logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Uk News: ಸಂಸತ್‌ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಯುಕೆ ಮಾಜಿ ಪ್ರಧಾನಿ ಬೋರಿಸ್‌ ಜಾನ್ಸನ್‌; ಕಾರಣವಾದರೂ ಏನು?

UK News: ಸಂಸತ್‌ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಯುಕೆ ಮಾಜಿ ಪ್ರಧಾನಿ ಬೋರಿಸ್‌ ಜಾನ್ಸನ್‌; ಕಾರಣವಾದರೂ ಏನು?

HT Kannada Desk HT Kannada

Jun 10, 2023 07:59 AM IST

google News

ಸಂಸತ್‌ ಸದಸ್ಯ ಸ್ಥಾನಕ್ಕೆ ಬ್ರಿಟೀಷ್‌ ಮಾಜಿ ಪ್ರಧಾನಿ ಬೋರಿಸ್‌ ಜಾನ್ಸನ್‌ ರಾಜೀನಾಮೆ ನೀಡಿದ್ದಾರೆ.

    • ಕೋವಿಡ್‌ ನಿರ್ವಹಣೆ ವಿಚಾರದಲ್ಲಿ ಜಾನ್ಸನ್‌ ಆಡಳಿತ ಅವಧಿಯಲ್ಲಿ ಆಗಿರುವ ಲೋಪಗಳ ಕುರಿತು ಗಂಭೀರ ಆರೋಪಗಳು ಕೇಳಿ ಬಂದಿದ್ದವು. ಅಲ್ಲದೇ ಕೋವಿಡ್‌ ವಿಚಾರವಾಗಿ ಹೌಸ್‌ ಆಫ್‌ ಕಾಮನ್ಸ್‌ ಗೆ ಸೂಕ್ತ ಮಾಹಿತಿಗಳನ್ನು ನೀಡದೇ ದಿಕ್ಕು ತಪ್ಪಿಸಿದ್ದಾರೆ ಎನ್ನುವ ಆರೋಪಗಳೂ ವ್ಯಕ್ತವಾಗಿದ್ದವು.
ಸಂಸತ್‌ ಸದಸ್ಯ ಸ್ಥಾನಕ್ಕೆ ಬ್ರಿಟೀಷ್‌ ಮಾಜಿ ಪ್ರಧಾನಿ ಬೋರಿಸ್‌ ಜಾನ್ಸನ್‌ ರಾಜೀನಾಮೆ ನೀಡಿದ್ದಾರೆ.
ಸಂಸತ್‌ ಸದಸ್ಯ ಸ್ಥಾನಕ್ಕೆ ಬ್ರಿಟೀಷ್‌ ಮಾಜಿ ಪ್ರಧಾನಿ ಬೋರಿಸ್‌ ಜಾನ್ಸನ್‌ ರಾಜೀನಾಮೆ ನೀಡಿದ್ದಾರೆ.

ಲಂಡನ್‌: ಬ್ರಿಟೀಷ್‌ ಮಾಜಿ ಪ್ರಧಾನಿ ಬೋರಿಸ್‌ ಜಾನ್ಸನ್‌ ತಮ್ಮ ಸಂಸತ್‌ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ತತ್‌ಕ್ಷಣದಿಂದಲೇ ಜಾರಿಗೆ ಬರುವಂತೆ ನನ್ನ ಸಂಸತ್‌ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ಬ್ರಿಟೀಷ್‌ ಸಂಸತ್‌ಗೆ ಬರೆದಿರುವ ಪತ್ರದಲ್ಲಿ ಜಾನ್ಸನ್‌ ತಿಳಿಸಿದ್ದಾರೆ. ತೆರವಾದ ಸಂಸತ್‌ ಸ್ಥಾನಕ್ಕೆ ಮರು ಚುನಾವಣೆ ನಡೆಯುವ ಸಾಧ್ಯತೆಯಿದೆ.

ಕೋವಿಡ್‌ ನಿರ್ವಹಣೆ ವಿಚಾರದಲ್ಲಿ ಜಾನ್ಸನ್‌ ಆಡಳಿತ ಅವಧಿಯಲ್ಲಿ ಆಗಿರುವ ಲೋಪಗಳ ಕುರಿತು ಗಂಭೀರ ಆರೋಪಗಳು ಕೇಳಿ ಬಂದಿದ್ದವು. ಅಲ್ಲದೇ ಕೋವಿಡ್‌ ವಿಚಾರವಾಗಿ ಹೌಸ್‌ ಆಫ್‌ ಕಾಮನ್ಸ್‌ ಗೆ ಸೂಕ್ತ ಮಾಹಿತಿಗಳನ್ನು ನೀಡದೇ ದಿಕ್ಕು ತಪ್ಪಿಸಿದ್ದಾರೆ ಎನ್ನುವ ಆರೋಪಗಳೂ ವ್ಯಕ್ತವಾಗಿದ್ದವು. ಆನಂತರ ಅವರ ವಿರುದ್ದ ತನಿಖೆಗೂ ಆದೇಶಿಸಲಾಗಿತ್ತು. ಸದ್ಯ ಸಂಸತ್ತಿನ ಹಕ್ಕು ಬಾಧ್ಯತೆಗಳ ಸಮಿತಿ ವಿಚಾರಣೆಗೆ ಜಾನ್ಸನ್‌ಗೆ ನೊಟೀಸ್‌ ಜಾರಿ ಮಾಡಿದೆ.

ಸಂಸತ್‌ ಅನ್ನು ಬಿಡುತ್ತಿರುವುದಕ್ಕೆ ಬೇಸರವಾಗುತ್ತಿದೆ. ಕೆಲವರು ನಾನು ಅಧಿಕಾರ ಬಿಡುವಂತೆ ಮಾಡಿದ್ದಾರೆ. ಯಾವುದೇ ಸಾಕ್ಷಿಗಳಿಲ್ಲದೇ ಕೆಲವರು ನನ್ನ ವಿರುದ್ದ ಹಲವು ವಿಷಯ ಪ್ರತಿಪಾದಿಸಿದರು. ಕನ್ಸರ್‌ವೇಟಿವ್‌ ಪಕ್ಷದ ಅನುಮತಿಯೂ ಇಲ್ಲದೇ ನಿರ್ಣಯ ಕೈಗೊಂಡು ನನ್ನನ್ನು ಏಕಾಂಗಿ ಮಾಡಲು ಪ್ರಯತ್ನಿಸಿದರು ಎಂದು ಜಾನ್ಸನ್‌ ಹೇಳಿದ್ದಾರೆ.

ಬ್ರಿಟೀಷ್‌ ಸಂಸದೀಯ ಹಕ್ಕು ಬಾಧ್ಯತಾ ಸಮಿಯು ನೀಡಿರುವ ನೊಟೀಸ್‌ ಬಂದಿದೆ. ನನ್ನನ್ನು ಸಂಸತ್ತಿನಿಂದ ಹೊರಹಾಕಬೇಕು ಎನ್ನುವ ಉದ್ದೇಶದಿಂದಲೇ ನೊಟೀಸ್‌ ಜಾರಿ ಮಾಡಿದ್ದಾರೆ. ಸಾಕ್ಷಿಗಳನ್ನು ಪರಿಶೀಲಿಸುವ ಮುನ್ನವೇ ನನ್ನ ಬಗ್ಗೆ ತೀರ್ಮಾನಗಳನ್ನು ಕೈಗೊಂಡಂತಿದೆ ಎಂದು ಜಾನ್ಸನ್‌ ಆರೋಪಿಸಿದ್ದಾರೆ

ಯುಕೆಯ ಹಿರಿಯ ರಾಜಕಾರಣಿಯಾಗಿರುವ 64 ವರ್ಷದಬೋರಿಸ್‌ ಜಾನ್ಸ್‌ನ್‌ ಲಂಡನ್‌ ಮೇಯರ್‌ ಆಗಿದ್ದರು. ಆನಂತರ ಸಂಸತ್‌ಗೆ ಆಯ್ಕೆಯಾಗಿ ನಾಲ್ಕು ವರ್ಷ ಪ್ರಧಾನಿಯಾಗಿದ್ದರು. ಕಳೆದ ವರ್ಷದ ನಡೆದ ಚುನಾವಣೆಯಲ್ಲಿ ಸಂಸತರಾಗಿ ಚುನಾಯಿತರಾಗಿದ್ದರು. ಕೆಲ ಕಾಲ ಪತ್ರಕರ್ತರೂ ಆಗಿದ್ದವರು.

ಸದ್ಯ ಇನ್ಫೋಸಿಸ್‌ ಮುಖ್ಯಸ್ಥರಾದ ನಾರಾಯಣಮೂರ್ತಿ ಹಾಗೂ ಸುಧಾಮೂರ್ತಿ ಅಳಿಯ ರಿಷಿ ಸುನಕ್‌ ಬ್ರಿಟೀಷ್‌ ಪ್ರಧಾನಿಯಾಗಿದ್ದಾರೆ.

=============

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ