logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Morocco Earthquake: ಭೂಕಂಪಕ್ಕೆ ನಲುಗಿದ ಮೊರಾಕೊ; 296 ಜನರ ದುರ್ಮರಣ Video

Morocco earthquake: ಭೂಕಂಪಕ್ಕೆ ನಲುಗಿದ ಮೊರಾಕೊ; 296 ಜನರ ದುರ್ಮರಣ VIDEO

Meghana B HT Kannada

Sep 09, 2023 09:28 AM IST

google News

ಮೊರಾಕೊದಲ್ಲಿ ಭೂಕಂಪ

    • Morocco earthquake: ಮೊರಾಕೊ ದೇಶದಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದ ಪ್ರಬಲ ಭೂಕಂಪದಲ್ಲಿ 296 ಮಂದಿ ಮೃತಪಟ್ಟಿದ್ದಾರೆ.
ಮೊರಾಕೊದಲ್ಲಿ ಭೂಕಂಪ
ಮೊರಾಕೊದಲ್ಲಿ ಭೂಕಂಪ

ಮೊರಾಕೊ: ಉತ್ತರ ಆಫ್ರಿಕಾದ ಮೊರಾಕೊ ದೇಶದಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದ ಪ್ರಬಲ ಭೂಕಂಪದಲ್ಲಿ 296 ಮಂದಿ ಮೃತಪಟ್ಟಿದ್ದಾರೆ. ನೂರಾರು ಜನರು ಗಾಯಗೊಂಡಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ.

ರಿಕ್ಟರ್​ ಮಾಪಕದಲ್ಲಿ 6.8 ರಷ್ಟು ಭೂಕಂಪದ ತೀವ್ರತೆ ದಾಖಲಾಗಿದೆ ಎಂದು ಯುಎಸ್ ಜಿಯೋಲಾಜಿಕಲ್ ಸರ್ವೆ ಮಾಹಿತಿ ನೀಡಿದೆ. ಮೊರಾಕೊದ ಮರ್ಕೆಚ್‌​​ ನೈಋತ್ಯ ಭಾಗದಲ್ಲಿ ಭೂಮಿ ಕಂಪಿಸಿದೆ. ಮರ್ಕೆಚ್‌ ನಗರವು ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿದೆ. ಈ ಹಳೆಯ ನಗರದಲ್ಲಿನ ಕಟ್ಟಡಗಳು ಮತ್ತು ಪ್ರಸಿದ್ಧ ಕೆಂಪು ಕಟ್ಟಡಗಳ ಭಾಗಗಳು ಹಾನಿಗೊಳಗಾಗಿದೆ. ನೂರಾರು ಮನೆಗಳಿಗೆ ಹಾನಿಯಾಗಿದೆ.

ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಜನರು ಕಿರುಚಾಡುವ, ಭಯಭೀತರಾಗಿ ಓಡಿ ಹೋಗುವ ಹಾಗೂ ಕಟ್ಟಡಗಳ ಗೋಡೆಗಳು ಕುಸಿದು ಬೀಳುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಮೊರಾಕೊ ಭೂಕಂಪದಿಂದಾದ ಪ್ರಾಣಹಾನಿಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. "ಈ ದುರಂತದ ಸಮಯದಲ್ಲಿ, ನನ್ನ ಆಲೋಚನೆಗಳು ಮೊರಾಕೊದ ಜನರೊಂದಿಗೆ ಇವೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ನನ್ನ ಸಾಂತ್ವನ. ಗಾಯಾಳುಗಳು ಆದಷ್ಟು ಬೇಗ ಚೇತರಿಸಿಕೊಳ್ಳಲಿ. ಈ ಕಷ್ಟದ ಸಮಯದಲ್ಲಿ ಮೊರಾಕೊಗೆ ಸಾಧ್ಯವಿರುವ ಎಲ್ಲ ನೆರವು ನೀಡಲು ಭಾರತ ಸಿದ್ಧವಾಗಿದೆ" ಎಂದು ಮೋದಿ ಟ್ವೀಟ್​ ಮಾಡಿದ್ದಾರೆ.

ಉತ್ತರ ಆಫ್ರಿಕಾದಲ್ಲಿ ಭೂಕಂಪಗಳು ಅಪರೂಪ. 1960 ರಲ್ಲಿ ಮೊರಾಕೋದ ಅಗಾದಿರ್ ಬಳಿ 5.8 ತೀವ್ರತೆಯ ಭೂಕಂಪ ಸಂಭವಿಸಿತ್ತು ಮತ್ತು ಸಾವಿರಾರು ಜನರು ಮೃತಪಟ್ಟಿದ್ದರು.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ