logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Joe Biden Cancerous Lesion: ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ರ ಕ್ಯಾನ್ಸರ್‌ ಗಾಯ ತೆಗೆದ ವೈದ್ಯರು, ಏನಿದು ಬಿಸಿಸಿ ಕ್ಯಾನ್ಸರ್‌?

Joe Biden cancerous lesion: ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ರ ಕ್ಯಾನ್ಸರ್‌ ಗಾಯ ತೆಗೆದ ವೈದ್ಯರು, ಏನಿದು ಬಿಸಿಸಿ ಕ್ಯಾನ್ಸರ್‌?

Praveen Chandra B HT Kannada

Mar 04, 2023 04:41 PM IST

google News

Joe Biden cancerous lesion: ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ರ ಕ್ಯಾನ್ಸರ್‌ ಗಾಯ ತೆಗೆದ ವೈದ್ಯರು, ಏನಿದು ಬಿಸಿಸಿ ಕ್ಯಾನ್ಸರ್‌? REUTERS/Kevin Lamarque

    • Joe Biden had a cancerous lesion removed: ಸ್ಕ್ವಾಮಸ್ ಸೆಲ್ ಕಾರ್ಸಿನೋಮ ಮತ್ತು ಮೆಲನೋಮಾದಂತಹ ಚರ್ಮದ ಕ್ಯಾನ್ಸರ್‌ಗಳಿಗೆ ಹೋಲಿಸಿದರೆ ಜೋ ಬೈಡೆನ್‌ ಅವರಿಗಿದ್ದ ಬಿಸಿಸಿ ಅಥವಾ ಬಾಸಲ್ ಸೆಲ್‌ ಕಾರ್ಸಿನೋಮಾವನ್ನು ಕಡಿಮೆ ಅಪಾಯಕಾರಿ ಎಂದು ಪರಿಗಣಿಸಲಾಗಿದೆ.
Joe Biden cancerous lesion: ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ರ ಕ್ಯಾನ್ಸರ್‌ ಗಾಯ ತೆಗೆದ ವೈದ್ಯರು, ಏನಿದು ಬಿಸಿಸಿ ಕ್ಯಾನ್ಸರ್‌? REUTERS/Kevin Lamarque
Joe Biden cancerous lesion: ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ರ ಕ್ಯಾನ್ಸರ್‌ ಗಾಯ ತೆಗೆದ ವೈದ್ಯರು, ಏನಿದು ಬಿಸಿಸಿ ಕ್ಯಾನ್ಸರ್‌? REUTERS/Kevin Lamarque (REUTERS)

ನ್ಯೂಯಾರ್ಕ್‌: ಅಮೆರಿಕದ ಅಧ್ಯಕ್ಷ ಜೋ ಬೈಡೆನ್‌ ಅವರಿಗೂ ಕ್ಯಾನ್ಸರ್‌ ಇದ್ದ ಸಂಗತಿ ಬಹಿರಂಗಗೊಂಡಿದೆ. ಕಳೆದ ತಿಂಗಳು ಜೋ ಬೈಡೆನ್‌ ಅವರ ಕ್ಯಾನ್ಸರ್‌ ಗಾಯವನ್ನು ಯಶಸ್ವಿಯಾಗಿ ತೆಗೆದು ಹಾಕಲಾಗಿದೆ ಎಂದು ಮಾರ್ಚ್‌ 3ರಂದು ಅಮೆರಿಕ ಅಧ್ಯಕ್ಷರ ವೈದ್ಯರು ಮಾಹಿತಿ ನೀಡಿದ್ದಾರೆ.

ಸ್ಕ್ವಾಮಸ್ ಸೆಲ್ ಕಾರ್ಸಿನೋಮ ಮತ್ತು ಮೆಲನೋಮಾದಂತಹ ಚರ್ಮದ ಕ್ಯಾನ್ಸರ್‌ಗಳಿಗೆ ಹೋಲಿಸಿದರೆ ಜೋ ಬೈಡೆನ್‌ ಅವರಿಗಿದ್ದ ಬಿಸಿಸಿ ಅಥವಾ ಬಾಸಲ್ ಸೆಲ್‌ ಕಾರ್ಸಿನೋಮಾವನ್ನು ಕಡಿಮೆ ಅಪಾಯಕಾರಿ ಎಂದು ಪರಿಗಣಿಸಲಾಗಿದೆ.

ನ್ಯೂಯಾರ್ಕ್ ಮೂಲದ ಸ್ಕಿನ್ ಕ್ಯಾನ್ಸರ್ ಫೌಂಡೇಶನ್ ಪ್ರಕಾರ, ಬಾಸಲ್ ಸೆಲ್ ಕಾರ್ಸಿನೋಮ (BCC) ಚರ್ಮದ ಕ್ಯಾನ್ಸರ್‌ನ ಅತ್ಯಂತ ಸಾಮಾನ್ಯ ವಿಧವಾಗಿದೆ. ಅಮೆರಿಕದಲ್ಲಿ ಪ್ರತಿ ವರ್ಷ 3.6 ಮಿಲಿಯನ್ ಇಂತಹ ಪ್ರಕರಣಗಳು ಪತ್ತೆಯಾಗುತ್ತವೆ.

ಬಾಸಲ್ ಸೆಲ್ ಕಾರ್ಸಿನೋಮ (BCC) ತಳದ ಕೋಶಗಳ ಅಸಹಜ ಬೆಳವಣಿಗೆಯಾಗಿದೆ. ಇದು ಚರ್ಮದ ಮೇಲೆ ಪದರವನ್ನು ರೂಪಿಸುತ್ತದೆ ಎಂದು ತಜ್ಞರು ಮಾಹಿತಿ ನೀಡಿದ್ದಾರೆ.

BCC ಸಾಮಾನ್ಯವಾಗಿ UV ಕಿರಣಗಳು ಮತ್ತು ಒಳಾಂಗಣ ಟ್ಯಾನಿಂಗ್‌ನಿಂದ ಉಂಟಾಗುತ್ತದೆ. ಸಾಮಾನ್ಯವಾಗಿ ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವ ದೇಹದ ಭಾಗಗಳಲ್ಲಿ ಇಂತಹ ಕ್ಯಾನ್ಸರ್‌ ಕಂಡುಬರುತ್ತದೆ.

ಚರ್ಮದ ಮೇಲೆ ತೆರೆದ ಹುಣ್ಣುಗಳು, ಕೆಂಪು ಪದರಗಳು ಕಂಡುಬರುತ್ತವೆ. ಆದರೆ, ಇತರೆ ಕ್ಯಾನ್ಸರ್‌ಗಳಂತೆ ಇದು ದೇಹದ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ಹರಡುತ್ತ ಹೋಗುವುದು ಅಪರೂಪ. ಜತೆಗೆ, ಈ ಕ್ಯಾನ್ಸರ್‌ ಚರ್ಮದಲ್ಲಿ ಹೆಚ್ಚು ಆಳಕ್ಕೆ ಹೋಗುವುದಿಲ್ಲ. ಈ ರೀತಿ ಸಂಭವಿಸಿದರೂ ಅದು ತೀರಾ ಅಪರೂಪ. ಹೀಗಾಗಿ, ಇದನ್ನು ಕಡಿಮೆ ಅಪಾಯಕಾರಿ ಕ್ಯಾನ್ಸರ್‌ ಎಂದು ಕರೆಯಲಾಗಿದೆ. ಇತರೆ ಕ್ಯಾನ್ಸರ್‌ಗಳು ದೇಹದೊಳಗೆ ವೇಗವಾಗಿ ಹರಡುತ್ತ ಹೋಗುತ್ತವೆ. ಆದರೆ, ಬಿಸಿಸಿ ಕ್ಯಾನ್ಸರ್‌ಗೆ ತಕ್ಷಣ ವೈದ್ಯರಿಂದ ಚಿಕಿತ್ಸೆ ಪಡೆದುಕೊಳ್ಳಬೇಕು.

ಬಿಸಿಸಿ ಕ್ಯಾನ್ಸರ್‌ ಗಾಯವನ್ನು ತೆಗೆದುಹಾಕಬೇಕಿರುತ್ತದೆ. ಆದರೆ, ಇದಕ್ಕಾಗಿ ರೋಗಿಯು ಆಸ್ಪತ್ರೆಯಲ್ಲಿ ಅಡ್ಮಿಟ್‌ ಆಗಬೇಕಾದ ಅಗತ್ಯವಿಲ್ಲ. ಕಡಿಮೆ ನೋವಿನ ಅಪರೇಷನ್‌ ಇದಾಗಿದ್ದು, ಲೋಕಲ್‌ ಅನಸ್ತೇಸಿಯಾ ಮೂಲಕ ವೈದ್ಯರು ಇಂತಹ ಗಾಯವನ್ನು ಕತ್ತರಿಸಿ ತೆಗೆಯುತ್ತಾರೆ. ಹೆಚ್ಚಿನ ಸಂದರ್ಭದಗಳಲ್ಲಿ ಈ ಗಾಯವು ಶೀಘ್ರದಲ್ಲಿ ವಾಸಿಯಾಗುತ್ತದೆ.

50 ವರ್ಷಕ್ಕಿಂತ ಮೇಲ್ಪಟ್ಟ ಜನರಲ್ಲಿ BCC ಗಳು ಹೆಚ್ಚಾಗಿ ಪತ್ತೆಯಾಗುತ್ತವೆ. ತೆಳ್ಳಗಿನ ಚರ್ಮದ ಜನರು ಈ ಕ್ಯಾನ್ಸರ್‌ನಿಂದ ಹೆಚ್ಚು ಅಪಾಯವನ್ನು ಹೊಂದಿರುತ್ತಾರೆ. ಲಿಂಗವಾರು ನೋಡಿದರೆ ಮಹಿಳೆಯರಿಗಿಂತ ಪುರುಷರಲ್ಲಿ ಇಂತಹ ಕ್ಯಾನ್ಸರ್‌ ಕಾಣಿಸಿಕೊಳ್ಳುವುದು ಹೆಚ್ಚು ಎನ್ನಲಾಗಿದೆ.

ಕ್ಯಾನ್ಸರ್‌ನಿಂದ ದೂರ ಉಳಿಯಲು ಜೀವನಶೈಲಿಯ ಬದಲಾವಣೆಯೂ ಅಗತ್ಯ: ಇತ್ತೀಚೆಗೆ ಬಹಳಷ್ಟು ಮಂದಿ ಕ್ಯಾನ್ಸರ್‌ ರೋಗಕ್ಕೆ ತುತ್ತಾಗುತ್ತಿದ್ದಾರೆ. ಡಬ್ಲ್ಯೂಎಚ್‌ಒ ಪ್ರಕಾರ ಕ್ಯಾನ್ಸರ್‌ ರೋಗಕ್ಕೆ ಜಗತ್ತಿನಲ್ಲಿ ಅತಿ ಹೆಚ್ಚು ಜನರು ಮರಣ ಹೊಂದುತ್ತಿದ್ದಾರೆ. ಭಾರತದಲ್ಲಿ ಕ್ಯಾನ್ಸರ್‌ ರೋಗಕ್ಕೆ ತುತ್ತಾಗುತ್ತಿರುವವರ ಸಂಖ್ಯೆ ದಿನ ದಿನಕ್ಕೆ, ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಲೇ ಇದೆ. ಮಕ್ಕಳು, ವಯಸ್ಸಾದವರು, ಯುವಕರು ಎನ್ನದೆ ಇದರಿಂದ ಬಳಲುತ್ತಿದ್ದಾರೆ.

ಕ್ಯಾನ್ಸರ್‌ಗೆ ಕಾರಣ ಏನು ಎಂಬುದು ಇಲ್ಲಿಯವರೆಗೂ ನಿಖರವಾಗಿ ತಿಳಿದಿಲ್ಲ. ಆದರೆ ದೇಹದಲ್ಲಿ ರೋಗನಿರೋಧಕ ಶಕ್ತಿ ಕಡಿಮೆಯಾದಾಗ ಕ್ಯಾನ್ಸರ್‌ ಗಡ್ಡೆ ಬೆಳವಣಿಗೆ ಹೊಂದುತ್ತದೆ ಎನ್ನುತ್ತದೆ ಒಂದು ಸಂಶೋಧನೆ. ಅಧ್ಯಯನಗಳ ಪ್ರಕಾರ ಶೇ 10ರಷ್ಟು ಮಾತ್ರ ಅನುವಂಶಿಕವಾಗಿ ಕ್ಯಾನ್ಸರ್‌ ಹರಡುತ್ತದೆ. ಉಳಿದ ಸಂದರ್ಭಗಳಲ್ಲಿ ಪರಿಸರ ಹಾಗೂ ಜೀವನಶೈಲಿಯೇ ಇದಕ್ಕೆ ಕಾರಣ ಎನ್ನಲಾಗುತ್ತಿದೆ. ಆದರೆ ನಮ್ಮ ಜೀವನಶೈಲಿಯಲ್ಲಿನ ಕೆಲವು ಬದಲಾವಣೆಗಳುಈ ರೋಗದಿಂದ ದೂರ ಉಳಿಯಲು ಸಹಾಯ ಮಾಡಬಲ್ಲವು. ಹಾಗಾದರೆ ಇದಕ್ಕೆ ನಾವೇನು ಮಾಡಬೇಕು? ಈ ವರದಿ ಓದಿ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ