LPG Price Today: ವಾಣಿಜ್ಯ ಬಳಕೆ ಸಿಲಿಂಡರ್ 100 ರೂ. ಇಳಿಕೆ; ಲೇಟೆಸ್ಟ್ ದರ ವಿವರ ಇಲ್ಲಿದೆ
Sep 01, 2022 10:36 AM IST
ವಾಣಿಜ್ಯ ಬಳಕೆಯ ಸಿಲಿಂಡರ್‌ಗಳ ದರ ಇಳಿಸಿದ ಪೆಟ್ರೋಲಿಯಂ ಮಾರಾಟಗಾರರು (ಸಾಂದರ್ಭಿಕ ಚಿತ್ರ)
LPG Price Today: 19 ಕಿಲೋ ತೂಕದ ವಾಣಿಜ್ಯ ಬಳಕೆಯ ಸಿಲಿಂಡರ್‌ನ ದರ 100 ರೂಪಾಯಿ ಇಳಿಕೆಯಾಗಿದೆ. ಇದರೊಂದಿಗೆ ದೆಹಲಿಯಲ್ಲಿ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ದರ ಆಗಸ್ಟ್‌ನಲ್ಲಿ ಇದ್ದ 1976.50 ರೂಪಾಯಿಯಿಂದ 1885 ರೂಪಾಯಿಗೆ ಇಳಿದಿದೆ.
ನವದೆಹಲಿ: ಸರ್ಕಾರಿ ಸ್ವಾಮ್ಯದ ಇಂಧನ ಚಿಲ್ಲರೆ ವ್ಯಾಪಾರಿಗಳು ಗುರುವಾರ ವಾಣಿಜ್ಯ ಬಳಕೆಯ ಎಲ್‌ಪಿಜಿ ಅನಿಲ ಸಿಲಿಂಡರ್ ದರವನ್ನು 100 ರೂಪಾಯಿ ಇಳಿಸಿದ್ದಾರೆ.
ವಾಡಿಕೆಯಂತೆ ಪ್ರತಿ ತಿಂಗಳ ಮೊದಲ ದಿನ ದರ ಪರಿಷ್ಕರಣೆ ನಡೆಯುತ್ತದೆ. ಇದರಂತೆ, ಸೆಪ್ಟೆಂಬರ್ 1 ಅಂದರೆ ಇಂದು ಈ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ದರ ಪರಿಷ್ಕರಣೆ ಆಗಿದೆ. ಆದರೆ, ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ.
ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಈಗ ರೂ 91.50 ರಷ್ಟು ಅಗ್ಗವಾಗಿದೆ. ಸೆಪ್ಟೆಂಬರ್ ಪೂರ್ತಿ ವಾಣಿಜ್ಯ ಬಳಕೆ ಸಿಲಿಂಡರ್ 1,885 ರೂಪಾಯಿಗೆ ಲಭ್ಯವಿರಲಿದೆ. ಕಳೆದ ತಿಂಗಳು ಇದು 1,976.50 ರೂಪಾಯಿ ಇತ್ತು.
ಇತರ ಮಹಾನಗರಗಳಲ್ಲಿ, ಕೋಲ್ಕತ್ತದಲ್ಲಿ ಇದು 100 ರೂಪಾಯಿ (2,095,50 ರೂಪಾಯಿ ಇದ್ದದ್ದು 1,995.50 ರೂ. ಆಗಿದೆ ) ಅಗ್ಗವಾಗಿದೆ. ಆದರೆ ಚೆನ್ನೈ ಮತ್ತು ಕೋಲ್ಕತ್ತಗೆ ಅನುಗುಣವಾದ ದರಗಳು ರೂ. 96 (2,141 ರೂಪಾಯಿನಿಂದ 2,045 ರೂಪಾಯಿ) ಮತ್ತು ರೂ. 92.50 (ರೂ. 1936.50 ರೂಪಾಯಿನಿಂದ 1,844 ರೂ.) ಕ್ರಮವಾಗಿ ಇಳಿಕೆಯಾಗಿದೆ.
ಕಳೆದ ಹಲವು ತಿಂಗಳ ಅವಧಿಯಲ್ಲಿ ಇದು ಐದನೇ ಬಾರಿ ದರದಲ್ಲಿ ನೇರ ಇಳಿಕೆಯಾಗಿದೆ. ಆಗಸ್ಟ್ 1 ರಂದು, 36 ರೂ. ಕಡಿತವಾಗಿತ್ತು.
ಏತನ್ಮಧ್ಯೆ, ಗೃಹಬಳಕೆಯ ಸಿಲಿಂಡರ್ (14.2 ಕೆಜಿ) ಬೆಲೆಯು ಜುಲೈ 6 ರಂದು 50 ರೂ.ಗೆ ಏರಿಕೆಯಾದ ನಂತರ ಬದಲಾಗದೆ ಉಳಿದಿದೆ.
ಪ್ರತಿ ತಿಂಗಳ ಮೊದಲ ದಿನದಂದು, ಕೆಲವು ಹೊಸ ಮತ್ತು ಕೆಲವು ಪರಿಷ್ಕೃತ ದರಗಳು ಜಾರಿಗೆ ಬರುತ್ತವೆ. ಇವುಗಳಲ್ಲಿ LPG ಮತ್ತು ಇಂಧನ ದರ ಪರಿಷ್ಕರಣೆಯೂ ಒಳಗೊಂಡಿವೆ.
ಗೃಹ ಬಳಕೆಯ 14.2 ಕೆಜಿ ಎಲ್‌ಪಿಜಿ ಸಿಲಿಂಡರ್ ದರ
ಲೇಹ್ - 1299 ರೂಪಾಯಿ
ಐಜ್ವಾಲ್ - 1205 ರೂಪಾಯಿ
ಶ್ರೀನಗರ - 1169 ರೂಪಾಯಿ
ಪಾಟ್ನಾ - 1142.5 ರೂಪಾಯಿ
ಕನ್ಯಾ ಕುಮಾರಿ - 1137 ರೂಪಾಯಿ
ಅಂಡಮಾನ್ -1129 ರೂಪಾಯಿ
ರಾಂಚಿ - 1110.5 ರೂಪಾಯಿ
ಶಿಮ್ಲಾ - 1097.5 ರೂಪಾಯಿ
ದಿಬ್ರುಗಢ - 1095 ರೂಪಾಯಿ
ಲಕ್ನೋ - 1090.5 ರೂಪಾಯಿ
ಉದಯಪುರ - 1084.5 ರೂಪಾಯಿ
ಇಂದೋರ್ - 1081ರೂಪಾಯಿ
ಕೋಲ್ಕತ್ತ -1079 ರೂಪಾಯಿ
ಡೆಹ್ರಾಡೂನ್ - 1072 ರೂಪಾಯಿ
ಚೆನ್ನೈ - 1068.5 ರೂಪಾಯಿ
ಆಗ್ರಾ - 1065.5 ರೂಪಾಯಿ
ಚಂಡೀಗಢ - 1062.5 ರೂಪಾಯಿ
ವಿಶಾಖಪಟ್ಟಣಂ - 1061 ರೂಪಾಯಿ
ಅಹಮದಾಬಾದ್ - 1060 ರೂಪಾಯಿ
ಭೋಪಾಲ್ - 1058.5 ರೂಪಾಯಿ
ಜೈಪುರ - 1056.5 ರೂಪಾಯಿ
ಬೆಂಗಳೂರು- 1055.5 ರೂಪಾಯಿ
ದೆಹಲಿ -1053 ರೂಪಾಯಿ
ಮುಂಬೈ - 1052.5 ರೂಪಾಯಿ
ಇಲ್ಲಿದೆ ಇಂದಿನ ಕೆಲವು ಪ್ರಮುಖ ಸುದ್ದಿಗಳು
1) ಭಾರತದ ಜಿಡಿಪಿ ಪ್ರಗತಿ ಕುರಿತು ಗುಡ್ ನ್ಯೂಸ್ ಬಂದಿದೆ. ದೇಶದ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) ಬೆಳವಣಿಗೆ ಗಣನೀಯವಾಗಿ ಏರಿಕೆ ಕಂಡಿದೆ. ಈ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕವಾದ ಏಪ್ರಿಲ್ -ಜೂನ್ ಅವಧಿಯಲ್ಲಿ ಜಿಡಿಪಿ ಬೆಳವಣಿಗೆ ಶೇ.13.5% ರಷ್ಟು ಪ್ರಗತಿ ದಾಖಲಿಸಿದೆ. ಇದೇ ಅವಧಿಯಲ್ಲಿ ಚೀನಾದ ಜಿಡಿಪಿ ಕೇವಲ ಶೇ 0.4ರಷ್ಟು ಪ್ರಗತಿ ದಾಖಲಿಸಿದೆ. ವಿವರ ಓದಿಗೆ - India Q1 GDP grows at 13.5 percent: ಭಾರತದ ಜಿಡಿಪಿ ಶೇ. 13.5ರಷ್ಟು ಪ್ರಗತಿ, ಚೀನಾದ್ದು ಕೇವಲ ಶೇ 0.4 ಏರಿಕೆ
2) ಕಿರುತೆರೆಯಲ್ಲಿ ಪ್ರಸಾರವಾದ 'ನನ್ನಮ್ಮ ಸೂಪರ್ ಸ್ಟಾರ್' ಮತ್ತು 'ಗಿಚ್ಚಿ ಗಿಲಿಗಿಲಿ' ಶೋನಲ್ಲಿ ದೊಡ್ಡ ಮಟ್ಟದ ಹವಾ ಸೃಷ್ಟಿಸಿರುವ ವಂಶಿಕಾ, ಈಗ ಹಿರಿತೆರೆಯ ಕಡೆ ಮುಖ ಮಾಡಿದ್ದಾಳೆ. ವಿವರ ಓದಿಗೆ - Vanshika Master Anand: ‘ಗೌರಿ ಗಣೇಶ’ ಹಬ್ಬದಂದು ಚಿತ್ರರಂಗ ಪ್ರವೇಶಿಸಿದ ಮಾಸ್ಟರ್ ಆನಂದ್ ಮಗಳು ವಂಶಿಕಾ..
3) ಐಡಿಯಾ ಪಬ್ಲಿಕ್ ಚಾರ್ಟರ್ ಸ್ಕೂಲ್‌ನ ನಿನ್ನೆ ಲೇ ಸ್ಟ್ರೀಟ್ ಮತ್ತು 45ನೇ ಸ್ಟ್ರೀಟ್ ನಡುವಿನ ಒಂದು ಬ್ಲಾಕ್‌ನಲ್ಲಿ ವಿದ್ಯಾರ್ಥಿಯು ಶೂಟ್ ಮಾಡಿದ್ದಾನೆ ಎಂದು ಡಿಸಿ ಮೆಟ್ರೊಪಾಲಿಟನ್ ಪೊಲೀಸ್ ಮುಖ್ಯಸ್ಥರಾದ ರಾಬರ್ಟ್ ಕಾಂಟಿ ಹೇಳಿದ್ದಾರೆ. ವಿವರ ಓದಿಗೆ - ಈ ಮಕ್ಕಳಿಗೆ ಏನಾಗಿದೆ? ಇಬ್ಬರು ಸಹಪಾಠಿಗಳನ್ನು ಗನ್‌ನಿಂದ ಶೂಟ್ ಮಾಡಿದ 15ರ ಬಾಲಕ