Thrissur Pooram: ಕೇರಳದ ತ್ರಿಶ್ಯೂರ್ ಪೂರಂ ಉತ್ಸವದಲ್ಲಿ ರೊಚ್ಚಿಗೆದ್ದ ಆನೆ ಆಟಾಟೋಪ, ಇನ್ನೊಂದು ಆನೆ ಮೇಲೆ ದಾಳಿ, ಹಳೆ ವಿಡಿಯೋ ಈಗ ವೈರಲ್
Aug 26, 2024 10:34 PM IST
ತ್ರಿಶ್ಯೂರ್‌ನಲ್ಲಿ ಪೂರಂ ವೇಳೆ ಆನೆ ದಾಳಿ ಮಾಡಿ ಗದ್ದಲದ ವಾತಾವರಣ ನಿರ್ಮಾಣವಾಗಿದ್ದ ವಿಡಿಯೋ ಈಗ ವೈರಲ್ ಆಗಿದೆ.
- Kerala News ಮಾರ್ಚ್‌ನಲ್ಲಿ ನಡೆದಿದ್ದ ಕೇರಳದ ಸಾಂಸ್ಕೃತಿಕ ಉತ್ಸವ ತ್ರಿಶ್ಯೂರ್ ಪೂರಂ( Thrissur pooram) ವೇಳೆ ಆನೆಯೊಂದು ದಾಳಿ ನಡೆಸಿದ್ದರಿಂದ ಗದ್ದಲ ಉಂಟಾಗಿತ್ತು. ಆನೆ ಮತ್ತೊಂದು ಆನೆ ಮೇಲೆ ದಾಳಿ ಮಾಡುವ ವಿಡಿಯೋ ಈಗ ವೈರಲ್ ಆಗಿದೆ.
ತ್ರಿಶ್ಯೂರ್: ಕೇರಳದ ಸಾಂಸ್ಕೃತಿಕ ರಾಜಧಾನಿ ತ್ರಿಶ್ಯೂರ್‌ನಲ್ಲಿ( Kerala News) ಆಯೋಜನೆಗೊಳ್ಳು ಪೂರಂ ಹಬ್ಬದ(Thrissur Pooram) ಪ್ರಮುಖ ಆಕರ್ಷಣೆ ಆನೆಗಳು. ಪ್ರತಿ ವರ್ಷ ಮೂರ್ನಾಲ್ಕು ತಿಂಗಳ ಕಾಲ ನಡೆಯುವ ಈ ಹಬ್ಬದ ವಿಶೇಷ ಆಕರ್ಷಣೆಯೇ ಕೊನೆಯ ಭಾಗವಾದ ಆನೆಗಳ ಚಮತ್ಕಾರ. ಈ ಬಾರಿ ಆನೆಗಳು ತಮ್ಮ ಚಾಕಚಕ್ಯತೆಯನ್ನು ಸಹಸ್ರಾರು ಮಂದಿಯ ನಡುವೆ ಪ್ರದರ್ಶನ ಮಾಡುತ್ತಿದ್ದವು. ಈ ವೇಳೆ ಆನೆಯೊಂದು ನಿಯಂತ್ರಣ ಕಳೆದುಕೊಂಡು ಜನರ ಕಡೆಗೆ ನುಗ್ಗಿದ್ದೂ ಅಲ್ಲದೇ ಇನ್ನೊಂದು ಆನೆ ಮೇಲೆ ದಾಳಿ ಮಾಡಿರುವ ಘಟನೆ ಐದು ತಿಂಗಳ ಹಿಂದೆ ಅಂದರೆ ಮಾರ್ಚ್‌ನಲ್ಲಿ ನಡೆದಿತ್ತು. ಇದರಿಂದ ಇಡೀ ಉತ್ಸವ ಅಸ್ತವ್ಯಸ್ತಗೊಂಡು ಕೇರಳದ ನಾನಾ ಭಾಗಳಿಂದ ಆಗಮಿಸಿದ್ದ ಸಹಸ್ರಾರು ಮಂದಿ ದಿಕ್ಕಾಪಾಲಾಗಿ ಓಡಿ ಹೋಗುವ ಸನ್ನಿವೇಶ ಎದುರಾಗಿತ್ತು. ಆ ಕ್ಷಣದ ವಿಡಿಯೋ ಈಗ ವೈರಲ್ ಆಗಿದೆ.
ಪೂರಂ ಉತ್ಸವ ತ್ರಿಶ್ಯೂರ್ ಭಾಗದಲ್ಲಿ ನಡೆದುಕೊಂಡು ಬಂದರೂ ಸತತ ಒಂದೂವರೆ ದಿನಗಳ ಕಾಲ ನಡೆಯುವ ಪ್ರಮುಖ ಉತ್ಸವ ಕಳೆದ ಮಾರ್ಚ್‌ನಲ್ಲಿ ನಡೆದಿತ್ತು. ಸಾಲಂಕೃತ ಆನೆಗಳ ವೈಭವ, ಮೆರವಣಿಗೆ, ಅಲ್ಲಿನ ಸಾಂಸ್ಕೃತಿಕ ಚಟುವಟಿಕೆಗಳನ್ನು ಕಣ್ತುಂಬಿಕೊಳ್ಳಲು ನಾನಾ ಭಾಗಗಳಿಂದ ಜನ ಆಗಮಿಸಿದ್ದರು. ತ್ರಿಶ್ಯೂರ್‌ನ ಪ್ರಮುಖ ರಸ್ತೆಗಳು ತುಂಬಿ ಹೋಗಿದ್ದವು. ಸುಮಾರು ಒಂದು ನೂರು ಆನೆಗಳನ್ನು ಅಲಂಕರಿಸಿ ಮೆರವಣಿಗೆ ಮೂಲಕ ನಾನಾ ಭಾಗಗಳಿಂದ ಕರೆ ತರಲಾಗುತ್ತಿತ್ತು. ಆನೆಗಳ ಗಾಂಭಿರ್ಯದೊಂದಿಗೆ ಹೆಜ್ಜೆ ಹಾಕುವುದು, ಅದಕ್ಕೆ ಹಿನ್ನೆಲೆಯ ವಾದ್ಯ ಸಂಗೀತ ಎಂತವರನ್ನು ಆಕರ್ಷಿಸುತ್ತದೆ. ಇಂತಹ ಸನ್ನಿವೇಶದಲ್ಲಿ ಆನೆಯೊಂದು ಮಾವುತನ ನಿಯಂತ್ರಣ ಕಳೆದುಕೊಂಡು ಓಡ ತೊಡಗಿತು. ಈ ವೇಳೆ ಎದುರಿಗೆ ನಿಂತಿದ್ದ ಇನ್ನೊಂದು ಆನೆಯ ಮೇಲೆ ದಾಳಿ ಮಾಡಿಯೋ ಬಿಟ್ಟತು. ಜನ ದಿಕ್ಕಾಪಾಲಾಗಿ ಓಡಿದ್ದು ಆಗಿನ ವಿಡಿಯೋ ಈಗ ಭಾರೀ ವೈರಲ್ ಆಗಿದೆ.
ದೇವರ ಸ್ವಂತ ನಾಡು ಕೇರಳದಲ್ಲಿ ತ್ರಿಶೂರ್ ಪೂರಂ ವೈಭವದ ಉತ್ಸವ. ಇದಕ್ಕೆ ಸುಮಾರು 200 ವರ್ಷಗಳ ಇತಿಹಾಸವಿದೆ. ಎರಡು ಶತಮಾನದ ಹಿಂದೆ, ಇದನ್ನು ಮೊದಲು ಚಮತ್ಕಾರವಾಗಿ ಪ್ರಸ್ತುತಪಡಿಸಲಾಯಿತು. ಆನೆಗಳ ಮೇಲೆ ಕೇಂದ್ರೀಕೃತವಾಗಿರುವ ಹಾಗೂ ಎಲ್ಲರನ್ನು ಒಳಗೊಂಡ ಹಬ್ಬವಾಗಿದೆ. ಹದಿನೈದು ಪಳಗಿದ ಆನೆಗಳ ಎರಡು ಗುಂಪುಗಳು ಮುಖ್ಯ ಮೆರವಣಿಗೆಯಲ್ಲಿ ದೇವಾಲಯದ ಆವರಣದಾದ್ಯಂತ ಸುತ್ತು ಹಾಕುವುದು ವಿಶೇಷ.ತ್ರಿಶೂರ್ ಪೂರಂ ಏಳು ದಿನಗಳ ಹಬ್ಬ. ಆರನೇ ದಿನವನ್ನು ಅತ್ಯಂತ ಪ್ರಮುಖವೆಂದು ಪರಿಗಣಿಸಲಾಗುತ್ತದೆ - ಆಗ ತ್ರಿಶೂರ್ ಪೂರಂ ನಡೆಯುತ್ತದೆ. ಇದನ್ನು ಮಲಯಾಳಂ ತಿಂಗಳಾದ ಮಾರ್ಚ್‌ನಲ್ಲಿ.
ಸುಮಾರು 100 ಪಳಗಿಸಿದ ಆನೆಗಳು ಭಾಗವಹಿಸುವ ಈ ಅದ್ಭುತ 36-ಗಂಟೆಗಳ ಚಮತ್ಕಾರಕ್ಕಾಗಿ ರಾಜ್ಯದಾದ್ಯಂತದ ಜನ ತ್ರಿಶೂರ್‌ಗೆ ಆಗಮಿಸುತ್ತಾರೆ. ಆದರೆ ಆರಟ್ಟುಪುಳ ಪೂರಂ ಉತ್ಸವಕ್ಕೆ ಮಂದಾರಕಡವುನಲ್ಲಿ ಆರಾಟ್ ವಿಧಿವಿಧಾನಕ್ಕಾಗಿ ತಂದ ಆನೆಗಳ ಪೈಕಿ ಒಂದು ಆನೆಯು ಮತ್ತೊಂದು ದಾಳಿ ಮಾಡಿದ್ದರಿಂದ ಇದು ಗೊಂದಲಕ್ಕೆಡೆ ಮಾಡಿಕೊಟ್ಟಿತು. ಈ ವೇಳೆ ಮಗು ಸೇರಿ ಎಂಟು ಮಂದಿ ಗಾಯಗೊಂಡಿದ್ದರು. ಆಗ ಆನೆ ದಿಕ್ಕಾಪಾಲಾಗಿ ಓಡಿದ ವಿಡಿಯೋವನ್ನು ಶೇರ್ ಮಾಡಲಾಗಿದ್ದು. ಭಾರೀ ವೈರಲ್ ಆಗಿದೆ.