ಸೇನೆಗೆ ಸೇರಿ ಪ್ರಾಣತ್ಯಾಗ ಮಾಡಿದ ಮೊದಲ ಅಗ್ನಿವೀರ್; ಹುಟ್ಟೂರಿನಲ್ಲಿ 22ರ ಅಕ್ಷಯ್ ಅಂತ್ಯಕ್ರಿಯೆ
Oct 23, 2023 05:57 PM IST
ಹುತಾತ್ಮ ಅಗ್ನಿವೀರ್ ಅಕ್ಷಯ್ ಲಕ್ಷ್ಮಣ್ ಗವಾಟೆ
- Agniveer Gawate Akshay Laxman: ಭಾರತೀಯ ಸೇನೆಗೆ ಸೇರಿ ಪ್ರಾಣತ್ಯಾಗ ಮಾಡಿದ ಮೊದಲ ಅಗ್ನಿವೀರ್ ಇವರಾಗಿದ್ದಾರೆ. ಅಕ್ಷಯ್ ಅವರು ಮಹಾರಾಷ್ಟ್ರದ ಬುಲ್ಧಾನಾ ಜಿಲ್ಲೆಯವರಾಗಿದ್ದು, 20,000 ಅಡಿ ಎತ್ತರದ ಪ್ರದೇಶವಾದ ಸಿಯಾಚಿನ್ನಲ್ಲಿ ಕರ್ತವ್ಯದಲ್ಲಿರುವ ವೇಳೆ ಮೃತಪಟ್ಟಿದ್ದಾರೆ.
ಬುಲ್ಧಾನಾ (ಮಹಾರಾಷ್ಟ್ರ): ಕಳೆದ ವರ್ಷ ಅಗ್ನಿಪಥ್ ಯೋಜನೆಯಡಿಯಲ್ಲಿ ಸೈನಿಕರ ಅಲ್ಪಾವಧಿ ನೇಮಕಾತಿ ಪ್ರಾರಂಭವಾದ ನಂತರ ಕರ್ತವ್ಯದ ಸಾಲಿನಲ್ಲಿದ್ದ ಅಗ್ನಿವೀರ್ ಅಕ್ಷಯ್ ಲಕ್ಷ್ಮಣ್ ಗವಾಟೆ (22) ಹುತಾತ್ಮರಾಗಿದ್ದಾರೆ.
ಭಾರತೀಯ ಸೇನೆಗೆ ಸೇರಿ ಪ್ರಾಣತ್ಯಾಗ ಮಾಡಿದ ಮೊದಲ ಅಗ್ನಿವೀರ್ ಇವರಾಗಿದ್ದಾರೆ. ಅಕ್ಷಯ್ ಅವರು ಮಹಾರಾಷ್ಟ್ರದ ಬುಲ್ಧಾನಾ ಜಿಲ್ಲೆಯವರಾಗಿದ್ದು, 20,000 ಅಡಿ ಎತ್ತರದ ಪ್ರದೇಶವಾದ ಸಿಯಾಚಿನ್ನಲ್ಲಿ ಕರ್ತವ್ಯದಲ್ಲಿರುವ ವೇಳೆ ಮೃತಪಟ್ಟಿದ್ದಾರೆ. ಇದು ವಿಶ್ವದ ಅತಿ ಎತ್ತರದ ಯುದ್ಧಭೂಮಿಯಾಗಿದೆ. ಅಕ್ಷಯ್ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಬಿಕಾಂ ಪದವಿ ಬಳಿಕ ಅಕ್ಷಯ್ ಅಗ್ನಿವೀರ್ ನೇಮಕಾತಿಯಲ್ಲಿ ಆಯ್ಕೆಯಾಗಿದ್ದರು.
ಮೂಲಗಳ ಪ್ರಕಾರ ಅಸ್ವಸ್ಥರಾಗಿದ್ದ ಅಕ್ಷಯ್ ಲಕ್ಷ್ಮಣ್ ಗವಾಟೆ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಬದುಕುಳಿಯಲಿಲ್ಲ. ನಿನ್ನೆ (ಅ.22) ಭಾರತೀಯ ಸೇನೆ ಹುತಾತ್ಮ ಅಕ್ಷಯ್ಗೆ ಶ್ರದ್ದಾಂಜಲಿ ಸಲ್ಲಿಸಿದ್ದು, ಇಂದು (ಅ.23) ಅವರ ಪಾರ್ಥಿವ ಶರೀರರವನ್ನು ಬುಲ್ಧಾನಾ ಜಿಲ್ಲೆಯಲ್ಲಿರುವ ಅವರ ಹುಟ್ಟೂರಿಗೆ ಕರೆತರಲಾಗಿದೆ. ಇಲ್ಲಿ ಅವರ ಅಂತ್ಯಕ್ರಿಯೆ ನಡೆಯಲಿದೆ.
ಅಗ್ನಿವೀರ್ ಮತ್ತು ಅಗ್ನಿಪಥ ಯೋಜನೆ
ಕೇಂದ್ರ ಸರಕಾರವು 2022ರಲ್ಲಿ ಭಾರತೀಯ ಸೇನೆಗೆ ಸೈನಿಕರನ್ನು ಅಲ್ಪಾವಧಿಗೆ ನೇಮಕ ಮಾಡುವ ಅಗ್ನಿಪಥ ಯೋಜನೆಯನ್ನು ಪ್ರಾರಂಭಿಸಿತು. ಈ ಸೈನಿಕರಿಗೆ ಅಗ್ನಿವೀರ್ ಎಂದು ಹೆಸರಿಡಲಾಯಿತು. ಯೋಜನೆಯಡಿಯಲ್ಲಿ ಭೂ, ವಾಯು, ನೌಕೆ ಮೂರು ಸೇನಾ ಪಡೆಗಳಿಗೂ ನಾಲ್ಕು ವರ್ಷಗಳ ಅವಧಿಗೆ ನಿಯೋಜಿತ ಅಧಿಕಾರಿಗಳ ಶ್ರೇಣಿಗಿಂತ ಕೆಳಗಿರುವ ಸೈನಿಕರನ್ನು ನೇಮಿಸಿಕೊಳ್ಳಲಾಗುತ್ತದೆ. ಈ ಕಾರ್ಯಕ್ರಮದಡಿ ನೇಮಕಗೊಂಡ ಶೇ.25ರಷ್ಟು ಸೈನಿಕರನ್ನು ನಾಲ್ಕು ವರ್ಷಗಳ ನಂತರ ಕಾಯಂ ಮಾಡಿಕೊಳ್ಳಲಾಗುವುದು ಎಂದು ಸೇನೆ ತಿಳಿಸಿತ್ತು.
ವಿಭಾಗ