logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Biparjoy Cyclone: ಅರಬ್ಬಿ ಸಮುದ್ರದಲ್ಲಿ ಬಿಪರ್‌ಜಾಯ್ ಸೈಕ್ಲೋನ್; ಹವಾಮಾನ, ಭಾರತದ ಮುಂಗಾರು ಮಳೆ ಮೇಲಿನ ಪರಿಣಾಮಗಳು ಇವು

Biparjoy Cyclone: ಅರಬ್ಬಿ ಸಮುದ್ರದಲ್ಲಿ ಬಿಪರ್‌ಜಾಯ್ ಸೈಕ್ಲೋನ್; ಹವಾಮಾನ, ಭಾರತದ ಮುಂಗಾರು ಮಳೆ ಮೇಲಿನ ಪರಿಣಾಮಗಳು ಇವು

HT Kannada Desk HT Kannada

Jun 07, 2023 07:34 AM IST

google News

ನಾಳೆ ಅಥವಾ ನಾಡಿದ್ದು ಕೇರಳಕ್ಕೆ ಮುಂಗಾರು ಪ್ರವೇಶಿಸಲಿದೆ ಎಂದು ಖಾಸಗಿ ಹವಾಮಾನ ಸಂಸ್ಥೆಯೊಂದು ಮಾಹಿತಿ ನೀಡಿದೆ. (AFP)

  • ಜೂನ್ 8 ಅಥವಾ 9 ರಂದು ಮುಂಗಾರು ಮಳೆ ಕೇರಳ ಪ್ರವೇಶಿಸಲಿದೆ ಎಂದು ಖಾಸಗಿ ಹವಾಮಾನ ಏಜೆನ್ಸಿ ಸ್ಕೈಮೆಟ್ ವೆದರ್ ಸಂಸ್ಥೆ ಮಾಹಿತಿ ನೀಡಿದೆ.

ನಾಳೆ ಅಥವಾ ನಾಡಿದ್ದು ಕೇರಳಕ್ಕೆ ಮುಂಗಾರು ಪ್ರವೇಶಿಸಲಿದೆ ಎಂದು ಖಾಸಗಿ ಹವಾಮಾನ ಸಂಸ್ಥೆಯೊಂದು ಮಾಹಿತಿ ನೀಡಿದೆ. (AFP)
ನಾಳೆ ಅಥವಾ ನಾಡಿದ್ದು ಕೇರಳಕ್ಕೆ ಮುಂಗಾರು ಪ್ರವೇಶಿಸಲಿದೆ ಎಂದು ಖಾಸಗಿ ಹವಾಮಾನ ಸಂಸ್ಥೆಯೊಂದು ಮಾಹಿತಿ ನೀಡಿದೆ. (AFP)

ನವದೆಹಲಿ: ದೇಶದಲ್ಲಿ ಈ ಬಾರಿ ಮುಂಗಾರ ಒಂದು ವಾರ ತಡವಾಗುತ್ತಿರುವ ಬೆನ್ನಲ್ಲೇ ಆಗ್ನೇಯ ಅರಬ್ಬಿ ಸಮುದ್ರದ ಮೇಲೆ ಸೈಕ್ಲೋನ್ ಚಂಡಮಾರುತ ಬಿಪರ್‌ಜಾಯ್ (Biparjoy Cyclone) ಉತ್ತರದ ಕಡೆಗೆ ಚಲಿಸುವ ಸಾಧ್ಯತೆ ಇದೆ. ಪರಿಣಾಮವಾಗಿ ಮುಂದಿನ 24 ಗಂಟೆಗಳಲ್ಲಿ ತೀವ್ರ ಚಂಡಮಾರುತವಾಗಿ ಪರಿವರ್ತನೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮಾಹಿತಿ ನೀಡಿದೆ.

ಪೂರ್ವ-ಮಧ್ಯ ಹಾಗೂ ಆಗ್ನೇಯ ದಿಕ್ಕಿನ ಅರಬ್ಬಿ ಸಮುದ್ರದ ಮೇಲೆ ಚಂಡಮಾರುತವು ಸುಮಾರು 3 ಗಂಟೆಗಳ ಕಾಲ ಸ್ಥಿರವಾಗಿ ಉಳಿದಿದೆ. ತಡರಾತ್ರಿ 2.30ಕ್ಕೆ ಗೋವಾದ ಪಶ್ಚಿಮ-ನೈಋತ್ಯಕ್ಕೆ 900 ಕಿಲೋ ಮೀಟರ್, ಮುಂಬೈನ ನೈಋತ್ಯಕ್ಕೆ 1020 ಕಿಲೋ ಮೀಟರ್, ಪೋರ್‌ಬಂದರ್‌ನಿಂದ 1090 ಕಿಲೋ ಮೀಟರ್ ಹಾಗೂ ಪಾಕಿಸ್ತಾನದ ಕರಾಚಿಯಿಂದ ದಕ್ಷಿಣಕ್ಕೆ 1,380 ಕಿಲೋ ಮೀಟರ್‌ನಲ್ಲಿ ಇತ್ತು.

ಭಾರತದ ಹವಾಮಾನದ ಮೇಲೆ ಬಿಪರ್‌ಜಾಯ್‌ ಚಂಡಮಾರುತದ ಪರಿಣಾಮ

ಕೇರಳದಲ್ಲಿ ಮಾನ್ಸೂನ್‌ ಈಗಾಗಲೇ ವಿಳಂಬವಾಗಿರುವುದರಿಂದ ಚಂಡಮಾರುತವು ಕೇರಳ ಕರಾವಳಿಯತ್ತ ಬರಲಿದ್ದು, ಮುಂಗಾರು ಮುನ್ನಡೆಯ ಮೇಲೆ ನಿರ್ಣಾಯಕ ಪ್ರಭಾವ ಬೀರುವ ಸಾಧ್ಯತೆ ಇದೆ ಅಂತ ಹವಾಮಾನ ಇಲಾಖೆ ಹೇಳಿದೆ.

ನೆರೆಯ ಕೇರಳಕ್ಕೆ ಮುಂಗಾರು ಯಾವಾಗ ಪ್ರವೇಶ ಮಾಡಲಿದೆ ಎಂಬುದರ ಬಗ್ಗೆ ಹವಾಮಾನ ಇಲಾಖೆ ಇನ್ನೂ ತಾತ್ಕಾಲಿಕ ದಿನಾಂಕವನ್ನು ನೀಡಿಲ್ಲ. ಆದರೆ ಖಾಸಗಿ ಹವಾಮಾನ ಸಂಸ್ಥೆ ಸ್ಕೈಮೆಟ್ ವೆದರ್, ಜೂನ್ 8 ಅಥವಾ 9 ರಂದು ಮುಂಗಾರು ಕೇರಳ ಪ್ರವೇಶಿಸುವ ಸಾಧ್ಯತೆ ಇದೆ ಎಂದಿದೆ.

ಅರಬ್ಬಿ ಸಮುದ್ರದಲ್ಲಿ ಈ ಪ್ರಬಲ ಹವಾಮಾನ ಬದಲಾವಣೆಯಿಂದ ಮುಂಗಾರು ಒಳನಾಡಿನ ಮೇಲೆ ಪರಿಣಾಮ ಬೀರಲಿದ್ದು, ನಿರೀಕ್ಷೆಗಿಂತ ಕಡಿಮೆ ಮಳೆಯಾಗುವ ಸಾಧ್ಯತೆ ಇದೆ. ಮುಂಗಾರು ಕರಾವಳಿ ಭಾಗಗಳನ್ನು ತಲುಪಬಹುದು. ಆದರೆ ಪಶ್ಚಿಮ ಘಟ್ಟಗಳ ಆಚೆಗೆ ಹೋಗಲು ಹೆಣಗಾಡುತ್ತದೆ ಅಂತಲೂ ತಿಳಿಸಿದೆ.

ನೈಋತ್ಯ ಮುಂಗಾರು ಸಾಮಾನ್ಯವಾಗಿ ಜೂನ್ 1 ರಿಂದ ಸುಮಾರು ಏಳು ದಿನಗಳ ಪ್ರಮಾಣಿತ ವಿಚಲನದೊಂದಿಗೆ ಕೇರಳಗೆ ಪ್ರವೇಶಿಸುತ್ತದೆ. ಜೂನ್ 4ರ ವೇಳೆಗೆ ದಕ್ಷಿಣ ರಾಜ್ಯಕ್ಕೆ ಆಗಮಿಸಬಹುದು ಎಂದು ಐಎಂಡಿ ಈ ಹಿಂದೆ ಮುನ್ಸೂಚನೆ ನೀಡಿತ್ತು.

ಅರಬ್ಬಿ ಸಮುದ್ರದಲ್ಲಿ ಕಡಿಮೆ ಒತ್ತಡದ ವ್ಯವಸ್ಥೆಯ ರಚನೆಯಿಂದಾಗಿ ಕೇರಳಕ್ಕೆ ಮುಂಗಾರು ಪ್ರವೇಶ ಮತ್ತಷ್ಟು ವಿಳಂಬವಾಗಿದೆ. ವಿಜ್ಞಾನಿಗಳ ಪ್ರಕಾರ, ದೇಶದ ಇತರೆ ಭಾಗಗಳಿಗೆ ಮುಂಗಾರು ತಡವಾಗಿ ಪ್ರವೇಶಿಸಲಿದೆ. ಆದರೂ ಈ ಋತುವಿನಲ್ಲಿ ಭಾರತದ ಒಟ್ಟು ಮಳೆಯ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಹೇಳಿದ್ದಾರೆ.

ಮುಂದಿನ ಐದು ದಿನಗಳಲ್ಲಿ ವೇಗದ ಗಾಳಿ

ಪೂರ್ವ-ಮಧ್ಯ ಅರಬ್ಬಿ ಸಮುದ್ರ ಹಾಗೂ ಪಶ್ಚಿಮ-ಮಧ್ಯ ಹಾಗೂ ಅಗ್ನೇಯ ಅರಬ್ಬಿ ಸಮುದ್ರದ ಪ್ರದೇಶದಲ್ಲಿ ಈಗಾಗಲೇ ಚಾಲ್ತಿಯಲ್ಲಿರು ಗಾಳಿಯ ವೇಗ ಗಂಟೆಗೆ 70 ರಿಂದ 80 ಕಿಲೋ ಮೀಟರ್‌ನಿಂದ 90 ಕಿಲೋ ಮೀಟರ್ ವೇಗದಲ್ಲಿ ಬೀಸುತ್ತದೆ. ಇಂದು (ಜೂನ್ 7) ರ ಸಂಜೆ ಗಂಟೆಗೆ 105-115 ಕಿಲೋ ಮೀಟರ್‌ ವೇಗದಿಂದ 125 ಕಿಲೋ ಮೀಟರ್‌ ವೇಗದ ವರೆಗೆ ಬೀಸುವ ಸಾಧ್ಯತೆ ಇದೆ.

ನಾಳೆ (ಜೂನ್ 8 ಗುರುವಾರ) ಕರ್ನಾಟಕ, ಗೋವಾ, ಮಹಾರಾಷ್ಟ್ರ ಕರಾವಳಿಯಲ್ಲಿ 40 ರಿಂದ 50 ಕಿಲೋ ಮೀಟರ್ ವೇಗದ ಗಾಳಿ 60 ಕಿಲೋ ಮೀಟರ್‌ ವೇಗದಲ್ಲಿ ಬೀಸುವ ಸಾಧ್ಯತೆ ಇದೆ. ಈ ಕರಾವಳಿ ಪ್ರದೇಶಗಳಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ಗಾಳಿಯ ವೇಗ ಇದೇ ರೀತಿ ಇರಲಿದೆ ಎಂದು ಸ್ಪಷ್ಟಪಡಿಸಿದೆ.

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ