತೀಚೆಗೆ ಪ್ರಕಟಗೊಂಡ 2022ರ ಯುಪಿಎಸ್‌ಸಿ ನಾಗರಿಕ ಸೇವಾ ಪರೀಕ್ಷೆಯಲ್ಲಿ ಇಶಿತಾ ಕಿಶೋರ್‌ ಅವರು ದೇಶಕ್ಕೆ ನಂಬರ್‌ ಒನ್‌ ಸ್ಥಾನ ಪಡೆದಿದ್ದರು. ಗರಿಮಾ ಲೋಹಿಯಾ ಮತ್ತು ಉಮಾ ಹರಥಿ ಎನ್‌ ಅವರು ಕ್ರಮವಾಗಿ ಎರಡನೇ ಮತ್ತು ಮೂರನೇ ಸ್ಥಾನ ಪಡೆದಿದ್ದರು. ಯುಪಿಎಸ್‌ಸಿಯಲ್ಲಿ ಯಶಸ್ಸು ಪಡೆಯಲು ಬಯಸುವವರಿಗೆ ಸ್ಪೂರ್ತಿದಾಯಕವಾದ ಏಳು ಜನರ ಯಶೋಗಾಥೆ ಇಲ್ಲಿದೆ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ