logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Jharkhand News: ಏಕಕಾಲಕ್ಕೆ 5 ಶಿಶುಗಳಿಗೆ ಜನ್ಮ ನೀಡಿದ ಮಹಿಳೆ; ಮುದ್ದಾದ ಮಕ್ಕಳ ಫೋಟೋ ನೋಡಿ, ಕ್ವಿಂಟಪ್ಲೆಟ್ಸ್ ಬಗ್ಗೆ ತಿಳಿಯಿರಿ

Jharkhand News: ಏಕಕಾಲಕ್ಕೆ 5 ಶಿಶುಗಳಿಗೆ ಜನ್ಮ ನೀಡಿದ ಮಹಿಳೆ; ಮುದ್ದಾದ ಮಕ್ಕಳ ಫೋಟೋ ನೋಡಿ, ಕ್ವಿಂಟಪ್ಲೆಟ್ಸ್ ಬಗ್ಗೆ ತಿಳಿಯಿರಿ

Meghana B HT Kannada

May 24, 2023 02:48 PM IST

google News

ಒಂದೇ ಬಾರಿಗೆ ಐದು ಶಿಶುಗಳ ಜನನ (twitter/@ranchi_rims)

    • Woman Gives Birth To Five Babies: ವೈದ್ಯಕೀಯ ಭಾಷೆಯಲ್ಲಿ ಒಂದೇ ಬಾರಿಗೆ ಜನಿಸಿದ ಐದು ಮಕ್ಕಳನ್ನು ಕ್ವಿಂಟಪ್ಲೆಟ್ಸ್ (quintuplets) ಎಂದು ಕರೆಯಲಾಗುತ್ತದೆ. ಐದೂವರೆ ಕೋಟಿ ಜನನಗಳಲ್ಲಿ ಒಂದು ಕೇಸ್​ ಮಾತ್ರ ಕ್ವಿಂಟಪ್ಲೆಟ್ಸ್ ಆಗಿರುತ್ತದೆ.
ಒಂದೇ ಬಾರಿಗೆ ಐದು ಶಿಶುಗಳ ಜನನ (twitter/@ranchi_rims)
ಒಂದೇ ಬಾರಿಗೆ ಐದು ಶಿಶುಗಳ ಜನನ (twitter/@ranchi_rims)

ರಾಂಚಿ (ಜಾರ್ಖಂಡ್‌): ಅಪರೂಪದ ಪ್ರಕರಣವೊಂದರಲ್ಲಿ ಜಾರ್ಖಂಡ್‌ನ ಮಹಿಳೆಯೊಬ್ಬರು ಸೋಮವಾರ ರಾಂಚಿಯ ರಾಜೇಂದ್ರ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (RIMS) ಐದು ಮಕ್ಕಳಿಗೆ ಜನ್ಮ ನೀಡಿದ್ದಾರೆ.

ಎಲ್ಲಾ ಐದು ಶಿಶುಗಳು ಮತ್ತು ತಾಯಿ ಆರೋಗ್ಯವಾಗಿದ್ದಾರೆ. ಆದರೆ, ಶಿಶುಗಳು ಕಡಿಮೆ ತೂಕವನ್ನು ಹೊಂದಿದ್ದು, ಅವುಗಳನ್ನು ನಿಯೋನಾಟಲ್ ತೀವ್ರ ನಿಗಾ ಘಟಕದಲ್ಲಿ (NICU) ಇರಿಸಲಾಗಿದೆ. ಯಶಸ್ವಿ ಹೆರಿಗೆಯ ನಂತರ, ರಾಂಚಿಯ ರಿಮ್ಸ್ ಈ ಸುದ್ದಿಯನ್ನು ಹಂಚಿಕೊಂಡಿದೆ ಮತ್ತು ನವಜಾತ ಶಿಶುಗಳ ಫೋಟೋವನ್ನು ತನ್ನ ಟ್ವಿಟರ್ ಹ್ಯಾಂಡಲ್‌ನಲ್ಲಿ ಪೋಸ್ಟ್ ಮಾಡಿದೆ.

"ಇತ್ಖೋರಿ ಚತಾರ್​​ನ ಮಹಿಳೆಯೊಬ್ಬರು ರಿಮ್ಸ್ ನ ಮಹಿಳಾ ಮತ್ತು ಹೆರಿಗೆ ವಿಭಾಗದಲ್ಲಿ ಐದು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಶಿಶುಗಳು NICU ನಲ್ಲಿ ವೈದ್ಯರ ಆರೈಕೆಯಲ್ಲಿವೆ. ಡಾ.ಶಶಿಬಾಲಾ ಸಿಂಗ್ ನೇತೃತ್ವದಲ್ಲಿ ಯಶಸ್ವಿ ಹೆರಿಗೆ ಮಾಡಲಾಯಿತು" ಎಂದು ಆಸ್ಪತ್ರೆ ಟ್ವೀಟ್​ ಮಾಡಿದೆ.

ರಾಂಚಿಯ ರಿಮ್ಸ್ ಆಸ್ಪತ್ರೆಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಒಬ್ಬ ಮಹಿಳೆ ಐವರು ಮಕ್ಕಳಿಗೆ ಜನ್ಮ ನೀಡಿದ್ದಾಳೆ. ವೈದ್ಯಕೀಯ ಭಾಷೆಯಲ್ಲಿಒಂದೇ ಬಾರಿಗೆ ಜನಿಸಿದ ಐದು ಮಕ್ಕಳನ್ನು ಕ್ವಿಂಟಪ್ಲೆಟ್ಸ್ (quintuplets) ಎಂದು ಕರೆಯಲಾಗುತ್ತದೆ. ಐದೂವರೆ ಕೋಟಿ ಜನನಗಳಲ್ಲಿ ಒಂದು ಕೇಸ್​ ಮಾತ್ರ ಕ್ವಿಂಟಪ್ಲೆಟ್ಸ್ ಆಗಿರುತ್ತದೆ. ಹೆಚ್ಚಿನ ಕ್ವಿಂಟಪ್ಲೆಟ್ಸ್ ಪ್ರಕರಣಗಳಲ್ಲಿ ಐವರಲ್ಲಿ ಹೆಣ್ಣು- ಗಂಡು ಇಬ್ಬರೂ ಇರುತ್ತಾರೆ. ಎಲ್ಲಾ ಐದು ಶಿಶುಗಳು ಹೆಣ್ಣು ಅಥವಾ ಗಂಡು ಆಗಿರುವುದು ಅಪರೂಪದಲ್ಲಿ ಅಪರೂಪ.

ಒಂದಕ್ಕಿಂತ ಹೆಚ್ಚು ಶಿಶಿಗಳಿಗೆ ಜನ್ಮ ನೀಡುವುದು ಇತ್ತೀಚಿನ ವರ್ಷಗಳಲ್ಲಿ ಹೆಚ್ಚು ಸಾಮಾನ್ಯವಾಗಿದೆ. ಇದಕ್ಕೆ ಪ್ರಮುಖ ಕಾರಣವೆಂದರೆ ಗರ್ಭಧರಿಸಲು ಫಲವತ್ತತೆ ಔಷಧಗಳನ್ನು ತೆಗೆದುಕೊಳ್ಳುವುದು ಮತ್ತು IVF (In vitro fertilization) ನಂತಹ ಕಾರ್ಯವಿಧಾನಗಳನ್ನು ಬಳಸುವುದು.

ಕ್ಲೀವ್ಲ್ಯಾಂಡ್ ಕ್ಲಿನಿಕ್ ಪ್ರಕಾರ ಬಹು ಗರ್ಭಧಾರಣೆ ಸಂಭವಿಸಲು ಎರಡು ಮುಖ್ಯ ಮಾರ್ಗಗಳಿವೆ. ಮೊದಲನೆಯದು ಒಂದು ಫಲವತ್ತಾದ ಮೊಟ್ಟೆಯು ಗರ್ಭಾಶಯದ ಒಳಪದರದಲ್ಲಿ ಸೇರುವ ಮೊದಲೇ ವಿಭಜನೆಯಾಗುವುದು. ಎರಡನೆಯದು, ಎರಡು ಅಥವಾ ಹೆಚ್ಚಿನ ಪ್ರತ್ಯೇಕ ಮೊಟ್ಟೆಗಳನ್ನು ಒಂದೇ ಸಮಯದಲ್ಲಿ ವಿಭಿನ್ನ ವೀರ್ಯದಿಂದ ಫಲವತ್ತಾಗಿಸಿದಾಗ.

ಈ ವರ್ಷದ ಫೆಬ್ರವರಿಯಲ್ಲಿ, ಪೋಲಿಷ್-ಬ್ರಿಟಿಷ್ ಪೋಷಕರು ಕ್ವಿಂಟಪ್ಲೆಟ್​​ಗಳನ್ನು ಸ್ವಾಗತಿಸಿದರು. ಆದರೆ, ಈಗಲೂ ಆ ಮಕ್ಕಳಿಗೆ ಉಸಿರಾಟದ ಬೆಂಬಲದ ಅಗತ್ಯವಿದೆ.

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ