ಹೆಲಿಕಾಪ್ಟರ್ ಅಪಘಾತದಲ್ಲಿ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ನಿಧನ; ಕಾಪ್ಟರ್ ಅಪಘಾತಕ್ಕೆ ಸಂಬಂಧಿಸಿದ 10 ಅಪ್ಡೇಟ್ಸ್
May 20, 2024 11:25 AM IST
ಹೆಲಿಕಾಪ್ಟರ್ ಅಪಘಾತ (ಎಡ ಚಿತ್ರ) ದಲ್ಲಿ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ (ಬಲಚಿತ್ರ), ವಿದೇಶಾಂಗ ಸಚಿವ ಹುಸೇನ್ ಅಮೀರ್ ಅಬ್ದುಲ್ಲಾಹಿಯಾನ್ ನಿಧನರಾಗಿದ್ದಾರೆ ಎಂದು ಇರಾನ್ ಮಾಧ್ಯಮಗಳುವ ವರದಿ ಮಾಡಿವೆ.
ಅಝರ್‌ಬೈಜಾನ್ ಸಮೀಪ ನಡೆದ ಹೆಲಿಕಾಪ್ಟರ್ ಅಪಘಾತದಲ್ಲಿ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ, ವಿದೇಶಾಂಗ ಸಚಿವ ಹುಸೇನ್ ಅಮೀರ್ ಅಬ್ದುಲ್ಲಾಹಿಯಾನ್ ನಿಧನರಾಗಿದ್ದಾರೆ. ಇಂದು ಇರಾನ್ ಸರ್ಕಾರ ಇದನ್ನು ದೃಢಪಡಿಸಿದೆ. ನಿನ್ನೆ ದುರಂತ ಸಂಭವಿಸಿತ್ತು.
ತೆಹ್ರಾನ್: ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಮತ್ತು ಅವರ ಸಚಿವ ಸಂಪುಟ ಸಹೋದ್ಯೋಗಿ ವಿದೇಶಾಂಗ ಸಚಿವರನ್ನು ಹೊತ್ತೊಯ್ಯುತ್ತಿದ್ದ ಹೆಲಿಕಾಪ್ಟರ್ ಭಾನುವಾರ ಅಪಘಾತಕ್ಕೀಡಾಗಿ ಸಾವನ್ನಪ್ಪಿದ್ದಾರೆ ಎಂದು ಇರಾನ್ ಸರ್ಕಾರ ಘೋಷಿಸಿದೆ.
ಇರಾನ್ ಅಧಿಕಾರಿಗಳನ್ನು ಉಲ್ಲೇಖಿಸಿ ರಾಯಿಟರ್ಸ್ ವರದಿ ಈ ವರದಿ ಮಾಡಿದ್ದು, ಹೆಲಿಕಾಪ್ಟರ್ ಅಪಘಾತ ಭಾನುವಾರ ಸಂಭವಿಸಿತ್ತು. 12 ಗಂಟೆಗಳ ನಂತರ ರಕ್ಷಕರು ಸೋಮವಾರ ಬೆಳಿಗ್ಗೆ ಹೆಲಿಕಾಪ್ಟರ್‌ನ ಅವಶೇಷಗಳನ್ನು ಪತ್ತೆಹಚ್ಚಿಸಿದರು. ಅಪಘಾತವಾದ ಸ್ಥಳದಲ್ಲಿ ಯಾರೂ ಬದುಕಿ ಉಳಿದಿರುವ ಕುರುಹು ಕಂಡುಬಂದಿಲ್ಲ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಹೆಲಿಕಾಪ್ಟರ್ ಅಪಘಾತದ ಘಟನೆಯು ಇರಾನ್ ರಾಜಧಾನಿ ತೆಹ್ರಾನ್‌ನ ವಾಯವ್ಯಕ್ಕೆ ಸುಮಾರು 600 ಕಿಲೋಮೀಟರ್ ದೂರದಲ್ಲಿರುವ ಅಜರ್‌ಬೈಜಾನ್ ರಾಷ್ಟ್ರದ ಗಡಿಯಲ್ಲಿರುವ ಜೋಲ್ಫಾದ ಬಳಿ ಸಂಭವಿಸಿದೆ. ವರದಿಯ ಪ್ರಕಾರ, ಇಬ್ರಾಹಿಂ ರೈಸಿ ನೆರೆಯ ಅಜರ್‌ಬೈಜಾನ್‌ನಿಂದ ಹಿಂತಿರುಗುತ್ತಿದ್ದರು.
ಕಾಪ್ಟರ್ ಅಪಘಾತಕ್ಕೆ ಸಂಬಂಧಿಸಿದ 10 ಅಪ್ಡೇಟ್ಸ್
1) ಹೆಲಿಕಾಪ್ಟರ್‌ನಲ್ಲಿ ಒಂಬತ್ತು ಪ್ರಯಾಣಿಕರು ಇದ್ದರು. ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ, ಇರಾನ್ ವಿದೇಶಾಂಗ ಸಚಿವ ಹೊಸೈನ್ ಅಮೀರ್ ಅಬ್ದುಲ್ಲಾಹಿಯಾನ್, ಪೂರ್ವ ಅಜೆರ್ಬೈಜಾನ್ ಪ್ರಾಂತ್ಯದ ಗವರ್ನರ್ ಮಾಲೆಕ್ ರಹಮತಿ, ತಬ್ರಿಜ್ ಅವರ ಶುಕ್ರವಾರದ ಪ್ರಾರ್ಥನೆ ಇಮಾಮ್ ಮೊಹಮ್ಮದ್ ಅಲಿ ಅಲಿಹಾಶೆಮ್, ಪೈಲಟ್, ಕಾಪಿಲಟ್, ಸಿಬ್ಬಂದಿ ಮುಖ್ಯಸ್ಥ, ಭದ್ರತಾ ಮುಖ್ಯಸ್ಥರು ಮತ್ತು ಇನ್ನೊಬ್ಬರು.
2) ಇಬ್ರಾಹಿಂ ರೈಸಿ ಅವರು ಇರಾನ್‌ನ ಪೂರ್ವ ಅಜೆರ್‌ಬೈಜಾನ್ ಪ್ರಾಂತ್ಯದಲ್ಲಿ ಪ್ರಯಾಣಿಸುತ್ತಿದ್ದಾಗ, ಅವರ ಹೆಲಿಕಾಪ್ಟರ್ ಅಜರ್‌ಬೈಜಾನ್ ಗಡಿಯಲ್ಲಿರುವ ಜೋಫ್ಲಾ ನಗರದ ಬಳಿ "ಹಾರ್ಡ್ ಲ್ಯಾಂಡಿಂಗ್" ಅಥವಾ ಪತನಕ್ಕೆ ಒಳಗಾಯಿತು.
3) ಇರಾನ್‌ನ ವಿದೇಶಾಂಗ ಸಚಿವ ಹೊಸೈನ್ ಅಮಿರ್ ಅಬ್ದೊಲ್ಲಾ ಹಿಯಾನ್, ಇರಾನ್‌ನ ಪೂರ್ವ ಅಜೆರ್ಬೈಜಾನ್ ಪ್ರಾಂತ್ಯದ ಗವರ್ನರ್ ಮತ್ತು ಇತರ ಅಧಿಕಾರಿಗಳು ಇಬ್ರಾಹಿಂ ರೈಸಿ ಅವರೊಂದಿಗೆ ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಸುತ್ತಿದ್ದರು. ಹಸಿರು ಪರ್ವತ ಶ್ರೇಣಿಯ ಕಡಿದಾದ ಕಣಿವೆಯಲ್ಲಿ ಈ ಅಪಘಾತ ಸಂಭವಿಸಿದೆ. ಬೆಲ್ 212 ಹೆಲಿಕಾಪ್ಟರ್ ಇರಾನ್ ಅಧ್ಯಕ್ಷ ರೈಸಿ ಮತ್ತು ಬಳಗವನ್ನು ಹೊತ್ತೊಯ್ಯುತ್ತಿತ್ತು.
4) 'ಬೆಲ್ 212' ಹೆಲಿಕಾಪ್ಟರ್ ಅನ್ನು ಪೊಲೀಸ್ ಬಳಕೆ, ವೈದ್ಯಕೀಯ ಸಾರಿಗೆ, ಟ್ರೂಪ್ ಸಾರಿಗೆ, ಇಂಧನ ಉದ್ಯಮ ಮತ್ತು ಅಗ್ನಿಶಾಮಕಕ್ಕಾಗಿ ಬಳಸಲಾಗುತ್ತದೆ. ಯುರೋಪಿಯನ್ ಯೂನಿಯನ್ ಏವಿಯೇಷನ್ ಸೇಫ್ಟಿ ಏಜೆನ್ಸಿಯ ಪ್ರಮಾಣೀಕರಣ ದಾಖಲೆಗಳ ಪ್ರಕಾರ, ಇದು ಸಿಬ್ಬಂದಿ ಸೇರಿ 15 ಜನರನ್ನು ಸಾಗಿಸಬಹುದು ಎಂದು ರಾಯಿಟರ್ಸ್ ವರದಿ ಮಾಡಿದೆ.
5) 'ಬೆಲ್ 212' ಹೆಲಿಕಾಪ್ಟರ್‌ನ ಮೂಲ UH-1 ಇರೊಕ್ವಾಯಿಸ್‌ನ ಅಪ್‌ಗ್ರೇಡ್ ಆಗಿ 1960 ರ ದಶಕದ ಅಂತ್ಯದಲ್ಲಿ ಕೆನಡಾದ ಮಿಲಿಟರಿಗಾಗಿ ಇದನ್ನು ಮೊದಲು ಅಭಿವೃದ್ಧಿಪಡಿಸಲಾಯಿತು.
6) ಇಬ್ರಾಹಿಂ ರೈಸಿ ಅವರಿಗೆ 63 ವರ್ಷ ವಯಸ್ಸಾಗಿತ್ತು. ಅವರು ಅಲ್ಟ್ರಾಕನ್ಸರ್ವೇಟಿವ್ ಪಾದ್ರಿ ಎಂದು ಪರಿಗಣಿಸಲ್ಪಟ್ಟರು. ಅವರ ಅಧಿಕಾರಾವಧಿಯಲ್ಲಿ, ಇರಾನ್ ಸಾಮೂಹಿಕ ನಾಗರಿಕ ಪ್ರತಿಭಟನೆಗಳು ನಡೆದಿದ್ದವು.
7) ಇಬ್ರಾಹಿಂ ರೈಸಿ ಅವರು 1979 ರ ಇಸ್ಲಾಮಿಕ್ ಕ್ರಾಂತಿಯ ನಂತರ ಇರಾನ್‌ನ ಎಂಟನೇ ಅಧ್ಯಕ್ಷರಾದರು, ಅವರು 2021 ರಲ್ಲಿ ಚುನಾವಣೆಯಲ್ಲಿ ಗೆದ್ದರು. ಅವರು ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಉತ್ತರಾಧಿಕಾರಿಯಾಗುತ್ತಾರೆ ಎಂದು ನಿರೀಕ್ಷಿಸಲಾಗಿತ್ತು.
ಸುದ್ದಿ ಅಪ್ಡೇಟ್ ಆಗ್ತಿದೆ..