logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Karnataka Weather Today: ಕಲಬುರಗಿಯಲ್ಲಿ ಗರಿಷ್ಠ ಉಷ್ಣಾಂಶ ದಾಖಲು; ಮುಂದಿನ 24 ಗಂಟೆಗಳಲ್ಲಿ ಕರಾವಳಿ, ದಕ್ಷಿಣ ಒಳನಾಡಿನಲ್ಲಿ ಮಳೆ ಸಾಧ್ಯತೆ

Karnataka Weather Today: ಕಲಬುರಗಿಯಲ್ಲಿ ಗರಿಷ್ಠ ಉಷ್ಣಾಂಶ ದಾಖಲು; ಮುಂದಿನ 24 ಗಂಟೆಗಳಲ್ಲಿ ಕರಾವಳಿ, ದಕ್ಷಿಣ ಒಳನಾಡಿನಲ್ಲಿ ಮಳೆ ಸಾಧ್ಯತೆ

HT Kannada Desk HT Kannada

Mar 23, 2024 07:02 AM IST

google News

ಮಾರ್ಚ್‌ 23ರ ಕರ್ನಾಟದ ಹವಾಮಾನ

  • Karnataka Weather: ಬೇಸಿಗೆ ಹತ್ತಿರ ಬರುತ್ತಿದ್ದಂತೆ ಜನರು, ಪ್ರಾಣಿ ಪಕ್ಷಿಗಳು ಬಿಸಿಲಿನ ಧಗೆ ತಾಳಲಾಗದೆ ಕಷ್ಟ ಪಡುತ್ತಿದ್ದಾರೆ. ಈ ನಡುವೆ ರಾಜ್ಯದ ಕರಾವಳಿ,ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಹಗುರವಾಗಿ ಮಳೆಯಾಗುತ್ತಿದೆ. ಕಲಬುರಗಿಯಲ್ಲಿ ಗರಿಷ್ಠ ಹಾಗೂ ಬೀದರ್‌ನಲ್ಲಿ ಕನಿಷ್ಠ ತಾಪಮಾನ ದಾಖಲಾಗಿದೆ. ಮುಂದಿನ 24 ಗಂಟೆಗಳಲ್ಲಿ ರಾಜ್ಯದ ಹವಾಮಾನ ವರದಿ ಇಂತಿದೆ. 

ಮಾರ್ಚ್‌ 23ರ ಕರ್ನಾಟದ ಹವಾಮಾನ
ಮಾರ್ಚ್‌ 23ರ ಕರ್ನಾಟದ ಹವಾಮಾನ

ಬೆಂಗಳೂರು: ಸದ್ಯಕ್ಕೆ ವಸಂತ ಋತುವಿನಲ್ಲಿ ಎಲ್ಲೆಲ್ಲೂ ಮರ ಗಿಡ ಚಿಗುರಿ ಕಂಗೊಳಿಸುತ್ತದೆ. ಹೂಗಳು ಅರಳುವ ಸುವಾಸನೆ, ತಂಪಾದ ಗಾಳಿ ಮನಸ್ಸಿಗೆ ಹಿತ ನೀಡುತ್ತಿದೆ. ಜೊತೆಗೆ ಅಷ್ಟೇ ಸೆಖೆ ಕೂಡಾ ಆರಂಭವಾಗಿದೆ. ಜನರು ಬೇಸಿಗೆಗೆ ಅವಶ್ಯಕತೆ ಇರುವ ತಯಾರಿ ನಡೆಸುತ್ತಿದ್ದಾರೆ. ಮನೆಗೆ ಏರ್‌ ಕೂಲರ್‌, ಫ್ಯಾನ್‌ ಕೊಂಡು ತರುತ್ತಿದ್ದಾರೆ. ಕೆಲವೆಡೆ ಬೆಳಗಿನ ಜಾವ ಇನ್ನೂ ಚಳಿ ಇದ್ದರೂ. ಬೆಳಗ್ಗೆ 8 ಗಂಟೆ ನಂತರ ಬಿಸಿಲಿನ ಕಾವು ಹೆಚ್ಚಾಗುತ್ತಿದೆ. ಈ ನಡುವೆ ಹವಾಮಾನ ಪ್ರತಿದಿನ ಬದಲಾಗುತ್ತಿದೆ.

ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಶುಕ್ರವಾರ, ಶನಿವಾರ (ಇಂದು) ಹಾಗೂ ಮುಂದಿನ 24 ಗಂಟೆಗಳಲ್ಲಿ ರಾಜ್ಯದಲ್ಲಿ ಹವಾಮಾನ ವರದಿ ಹೇಗಿರಲಿದೆ ನೋಡೋಣ.

ಮಾರ್ಚ್‌ 22, ಶುಕ್ರವಾರ ಕರಾವಳಿ ಮತ್ತು ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಮಳೆಯಾಗಿದೆ, ಉತ್ತರ ಒಳನಾಡಿನಲ್ಲಿ ಒಣ ಹವೆ ಇತ್ತು. ಯಾವುದೇ ಮುಖ್ಯ ಮಳೆಯ ಪ್ರಮಾಣ ವರದಿ ಆಗಿಲ್ಲ. ಕರಾವಳಿಯ ಹಲವು ಕಡೆಗಳಲ್ಲಿ ಉಷ್ಣಾಂಶ ಅತ್ಯಂತ ಗಮನಾರ್ಹವಾಗಿ ಏರಿಕೆ ಕಂಡಿದೆ. ದಕ್ಷಿಣ ಒಳನಾಡು, ಉತ್ತರ ಒಳನಾಡಿನ ಬಹುತೇಕ ಕಡೆಗಳಲ್ಲಿ ಹಾಗೂ ಕರಾವಳಿಯ ಬಹುತೇಕ ಕಡೆಗಳಲ್ಲಿ ಕನಿಷ್ಠ ಉಷ್ಣಾಂಶದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಗಮನಾರ್ಹವಾಗಿ ಇಳಿಕೆ ಆಗಿದೆ. ರಾಜ್ಯದ ಸಮತಟ್ಟಾದ ಪ್ರದೆೇಶಗಳಲ್ಲಿಅತಿ ಗರಿಷ್ಠಉಷ್ಣಾಂಶ 37.6 ಡಿಗ್ರಿ ಸೆಲ್ಸಿಯಸ್‌ ಕಲಬುರಗಿಯಲ್ಲಿ ದಾಖಲಾಗಿದ್ದರೆ ರಾಜ್ಯದ ಸಮತಟ್ಟಾದ ಪ್ರದೆೇಶಗಳಲ್ಲಿ ಅತಿ ಕನಿಷ್ಠಉಷ್ಣಾಂಶ 19.5 ಡಿಗ್ರಿ ಸೆಲ್ಸಿಯಸ್‌ ಬೀದರ್‌ನಲ್ಲಿ ದಾಖಲಾಗಿದೆ.

ಮುಂದಿನ 24 ಗಂಟೆಗಳಲ್ಲಿ ಹವಾಮಾನ ಹೇಗಿರಲಿದೆ?

ಕರಾವಳಿ ಮತ್ತು ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಹಗುರ ಮಳೆಯಾಗುವ ಬಹಳಷ್ಟು ಸಾಧ್ಯತೆ ಇದೆ. ಉತ್ತರ ಒಳನಾಡಿನಲ್ಲಿ ಒಣಹವೆ ಇರುವ ಸಾಧ್ಯತೆ ಇದೆ. ಸೋಮವಾರ ಕೂಡಾ ಇದೇ ವಾತಾವರಣ ಮುಂದುವರೆಯಲಿದೆ. ಮುಂದಿನ 24 ಗಂಟೆಗಳಲ್ಲಿ ಗುಡುಗು ಮುನ್ನೆಚರಿಕೆ, ಭಾರೀ ಮಳೆಯ ಮುನ್ನೆಚರಿಕೆ ಇಲ್ಲ. ಭಾರತೀಯ ಹವಾಮಾನ ಇಲಾಖೆಯು ಮೀನುಗಾರರಿಗೂ ಯಾವುದೇ ಮುನ್ನೆಚರಿಕೆ ನೀಡಿಲ್ಲ.

ಬೆಂಗಳೂರು, ಸುತ್ತಮುತ್ತಲಿನ ವಾತಾವರಣ

ಮುಂದಿನ 24 ಗಂಟೆಗಳು ಬೆಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾಗಶಃ ಮೋಡ ಕವದ ವಾತಾವರಣವಿರುತ್ತದೆ. ಗರಿಷ್ಠ ಉಷ್ಣಾಂಶ 34 ಮತ್ತು ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಲಿಯಸ್ ಇರುವ ಬಹಳಷ್ಟು ಸಾಧ್ಯತೆಗಳಿವೆ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ