logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Mahindra Thar 4x2: ಭಾರತದಲ್ಲಿ ಮಹಿಂದ್ರಾ ಥಾರ್‌ 4x2; ದರ ಎಷ್ಟು? ಫೀಚರ್ಸ್‌ ಏನಿವೆ? ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್‌

Mahindra Thar 4X2: ಭಾರತದಲ್ಲಿ ಮಹಿಂದ್ರಾ ಥಾರ್‌ 4X2; ದರ ಎಷ್ಟು? ಫೀಚರ್ಸ್‌ ಏನಿವೆ? ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್‌

HT Kannada Desk HT Kannada

Jan 09, 2023 01:50 PM IST

google News

ಮಹಿಂದ್ರಾ ಥಾರ್‌ 2WD (Mahindra Thar 2WD) ವಾಹನದ 1.5 ಲೀಟರ್‌ ಡೀಸೆಲ್‌ ಮಾಡೆಲ್‌ನ ಆರಂಭಿಕ ಬೆಲೆ (ಎಕ್ಸ್‌ ಷೋರೂಂ ದರ) 9.99 ಲಕ್ಷ ರೂಪಾಯಿ. ಅದುವೇ 2.0 ಲೀಟರ್‌ ಟರ್ಬೊ ಪೆಟ್ರೋಲ್‌ ಎಟಿ ಮಾಡೆಲ್‌ನ ದರ (ಎಕ್ಸ್‌ ಷೋರೂಂ ದರ) 13.49 ಲಕ್ಷ ರೂಪಾಯಿ.

  • Mahindra Thar 4X2: ಥಾರ್‌ 2WD ವಾಹನವು AX (O) ಮತ್ತು LX trims ವೇರಿಯೆಂಟ್ಸ್‌ನಲ್ಲಿ ಲಭ್ಯವಿದೆ. ಹೊಸ ಥಾರ್‌ನ ಡೆಲಿವರಿ ಜನವರಿ 14ರಂದು ಶುರುವಾಗಲಿದೆ. ಹೊಸ ವಾಹನದ ಈ ಆರಂಭಿಕ ದರಗಳು ಮೊದಲ 10,000 ಬುಕ್ಕಿಂಗ್‌ಗೆ ಮಾತ್ರ ಅನ್ವಯವಾಗಲಿದೆ ಎಂದು ಕಂಪನಿ ಘೋಷಿಸಿದೆ.

 ಮಹಿಂದ್ರಾ ಥಾರ್‌ 2WD (Mahindra Thar 2WD) ವಾಹನದ 1.5 ಲೀಟರ್‌ ಡೀಸೆಲ್‌ ಮಾಡೆಲ್‌ನ ಆರಂಭಿಕ ಬೆಲೆ (ಎಕ್ಸ್‌ ಷೋರೂಂ ದರ) 9.99 ಲಕ್ಷ ರೂಪಾಯಿ. ಅದುವೇ 2.0 ಲೀಟರ್‌ ಟರ್ಬೊ ಪೆಟ್ರೋಲ್‌ ಎಟಿ ಮಾಡೆಲ್‌ನ ದರ (ಎಕ್ಸ್‌ ಷೋರೂಂ ದರ) 13.49 ಲಕ್ಷ ರೂಪಾಯಿ.
ಮಹಿಂದ್ರಾ ಥಾರ್‌ 2WD (Mahindra Thar 2WD) ವಾಹನದ 1.5 ಲೀಟರ್‌ ಡೀಸೆಲ್‌ ಮಾಡೆಲ್‌ನ ಆರಂಭಿಕ ಬೆಲೆ (ಎಕ್ಸ್‌ ಷೋರೂಂ ದರ) 9.99 ಲಕ್ಷ ರೂಪಾಯಿ. ಅದುವೇ 2.0 ಲೀಟರ್‌ ಟರ್ಬೊ ಪೆಟ್ರೋಲ್‌ ಎಟಿ ಮಾಡೆಲ್‌ನ ದರ (ಎಕ್ಸ್‌ ಷೋರೂಂ ದರ) 13.49 ಲಕ್ಷ ರೂಪಾಯಿ. (Mahindra and Mahindra)

ಮಹಿಂದ್ರಾ ಆಂಡ್‌ ಮಹಿಂದ್ರಾ ತನ್ನ ಮಹಿಂದ್ರಾ ಥಾರ್‌ 4X2 (Mahindra Thar 4X2) ಅನ್ನು ಸೋಮವಾರ ಭಾರತದ ಮಾರುಕಟ್ಟೆಗೆ ಪರಿಚಯಿಸಿದೆ. ಮಹಿಂದ್ರಾ ಥಾರ್‌ 2WD (Mahindra Thar 2WD) ವಾಹನದ 1.5 ಲೀಟರ್‌ ಡೀಸೆಲ್‌ ಮಾಡೆಲ್‌ನ ಆರಂಭಿಕ ಬೆಲೆ (ಎಕ್ಸ್‌ ಷೋರೂಂ ದರ) 9.99 ಲಕ್ಷ ರೂಪಾಯಿ. ಅದುವೇ 2.0 ಲೀಟರ್‌ ಟರ್ಬೊ ಪೆಟ್ರೋಲ್‌ ಎಟಿ ಮಾಡೆಲ್‌ನ ದರ (ಎಕ್ಸ್‌ ಷೋರೂಂ ದರ) 13.49 ಲಕ್ಷ ರೂಪಾಯಿ.

ಥಾರ್‌ 2WD ವಾಹನವು AX (O) ಮತ್ತು LX trims ವೇರಿಯೆಂಟ್ಸ್‌ನಲ್ಲಿ ಲಭ್ಯವಿದೆ. ಹೊಸ ಥಾರ್‌ನ ಡೆಲಿವರಿ ಜನವರಿ 14ರಂದು ಶುರುವಾಗಲಿದೆ. ಈ ಆರಂಭಿಕ ದರಗಳು ಮೊದಲ 10,000 ಬುಕ್ಕಿಂಗ್‌ಗೆ ಮಾತ್ರ ಅನ್ವಯವಾಗಲಿದೆ ಎಂದು ಕಂಪನಿ ಘೋಷಿಸಿದೆ.

ಮಹಿಂದ್ರಾ ಆಂಡ್‌ ಮಹಿಂದ್ರಾ ಕಂಪನಿಯು ಸಣ್ಣ 1.5 ಲೀಟರ್‌ ಡೀಸೆಲ್‌ ಎಂಜಿನ್‌ ಥಾರ್‌ 2WDಯನ್ನು ಪರಿಚಯಿಸಿದ್ದು, ಇದರಲ್ಲಿ XUV300ನಲ್ಲಿ ಕಾಣಿಸುವ ಅದೇ ಫೋರ್‌ ಸಿಲಿಂಡರ್‌ ಯುನಿಟ್‌ ಇದೆ. ಇದು 117hp ಮತ್ತು 300m ಟಾರ್ಕ್‌ ಅನ್ನು ಉತ್ಪಾದಿಸುತ್ತದೆ. ಸಿಕ್ಸ್‌ ಸ್ಪೀಡ್‌ ಮ್ಯಾನುವಲ್‌ ಗೇರ್‌ ಬಾಕ್ಸ್‌ ಕೂಡ ಇದೆ.

ಇದಲ್ಲದೆ, ಥಾರ್‌ 2WD 2.0 ಲೀಟರ್‌ ಟರ್ಬೊ ಪೆಟ್ರೋಲ್‌ ಎಟಿ ಮಾಡೆಲ್‌ನಲ್ಲಿ ಸಿಕ್ಸ್‌ ಸ್ಪೀಡ್‌ ಟಾರ್ಕ್‌ ಕನ್ವರ್ಟರ್‌ ಆಟೋಮ್ಯಾಟಿಕ್‌ ಟ್ರಾನ್ಸ್‌ಮಿಷನ್ ಇದೆ. ಈ ಇಂಜಿನ್ 152hp ಮತ್ತು 320m ಟಾರ್ಕ್‌ ಉತ್ಪಾದಿಸುತ್ತದೆ.

ವೇರಿಯೆಂಟ್ಸ್‌ ದರ ವಿವರ (ಎಕ್ಸ್‌ ಷೋರೂಂ)
AX (O) RWD – Diesel MT – ಹಾರ್ಡ್‌ ಟಾಪ್‌9.99 ಲಕ್ಷ ರೂಪಾಯಿ
LX RWD – Diesel MT – ಹಾರ್ಡ್‌ ಟಾಪ್‌ 10.99 ಲಕ್ಷ ರೂಪಾಯಿ
LX RWD – Petrol AT – ಹಾರ್ಡ್‌ ಟಾಪ್‌ 13.49 ಲಕ್ಷ ರೂಪಾಯಿ

ಡಿಸೈನ್‌ ಬಗ್ಗೆ ಹೇಳುವುದಾದರೆ, ಥಾರ್‌ 2WD ಮತ್ತು 4WD ಎರಡೂ ಒಂದೇ ರೀತಿ ಕಾಣಿಸುತ್ತವೆ. ಅಲ್ಲದೆ, ಎರಡು ಹೊಸ ಬಣ್ಣದ ಆಯ್ಕೆಯಲ್ಲಿ ಅಂದರೆ ʻBlazing Bronzeʼ ಮತ್ತು ʻEverest Whiteʼ ಬಣ್ಣಗಳಲ್ಲಿ ಲಭ್ಯ ಇವೆ. ಎಲ್ಲದಕ್ಕೂ ಮಿಗಿಲಾಗಿ ಥಾರ್‌ 2WD ಹಾರ್ಡ್‌ ಟಾಪ್‌ ವಿನ್ಯಾಸದೊಂದಿಗೆ ಬಂದಿದೆ.

ಗಮನಾರ್ಹ ಸುದ್ದಿಗಳು

Loan fraud case: ಕೊಚ್ಚಾರ್‌ ದಂಪತಿಗೆ ಜಾಮೀನು ನೀಡಿದ ಬಾಂಬೆ ಹೈಕೋರ್ಟ್‌; ಸಾಲ ವಂಚನೆ ಪ್ರಕರಣ

Loan fraud case: ಬಾಂಬೆ ಹೈಕೋರ್ಟ್‌ ಈ ಜಾಮೀನು ನೀಡಿದ್ದು, ಕಾನೂನು ಚೌಕಟ್ಟಿನ ವ್ಯಾಪ್ತಿಯಲ್ಲಿ ಬಂಧನ ನಡೆಯದೇ ಇರುವ ಕಾರಣ ತಲಾ 1 ಲಕ್ಷ ರೂಪಾಯಿ ನಗದು ಠೇವಣಿ ಇರಿಸಿ ಜಾಮೀನು ಪಡೆಯಲು ಇಬ್ಬರಿಗೂ ಅವಕಾಶ ನೀಡಿದೆ. ಈ ಆದೇಶದ ಅನುಸಾರ ಕ್ರಮಗಳನ್ನು ಪೂರೈಸಿ ಕೊಚ್ಚಾರ್‌ ದಂಪತಿಯನ್ನು ಬಿಡುಗಡೆ ಮಾಡಬೇಕು ಎಂದು ಕೋರ್ಟ್‌ ತಿಳಿಸಿದೆ. ವಿವರ ಓದಿಗೆ ಇಲ್ಲಿ ಕ್ಲಿಕ್‌ ಮಾಡಿ.

Republic Day 2023: ಕರ್ತವ್ಯಪಥದಲ್ಲಿ ಕುಳಿತು ಗಣತಂತ್ರ ದಿನದ ಪರೇಡ್‌ ನೋಡುವಾಸೆಯೇ?; ಆನ್‌ಲೈನಲ್ಲಿ ಟಿಕೆಟ್‌ ಬುಕ್‌ ಮಾಡಿ!

Republic Day 2023: ಟಿಕೆಟ್‌ ಖರೀದಿ, ಪಾಸ್‌ ಪಡೆಯುವ ಪ್ರಕ್ರಿಯೆಯನ್ನು ಈ ಆಮಂತ್ರಣ ಪೋರ್ಟಲ್‌ ಬಹಳ ಸರಳಗೊಳಿಸಿದೆ. ಬಳಕೆದಾರ ಸ್ನೇಹಿ ಪ್ರಕ್ರಿಯೆಯನ್ನಾಗಿಸಿದೆ. ಅಲ್ಲದೆ, ಸರ್ಕಾರ ಮತ್ತು ಜನರ ನಡುವಿನ ಅಂತರವನ್ನು ಕಡಿಮೆ ಮಾಡಿದೆ. ಟಿಕೆಟ್‌ ಬುಕ್‌ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ. ಕ್ಲಿಕ್‌ ಮಾಡಿ

Republic Day 2023: ಗಣತಂತ್ರ ಪರೇಡ್‌ನಲ್ಲಿ ಈ ಸಲ ಕರ್ನಾಟಕದ ಸ್ತಬ್ಧಚಿತ್ರ ಇರಲ್ಲ; ನಾಲ್ಕೂ ಥೀಮ್‌ ರಿಜೆಕ್ಟ್‌ ಮಾಡಿದ ಆಯ್ಕೆ ಸಮಿತಿ!

Republic Day 2023: ದೆಹಲಿಯ ರಾಜಪಥದಲ್ಲಿ ಜನವರಿ 26ರಂದು ನಡೆಯಲಿರುವ ಗಣತಂತ್ರ ದಿನದ ಪರೇಡ್‌ (Republic Day Parade) ನಲ್ಲಿ ಈ ಸಲ ಕರ್ನಾಟಕದ ಸ್ತಬ್ಧಚಿತ್ರ (Karnataka Tableau) ಇರಲ್ಲ. ಕರ್ನಾಟಕ ಕೊಟ್ಟಿದ್ದ ನಾಲ್ಕೂ ಥೀಮ್‌ಗಳನ್ನು ಆಯ್ಕೆ ಸಮಿತಿ ತಿರಸ್ಕರಿಸಿದೆ. ಹದಿಮೂರು ವರ್ಷಗಳಲ್ಲಿ ಇದೇ ಮೊದಲ ಸಲ ಅವಕಾಶ ಕೈತಪ್ಪಿ ಹೋಗಿದೆ. ವಿವರ ಓದಿಗೆ ಇಲ್ಲಿ ಕ್ಲಿಕ್‌ ಮಾಡಿ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ