The Egoist Teapot: ವಿಶ್ವದ ಅತ್ಯಂತ ಬೆಲೆಬಾಳುವ ಟೀ ಪಾಟ್ ಇದು; ಇದರ ಬೆಲೆ ಎಷ್ಟು ಕೋಟಿ ಅಂತ ಗೊತ್ತಾದ್ರೆ ದಂಗಾಗುತ್ತೀರ!
Aug 12, 2023 02:39 PM IST
"ದಿ ಇಗೋಯಿಸ್ಟ್" ಟೀ ಪಾಟ್
- World Most Valuable Teapot: ಈ ಟೀ ಪಾಟ್ಗೆ "ದಿ ಇಗೋಯಿಸ್ಟ್" (The Egoist) ಎಂದು ಹೆಸರಿಡಲಾಗಿದ್ದು, ವಿಶ್ವದ ಅತ್ಯಂತ ಬೆಲೆಬಾಳುವ ಟೀ ಪಾಟ್ ಇದಾಗಿದೆ. 2016 ರಲ್ಲೇ ಇದು ವಿಶ್ವದಾಖಲೆಯನ್ನು ನಿರ್ಮಿಸಿತ್ತು. ಆದರೆ 2023ರ ಆಗಸ್ಟ್ 9 ರಂದು ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ತನ್ನ ಟ್ವಿಟರ್‌ನಲ್ಲಿ ಇದರ ಫೋಟೋ ಹಂಚಿಕೊಂಡ ಬಳಿಕ ಇದೀಗ ವೈರಲ್ ಆಗಿದೆ.
ಪ್ರಪಂಚದಾದ್ಯಂತದ ಚಹಾ ಪ್ರೇಮಿಗಳು ವಿವಿಧ ಬಗೆಯ ಟೀ ಪಾಟ್‌ಗಳಲ್ಲಿ ಟೀ ಇಟ್ಟುಕೊಳ್ಳುತ್ತಾರೆ ಮತ್ತು ವಿವಿಧ ಬಗೆಯ ಕಪ್ ಹಾಗೂ ಸಾಸರ್‌ಗಳಲ್ಲಿ ಚಹಾ ಕುಡಿಯುತ್ತಾರೆ. ಇವುಗಳಲ್ಲಿ ಕೆಲವು ಟೀಪಾಟ್, ಟೀ ಕಪ್ ಅಥವಾ ಸಾಸರ್ ದುಬಾರಿಯಾಗಿರಬಹುದು. ಆದರೆ ಇಲ್ಲೊಂದು ಟೀ ಪಾಟ್ ಎಷ್ಟು ದುಬಾರಿಯೆಂದರೆ ಇದು ಗಿನ್ನಿಸ್ ರೆಕಾರ್ಡ್ ಅನ್ನೇ ಬರೆದಿದೆ ಎಂದರೆ ನೀವು ನಂಬಲೇಬೇಕು.
ಈ ಟೀ ಪಾಟ್ಗೆ "ದಿ ಇಗೋಯಿಸ್ಟ್" (The Egoist) ಎಂದು ಹೆಸರಿಡಲಾಗಿದ್ದು, ವಿಶ್ವದ ಅತ್ಯಂತ ಬೆಲೆಬಾಳುವ ಟೀ ಪಾಟ್ ಇದಾಗಿದೆ. 2016 ರಲ್ಲೇ ಇದು ವಿಶ್ವದಾಖಲೆಯನ್ನು ನಿರ್ಮಿಸಿತ್ತು. ಆದರೆ 2023ರ ಆಗಸ್ಟ್ 9 ರಂದು ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ತನ್ನ ಟ್ವಿಟರ್‌ನಲ್ಲಿ ಇದರ ಫೋಟೋ ಹಂಚಿಕೊಂಡ ಬಳಿಕ ಇದೀಗ ವೈರಲ್ ಆಗಿದೆ.
ಯುನೈಟೆಡ್ ಕಿಂಗ್ಡಮ್ನ ಎನ್ ಸೇಥಿಯಾ ಫೌಂಡೇಶನ್ ಒಡೆತನದಲ್ಲಿ ಈ ಟೀ ಪಾಟ್ ಇದೆ. ಇದನ್ನು 18-ಕ್ಯಾರೆಟ್ ಹಳದಿ ಚಿನ್ನ ಮತ್ತು ಕಟ್ ವಜ್ರ ಹಾಗೂ 6.67-ಕ್ಯಾರೆಟ್ ಮಾಣಿಕ್ಯದಿಂದ ತಯಾರಿಸಲಾಗಿದೆ. ಟೀ ಪಾಟ್ನ ಹಿಡಿಕೆಯನ್ನು ಆನೆ ದಂತದಿಂದ ತಯಾರಿಸಲಾಗಿದೆ. ಇದನ್ನು . ಇಟಲಿಯ ಆಭರಣ ವ್ಯಾಪಾರಿ ಫುಲ್ವಿಯೊ ಸ್ಕಾವಿಯಾ ಅವರು ತಯಾರಿಸಿದ್ದಾರೆ.
ಅಂದಹಾಗೆ ಇದರ ಬೆಲೆ ಬರೋಬ್ಬರಿ 24 ಕೋಟಿ ರೂಪಾಯಿ (30 ಲಕ್ಷ ಡಾಲರ್). ಈ ಪೋಸ್ಟ್ ನೋಡಿದ ನೆಟ್ಟಿಗರು ಇದರ ಬೆಲೆ ಕೇಳಿ ದಂಗಾಗಿದ್ದಾರೆ. ನನಗಿಂತಲೂ ಹೆಚ್ಚು ಮೌಲ್ಯಯುತವಾಗಿರುವ ಇದನ್ನು ನಾನು ಕದಿಯುತ್ತೇನೆ ಎಂದು ಟ್ವಿಟರ್ ಬಳಕೆದಾರರೊಬ್ಬರು ಕಮೆಂಟ್ ಮಾಡಿದ್ದಾರೆ.
ಆ ಪ್ರತಿಷ್ಠಾನವು ಅದನ್ನು ಎಲ್ಲಿಂದ ಕದ್ದಿದೆ? ಎಂಬ ಬಗ್ಗೆ ನನಗೆ ಕುತೂಹಲವಿದೆ. ಯಾಕೆಂದರೆ, ಇತ್ತೀಚಿನ ದಿನಗಳಲ್ಲಿ ಯುನೈಟೆಡ್ ಕಿಂಗ್ಡಮ್ನಲ್ಲಿನ ಹೆಚ್ಚಿನ ಕಲಾಕೃತಿಗಳು ಮತ್ತು ಪುರಾತನ ವಸ್ತುಗಳನ್ನು ಒಂದು ವಸಾಹತುಶಾಹಿ ದೇಶ ಅಥವಾ ಮತ್ತೊಂದು ದೇಶದಿಂದ ಕಳವು ಮಾಡಲಾಗಿದೆ ಎಂದು ಹೇಳಲಾಗುತ್ತಿದೆ ಎಂದು ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ.