logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Kanchanjunga Express: ಕಾಂಚನಜುಂಗಾ ಎಕ್ಸ್ ಪ್ರೆಸ್‌ ರೈಲು ಅಪಘಾತ, ತನಿಖೆ ಚುರುಕು, ದಿನದ ಬೆಳವಣಿಗೆ ಆಗಿದ್ದೇನು

Kanchanjunga Express: ಕಾಂಚನಜುಂಗಾ ಎಕ್ಸ್ ಪ್ರೆಸ್‌ ರೈಲು ಅಪಘಾತ, ತನಿಖೆ ಚುರುಕು, ದಿನದ ಬೆಳವಣಿಗೆ ಆಗಿದ್ದೇನು

Umesha Bhatta P H HT Kannada

Jun 18, 2024 02:27 PM IST

google News

ಕಾಮಚನಗಂಗಾ ರೈಲಿಗೆ ಡಿಕ್ಕಿ ಹೊಡೆದ ಗೂಡ್ಸ್‌ ರೈಲು

    • Indian Railways ಪಶ್ಚಿಮ ಬಂಗಾಲದಲ್ಲಿ ಸಂಭವಿಸಿದ  ರೈಲ್ವೆ ಅಪಘಾತದ ಸ್ಥಳದಲ್ಲಿ ಮಂಗಳವಾರವೂ ರಕ್ಷಣಾ ಕಾರ್ಯ ಚುರುಕುಗೊಂಡಿತ್ತು. 
ಕಾಮಚನಗಂಗಾ ರೈಲಿಗೆ ಡಿಕ್ಕಿ ಹೊಡೆದ ಗೂಡ್ಸ್‌ ರೈಲು
ಕಾಮಚನಗಂಗಾ ರೈಲಿಗೆ ಡಿಕ್ಕಿ ಹೊಡೆದ ಗೂಡ್ಸ್‌ ರೈಲು

ಕೆಲವೇ ದಿನಗಳ ನಂತರ ಭಾರತದಲ್ಲಿ ರೈಲುಗಳ ನಡುವಿನ ಅಪಘಾತದಿಂದ 9 ಮಂದಿ ಪ್ರಯಾಣಿಕರು ಮೃತಪಟ್ಟು ಹಲವರು ಗಾಯಗೊಂಡಿದ್ದಾರೆ. ಒಡಿಶಾ, ಪಂಜಾಬ್‌, ಬಿಹಾರ ಸಹಿತ ಹಲವು ರಾಜ್ಯಗಳಲ್ಲಿ ಅಪಘಾತಗಳು ನಡೆಯುತ್ತಲೇ ಇವೆ. ರೈಲ್ವೆ ಸಂಚಾರದ ಸುಧಾರಣೆಗೆ ಇತ್ತೀಚಿನ ವರ್ಷಗಳಲ್ಲಿ ಭಾರೀ ಒತ್ತು ನೀಡಲಾಗಿದೆ. ತಂತ್ರಜ್ಞಾನ ಆಧರಿತ ಸಂಚಾರ ನಿಯಂತ್ರಣ ಜಾರಿಗೆ ಬಂದಿದೆ. ಇದರಿಂದಲೇ ಅಲ್ಲಲ್ಲಿ ಗೊಂದಲಗಳೂ ಸಂಭವಿಸಿ ಅದು ಅಪಘಾತಕ್ಕೆ ದಾರಿ ಮಾಡಿಕೊಟ್ಟಿದೆ. ಪಶ್ಚಿಮ ಬಂಗಾಳದ ನ್ಯೂ ಜಲ್‌ಪಾಯಿಗುರಿ ರೈಲ್ವೆ ನಿಲ್ಧಾಣದಿಂದ 7 ಕಿ.ಮೀ. ದೂರದಲ್ಲಿ ಕಾಂಚನಜುಂಗಾ ಎಕ್ಸ್‌ಪ್ರೆಸ್ ರೈಲು ದುರಂತ ಸಂಭವಿಸಿದ್ದು ಕೂಡ ಇದೇ ರೀತಿಯ ರೈಲುಗಳ ಸಂಚಾರ ಗೊಂದಲದಿಂದಲೇ. ಸಿಗ್ನಲ್‌ ವಿಚಾರದಲ್ಲಿ ಆಗಿರುವ ಸಮಸ್ಯೆ ಒಂದೇ ಹಳಿಯ ಮೇಲೆ ಎರಡು ರೈಲುಗಳು ಡಿಕ್ಕಿಯಾಗಿ ಅನಾಹುತ ಉಂಟಾಗಿದೆ. ಈ ಅಪಘಾತದ ಕುರಿತು ಪ್ರಮುಖ ಬೆಳವಣಿಗೆಗಳ ಹತ್ತು ಅಂಶಗಳು ಇಲ್ಲಿವೆ.

  • ಪಶ್ಚಿಮ ಬಂಗಾಳದ ಡಾರ್ಜಲಿಂಗ್‌ ಜಿಲ್ಲೆ ವ್ಯಾಪ್ತಿಗೆ ಬರುವ ಪೂರ್ವ ರೈಲ್ವೆ ವಿಭಾಗದಲ್ಲಿ ಕಾಂಚನ್‌ ಜುಂಗಾ ಎಕ್ಸ್‌ಪ್ರೆಸ್‌ ರೈಲಿಗೆ ಸರಕು ಸಾಗಣೆ ಮಾಡುತ್ತಿದ್ದ ರೈಲು ಬಂದು ಡಿಕ್ಕಿ ಹೊಡೆದಿದೆ. ಇದರಿಂದ ಬೋಗಿಗಳು ಹಳಿ ತಪ್ಪಿ ಈವರೆಗೂ 9 ಪ್ರಯಾಣಿಕರು ಜೀವ ಕಳೆದುಕೊಂಡು, 41 ಪ್ರಯಾಣಿಕರು ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ.
  • ಮೃತರ ಕುಟುಂಬಗಳಿಗೆ ತಲಾ 10 ಲಕ್ಷ ರೂ., ತೀವ್ರವಾಗಿ ಗಾಯಗೊಂಡವರಿಗೆ 2.5 ಲಕ್ಷ ರೂ. ಹಾಗೂ ಸಣ್ಣಪುಟ್ಟ ಗಾಯಗಳಾದವರಿಗೆ 50,000 ರೂ. ಪರಿಹಾರವನ್ನು ಕೇಂದ್ರ ಸರ್ಕಾರ ಘೋಷಿಸಿದೆ.
  • ಕಾಂಚನ್‌ಜುಂಗಾ ಎಕ್ಸ್‌ಪ್ರೆಸ್‌ ರೈಲು ಸಿಕ್ಕಿಂನ ಅಗರ್ತಲಾದಿಂದ ಕೊಲ್ಕತ್ತಾದ ಸಿಯಾಲ ಕಡೆಗೆ ನ್ಯೂ ಜಲಪಾಯ್‌ಗುರಿ ಮಾರ್ಗವಾಗಿ ಹೋಗುತ್ತಿತ್ತು. ಸಿಗ್ನಲ್‌ನಲ್ಲಿ ಆದ ಗೊಂದಲವೇ ಕಾರಣ ಎನ್ನುವುದು ಪ್ರಾಥಮಿಕ ತನಿಖೆಯಿಂದ ತಿಳಿದ ವಿಚಾರ. ಘಟನೆ ಕುರಿತು ಹಿರಿಯ ಅಧಿಕಾರಿಗಳಿಂದ ವಿಸ್ತೃತ ತನಿಖೆ ಮುಂದುವರಿದಿದೆ.
  • ಪಶ್ಚಿಮ ಬಂಗಾಳದ ರಾಣಿಪಾತ್ರ ರೈಲ್ವೆ ನಿಲ್ದಾಣ ಮತ್ತು ಚಟ್ಟರ್ ಹ್ಯಾಟ್ ಜಂಕ್ಷನ್ ನಡುವಿನ ಸ್ವಯಂಚಾಲಿತ ಸಿಗ್ನಲಿಂಗ್ ವ್ಯವಸ್ಥೆಯು ಸೋಮವಾರ ಬೆಳಿಗ್ಗೆ 5.50 ರಿಂದ ಕಾರ್ಯನಿರ್ವಹಿಸುತ್ತಿರಲಿಲ್ಲ. ಇದರಿಂದ ಸಂಚಾರ ನಿಯಂತ್ರಕರ ನಡುವೆ ಗೊಂದಲಗಳಾಗಿ ಅಪಘಾತಕ್ಕೂ ದಾರಿಯಾಗಿದೆ ಎನ್ನುವ ಮಾಹಿತಿ ಹಿರಿಯ ಅಧಿಕಾರಿಗಳಿಂದ ಲಭ್ಯವಾಗಿದೆ.
  • ಈಗಾಗಲೇ ರೈಲು ಮಾರ್ಗದಲ್ಲಿ ಬಿದ್ದಿದ್ದ ಬೋಗಿಗಳನ್ನು ಸ್ಥಳಾಂತರಿಸುವ ಕೆಲಸ ಜಾರಿಯಲ್ಲಿದೆ. ಒಂದು ಮಾರ್ಗವನ್ನು ಸರಿಪಡಿಸಿ ರೈಲು ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಪ್ರಮುಖ ರೈಲುಗಳ ಸಂಚಾರ ಮಾರ್ಗ ಬದಲಾಯಿಸಲಾಗಿದೆ.
  • ಘಟನೆ ನಡೆದ ಸ್ಥಳದಲ್ಲಿ ರಾತ್ರಿಯಿಡೀ ಭಾರೀ ಮಳೆ ಸುರಿದ ಪರಿಣಾಮವಾಗಿ ರೈಲು ಮಾರ್ಗ ಸರಿಪಡಿಸಿರುವ ಕಾರ್ಯಕ್ಕೆ ಅಡಚಣೆಯಾಯಿತು. ತೊಂದರೆಗೆ ಸಿಲುಕಿದ್ದ ಪ್ರಯಾಣಿಕರನ್ನು ಪರ್ಯಾಯ ರೈಲುಗಳ ಮೂಲಕ ಕಳುಹಿಸಿದ್ದರಿಂದ ಅವರಿಗೆ ಸಮಸ್ಯೆ ಅಷ್ಟಾಗಿ ಅಗಲಿಲ್ಲ. ಮಂಗಳವಾರವೂ ತೆರವು ಕಾರ್ಯಾಚರಣೆ ಚುರುಕುಗೊಂಡಿತ್ತು.
  • ಕಾಂಚನಜುಂಗಾ ರೈಲಿನ ಅಪಘಾತದ ನಂತರ ಜೂನ್ 18 ರ ಮಂಗಳವಾರ ಹಲವಾರು ರೈಲುಗಳನ್ನು ರದ್ದುಪಡಿಸಲಾಗಿದ್ದು, ಕೆಲವು ರೈಲುಗಳ ಮಾರ್ಗಗಳನ್ನು ಬದಲಾವಣೆ ಮಾಡಲಾಗಿದೆ. ಕಟಿಹಾರ್-ಸಿಲಿಗುರಿ ಇಂಟರ್ಸಿಟಿ ಎಕ್ಸ್ ಪ್ರೆಸ್(15719), ಸಿಲಿಗುರಿ-ಕಟಿಹಾರ್ ಇಂಟರ್ಸಿಟಿ ಎಕ್ಸ್ ಪ್ರೆಸ್ (15720),ನ್ಯೂ ಜಲ್ಪೈಗುರಿ-ಹೌರಾ ಶತಾಬ್ದಿ ಎಕ್ಸ್ ಪ್ರೆಸ್ (12042) ,ಹೌರಾ-ನ್ಯೂ ಜಲ್ಪೈಗುರಿ ಶತಾಬ್ದಿ ಎಕ್ಸ್ ಪ್ರೆಸ್( (12041) ಮತ್ತು ಸಿಲಿಗುರಿ-ಜೋಗ್ಬಾನಿ ಇಂಟರ್ಸಿಟಿ ಎಕ್ಸ್ ಪ್ರೆಸ್(15724) ರೈಲುಗಳನ್ನು ರದ್ದುಪಡಿಸಲಾಗಿದೆ. ನ್ಯೂ ಜಲ್ಪೈಗುರಿಯಿಂದ ದೆಹಲಿ ಸೂಪರ್ ಫಾಸ್ಟ್‌ ಎಕ್ಸ್ ಪ್ರೆಸ್(12523), ನವದೆಹಲಿ-ದಿಬ್ರುಗಢ ರಾಜಧಾನಿ ಎಕ್ಸ್ ಪ್ರೆಸ್ (20504), ಮತ್ತು ಸಿಲ್ಚಾರ್-ಸೀಲೆಡಾ ಕಾಂಚನ್ಜುಂಗಾ ಎಕ್ಸ್ ಪ್ರೆಸ್ (13176) ರೈಲುಗಳ ಮಾರ್ಗ ಬದಲಾಗಿದೆ.
  • ಕಳೆದ ವರ್ಷ ಒಡಿಶಾದ ಬಾಲಸೋರ್‌ನಲ್ಲಿ ಸುಮಾರು 300 ಜನರ ಸಾವಿಗೆ ಕಾರಣವಾದ ಮೂರು ರೈಲು ಅಪಘಾತವು ಸಿಗ್ನಲಿಂಗ್ ದೋಷ ಮತ್ತು ಎಲೆಕ್ಟ್ರಾನಿಕ್ ಇಂಟರ್ಲಾಕಿಂಗ್ ವ್ಯವಸ್ಥೆಯ ವೈಫಲ್ಯದಿಂದಲೇ ಆಗಿತ್ತು.
  • ವಂದೇ ಭಾರತ್‌ ರೈಲಿಗೆ ಇನ್ನಿಲ್ಲದ ಒತ್ತು ನೀಡುವ ಭರದಲ್ಲಿ ಸಾಮಾನ್ಯ ಜನರ ರೈಲು ಸಂಚಾರಕ್ಕೆ ತೊಂದರೆಯಾಗುತ್ತಿದೆ. ಇದರಿಂದಲೇ ಅಪಘಾತಗಳು ಸಂಭವಿಸಿವೆ. ವಂದೇ ಭಾರತ್‌ ರೈಲಿನ ಪ್ರಚಾರ ಬಿಟ್ಟು ರೈಲ್ವೆ ಸಂಪರ್ಕ ಜಾಲ ತಂತ್ರಜ್ಞಾನ ಸುಧಾರಿಸಲು ಗಮನ ನೀಡಿ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಲಹೆ ನೀಡಿದ್ದಾರೆ.
  • ಪ್ರಧಾನಿ ನರೇಂದ್ರ ಮೋದಿ ಅವರು ಘಟನೆಗೆ ಬೇಸರ ವ್ಯಕ್ತಪಡಿಸಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ಗಾಯಾಳುಗಳಿಗೆ ಚಿಕಿತ್ಸೆ ನೀಡಲು ಸೂಚಿಸಲಾಗಿದೆ. ಈಗಾಗಲೇ ಅಧಿಕಾರಿಗಳು ಹಾಗೂ ಪ್ರಮುಖರೊಂದಿಗೆ ಮಾತನಾಡಿದ್ದು, ರೈಲ್ವೆ ಸಚಿವರು ಖುದ್ದು ಮೇಲುಸ್ತುವಾರಿ ವಹಿಸಿ ರೈಲ್ವೆ ಸಂಚಾರ ವ್ಯವಸ್ಥೆ ಸರಿಪಡಿಸಲು ಗಮನ ಹರಿಸಿದ್ದಾರೆ. ನಾವೂ ಕೂಡ ಇನ್ನಷ್ಟು ಸುರಕ್ಷಿತ ಸಂಚಾರಕ್ಕೆ ಒತ್ತು ನೀಡುತ್ತೇವೆ ಎಂದು ತಿಳಿಸಿದ್ದಾರೆ.
  •  

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ