ಚಂದ್ರಯಾನ-3 ಸಕ್ಸಸ್ ಆಗ್ತಿದ್ದಂತೆ 24 ಕೋಟಿ ರೂ. ಹಿಂತಿರುಗಿಸುವಂತೆ ಭಾರತಕ್ಕೆ ಬ್ರಿಟಿಷ್ ಪತ್ರಕರ್ತ ಆಗ್ರಹ VIDEO
Aug 25, 2023 12:52 PM IST
ಚಂದ್ರಯಾನ-3 ಸಕ್ಸಸ್ ಆಗ್ತಿದ್ದಂತೆ ಭಾರತಕ್ಕೆ ಬ್ರಿಟಿಷ್ ಪತ್ರಕರ್ತನ ಆಗ್ರಹ
- Chandrayaan 3: ಭಾರತದ ಚಂದ್ರಯಾನ ಟೀಕಿಸಿದ ಬಿಬಿಸಿ ನಿರೂಪಕನನ್ನ ಮಹೀಂದ್ರ ಗ್ರೂಪ್‌ನ ಅಧ್ಯಕ್ಷ ಆನಂದ್ ಮಹೀಂದ್ರ ತಿರುಗೇಟು ನೀಡಿದ್ದರು. ಇದೀಗ ಮತ್ತೊಬ್ಬ ಬ್ರಿಟಿಷ್ ಪತ್ರಕರ್ತನನ್ನ ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ. 24,081 ಕೋಟಿ ರೂಪಾಯಿಗಳನ್ನು ಹಿಂತಿರುಗಿಸುವಂತೆ ಭಾರತಕ್ಕೆ ಬ್ರಿಟಿಷ್ ಪತ್ರಕರ್ತ ಆಗ್ರಹಿಸಿರುವ ವಿಡಿಯೋ ವೈರಲ್ ಆಗುತ್ತಿದೆ.
ಭಾರತವೇ ಎದುರು ನೋಡುತ್ತಿದ್ದ ಚಂದ್ರಯಾನ-3 ಸಕ್ಸಸ್ ಆಗಿದೆ. ಆಗಸ್ಟ್ 23 ರಂದು ಅಂದುಕೊಂಡಂತೆ ಚಂದ್ರನ ಮೇಲೆ ವಿಕ್ರಮ್ ಲ್ಯಾಂಡರ್ ಯಶಸ್ವಿಯಾಗಿ ಕಾಲಿರಿಸಿದ್ದು, ಭಾರತದಾದ್ಯಂತ ಸಂಭ್ರಮ ಮನೆ ಮಾಡಿತ್ತು. ಅನೇಕ ರಾಷ್ಟ್ರಗಳೂ ಶುಭ ಕೋರಿದ್ದವು. ಆದರೆ ಇಸ್ರೋ ಹಾಗೂ ಭಾರತದ ಯಶಸ್ಸನ್ನ ಟೀಕಿಸಿ ಟೀಕೆಗೊಳಗಾದವರೂ ಇದ್ದಾರೆ.
ಭಾರತದ ಚಂದ್ರಯಾನ ಟೀಕಿಸಿದ ಬಿಬಿಸಿ ನಿರೂಪಕನನ್ನ ಮಹೀಂದ್ರ ಗ್ರೂಪ್‌ನ ಅಧ್ಯಕ್ಷ ಆನಂದ್ ಮಹೀಂದ್ರ ತಿರುಗೇಟು ನೀಡಿದ್ದರು. ಇದೀಗ ಮತ್ತೊಬ್ಬ ಬ್ರಿಟಿಷ್ ಪತ್ರಕರ್ತನನ್ನ ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ. ಚಂದ್ರಯಾನ 3 ಸಕ್ಸಸ್ ಆಗ್ತಿದ್ದಂತೆ 24,081 ಕೋಟಿ ರೂಪಾಯಿಗಳನ್ನು ಹಿಂತಿರುಗಿಸುವಂತೆ ಭಾರತಕ್ಕೆ ಬ್ರಿಟಿಷ್ ಪತ್ರಕರ್ತ ಆಗ್ರಹಿಸಿರುವ ವಿಡಿಯೋ ವೈರಲ್ ಆಗುತ್ತಿದೆ.
ಸಿಬಿಎನ್ ಸುದ್ದಿವಾಹಿನಿಯ ನಿರೂಪಕ ಭಾರತದ ಚಂದ್ರಯಾನ ಯಶಸ್ಸಿಗೆ ವಿಶ್ ಮಾಡಿ, 2016 ಮತ್ತು 2021 ರ ನಡುವೆ ಬ್ರಿಟನ್ ಸರ್ಕಾರವು ಸಹಾಯ ನಿಧಿಯಾಗಿ ಭಾರತಕ್ಕೆ ನೀಡಿದ 24,081 ಕೋಟಿ ರೂಪಾಯಿಗಳನ್ನು ಹಿಂದಿರುಗಿಸುವಂತೆ ಕೇಳಿದ್ದಾರೆ. ಭಾರತದ ಬಡತನದ ಬಿಕ್ಕಟ್ಟನ್ನು ವಿವರಿಸುತ್ತಾ ನಮ್ಮ ಸರ್ಕಾರವು ಭಾರತ ದೇಶವನ್ನು ಏಕೆ ಬೆಂಬಲಿಸಬೇಕು ಎಂದು ಪ್ರಶ್ನಿಸಿದ್ದಾರೆ.
ಈ ವಿಡಿಯೋ ಕಂಡು ಭಾರತ ಮಾತ್ರವಲ್ಲದೇ ವಿದೇಶಿ ಪ್ರಜೆಗಳು ಕಿಡಿಕಾರಿದ್ದಾರೆ. ನಿಮಗೆ ನಾಚಿಕೆಯಾಗುವುದಿಲ್ಲವೇ? ಬ್ರಿಟನ್ ಭಾರತವನ್ನು ಎಷ್ಟು ದೊಡ್ಡ ಪ್ರಮಾಣದಲ್ಲಿ ಲೂಟಿ ಮಾಡಿತ್ತು ಮತ್ತು ಲಕ್ಷಾಂತರ ಭಾರತೀಯರನ್ನು ಹಸಿವಿನಿಂದ ಸಾಯುವಂತೆ ಮಾಡಿತ್ತು ಎಂಬುದು ನಿಮಗೆ ತಿಳಿದಿಲ್ಲವೇ? ಕೇವಲ 80 ವರ್ಷಗಳ ಹಿಂದೆ ಎಂದು ಜರ್ಮನ್ ಮಹಿಳೆಯೊಬ್ಬರು ಟ್ವೀಟ್ ಮಾಡಿದ್ದಾರೆ.
ಇತ್ತ, "ಭಾರತದ ಬಹುತೇಕ ಜನಸಂಖ್ಯೆಯು ಬಡತನದಲ್ಲಿದೆ, ಭಾರತದಲ್ಲಿ 700 ದಶಲಕ್ಷಕ್ಕಿಂತಲೂ ಹೆಚ್ಚು ಜನರು ಶೌಚಾಲಯ ಹೊಂದಿಲ್ಲ ಇವರು ಈ ರೀತಿ ಹಣವನ್ನು ಬಾಹ್ಯಾಕಾಶ ಯೋಜನೆಗಳಿಗೆ ಖರ್ಚು ಮಾಡಬೇಕೆ?" ಎಂದು ಪ್ರಶ್ನಿಸಿದ್ದ ಬಿಬಿಸಿ ನಿರೂಪಕನಿಗೆ ಮಹೀಂದ್ರ ಗ್ರೂಪ್‌ನ ಅಧ್ಯಕ್ಷ ಆನಂದ್ ಮಹೀಂದ್ರ ಅವರು ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. "ನಿಜವೇ?, ಸತ್ಯ ಏನೆಂದರೆ, ನಮ್ಮ ಬಡತನಕ್ಕೆ ಕಾರಣ, ನಮ್ಮ ಇಡೀ ಉಪಖಂಡದ ಸಂಪತ್ತನ್ನು ವ್ಯವಸ್ಥಿತವಾಗಿ ದಶಕಗಳ ಕಾಲ ವಸಾಹತುಶಾಹಿ ಆಡಳಿತ ಲೂಟಿ ಮಾಡಿದ ಪರಿಣಾಮವಾಗಿದೆ. ದೋಚಲಾದ ಅತ್ಯಮೂಲ್ಯ ಆಸ್ತಿ ಕೊಹಿನೂರು ವಜ್ರವಲ್ಲ. ನಮ್ಮ ಹೆಮ್ಮೆ ಮತ್ತು ಸ್ವಂತ ಸಾಮರ್ಥ್ಯಗಳ ಮೇಲಿನ ನಂಬಿಕೆ" ಎಂದಿದ್ದಾರೆ.