Maternity leave: ಹೆರಿಗೆ ರಜೆ 9 ತಿಂಗಳಿಗೆ ವಿಸ್ತರಿಸಲು ಆಗ್ರಹಿಸುತ್ತಿರುವ ನೀತಿ ಆಯೋಗದ ಸದಸ್ಯ; ಇಲ್ಲಿದೆ ಆಗ್ರಹದ ವಿವರ
May 16, 2023 10:33 PM IST
ಹೆರಿಗೆ ರಜೆ 9 ತಿಂಗಳಿಗೆ ವಿಸ್ತರಣೆಗೆ ಆಗ್ರಹ (ಸಾಂದರ್ಭಿಕ ಚಿತ್ರ)
Maternity leave: ಸಾರ್ವಜನಿಕ ಮತ್ತು ಖಾಸಗಿ ವಲಯದ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ನೀಡುತ್ತಿರುವ ಹೆರಿಗೆ ರಜೆಯನ್ನು 9 ತಿಂಗಳ ಅವಧಿಗೆ ಹೆಚ್ಚಿಸುವ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು. ಅದು ಈಗಿನ ಅಗತ್ಯ ಎಂದು ಪಾಲ್ ಪ್ರತಿಪಾದಿಸುತ್ತಿದ್ದಾರೆ. ಇದರ ವಿವರ ಹೀಗಿದೆ.
ಹೆರಿಗೆ ರಜೆ (Maternity leave) ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಹೆರಿಗೆ ರಜೆಯನ್ನು 9 ತಿಂಗಳಿಗೆ ವಿಸ್ತರಿಸಬೇಕು ಎಂದು ನೀತಿ ಆಯೋಗ (NITI Ayog) ದ ಸದಸ್ಯರೊಬ್ಬರು ಆಗ್ರಹಿಸುತ್ತಿರುವುದು ಇದಕ್ಕೆ ಕಾರಣ.
ಭಾರತದ ಸಾರ್ವಜನಿಕ ಮತ್ತು ಖಾಸಗಿ ವಲಯದಲ್ಲಿ ಹೆರಿಗೆ ರಜೆಯನ್ನು ಆರು ತಿಂಗಳಿಂದ ಒಂಬತ್ತು ತಿಂಗಳಿಗೆ ಹೆಚ್ಚಿಸಬೇಕು ಎಂದು ನೀತಿ ಆಯೋಗದ ಸದಸ್ಯ ವಿಕೆ ಪಾಲ್ ಒತ್ತಾಯಿಸಿದ್ದಾರೆ.
ಸಾರ್ವಜನಿಕ ಮತ್ತು ಖಾಸಗಿ ವಲಯದ ಕಂಪನಿಗಳು ತನ್ನ ಉದ್ಯೋಗಿಗಳಿಗೆ ನೀಡುತ್ತಿರುವ ಹೆರಿಗೆ ರಜೆಯನ್ನು ಹೆಚ್ಚಿಸುವ ವಿಚಾರವನ್ನು ಪರಿಗಣಿಸಬೇಕು. ಅದು ಈಗಿನ ಅಗತ್ಯ ಎಂದು ಪಾಲ್ ಪ್ರತಿಪಾದಿಸಿದರು ಎಂದು ಹಿಂದುಸ್ತಾನ್ ಟೈಮ್ಸ್ ಕನ್ನಡದ ಸೋದರ ತಾಣ ಲೈವ್ ಮಿಂಟ್ ವರದಿ ಮಾಡಿದೆ.
ಮಾತೃತ್ವ ಪ್ರಯೋಜನ (ತಿದ್ದುಪಡಿ) ಮಸೂದೆ (The Maternity Benefit (Amendment) Bill), 2016 ಅನ್ನು 2017 ರಲ್ಲಿ ಸಂಸತ್ತು ಅಂಗೀಕರಿಸಿತು. ಇದು ಹಿಂದಿನ 12 ವಾರಗಳಿಂದ 26 ವಾರಗಳ ಅವಧಿಗೆ ವಿಸ್ತರಿತ ಪಾವತಿಸಿದ ಹೆರಿಗೆ ರಜೆಯನ್ನು ಒದಗಿಸಿದೆ.
1961ರ ಭಾರತೀಯ ಹೆರಿಗೆ ಪ್ರಯೋಜನ ಕಾಯಿದೆಯು ಹೊಸ ತಾಯಂದಿರು ತಮ್ಮ ಮೊದಲ ಎರಡು ಮಕ್ಕಳ ಹೆರಿಗೆ ಸಂದರ್ಭದಲ್ಲಿ ಆರು ತಿಂಗಳು ಅಥವಾ 26 ವಾರಗಳ ವೇತನ ಸಹಿತ ರಜೆಯನ್ನು ತೆಗೆದುಕೊಳ್ಳಲು ಅರ್ಹರಾಗಿರುತ್ತಾರೆ. ಪ್ರತಿ ನಂತರದ ಮಗುವಿಗೆ, ತಾಯಿಯು ಮೂರು ತಿಂಗಳು ಅಥವಾ 12 ವಾರಗಳ ರಜೆಯನ್ನು ತೆಗೆದುಕೊಳ್ಳಬಹುದು. ಆ ರಜಾಕಾಲದ ವೇತನವನ್ನು ಉದ್ಯೋಗದಾತರು ಸಂಪೂರ್ಣವಾಗಿ ಪಾವತಿಸಬೇಕು ಎಂಬುದು ನಿಯಮ.
"ಖಾಸಗಿ ಮತ್ತು ಸಾರ್ವಜನಿಕ ವಲಯಗಳೆರಡೂ ತಾಯಂದಿರ ಹೆರಿಗೆ ರಜೆಯನ್ನು ಪ್ರಸ್ತುತ ಆರು ತಿಂಗಳಿಂದ ಒಂಬತ್ತು ತಿಂಗಳಿಗೆ ಹೆಚ್ಚಿಸುವ ಬಗ್ಗೆ ಯೋಚಿಸುವ ಅಗತ್ಯವಿದೆ" ಎಂದು ಎಫ್‌ಐಸಿಸಿಐ ಲೇಡೀಸ್ ಆರ್ಗನೈಸೇಶನ್ (FLO) ಪಾಲ್ ಅವರ ಹೇಳಿಕೆಯನ್ನು ಉಲ್ಲೇಖಿಸಿ ಹೇಳಿದೆ.
ಖಾಸಗಿ ವಲಯವು ಮಕ್ಕಳ ಸಮಗ್ರ ಆರೈಕೆಯ ಚೌಕಟ್ಟನ್ನು ವಿನ್ಯಾಸಗೊಳಿಸಲು ನೀತಿ ಆಯೋಗಕ್ಕೆ ಸಹಾಯ ಮಾಡಬೇಕು. ಉತ್ತಮ ಪಾಲನೆಗಾಗಿ ಮಕ್ಕಳಿಗೆ ಹೆಚ್ಚಿನ ಶಿಶುವಿಹಾರಗಳನ್ನು ತೆರೆಯುವ ಜತೆಗೆ ಹಿರಿಯರ ಆರೈಕೆಗೆ ಅಗತ್ಯ ಕ್ರಮ ತೆಗೆದುಕೊಳ್ಳಲು ಮುಂದಾಗಬೇಕು. ಭವಿಷ್ಯದಲ್ಲಿ ಲಕ್ಷಾಂತರ ಆರೈಕೆ ಕೆಲಸಗಾರರ ಅಗತ್ಯವಿರುವುದರಿಂದ, ನಾವು ವ್ಯವಸ್ಥಿತ ಮೃದು ಮತ್ತು ಕಠಿಣ ಕೌಶಲ ತರಬೇತಿಯನ್ನು ಅಭಿವೃದ್ಧಿಪಡಿಸಬೇಕಾಗಿದೆ ಎಂದು ಪಾಲ್ ಹೇಳಿಕೆ ವಿವರಿಸಿದೆ.
ಜಾಗತಿಕ ಆರೈಕೆ ಆರ್ಥಿಕತೆ, ಮಕ್ಕಳ ಆರೈಕೆ, ಹಿರಿಯ ಆರೈಕೆ ಮತ್ತು ಮನೆಕೆಲಸಗಳಂತಹ ಆರೈಕೆಗೆ ಸಂಬಂಧಿಸಿದ ಪಾವತಿಸಿದ ಮತ್ತು ಪಾವತಿಸದ ಕಾರ್ಮಿಕರು ಆರ್ಥಿಕ ಬೆಳವಣಿಗೆ, ಲಿಂಗ ಸಮಾನತೆ ಮತ್ತು ಮಹಿಳಾ ಸಬಲೀಕರಣವನ್ನು ಹೆಚ್ಚಿಸುವ ನಿರ್ಣಾಯಕ ಕ್ಷೇತ್ರವಾಗಿದೆ. ಆರೈಕೆ ಕೆಲಸವು ಆರ್ಥಿಕವಾಗಿ ಮೌಲ್ಯದ್ದು. ಆದರೆ ಜಾಗತಿಕವಾಗಿ ಕಡಿಮೆ ಮೌಲ್ಯದ್ದು ಎಂದು FICCI ಲೇಡೀಸ್ ಆರ್ಗನೈಸೇಶನ್ (FLO) ಅಧ್ಯಕ್ಷೆ ಸುಧಾ ಶಿವಕುಮಾರ್ ವಿವರಿಸಿದ್ದಾರೆ.
ಭಾರತದಲ್ಲಿ, ಆರೈಕೆ ಕೆಲಸಗಾರರನ್ನು ಸರಿಯಾಗಿ ಗುರುತಿಸಲು ನಮಗೆ ವ್ಯವಸ್ಥೆ ಇಲ್ಲದಿರುವುದು ದೊಡ್ಡ ಕೊರತೆಯಾಗಿದೆ. ಇತರ ರಾಷ್ಟ್ರಗಳಿಗೆ ಹೋಲಿಸಿದರೆ, ಆರೈಕೆ ಆರ್ಥಿಕತೆಯ ಮೇಲೆ ಭಾರತದ ಸಾರ್ವಜನಿಕ ಖರ್ಚು ಅತ್ಯಂತ ಕಡಿಮೆ ಎಂದು ಅವರು ಹೇಳಿದರು.
ವಿಭಾಗ