logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  India Q1 Gdp Grows At 13.5 Percent: ಭಾರತದ ಜಿಡಿಪಿ ಶೇ. 13.5ರಷ್ಟು ಪ್ರಗತಿ, ಚೀನಾದ್ದು ಕೇವಲ ಶೇ 0.4 ಏರಿಕೆ

India Q1 GDP grows at 13.5 percent: ಭಾರತದ ಜಿಡಿಪಿ ಶೇ. 13.5ರಷ್ಟು ಪ್ರಗತಿ, ಚೀನಾದ್ದು ಕೇವಲ ಶೇ 0.4 ಏರಿಕೆ

Praveen Chandra B HT Kannada

Sep 01, 2022 09:09 AM IST

google News

India Q1 GDP grows at 13.5 percent: ಭಾರತದ ಜಿಡಿಪಿ ಶೇ. 13.5ರಷ್ಟು ಪ್ರಗತಿ, ಚೀನಾದ್ದು ಕೇವಲ ಶೇ 0.4 ಏರಿಕೆ

    • ಭಾರತದ ಜಿಡಿಪಿ ಪ್ರಗತಿ ಕುರಿತು ಗುಡ್‌ ನ್ಯೂಸ್‌ ಬಂದಿದೆ. ದೇಶದ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) ಬೆಳವಣಿಗೆ ಗಣನೀಯವಾಗಿ ಏರಿಕೆ ಕಂಡಿದೆ. ಈ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕವಾದ ಏಪ್ರಿಲ್‌ -ಜೂನ್‌ ಅವಧಿಯಲ್ಲಿ ಜಿಡಿಪಿ ಬೆಳವಣಿಗೆ ಶೇ.13.5% ರಷ್ಟು ಪ್ರಗತಿ ದಾಖಲಿಸಿದೆ. ಇದೇ ಅವಧಿಯಲ್ಲಿ ಚೀನಾದ ಜಿಡಿಪಿ ಕೇವಲ ಶೇ 0.4ರಷ್ಟು ಪ್ರಗತಿ ದಾಖಲಿಸಿದೆ.
India Q1 GDP grows at 13.5 percent: ಭಾರತದ ಜಿಡಿಪಿ ಶೇ. 13.5ರಷ್ಟು ಪ್ರಗತಿ, ಚೀನಾದ್ದು ಕೇವಲ ಶೇ 0.4 ಏರಿಕೆ
India Q1 GDP grows at 13.5 percent: ಭಾರತದ ಜಿಡಿಪಿ ಶೇ. 13.5ರಷ್ಟು ಪ್ರಗತಿ, ಚೀನಾದ್ದು ಕೇವಲ ಶೇ 0.4 ಏರಿಕೆ

ಭಾರತದ ಜಿಡಿಪಿ ಪ್ರಗತಿ ಕುರಿತು ಗುಡ್‌ ನ್ಯೂಸ್‌ ಬಂದಿದೆ. ದೇಶದ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) ಬೆಳವಣಿಗೆ ಗಣನೀಯವಾಗಿ ಏರಿಕೆ ಕಂಡಿದೆ. ಈ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕವಾದ ಏಪ್ರಿಲ್‌ -ಜೂನ್‌ ಅವಧಿಯಲ್ಲಿ ಜಿಡಿಪಿ ಬೆಳವಣಿಗೆ ಶೇ.13.5% ರಷ್ಟು ಪ್ರಗತಿ ದಾಖಲಿಸಿದೆ. ಇದೇ ಅವಧಿಯಲ್ಲಿ ಚೀನಾದ ಜಿಡಿಪಿ ಕೇವಲ ಶೇ 0.4ರಷ್ಟು ಪ್ರಗತಿ ದಾಖಲಿಸಿದೆ.

2021ರ ಈ ಅವಧಿಯಲ್ಲಿ ಜಿಡಿಪಿ ಬೆಳವಣಿಗೆ 20.1% ರಷ್ಟು ಏರಿಕೆಯಾಗಿತ್ತು. 2020ರಲ್ಲಿ ಕೋವಿಡ್‌-೧೯ನಿಂದಾಗಿ ಜಿಡಿಪಿ ಇಳಿಕೆ ಕಂಡಿತ್ತು. ಆದರೆ, ಈ ವರ್ಷ ದೇಶದ ಜಿಡಿಪಿ ಗಣನೀಯವಾಗಿ ಏರಿಕೆ ಕಂಡಿದೆ. ಭಾರತದ ಪ್ರಸಕ್ತ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ ಒಟ್ಟು ರಾಷ್ಟ್ರೀಯ ಉತ್ಪನ್ನವು ಶೇ 13.5ರ ಪ್ರಗತಿ ದಾಖಲಿಸಿದೆ ಎಂದು ರಾಷ್ಟ್ರೀಯ ಸಾಂಖ್ಯಿಕ ಕಚೇರಿ (ಎನ್‌ಎಸ್‌ಒ) ಅಂಕಿಅಂಶ ಬಿಡುಗಡೆ ಮಾಡಿದೆ.

ಏಪ್ರಿಲ್‌- ಜೂನ್‌ ಮೊದಲ ಹಣಕಾಸು ವರ್ಷದಲ್ಲಿ ಆರ್‌ಬಿಐ ಜಿಡಿಪಿ ಬೆಳವಣಿಗೆ 16.2% ರಷ್ಟಿರಬಹುದು ಎಂದು ಅಂದಾಜಿಸಲಾಗಿತ್ತು. ಭಾರತದ ಆರ್ಥಿಕತೆಯ ಮೂಲಾಂಶಗಳು ಸದೃಢವಾಗಿದ್ದು, ಈ ಬಾರಿಯ ಜಿಡಿಪಿ ಪ್ರಗತಿ ಎರಡಂಕಿ ದಾಖಲಾಗಬಹುದು ಎಂದು ಹಲವು ವಿಶ್ಲೇಷಣಾ ಸಂಸ್ಥೆಗಳು ತಿಳಿಸಿದವು. 2022ರ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಭಾರತವು ಶೇ 13ರ ಪ್ರಗತಿ ದಾಖಲಿಸಬಹುದು ಎಂದು ICRA ಮುನ್ನೋಟ ನೀಡಿತ್ತು. ಎಸ್‌ಬಿಐ ಅರ್ಥಶಾಸ್ತ್ರಜ್ಞರು ದೇಶದ ಜಿಡಿಪಿ ಪ್ರಗತಿಯು ಶೇ 15.7 ಇರಬಹುದು ಎಂದಿದ್ದರು. ಈ ತಿಂಗಳ ಆರಂಭದಲ್ಲಿ ನಡೆದ ಹಣಕಾಸು ಮಾರ್ಗದರ್ಶಿ ಸಂಇತಿ ಸಭೆಯಲ್ಲಿ ಆರ್‌ಬಿಐಯು ಈ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ ಜಿಡಿಪಿ ಶೇ. 16.2 ಇರಬಹುದು ಎಂದು ಅಂದಾಜಿಸಿತ್ತು.

ವಲಯವಾರು ಜಿಡಿಪಿ ಪ್ರಗತಿ ಈ ಮುಂದಿನಂತೆ ಇದೆ. ಮೂಲಸೌಕರ್ಯ ಕಾರ್ಖಾನೆಗಳ ಉತ್ಪಾದನೆಯು ಜುಲೈನಲ್ಲಿ ವರ್ಷದಿಂದ ವರ್ಷಕ್ಕೆ ಶೇಕಡಾ 4.5 ಏರಿಕೆ ದಾಖಲಿಸಿದೆ. ಕಲ್ಲಿದ್ದಲು, ಕಚ್ಚಾ ತೈಲ, ನೈಸರ್ಗಿಕ ಅನಿಲ, ರಿಫೈನರಿ ಉತ್ಪನ್ನಗಳು, ರಸಗೊಬ್ಬರ, ಉಕ್ಕು, ಸಿಮೆಂಟ್ ಮತ್ತು ವಿದ್ಯುತ್ ಇತ್ಯಾದಿ ಪ್ರಮುಖ ಮೂಲಸೌಕರ್ಯ ವಲಯಗಳಲ್ಲಿ ಆರ್ಥಿಕ ಪ್ರಗತಿ ಶೇ. 4.5ರಷ್ಟು ಏರಿಕೆ ಕಂಡಿದೆ. ಅಂದರೆ, ಈ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ ಈ ಎಂಟು ವಲಯಗಳ ಪ್ರಗತಿ ಶೇಕಡ 11.5ಕ್ಕೆ ತಲುಪಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ ಇದು ಶೇಕಡ 21.4 ತಲುಪಿತ್ತು.

ಭಾರತದಲ್ಲಿ ಜಿಡಿಪಿಯು ಪ್ರಗತಿಯತ್ತ ಮುಖ ಮಾಡಿದರೆ, ಚೀನಾದ ಜಿಡಿಪಿ ಪ್ರಗತಿ ಕುಂಠಿತವಾಗಿದೆ. ಚೀನಾದಲ್ಲಿ ಜಿಡಿಪಿ ಶೇ 0.4ರ ಜಿಡಿಪಿ ಪ್ರಗತಿ ದಾಖಲಿಸಿದೆ.

ಭಾರತದಲ್ಲಿ 2021-22ನೇ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ 32.46 ಲಕ್ಷ ಕೋಟಿ ರೂಪಾಯಿ ಇದ್ದ ಆರ್ಥಿಕ ಬೆಳವಣಿಗೆಯು 2022-23ರ ಏಪ್ರಿಲ್‌-ಜೂನ್‌ ತ್ರೈಮಾಸಿಕದಲ್ಲಿ 36.85 ಲಕ್ಷ ಕೋಟಿಗೆ ತಲುಪುವುದಾಗಿ ಅಂದಾಜಿಸಲಾಗಿದೆ. 2021-22ರಲ್ಲಿ ಶೇಕಡ 20.1ರಷ್ಟು ಜಿಡಿಪಿ ದಾಖಲಾಗಿತ್ತು. ಉಕ್ರೇನ್‌ ಮೇಲೆ ರಷ್ಯಾ ದಾಳಿ, ಕೃಷಿ ಇಳುವರಿ ಕೊರತೆ ಇತ್ಯಾದಿಗಳಿಂದ ಹಣದುಬ್ಬರ ಹೆಚ್ಚಳದಿಂದ ಗ್ರಾಹಕರ ಮೇಲೆ ಪರಿಣಾಮವಾಗಿದೆ. ಹೀಗಿದ್ದರೂ, ಜಿಡಿಪಿ ದರ ಸದ್ಯ ಗಮನಾರ್ಹ ಪ್ರಗತಿ ದಾಖಲಿಸಿದ್ದು, ಹೊಸ ಆಶಾವಾದ ಮೂಡಿಸಿದೆ.

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ