UIDAI update: ಆನ್‌ಲೈನ್‌ನಲ್ಲಿ ಆಧಾರ್ ಕಾರ್ಡ್ ಫೋಟೋ ಬದಲಾಯಿಸುವುದು ಹೇಗೆ? ಇಲ್ಲಿ ತಿಳಿಯಿರಿ
Jul 11, 2022 10:31 AM IST
ಸಾಂದರ್ಭಿಕ ಚಿತ್ರ
- UIDAI ಸಹಾಯದಿಂದ ನೀವು ನಿಮ್ಮ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ, ಭಾವಚಿತ್ರ ಮತ್ತು ಇಮೇಲ್ ಐಡಿಗೆ ಸಂಬಂಧಿಸಿದ ಮಾಹಿತಿಯನ್ನು ನವೀಕರಿಸಬಹುದು. ಅಂದರೆ ಅಪ್ಡೇಟ್ ಮಾಡಬಹುದು.
ಭಾರತದ ನಾಗರಿಕರಿಗೆ ಆಧಾರ್ ಕಾರ್ಡ್ ಪ್ರಮುಖ ದಾಖಲೆಗಳಲ್ಲಿ ಒಂದು. ಬ್ಯಾಂಕಿಂಗ್ ಸೇವೆ, ವಾಹನ ನೋಂದಣಿ ಮತ್ತು ವಿಮಾ ಪಾಲಿಸಿಗಳು ಸೇರಿದಂತೆ ಹಲವಾರು ಸೇವೆಗಳನ್ನು ಪಡೆಯಲು ಆಧಾರ್ ಅತ್ಯಗತ್ಯ. ಆಧಾರ್ ಕಾರ್ಡ್ ನಿಮ್ಮ ಬಯೋಮೆಟ್ರಿಕ್ಸ್‌ನ ದೃಢೀಕೃತ ಮಾಹಿತಿಯನ್ನು ಒಳಗೊಂಡಿದ್ದು, ವ್ಯಕ್ತಿಯೊಬ್ಬರ ಪ್ರಮುಖ ವೈಯಕ್ತಿಕ ಮಾಹಿತಿಯನ್ನು ಇದು ಒಳಗೊಂಡಿರುತ್ತದೆ. ಹೀಗಾಗಿ ಮೊದಲ ಆದ್ಯತೆಯ ದಾಖಲೆಯಾಗಿ ಆಧಾರ್ ಕಾರ್ಡನ್ನು ಬಳಸಲಾಗುತ್ತದೆ.
ಒಮ್ಮೆ ಆಧಾರ್ ಕಾರ್ಡ್ ಮಾಡಿಸಿದ ಮೇಲೆ, ಯಾವುದೇ ಬದಲಾವಣೆ ಮಾಡಲು ಸಾಧ್ಯವಿಲ್ಲ ಎಂದು ಹೆಚ್ಚಿನವರು ಅಂದುಕೊಂಡಿರುತ್ತಾರೆ. ಒಂದು ವೇಳೆ ಮಾಡಿಸಬೇಕಾದರೂ, ಸೈಬರ್ ಅಥವಾ ಆಧಾರ್ ಕೇಂದ್ರಗಳಿಗೆ ತೆರಳಿ ಮಾಡಿಸಬೇಕು ಎಂಬ ತಲೆಬಿಸಿ ಹೆಚ್ಚಿನವರಿಗೆ ಇರುತ್ತದೆ. ಆದರೆ ಇದಕ್ಕೆಲ್ಲಾ ಪರಿಹಾರವಿದೆ. ಸರ್ಕಾರ ಇದಕ್ಕಾಗಿ UIDAI ಎಂಬ ಆನ್‌ಲೈನ್ ಪೋರ್ಟಲ್ ಅನ್ನು ತೆರೆದಿದೆ. ಇದು ವ್ಯಕ್ತಿಗಳು ತಮ್ಮ ಆಧಾರ್ ಕಾರ್ಡ್‌ನಲ್ಲಿ ನಮೂದಿಸಿರುವ ತಮ್ಮ ವೈಯಕ್ತಿಕ ಮಾಹಿತಿಗಳನ್ನು ಆನ್‌ಲೈನ್‌ನಲ್ಲಿ ನವೀಕರಿಸಲು ಅಥವಾ ಬದಲಾಯಿಸಲು ಸಹಾಯ ಮಾಡುತ್ತದೆ.
ನಿಮ್ಮ ಆಧಾರ್ ಕಾರ್ಡ್‌ನಲ್ಲಿ ಯಾವುದಾದರೂ ಬದಲಾವಣೆಗಳನ್ನು ಮಾಡಬೇಕು ಎಂದು ನೀವು ಬಯಸಿದರೆ, ನೀವು UIDAI ಪೋರ್ಟಲ್‌ಗೆ ಭೇಟಿ ನೀಡಬೇಕು. UIDAI ಸಹಾಯದಿಂದ ನೀವು ನಿಮ್ಮ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ, ಭಾವಚಿತ್ರ ಮತ್ತು ಇಮೇಲ್ ಐಡಿಗೆ ಸಂಬಂಧಿಸಿದ ಮಾಹಿತಿಯನ್ನು ನವೀಕರಿಸಬಹುದು. ಅಂದರೆ ಅಪ್ಡೇಟ್ ಮಾಡಬಹುದು.
ಸಾಮಾನ್ಯವಾಗಿ ಹಲವರ ಆಸೆ ಒಂದೇ. ಆಧಾರ್ ಕಾರ್ಡ್‌ನಲ್ಲಿ ಹಳೆಯ ಫೋಟೋ ಇದೆ. ಇದನ್ನು ಬದಲಾಯಿಸಲು ಸಾಧ್ಯವಾದರೆ ಚೆನ್ನಾಗಿತ್ತು. ಬದಲಾಯಿಸಲು ತುಂಬಾ ಸಮಯ ಬೇಕಾಗಬಹುದು ಎಂದು ಸಾಮಾನ್ಯ ಅಭಿಪ್ರಾಯ ಎಲ್ಲರಲ್ಲೂ ಇರುತ್ತದೆ. ಆದರೆ ಫೋಟೋ ಬದಲಾವಣೆಗೂ ಆನ್‌ಲೈನ್‌ನಲ್ಲಿ ಅವಕಾಶವಿದೆ. ನಿಮ್ಮಲ್ಲಿ ಹಲವು ವರ್ಷಗಳ ಹಿಂದೆ ಮಾಡಿರುವ ಆಧಾರ್ ಕಾರ್ಡ್‌ಗೆ ಈಗಿನ ಸ್ಮಾರ್ಟ್ ಫೋಟೋವನ್ನು ಅಪ್ಡೇಟ್ ಮಾಡಬಹುದು. ಅದು ಹೇಗೆ ಎಂಬುದನ್ನು ಕೆಳಗೆ ಓದಿ ತಿಳಿದುಕೊಳ್ಳಿ.
ಆಧಾರ್ ಕಾರ್ಡ್ ಫೋಟೋ ಬದಲಾಯಿಸಲು ಈರುವ ಕ್ರಮಗಳು
ಈ ನವೀಕರಣವು ಸುಮಾರು 90 ದಿನಗಳವರೆಗೆ ತೆಗೆದುಕೊಳ್ಳಬಹುದು ಎಂಬುದನ್ನು ನೀವು ಗಮನಿಸಬೇಕು. ಇನ್ನೊಂದು ಅಂಶವೆಂದರೆ ಆಧಾರ್ ಕಾರ್ಡ್‌ಗೆ ನೂತನ ಫೋಟೋವನ್ನು ಕ್ಲಿಕ್ ಮಾಡಲು ನೀವು ಆಧಾರ್ ನೋಂದಣಿ ಕೇಂದ್ರಕ್ಕೆ ಭೇಟಿ ನೀಡಬೇಕು. ಹೀಗಾಗಿ ನೋಂದಣಿ ಕೇಂದ್ರಕ್ಕೆ ಹೋಗುವ ಮುನ್ನ ಫೋಟೋ ತೆಗೆಸಿಕೊಳ್ಳಲು ಸಿದ್ಧರಾಗಿ ಹೋಗಬೇಕು.
ವಿಭಾಗ