logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  350 ವರ್ಷಗಳ ನಂತರ ಭಾರತಕ್ಕೆ ಮರಳುತ್ತಿದೆ ಛತ್ರಪತಿ ಶಿವಾಜಿ ಮಹಾರಾಜರ ವ್ಯಾಘ್ರನಖ; ಇದರ ಇತಿಹಾಸ ತಿಳಿಯಿರಿ

350 ವರ್ಷಗಳ ನಂತರ ಭಾರತಕ್ಕೆ ಮರಳುತ್ತಿದೆ ಛತ್ರಪತಿ ಶಿವಾಜಿ ಮಹಾರಾಜರ ವ್ಯಾಘ್ರನಖ; ಇದರ ಇತಿಹಾಸ ತಿಳಿಯಿರಿ

Meghana B HT Kannada

Oct 01, 2023 09:49 PM IST

google News

ಭಾರತಕ್ಕೆ ಮರಳುತ್ತಿದೆ ಶಿವಾಜಿ ಮಹಾರಾಜರ ವ್ಯಾಘ್ರನಖ

    • Shivaji Maharaj Tiger Claw: ಈ ವರ್ಷ ಶಿವಾಜಿಯ ಪಟ್ಟಾಭಿಷೇಕದ 350ನೇ ವಾರ್ಷಿಕೋತ್ಸವ ನಡೆಯಲಿದ್ದು, ಈ ಸಂದರ್ಭದ ಸ್ಮರಣಾರ್ಥವಾಗಿ ವ್ಯಾಘ್ರನಖವನ್ನು ಮೂರು ವರ್ಷಗಳ ಪ್ರದರ್ಶನಕ್ಕಾಗಿ ಇಡಲಾಗುತ್ತದೆ.
ಭಾರತಕ್ಕೆ ಮರಳುತ್ತಿದೆ ಶಿವಾಜಿ ಮಹಾರಾಜರ ವ್ಯಾಘ್ರನಖ
ಭಾರತಕ್ಕೆ ಮರಳುತ್ತಿದೆ ಶಿವಾಜಿ ಮಹಾರಾಜರ ವ್ಯಾಘ್ರನಖ

ಮುಂಬೈ (ಮಹಾರಾಷ್ಟ್ರ): ಛತ್ರಪತಿ ಶಿವಾಜಿ ಮಹಾರಾಜರು ಬಳಸುತ್ತಿದ್ದ ಟೈಗರ್ ಕ್ಲಾ (ಹುಲಿ ಉಗುರುಗಳಂತೆ ಕಾಣುವ ಆಯುಧ) 350 ವರ್ಷಗಳ ನಂತರ ಯುನೈಟೆಡ್ ಕಿಂಗ್‌ಡಮ್‌ನಿಂದ ಭಾರತಕ್ಕೆ ಮರಳುತ್ತಿದೆ. ಇದನ್ನು ವ್ಯಾಘ್ರನಖ (ವಾಘ್ ನಖ್) ಎಂದು ಕರೆಯಲಾಗುತ್ತದೆ.

ಈ ವ್ಯಾಘ್ರನಖವನ್ನು 1659 ರಲ್ಲಿ ಬಿಜಾಪುರ ಸುಲ್ತಾನರ ಸೇನಾಪತಿ ಅಫ್ಜಲ್ ಖಾನ್​​ನನ್ನು ಸೋಲಿಸಲು ಶಿವಾಜಿ ಮಹಾರಾಜರು ಬಳಸಿದ್ದರು. ಇದೀಗ ನವೆಂಬರ್‌ನಲ್ಲಿ ಲಂಡನ್‌ನಿಂದ ಈ ಆಯುಧ ಮಹಾರಾಷ್ಟ್ರಕ್ಕೆ ಮರಳಲಿದೆ.

ಈ ವರ್ಷ ಶಿವಾಜಿಯ ಪಟ್ಟಾಭಿಷೇಕದ 350ನೇ ವಾರ್ಷಿಕೋತ್ಸವ ನಡೆಯಲಿದ್ದು, ಈ ಸಂದರ್ಭದ ಸ್ಮರಣಾರ್ಥವಾಗಿ ವ್ಯಾಘ್ರನಖವನ್ನು ಮೂರು ವರ್ಷಗಳ ಪ್ರದರ್ಶನಕ್ಕಾಗಿ ಇಡಲಾಗುತ್ತದೆ. ಸದ್ಯ ಇದು ಲಂಡನ್‌ನ ವಿಕ್ಟೋರಿಯಾ ಮತ್ತು ಆಲ್ಬರ್ಟ್ ಮ್ಯೂಸಿಯಂನಲ್ಲಿದೆ. ಮಹಾರಾಷ್ಟ್ರಕ್ಕೆ ಮರಳಿ ತಂದ ಬಳಿಕ ಇದನ್ನು ಮುಂಬೈನಲ್ಲಿರುವ ಛತ್ರಪತಿ ಶಿವಾಜಿ ಮಹಾರಾಜ್ ವಸ್ತುಸಂಗ್ರಹಾಲಯದಲ್ಲಿ ಇರಿಸುವ ಸಾಧ್ಯತೆಯಿದೆ.

ಮಹಾರಾಷ್ಟ್ರದ ಸಂಸ್ಕೃತಿ ಸಚಿವ ಸುಧೀರ್ ಮುಂಗಂತಿವಾರ್ ಅವರು ಮಂಗಳವಾರ (ಅ.3) ಲಂಡನ್‌ಗೆ ಆಗಮಿಸಲಿದ್ದು, ಆಯುಧವನ್ನು ಹಿಂದಿರುಗಿಸುವ ಕುರಿತು ಮ್ಯೂಸಿಯಂನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಲಿದ್ದಾರೆ. ಛತ್ರಪತಿ ಶಿವಾಜಿ ಮಹಾರಾಜರು ಅಫ್ಜಲ್ ಖಾನ್ ಕರುಳನ್ನು ಕಿತ್ತೊಗೆದ ದಿನದಂದು ಅದನ್ನು ತರುವುದು ನಮ್ಮ ಪ್ರಯತ್ನವಾಗಿದೆ ಎಂದು ಮುಂಗಂತಿವಾರ್ ಹೇಳಿದ್ದಾರೆ.

1659ರಲ್ಲಿ ಪ್ರತಾಪಗಡ ಕದನದಲ್ಲಿ ಮರಾಠರ ವಿಜಯವು ಮರಾಠ ಸಾಮ್ರಾಜ್ಯವನ್ನು ಸ್ಥಾಪಿಸುವ ಛತ್ರಪತಿ ಶಿವಾಜಿಯ ಅಭಿಯಾನದಲ್ಲಿ ಒಂದು ಮಹತ್ವದ ತಿರುವು. ಛತ್ರಪತಿ ಶಿವಾಜಿ ನೇತೃತ್ವದಲ್ಲಿ ಮರಾಠಿ ಪಡೆ ಅಫ್ಜಲ್ ಖಾನ್ ನೇತೃತ್ವದ ಆದಿಲ್ಶಾಹಿ ಪಡೆಗಳನ್ನು ಸೋಲಿಸಿದರು. ಇಂದಿನ ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಪ್ರತಾಪಗಢ ಕೋಟೆಯ ತಪ್ಪಲಿನಲ್ಲಿ ಛತ್ರಪತಿ ಶಿವಾಜಿ ಅಫ್ಜಲ್ ಖಾನ್​​ನನ್ನು ಕೊಂದರು.

ಸಭೆಯ ಸಮಯದಲ್ಲಿ ಶಿವಾಜಿ ಮಹಾರಾಜರ ಬೆನ್ನಿಗೆ ಅಫ್ಜಲ್ ಖಾನ್ ಇರಿದಾಗ, ಶಿವಾಜಿಯು ಅಫ್ಜಲ್ ಖಾನ್ ಅನ್ನು ಕೊಲ್ಲಲು ಇದೇ ವ್ಯಾಘ್ರನಖವನ್ನು ಬಳಸಿದ್ದರು. ಈ ವ್ಯಾಘ್ರನಖ ನಮಗೆ ಸ್ಫೂರ್ತಿ ಮತ್ತು ಶಕ್ತಿಯ ಮೂಲವಾಗಿದೆ. ಈ ವರ್ಷವು ಶಿವಾಜಿ ಮಹಾರಾಜರ ಪಟ್ಟಾಭಿಷೇಕದ 350 ನೇ ವಾರ್ಷಿಕೋತ್ಸವವನ್ನು ಸಹ ಸೂಚಿಸುತ್ತದೆ ಎಂದು ಸಚಿವ ಸುಧೀರ್ ಮುಂಗಂತಿವಾರ್ ಹೇಳಿದ್ದಾರೆ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ