logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Poonch Terror Attack: ಪೂಂಚ್​ ಉಗ್ರದಾಳಿಗೆ ಹುತಾತ್ಮರಾದ ಐವರು ಯೋಧರ ವಿವರ ಇಲ್ಲಿದೆ

Poonch terror attack: ಪೂಂಚ್​ ಉಗ್ರದಾಳಿಗೆ ಹುತಾತ್ಮರಾದ ಐವರು ಯೋಧರ ವಿವರ ಇಲ್ಲಿದೆ

Meghana B HT Kannada

Apr 21, 2023 10:29 AM IST

google News

ಹುತಾತ್ಮ ಯೋಧರು

    • ಜಮ್ಮು ಮತ್ತು ಕಾಶ್ಮೀರದ ಪೂಂಚ್‌ನಲ್ಲಿ ಗುರುವಾರ (ಏ 20) ಸೇನಾಪಡೆಯ ಟ್ರಕ್ ಮೇಲೆ ನಡೆದ ಭಯೋತ್ಪಾದಕರ ದಾಳಿಯಲ್ಲಿ ಹುತಾತ್ಮರಾದ ಐವರು ಯೋಧರ ಹೆಸರು ಮತ್ತು ಭಾವಚಿತ್ರವನ್ನು ಭಾರತೀಯ ಸೇನೆ (Poonch terror attack) ಬಿಡುಗಡೆ ಮಾಡಿದೆ.
 ಹುತಾತ್ಮ ಯೋಧರು
ಹುತಾತ್ಮ ಯೋಧರು

ಪೂಂಚ್‌: ಜಮ್ಮು ಮತ್ತು ಕಾಶ್ಮೀರದ ಪೂಂಚ್‌ನಲ್ಲಿ ಗುರುವಾರ (ಏ 20) ಸೇನಾಪಡೆಯ ಟ್ರಕ್ ಮೇಲೆ ನಡೆದ ಭಯೋತ್ಪಾದಕರ ದಾಳಿಯಲ್ಲಿ ಹುತಾತ್ಮರಾದ ಐವರು ಯೋಧರ ಹೆಸರು ಮತ್ತು ಭಾವಚಿತ್ರವನ್ನು ಭಾರತೀಯ ಸೇನೆ (Poonch terror attack) ಬಿಡುಗಡೆ ಮಾಡಿದೆ.

ಹುತಾತ್ಮ ಯೋಧರನ್ನು ಹವಾಲ್ದಾರ್ ಮನ್ದೀಪ್ ಸಿಂಗ್, ಲ್ಯಾನ್ಸ್ ನಾಯಕ್ ದೇಬಾಶಿಶ್ ಬಸ್ವಾಲ್, ಲ್ಯಾನ್ಸ್ ನಾಯಕ್ ಕುಲ್ವಂತ್ ಸಿಂಗ್, ಸಿಪಾಯಿ ಹರ್ಕ್ರಿಶನ್ ಸಿಂಗ್ ಮತ್ತು ಸಿಪಾಯಿ ಸೇವಕ್ ಸಿಂಗ್ ಎಂದು ನಗ್ರೋಟಾದಲ್ಲಿರುವ ಭಾರತೀಯ ಸೇನೆಯ 16 ಕಾರ್ಪ್ಸ್ ಮಾಹಿತಿ ನೀಡಿದ್ದು, ತನ್ನ ಅಧಿಕೃತ ಟ್ವಿಟರ್​ ಖಾತೆಯಾದ ವೈಟ್‌ನೈಟ್ ಕಾರ್ಪ್ಸ್ (White Knight Corps)ನಲ್ಲಿ ಮಡಿದ ಯೋಧರ ಫೋಟೋಗಳನ್ನು ಶೇರ್ ಮಾಡಿದೆ.

ಮಡಿದ ಯೋಧರು ಭಾರತೀಯ ಸೇನೆಯ ರಾಷ್ಟ್ರೀಯ ರೈಫಲ್ಸ್ ಘಟಕದವರಾಗಿದ್ದು, ಪೂಂಚ್‌ನಲ್ಲಿ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗೆ ಅವರನ್ನು ನಿಯೋಜಿಸಲಾಗಿತ್ತು. ದಾಳಿಕೋರರ ಬಗ್ಗೆ ಇನ್ನೂ ಮಾಹಿತಿ ತಿಳಿದು ಬಂದಿಲ್ಲ.

ಜಮ್ಮುವಿನ ರಜೌರಿ ಸೆಕ್ಟರ್‌ನಲ್ಲಿ ಭಿಂಬರ್‌ಗಲಿ ಮತ್ತು ಪೂಂಚ್ ನಡುವೆ ಚಲಿಸುತ್ತಿದ್ದ ಸೇನಾ ಟ್ರಕ್​​ ಮೇಲೆ ಬುಧವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಭಯೋತ್ಪಾದಕರು ಗುಂಡು ಹಾರಿಸಿದ್ದಾರೆ. ಉಗ್ರರು ಗ್ರೆನೇಡ್‌ಗಳನ್ನು ಬಳಸಿದ್ದರಿಂದ ವಾಹನಕ್ಕೆ ಬೆಂಕಿ ಹೊತ್ತಿಕೊಂಡಿದೆ. ಘಟನೆಯಲ್ಲಿ ಐವರು ಯೋಧರು ಸ್ಥಳದಲ್ಲೇ ಮೃತಪಟ್ಟಿದ್ದು, ಓರ್ವ ಯೋಧ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡಿರುವ ಯೋಧ ರಜೌರಿಯ ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ

ಘಟನೆಗೆ ಜಮ್ಮು ಮತ್ತು ಕಾಶ್ಮೀರ ಮಾಜಿ ಮುಖ್ಯಮಂತ್ರಿ, ನ್ಯಾಷನಲ್ ಕಾನ್ಫರೆನ್ಸ್ ಉಪಾಧ್ಯಕ್ಷ ಒಮರ್ ಅಬ್ದುಲ್ಲಾ ಸಂತಾಪ ಸೂಚಿಸಿದ್ದಾರೆ. "ಪೂಂಚ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯು ಭಯಾನಕ ಸುದ್ದಿ. ಕರ್ತವ್ಯದಲ್ಲಿದ್ದ ಐವರು ಸೇನಾ ಜವಾನರನ್ನು ಬಲಿತೆಗೆದುಕೊಂಡಿದೆ. ನಾನು ಈ ಹೇಯ ದಾಳಿಯನ್ನು ನಿಸ್ಸಂದಿಗ್ಧವಾಗಿ ಖಂಡಿಸುತ್ತೇನೆ ಮತ್ತು ಮೃತರ ಪ್ರೀತಿಪಾತ್ರರಿಗೆ ನನ್ನ ಸಾಂತ್ವನವನ್ನು ವ್ಯಕ್ತಪಡಿಸುತ್ತೇನೆ. ಅಗಲಿದವರ ಆತ್ಮಕ್ಕೆ ಶಾಂತಿ ಸಿಗಲಿ" ಎಂದು ಟ್ವೀಟ್​ ಮಾಡಿದ್ದಾರೆ.

ದೆಹಲಿ ಮುಖ್ಯಮಂತ್ರಿ ಮತ್ತು ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್, ಸೈನಿಕರ ನಿಧನ ಆಘಾತವುಂಟುಮಾಡಿದ್ದು, ಈ ಹೇಡಿತನದ ದಾಳಿಯ ಹಿಂದಿರುವವರಿಗೆ ಕಠಿಣ ಶಿಕ್ಷೆಯಾಗಬೇಕೆಂದು ಆಗ್ರಹಿಸಿದ್ದಾರೆ.

ಇಂದಿನ ಪ್ರಮುಖ ಸುದ್ದಿ

Karnataka 2nd PUC Result 2023: ದ್ವಿತೀಯ ಪಿಯುಸಿ ಫಲಿತಾಂಶ ಇಂದು ಪ್ರಕಟ; ರಿಸಲ್ಟ್‌ ನೋಡಲು ಡೈರೆಕ್ಟ್‌ ಲಿಂಕ್‌ ಇಲ್ಲಿದೆ

Karnataka 2nd PUC Result 2023: ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶವನ್ನು ಇಂದು (ಏ.21) ಬೆಳಿಗ್ಗೆ 11 ಗಂಟೆಯ ಬಳಿಕ ಅಧಿಕೃತ ವೆಬ್‌ಸೈಟ್ www.karresults.nic.in ನಲ್ಲಿ ಪಡೆಯಬಹುದು ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿ ತಿಳಿಸಿದೆ. ಫಲಿತಾಂಶ ನೋಡುವುದು ಹೇಗೆ - ಇಲ್ಲಿದೆ ನೇರ ಲಿಂಕ್‌ ಮತ್ತು ಅದರ ವಿವರ.

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ